New Rules – ದೇಶದ ಎಲ್ಲಾ ಪರ್ಮಿಟ್ ವಾಹನಗಳಿಗೆ ಹೊಸ ರೂಲ್ಸ್, ತಪ್ಪಿದ್ರೆ ಎಫ್‌ಸಿ ನವೀಕರಣಕ್ಕೆ ಬ್ರೇಕ್

permit vehicles

ಇದೀಗ ಸರ್ಕಾರವು ಮಹತ್ತರದ ಆದೇಶ ಒಂದನ್ನು ಹೊರಡಿಸಿದೆ. ಅದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ವೆಹಿಕಲ್ ಲೋಕೇಶನ್‌ ಟ್ರ್ಯಾಕಿಂಗ್ (VLT) ಡಿವೈಸ್‌ಗಳು ( Vehical Location Tracking Device ) ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ( Emergency Panic Button ) ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವೆಹಿಕಲ್ ಟ್ರಾಕಿಂಗ್ ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸುವ ಮುಖ್ಯ ಉದ್ದೇಶ( Purpose of this Rules ) :

ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಕೇಂದ್ರ ಸರ್ಕಾರ(central Government) ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ಮತ್ತು ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸೂಚಿಸಿತ್ತು. ಇದರ ಪ್ರಕಾರ ಇದೇ ತಿಂಗಳಿನಿಂದ ಪರ್ಮಿಟ್ ವಾಹನಗಳಿಗೂ ( Permit Vehicles ) ಕೂಡ ಕಡ್ಡಾಯವಾಗಿ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಈ ಒಂದು ನಿಯಮ ಟ್ಯಾಕ್ಸಿ, ಕ್ಯಾಬ್‌ ಮತ್ತು ಸಾರ್ವಜನಿಕ ಸೇವಾ ವಾಹನಗಳಿಗೆ ಅನ್ವಯಿಸುತ್ತವೆ. ಇಂದು ನಮ್ಮ ದೇಶದಲ್ಲಿ ದರೋಡೆ ( Robbery ), ಮೋಸ , ಅತ್ಯಾಚಾರ ( Sexual abuse ) ಮುಂತಾದ ಘಟನೆಗಳು ನಡೆಯುತ್ತಲೇ ಇವೆ. ಅದು ಎಲ್ಲಿಯವರೆಗೂ ಬಂದು ನಿಂತಿದೆ ಎಂದರೆ ಸಾರ್ವಜನಿಕ ಸೇವಾ ವಾಹನಗಳಲ್ಲಿ ಮತ್ತು ಪರ್ಮಿಟ್ ವಾಹನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ದರೋಡೆ ಗಳಂತಹ ಕೆಲವು ಘಟನೆಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು ಇದೀಗ ಸರ್ಕಾರ ಎಮರ್ಜೆನ್ಸಿ ಪ್ಯಾನಿಕ್ ಬಟನ್ (Emergency panic button) ಅಳವಡಿಸಲು ಆದೇಶ ಹೊರಡಿಸಿದೆ.

ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ?

ಈ ನಿಯಮ ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳಿಗೆ ಅನ್ವಯಿಸುತ್ತದೆ. ಯೆಲ್ಲೋ ಬೋರ್ಡ್ ನ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವೆಹಿಕಲ್‌ಗಳಿಗೂ ಈ ಆದೇಶ ಕಡ್ಡಾಯ ಎಂದು ತಿಳಿಸಿದ್ದಾರೆ. ಈ ಕೆಲಸ ಆದಷ್ಟು ಬೇಗ ಆಗಬೇಕಿರುವುದರಿಂದ ಆರ್ ಟಿ ಒ ಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್.ಸಿ ಅನ್ನು ನವೀಕರಣ ಮಾಡಲು ಸೂಚನೆ ನೀಡಲಾಗಿದೆ.
ಮುಖ್ಯವಾಗಿ ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸಾರ್ವಜನಿಕ ಸೇವೆ ಇರುವ ಖಾಸಗಿ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಈ ಹೊಸ ಯೋಜನಗೆ ಸರ್ಕಾರದಿಂದ ಮೀಸಲಿಡಲಾದ ಮೊತ್ತ :

ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವಾ ವಾಹನಗಳಲ್ಲಿ ಈ ಡಿವೈಸ್ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆ ಜಾರಿಗೆ 2035.90 ಲಕ್ಷಗಳ ವೆಚ್ಚಕ್ಕೆ ಅನುಮೋದನೆ ಒದಗಿಸಲಾಗಿದ್ದು, ವಾಹನ ಮಾಲೀಕರು ಅರ್ಹ ಕಂಪನಿಗಳಿಂದ ಪ್ಯಾನಿಕ್ ಬಟನ್ ಅಳವಡಿಸಬೇಕು ಎಂದು ತಿಳಿಸಲಾಗಿದೆ.

ಪ್ರಮುಖವಾಗಿ ಪ್ಯಾನಿಕ್ ಬಟನ್ ಒಳಗೊಂಡ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಅನ್ನು ಅಳವಡಿಸಲು 7,599 ರೂ. ಗಳು ಎಂದು ನಿಗದಿ ಮಾಡಲಾಗಿದೆ. ಜಿಎಸ್‌ಟಿ ಹೊರತುಪಡಿಸಿ ಈ ಬೆಲೆಯನ್ನು ನಿಗದಿ ಮಾಡಲಾಗಿದೆ.

ಈ ನಿಯಮವನ್ನು ಪಾಲಿಸಲು ನೀಡಿದ ಸಮಯ ಈ ಕೆಳಗಿನಂತಿದೆ :

ಈಗಾಗಲೇ ಈ ನಿಯಮ ಡಿಸೆಂಬರ್ 1 ರಿಂದಲೇ ಪ್ರಾರಂಭವಾಗಿದೆ. ಮತ್ತು ವಿಶೇಷ ಸೂಚನೆ ಎಂದರೆ ಒಂದು ವರ್ಷದೊಳಗೆ ಪರ್ಮಿಟ್ ವಾಹನಗಳು ಈ ಡಿವೈಸ್‌ಗಳನ್ನು ಅಳವಡಿಸಿರಬೇಕು ಎಂದು ಕಡ್ಡಾಯ ಗೊಳಿಸಿದ್ದಾರೆ. ಇಲ್ಲವಾದಲ್ಲಿ ಸಾರಿಗೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಡಿವೈಸ್ ಅಳವಡಿಕೆ ಮಾಡದಿದ್ದರೆ ಎಫ್ ಸಿ ನವೀಕರಣವಾಗಲ್ಲ ಎಂದು ರಾಜ್ಯ ಸಾರಿಗೆ ಇಲಾಖೆಯ ಆದೇಶದಲ್ಲಿ ತಿಳಿಸಿದೆ.

ಪ್ಯಾನಿಕ್ ಬಟನ್ ಮತ್ತು GPS ಡಿವೈಸ್ ಅಳವಡಿಕೆಯ ಉಪಯೋಗ :

ವಿಎಲ್ ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಯ ಮಾಡಿದ ನಂತರ ಮಾನಿಟರಿಂಗ್ ನಕ್ಷೆಯಲ್ಲಿ ವಾಹನದ ಲೊಕೇಷನ್‌ ಟ್ರ್ಯಾಕಿಂಗ್‌ ನಡೆಯುತ್ತದೆ. ಈ ಒಂದು ಡಿವೈಸ್ ಅಳವಡಿಕೆಯ ಯಾವುದೇ ವಾಹನ ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅತಿ ವೇಗದ ಅಲರ್ಟ್‌ ಅನ್ನು ಮಾಡಿದರೆ ಅದು ಸಾರಿಗೆ ಇಲಾಖೆಗೆ ತಿಳಿಯುತ್ತದೆ.

ಅಷ್ಟೇ ಅಲ್ಲದೇ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರು, ಲೈಂಗಿಕ ದೌರ್ಜನ್ಯ, ದರೋಡೆ ಮುಂತಾದ ಯಾವುದೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾರ್ವಜನಿಕರು ವೇಹಿಕಲ್ ಗಳಲ್ಲಿ ಅಳವಡಿಸಿದ  ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ ಗೆ ಅಲರ್ಟ್‌ ಮೆಸೆಜ್‌ ಹೋಗುತ್ತದೆ. ಇದರಿಂದ ಕಮಾಂಡ್ ಸೆಂಟರ್ ವಾಹನದ ಲೊಕೇಷನ್‌ ಸಮೇತವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಇದರಿಂದ ಮುಂದೆ ಆಗುವ ಅಪಾಯಗಳನ್ನು ತಡೆಯಬಹುದಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!