Redmi SmartTV: 32GB ಸ್ಟೋರೇಜ್ ಇರುವ ಹೊಸ ಲಾಂಚ್‌ ರೆಡ್ಮಿ ಸ್ಮಾರ್ಟ್‌ಟಿವಿ ಬಿಡುಗಡೆ,ಖರೀದಿಗೆ ಮುಗಿಬಿದ್ದ ಜನ

new red me smart tv

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೊಸದಾಗಿ ಲಾಂಚ್ ಮಾಡಿರುವ Redmi smart TV ಯ ಕುರಿತು ನಿಮಗೆ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ಟಿವಿಯ ಬೆಲೆ ಎಷ್ಟು?, ಇದರ ವೈಶಿಷ್ಟಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ರೆಡ್ಮಿ ಟಿವಿ A75 2024:

ದೇಶದ ನಂ.1 ಸ್ಮಾರ್ಟ್ ಟಿವಿ ಬ್ರಾಂಡ್ ಆಗಿರುವ Xiaomi ಇಂಡಿಯಾ, Redmi Smart TV ಬಿಡುಗಡೆಯೊಂದಿಗೆ ತಮ್ಮ ಟಿವಿ ಪೋರ್ಟ್‌ಫೋಲಿಯೊಗೆ ಇತ್ತೀಚಿನ ಸೇರ್ಪಡೆಯನ್ನು ಅನಾವರಣಗೊಳಿಸಿದೆ. ಈ Smart TV ಮನೆಯ ಅಲಂಕಾರವನ್ನು ಉನ್ನತೀಕರಿಸುತ್ತದೆ. ಇದು ಗ್ರಾಹಕರಿಗೆ ಉತ್ತಮ ಗುಣಮಟ್ಟದ, ನವೀನ ಮತ್ತು ಕೈಗೆಟುಕುವ ಸ್ಮಾರ್ಟ್ ಟಿವಿ ಅನುಭವಗಳನ್ನು ಒದಗಿಸಲು ಅತ್ಯುತ್ತಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ. ವರ್ಷದ ಆರಂಭದಲ್ಲಿ ರೆಡ್ಮಿ ಟಿವಿ A32, A43 ಮತ್ತು A65 ಅನ್ನು ಲಾಂಚ್ ಮಾಡಿತ್ತು. ಬಳಿಕ ಕಳೆದ ಆಗಸ್ಟ್‌ನಲ್ಲಿ ರೆಡ್ಮಿ ಟಿವಿ A50 2024 ಮಾದರಿಯನ್ನು ಬಿಡುಗಡೆ ಮಾಡಿತ್ತು. ಈಗ ರೆಡ್ಮಿ ಟಿವಿ A75 2024(Redmi TV A75 2024) ಯನ್ನು ಪರಿಚಯಿಸಲಾಗಿದೆ.

Redmi smart TV ವೈಶಿಷ್ಟಗಳು :

ಈ ಹೊಸ ಸ್ಮಾರ್ಟ್‌ಟಿವಿ 75 ಇಂಚಿನ 4K ಅಲ್ಟ್ರಾ HD ಡಿಸ್‌ಪ್ಲೇ(Display)ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌, ಹೆಚ್‌ಡಿಆರ್‌ ಬೆಂಬಲ ಮತ್ತು ಉತ್ತಮ ಭದ್ರತಾ (Safety ) ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್ ಟಿವಿಯ ಡಿಸ್‌ಪ್ಲೇ 1.07 ಬಿಲಿಯನ್ ಬಣ್ಣಗಳನ್ನು ಹೊರಹಾಕಲಿದೆ, ಇದರಿಂದ ಥಿಯೇಟರ್(Theater )ಅನುಭವವನ್ನು ನೀವು ಪಡೆದುಕೊಳ್ಳತ್ತೀರಿ. ಹಾಗೂ ಹೈ- ಕ್ವಾಲಿಟಿ ಡಾಲ್ಬಿ ಆಡಿಯೊ ಮತ್ತು ಟಿಡಿಎಸ್ ಸೇರಿದಂತೆ ವಿವಿಧ ಆಡಿಯೊ ಫೀಚರ್ಸ್‌ ಆಯ್ಕೆಯನ್ನು ಸಹ ಪಡೆಯುತ್ತಿರಿ. ಈ ಆಡಿಯೊ ಫೀಚರ್ ನಿಂದ ಬಳಕೆದಾರರು ಉತ್ತಮ ಆಡಿಯೋ ಕ್ವಾಲಿಟಿಯನ್ನು ಅನುಭವಿಸಬಹುದು. ಟಿವಿಯು ಕ್ವಾಡ್-ಕೋರ್ A35 ಚಿಪ್‌ (Quad-core A35) ಬೆಂಬಲಿತವಾಗಿದೆ. ಈ ಟಿವಿಯನ್ನು ಗೆಮಿಂಗ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆ ಎನ್ನಬಹುದು. ಗೇಮರ್‌ಗಳಿಗೆ ಆಕರ್ಷಿತ ಮತ್ತು ಅವಶ್ಯಕ ಹಲವಾರು ಫೀಚರ್ಸ್‌ ಆಯ್ಕೆಯನ್ನು ಈ ಸ್ಮಾರ್ಟ್‌ಟಿವಿ ನೀಡಲಿದೆ. 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯೊಂದಿಗೆ, ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್ (YouTube and Netflix) ಸೇರಿದಂತೆ ವಿವಿಧ ಆಪ್‌ಗಳಿಗೆ ಈ ಸ್ಮಾರ್ಟ್ ಟಿವಿ ಬೆಂಬಲ ನೀಡಲಿದೆ.

ಈ ಸ್ಮಾರ್ಟ್ ಟಿವಿಯು ವಾಯ್ಸ್‌ ಅಸಿಸ್ಟೆಂಟ್‌, ಕ್ರೋಕ್ಯಾಸ್ಟ್ ಸೇರಿದಂತೆ ಅದ್ಭುತ ಫೀಚರ್ಸ್‌ ಗಳನ್ನು ಅಳವಡಿಸಲಾಗಿದೆ. ಇನ್ನು ಇದರ ರೀಮೋಟ್ ಆಪರೇಟಿಂಗ್ ಫೀಚರ್ಸ್ ಹೆಚ್ಚು ಆಕರ್ಷಕವಾಗಿವೆ. ಈ ಸ್ಮಾರ್ಟ್ ರಿಮೋಟ್ ಯೂಟ್ಯೂಬ್‌, ನೆಟ್‌ಫ್ಲಿಕ್ಸ್‌ ಗಾಗಿ ಶಾರ್ಟ್ ಕಟ್ ಕೀ( Shortcut key ) ಆಯ್ಕೆ ಅಳವಡಿಸಲಾಗಿದೆ. ರಿಮೋಟ್ ಕ್ವಿಕ್ ವೇಕ್(Quick – Wake ) ಫೀಚರ್ಸ್‌ ಆಯ್ಕೆ ಸಹ ಹೊಂದಿದೆ, ಅಂದರೆ 5 sec ಕ್ಕಿಂತ ಕಡಿಮೆ ಸಮಯದಲ್ಲಿ ಟಿವಿಯನ್ನು ಆನ್ ಮಾಡಬಹುದು.

ಈ ಸ್ಮಾರ್ಟ್‌ಟಿವಿ ವಿಶೇಷವಾಗಿ ವೈರ್‌ಲೆಸ್ ಸಂಪರ್ಕ ಬೆಂಬಲಿತವಾಗಿದೆ, ಡ್ಯುಯಲ್-ಬ್ಯಾಂಡ್ ವೈ ಫೈ ಮತ್ತು ಬ್ಲೂಟೂತ್ ಆವೃತ್ತಿ V5.0 ಅನ್ನು ಈ ಟಿವಿಯಲ್ಲಿ ಅಳವಡಿಸಲಾಗಿದೆ. ಮಿರರ್‌ ಕಾಸ್ಟ್‌ ಆಪ್‌, ಆಟೋ ಲೋ ಲೇಟೆನ್ಸಿ ಮೋಡ್‌ನಂತಹ ವಿಶೇಷ ಪೀಚರ್ಸ್‌ ಅನ್ನು ಸಹ ಟಿವಿ ಹೊಂದಿದೆ. ಇದರ ಜೊತೆ ಜೊತೆಗೆ ಹೆಚ್‌ಡಿಎಮ್‌ಐ ಪೋರ್ಟ್, ಎರಡು ಯುಎಸ್‌ಬಿ 2.0, AV, 3.5mm ಹೆಡ್‌ಫೋನ್ ಜ್ಯಾಕ್, ಎಥರ್ನೆಟ್, ಆಂಟೆನಾ ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಫೀಚರ್ಸ್ ಸಹ ಪಡೆದುಕೊಂಡಿದೆ.

ರೆಡ್ಮಿ ಟಿವಿ A75 2024 ಸ್ಮಾರ್ಟ್‌ಟಿವಿಯ ಬೆಲೆ ಹಾಗೂ ಲಭ್ಯತೆ:

ಈ ಹೊಸ ರೆಡ್ಮಿ ಸ್ಮಾರ್ಟ್‌ಟಿವಿಗೆ 3099 ಯುವಾನ್ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ 35,400 ರೂ.ಗಳು. ಸದ್ಯಕ್ಕೆ ಇದು ಚೀನಾದಲ್ಲಿ ಮಾತ್ರ ಮಾರಾಟವಾಗಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಈ ಸ್ಮಾರ್ಟ್‌ಟಿಟಿ ಮಾರಾಟವಾಗಲಿದೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ಇದರ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು ಎನ್ನಲಾಗುತ್ತಿದೆ.
ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ತಿಳಿಸಿಕೊಡುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!