ಇಂದು ಸರ್ಕಾರದಿಂದ ಮಹಿಳೆಯರಿಗೆ ಹಲವಾರು ರೀತಿಯ ಸಾಲ(loan) ಸೌಲಭ್ಯ, ಆರ್ಥಿಕ ನೆರವು, ಅಷ್ಟೇ ಅಲ್ಲದೆ ಅನೇಕ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಬ್ಯಾಂಕ್(Bank) ಗಳಿಂದ ಮಹಿಳೆಯರಿಗಾಗಿ ವಿಶೇಷ ಠೇವಣಿ ( Deposit ), ಸಾಲ ಸೌಲಭ್ಯಗಳಿವೆ. ಇದೀಗ ಖುಷಿಯ ವಿಚಾರ ಎಂದರೆ, ಬ್ಯಾಂಕ್ ಆಫ್ ಇಂಡಿಯಾವು ( Bank of India ) ಮಹಿಳೆಯರಿಗಾಗಿ ಹೊಸ ಉಳಿತಾಯ ಖಾತೆ(saving account) ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದಕ್ಕೆ ನಾರಿಶಕ್ತಿ ( Narishakthi ) ಉಳಿತಾಯ ಖಾತೆ ಎಂದು ಹೆಸರಿಡಲಾಗಿದೆ. ಇದು ಮಹಿಳೆಯರಿಗೆಂದೇ ವಿಶೇಷವಾಗಿ ಜಾರಿಗೆ ತಂದ ಉಳಿತಾಯ ಯೋಜನೆಯಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಒಂದು ಉಳಿತಾಯ ಯೋಜನೆಯ ಮುಖ್ಯ ಉದ್ದೇಶ ( Purpose ) :
ಇಂದು ಎಲ್ಲರೂ ದುಡಿದು ತಮಗೋಸ್ಕರ ಅಥವಾ ತಮ್ಮ ಮನೆಯವರಿಗೋಸ್ಕರ, ಅಷ್ಟೇ ಅಲ್ಲದೆ ತಮ್ಮ ಮುಂದಿನ ಜೀವನಕ್ಕಾಗಿ ಹಣವನ್ನು ಉಳಿತಾಯ ಮಾಡಲು ನೋಡುತ್ತಾರೆ. ಹಾಗೆಯೇ ಇಂದು ಬ್ಯಾಂಕ್ ಗಳಲ್ಲಿ ನಮಗೆ ತಿಳಿಯದೇ ಇರುವ ಅದೆಷ್ಟೋ ಉಳಿತಾಯ ಯೋಜನೆಗಳು ಜಾರಿಯಲ್ಲಿವೆ. ಇದನ್ನು ಸ್ವಲ್ಪ ಜನ ಅಷ್ಟೇ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಇದೀಗ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಾಲ್ತಿಯಲ್ಲಿರುವ ಈ ಒಂದು ಉಳಿತಾಯ ಯೋಜನೆಯು ನಾರಿಶಕ್ತಿ ಎಂಬ ಹೆಸರನ್ನು ಪಡೆದು ಕೊಂಡಿದೆ. ಹಾಗೆಯೇ ಇದು 18 ವಯಸ್ಸಿನಿಂದ ಮೇಲ್ಪಟ್ಟ ( Above 18 Years ), ದುಡಿಯುವ ಹೆಣ್ಣುಮಕ್ಕಳಿಗಾಗಿಯೇ ತೆರೆಯಲಾಗಿದೆ. ಅವರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿ, ಅವರು ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ನಾರಿಶಕ್ತಿ ಉಳಿತಾಯ ಖಾತೆಯ ಉಪಯೋಗ ಮತ್ತು ಅದರಲ್ಲಿ ಇರುವ ಯೋಜನೆಗಳು :
ವೈಯಕ್ತಿಕ ಅಪಘಾತ ವಿಮೆ ಯೋಜನೆ ( Accident Insurance ) :
ಮೊದಲೆಯಾದಾಗಿ ಈ ಯೋಜನೆಗಳಲ್ಲಿ ಅವರಿಗೆ ವೈಯಕ್ತಿಕ ಅಪಘಾತ ವಿಮೆ ಯೋಜನೆಯು ಲಭ್ಯವಿದೆ. ಇದರಲ್ಲಿ ಅವರು 100 ಲಕ್ಷ ರೂವರೆಗೆ ಹಣವನ್ನು ಪಡೆಯ ಬಹುದಾಗಿದೆ. ಮತ್ತು ಈ ಒಂದು ಯೋಜನೆಯಲ್ಲಿ ಖಾತೆದಾರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲಾಗುತ್ತದೆ.
ಹೆಲ್ತ್ ಇನ್ಯೂರೆನ್ಸ್ ( Health Insurance ) ಹಾಗೂ ವೆಲ್‌ನೆಸ್ ( Wellness ) ಉತ್ಪನ್ನಗಳ ಮೇಲೆ ರಿಯಾಯಿತಿ :
ಬ್ಯಾಂಕ್ ಆಫ್ ಇಂಡಿಯಾ ಜಾರಿಗೊಳಿಸಿದ ಈ ನಾರಿಶಕ್ತಿ ಉಳಿತಾಯ ಖಾತೆ ಹೊಂದಿರುವ ಹೆಣ್ಣುಮಕ್ಕಳಿಗೆ ಆರೋಗ್ಯ ವಿಮೆ ಹಾಗೂ ವೆಲ್‌ನೆಸ್ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ. ಹಾಗೂ ಅವರು ಸಂಪೂರ್ಣ ವೆಲ್ ನೆಸ್ ನ ಒಟ್ಟು ರಿಯಾಯಿತಿ ಪಡೆಯಬಹುದು.
ಲಾಕರ್ ಸೌಲಭ್ಯ ( Locker Facility ) ಹಾಗೂ ಆಕರ್ಷಕ ರಿಯಾಯಿತಿಗಳು ( Special Discounts ) :
ಇನ್ನು ಮುಖ್ಯವಾಗಿ ಈ ಯೋಜನೆಗಳಲ್ಲಿ ಲಾಕರ್ ಸೌಲಭ್ಯ ಒದಗಿಸಲಾಗುತ್ತದೆ. ಫಲಾನುಭವಿಗಳು ಚಿನ್ನ ಹಾಗೂ ವಜ್ರದ ಎಸ್‌ಬಿ ಖಾತೆ ಹೊಂದಿದ್ದರೆ ಅಂಥವರು ಲಾಕರ್ ಗಳ ಸೌಲಭ್ಯಗಳಿಗಾಗಿ ಆ ಬ್ಯಾಂಕ್ ಗೆ ಮನವಿ ಸಲ್ಲಿಸಬಹುದು. ಇದರಿಂದ ಅವರ ಹೂಡಿಕೆಯನ್ನು ಭದ್ರವಾಗಿ ಇಟ್ಟುಕೊಳ್ಳಬಹುದು.
ಚಿಲ್ಲರೆ ಸಾಲಗಳ ಮೇಲಿನ ರಿಯಾಯಿತಿ ಬಡ್ಡಿದರ :
ನಾರಿಶಕ್ತಿ ಉಳಿತಾಯ ಯೋಜನೆಯಲ್ಲಿ ಮಹಿಳೆಯರು ಚಿಲ್ಲರೆ ಸಾಲಗಳ ಮೇಲೆ ವಿಶೇಷ ರಿಯಾತಿಯನ್ನು ಪಡೆಯಬಹುದು. ಇದು ಕೂಡ ಒಂದು ಖುಷಿಯ ವಿಚಾರ ಎನ್ನಬಹುದು. ಇದರ ಮೂಲಕ ಅವರು ಯಾವುದೇ ರೀತಿಯ ತೊಂದರೆ ಇಲ್ಲದೆ ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಲು ಉಪಯೋಗವಾಗಿದೆ.
ನಾರಿಶಕ್ತಿ ಉಳಿತಾಯ ಖಾತೆ ಹೊಂದಿರುವ ಮಹಿಳೆಯರು ಚಿಲ್ಲರೆ ಸಾಲಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಕಡಿಮೆ ಬಡ್ಡಿದರಕ್ಕೆ ಅರ್ಹರಾಗಿರುತ್ತಾರೆ. ಇವರು ಸುಲಭವಾಗಿ ಸಾಲ ಪಡೆಯಬಹುದಾಗಿದೆ.
ಚಿಲ್ಲರೆ ಸಾಲಗಳ ಮೇಲಿನ ಸಂಸ್ಕರಣಾ ಶುಲ್ಕಗಳ ಮನ್ನಾ :
ಹೆಚ್ಚುವರಿ ಪ್ರಯೋಜನವಾಗಿ, ಖಾತೆದಾರರು ಚಿಲ್ಲರೆ ಸಾಲಗಳ ಮೇಲೆ ಯಾವುದೇ ಪ್ರಕ್ರಿಯೆ ಶುಲ್ಕ ಪಾವತಿಸಬೇಕಾಗಿಲ್ಲ. ಇದು ಅವರ ಆರ್ಥಿಕ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ಉಚಿತ ಕ್ರೆಡಿಟ್ ಕಾರ್ಡ್ ವಿತರಣೆ ( Free Credit Card Service ) :
ನಾರಿಶಕ್ತಿ ಉಳಿತಾಯ ಖಾತೆದಾರರು ಉಚಿತ ಕ್ರೆಡಿಟ್ ಕಾರ್ಡ್ ಅನುಕೂಲತೆಯನ್ನು ಆನಂದಿಸಬಹುದು.
POS ನಲ್ಲಿ ಹೆಚ್ಚಿನ ಬಳಕೆಯ ಮಿತಿ :
ಖಾತೆದಾರರು ಹೆಚ್ಚಿನ ಬಳಕೆಯ ಮಿತಿಯಿಂದ ಪ್ರಯೋಜನ ಪಡೆಯಬಹುದು. ಪಾಯಿಂಟ್ ಆಫ್ ಸೇಲ್ ( POS ) ವಹಿವಾಟುಗಳ ಮೇಲೆ 5ಲಕ್ಷ ರೂವರೆಗೆ ಸುಲಭವಾಗಿ ಖರೀದಿ ಮಾಡಲು ಇದು ಅನುವು ಮಾಡಿಕೊಡುತ್ತದೆ. ಹಾಗೆಯೇ ನಾರಿಶಕ್ತಿ ಖಾತೆ ತೆರೆಯುವಾಗ ಸಿಎಸ್‌ಆರ್ ನಿಧಿಗೆ 10 ರೂ ಕಡಿತ ಮಾಡಲಾಗುತ್ತದೆ. ಇದನ್ನು ಹಿಂದುಳಿದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸಾಮಾಜಿಕ ಮತ್ತು ಆರ್ಥಿಕತೆಗೆ ಬಹಳ ಉಪಯುಕ್ತವಾಗಿದೆ.
ಹಾಗೆಯೇ ಈ ಯೋಜನೆಯಲ್ಲಿ ಪ್ಲಾಟಿನಂ ( Platinum ) ಎಸ್‌ಬಿ ಖಾತೆ ( SB Account ) ಹೊಂದಿರುವವರು ವಿವಿಧ ಉಚಿತ ಸೌಲಭ್ಯಗಳ ಪ್ರಯೋಜನ ಪಡೆಯಬಹುದಾಗಿದೆ. ಇದು ಈ ಉಳಿತಾಯ ಯೋಜನೆಗಳಲ್ಲಿ ಒಂದು ಉತ್ತಮ ಸೌಲಭ್ಯ ವಾಗಿದೆ.
ಈ ಉಳಿತಾಯ ಯೋಜನೆಯಲ್ಲಿ ಖಾತೆ ತೆರೆಯುವ ಸುಲಭ ವಿಧಾನದ ವಿವರ ( Steps for Account Open ) :
ನಾರಿಶಕ್ತಿ ಉಳಿತಾಯ ಖಾತೆಯನ್ನು ತೆರೆಯಲು ಆಸಕ್ತಿ ಇರುವವರು ಬ್ಯಾಂಕ್ ಆಫ್ ಇಂಡಿಯಾದ ಯಾವುದೇ 5132 ದೇಶೀಯ ಶಾಖೆಗಳಲ್ಲಿ ಇದನ್ನು ಮಾಡಿಸಬಹುದು.
ಹಾಗೆಯೇ ಇನ್ನು ಸುಲಭವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕೂಡ ಖಾತೆ ತೆರೆಯಲು ಸಾಧ್ಯವಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Thanks for the valuable information, we appreciate your content, We are active in News and Media Industry. Vistara News channels cover a diverse range of topics, including local and national news, politics, business, sports, entertainment, and cultural events. They often feature a mix of live reporting, interviews, panel discussions, and special programs to keep viewers informed about current affairs.