Best Scooters: ಭರ್ಜರಿ ಕೊಡಲಿವೆ 5 ಹೊಸ ಸ್ಕೂಟರ್ ಗಳು ! ಇಲ್ಲಿದೆ ಡೀಟೇಲ್ಸ್ 

Picsart 24 05 26 14 39 06 175

ಸ್ಕೂಟರ್ ಕೊಂಡುಕೊಳ್ಳಲು ಆಸಕ್ತಿ ಇದ್ದರೆ ಕಾಯಿರಿ, ಆದಷ್ಟು ಬೇಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ 5 ಬೆಸ್ಟ್ ಸ್ಕೂಟರ್ ಗಳು (5 best scooters)!

ಇಂದು ಮಾರುಕಟ್ಟೆಯಲ್ಲಿ ಹಲವಾರು ವಾಹನಗಳನ್ನು ನಾವು ಕಾಣುತ್ತೇವೆ. ಅಷ್ಟೇ ಅಲ್ಲದೆ ಇದೀಗ ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಲ್ಲೂ ಉತ್ತಮ ಫಿಚರ್ಸ್ ಗಳ ವಾಹನಗಳು (Best features vehicles), ಬೈಕ್ ಗಳು, ಸ್ಕೂಟರ್ ಗಳು ಅತೀ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿವೆ. ಹಾಗೆಯೇ ಇದೀಗ ಮಾರುಕಟ್ಟೆಯಲ್ಲಿ ಬಜಾಜ್(bajaj), ಹೀರೋ(hero), ಟಿವಿಎಸ್ (TVS) ಮತ್ತು ಹೋಂಡಾ (Honda) ದ್ವಿಚಕ್ರ ವಾಹನ ತಯಾರಕರು ಹೊಸ ಸ್ಕೂಟರ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಸ್ಕೂಟರ್ ಗಳು ಇಂಧನ ಚಾಲಿತ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಳಾಗಿದ್ದು(electric scooters), ಅತೀ ಕಡಿಮೆ ಬೆಲೆಗೆ ಬಹಳಷ್ಟು ಫಿಚರ್ಸ್ ಗಳನ್ನು ಹೊಂದಿವೆ. ಆ ಸ್ಕೂಟರ್ ಗಳು ಯಾವುವು? ಅವುಗಳ ಬೆಲೆ ಎಷ್ಟು? ಮತ್ತು ಸ್ಕೂಟರ್ ಗಳ ವೈಶಿಷ್ಟ್ಯತೆಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೀರೋ ಕ್ಸೂಮ್ 125R (hero Xoom 125R) ಮತ್ತು ಕ್ಸೂಮ್ 160 (xoom 160) :
xoom 125r right front three quarter

ಹೀರೋ ಮೋಟೊಕಾರ್ಪ್ (hero motocorp) ಕಂಪನಿಯು ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಜನಪ್ರಿಯ ಕಂಪನಿಯಾಗಿದ್ದು, ಈ ಕಂಪೆನಿಯು ಇದೀಗ ಎರಡು ಹೊಸ ಸ್ಕೂಟರ್ ಗಳನ್ನು ಲಾಂಚ್ ಮಾಡಲು ರೆಡಿ ಆಗಿದೆ. ಅವುಗಳೆಂದರೆ : ಹೀರೋ ಕ್ಸೂಮ್ 125R ಮತ್ತು ಕ್ಸೂಮ್ 160 (Hero Xoom 125R & Xoom 160) ಸ್ಕೂಟರ್‌ಗಳು.

ಹೀರೋ ಕ್ಸೂಮ್ 125R ಸ್ಕೂಟರ್ ಇದು ಸ್ಪೋರ್ಟಿ 125 ಸಿಸಿ ಸ್ಕೂಟರ್ ಆಗಿದ್ದು, ಈ ಸ್ಕೂಟರ್ ಉತ್ತಮ ಮೈಲೇಜ್ ಅನ್ನು ನೀಡುತ್ತದೆ.

ಎರಡನೆಯದು ಅಡ್ವೆಂಚರ್ ಸ್ಕೂಟರ್ ಆಗಿದ್ದು, ಇದು ತನ್ನದೇ ಆದ ಸ್ಥಾನವನ್ನು ಸೃಷ್ಟಿಸಿಕೊಳ್ಳಲಿದೆ. ಈ ಸ್ಕೂಟರ್ 156 ಸಿಸಿ ಲಿಕ್ವಿಡ್ – ಕೂಲ್ಡ್ ಎಂಜಿನ್ ಹೊಂದಿದ್ದು, 15.2 ಬಿಹೆಚ್‌ಪಿ ಪವರ್ (BHP power) ಮತ್ತು 14.1 ಎನ್ಎಂ ಟಾರ್ಕ್ (NM Tark) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕಿನ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಗಳು, ಬ್ಲಾಕ್ ಮಾದರಿಯ ಟೈರ್‌ಗಳನ್ನು ಹೊಂದಿದೆ.

ಎರಡೂ ಮಾದರಿಯ ಸ್ಕೂಟರ್ ಗಳು ಆಕರ್ಷಕ ಸ್ಟೈಲಿಂಗ್ (attractive styling) ಮತ್ತು ಹೀರೊ ಮೋಟೊಕಾರ್ಪ್ ಕಂಪನಿಯ ಉತ್ತಮ ಸ್ಕೂಟರ್ ಗಳಾಗಿವೆ. ಈ ಸ್ಕೂಟರ್ ಗಳಲ್ಲಿ ಐ3 ಎಸ್ ತಂತ್ರಜ್ಞಾನವನ್ನು ಅಳವಡಿಸಿದ್ದು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ. 14 ಇಂಚಿನ ಅಲಾಯ್ ವೀಲ್‌ಗಳು, ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಎತ್ತರದ ವಿಂಡ್ ಸ್ಕ್ರೀನ್, ಸ್ಮಾರ್ಟ್ ಕೀ ಇತ್ಯಾದಿಗಳನ್ನು ಉತ್ತಮ ಫಿಚರ್ಸ್ ಗಳನ್ನು ಈ ಸ್ಕೂಟರ್ ಗಳು ಹೊಂದಿವೆ.

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ (Honda electric scooter) :
honda sc e electric scooter concept debuts with swappable batteries japan mobility show 2023 carandbike 1 549d91a413

ಹೋಂಡಾ ಕಂಪನಿಯ (Honda company) ಬಗ್ಗೆ ಹೇಳುವುದಾದರೆ ಈ ಕಂಪನಿಯು ವಾಹನ ತಯಾರಿಕೆಯಲ್ಲಿ ಅತ್ಯಂತ ಜನಪ್ರಿಯ ಕಂಪನಿಯಾಗಿದ್ದು ಇದೀಗ ಹೋಂಡಾ ಕಂಪನಿಯು ಇಂಡಿಯಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ (electric scooter) ಅನ್ನು 2024ರ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಉತ್ಪಾದನೆ ಮಾಡಲಿದೆ. ಎಲೆಕ್ಟ್ರಿಕ್ ಸ್ಕೂಟರ್ ಕೆ4 ಬಿಎ ಎಂಬ ಹೆಸರನ್ನು ಹೊಂದಿದ್ದು, ಇದನ್ನು ಎಲೆಕ್ಟ್ರಿಕ್ ಆಕ್ಟಿವಾ ಎಂದು ಕೂಡ ಕರೆಯಲಾಗುತ್ತದೆ. ಹೋಂಡಾ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಗಳು ಉತ್ತಮ ಅಭಿವೃದ್ಧಿಯನ್ನು ಪಡೆಯುತ್ತಿದ್ದು ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬಳಸಲಾಗುವ ಮೋಟರ್ ಮತ್ತು ಬ್ಯಾಟರಿಯನ್ನು ದೇಶಿಯವಾಗಿ ತಯಾರಿಸಲಾಗುತ್ತದೆ ಎಂದು ಕಂಪನಿಯ ತಿಳಿಸಿಕೊಟ್ಟಿದೆ.

ಅತೀ ಕಡಿಮೆ ಬೆಲೆಗೆ ಹೀರೋ ವಿಡಾ (hero veeda) :
plus1709034009018

ಮತ್ತೊಂದು ಸ್ಕೂಟರ್ ಕಂಪೆನಿಯಾದ ಹೀರೊ ವಿಡಾ ಇದೀಗ ಗ್ರಾಹಕರಿಗೆ ಉತ್ತಮ ಕೈಗೆಟಕುವ ಬೆಲೆಗೆ ತನ್ನ ಹೊಸ ಸ್ಕೂಟರ್ ಅನ್ನು ಪರಿಚಯಸಲು ಸಿದ್ಧವಾಗಿದೆ. ಇದೀಗ ಈ ಕಂಪೆನಿಯು ಮುಂಬರುವ ತಿಂಗಳುಗಳಲ್ಲಿ ತನ್ನ ಎರಡು ಹೊಸ ಮಾದರಿಯ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಅವುಗಳೆಂದರೆ : ವಿಡಾ ವಿ 1 ಮತ್ತು ವಿಡಾ ವಿ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳು.

ಈ ಸ್ಕೂಟರ್‌ ಗಳ ವಿನ್ಯಾಸದ (style) ಬಗ್ಗೆ ಹೇಳುವುದಾದರೆ, ಮುಂಭಾಗದ ಏಪ್ರನ್ ಗಮನಾರ್ಹ ಕ್ರೀಸ್‌ಗಳು ಮತ್ತು ಮಧ್ಯದಲ್ಲಿ ಹೆಡ್‌ಲೈಟ್ ಅನ್ನು ಇರಿಸಲಾಗಿದೆ. ಸೀಟಿನ ಕೆಳಗೆ ವಿಶಾಲವಾದ ಶೇಕರಣೆಗಾಗಿ ಜಾಗವನ್ನು ನೀಡಲಾಗಿದೆ. ಹಾಗೆಯೇ ದೊಡ್ಡ ಸೈಡ್ ಪ್ಯಾನೆಲ್‌ಗಳನ್ನು ಹೊಂದಿವೆ.

ಬಜಾಜ್ ಚೇತಕ್ (bajaj chethak) :
chetak right front three quarter

ಬಜಾಜ್ ಆಟೋ ಕೂಡ ಅತ್ಯಂತ ಜನಪ್ರಿಯ ಕಂಪೆನಿಯಾಗಿದ್ದು, ಈ ಕಂಪನಿಯು 2025 ರ ಆರಂಭದಲ್ಲಿ ಚೇತಕ್‌ನ ಹೊಸ ರೂಪಾಂತರದ ಸ್ಕೂಟರ್ ಗಳನ್ನು ಬಿಡುಗಡೆ ಮಾಡಲು ಯೋಚಿಸಿದೆ. ಹಾಗೆಯೇ ಪ್ರಸ್ತುತ, ಚೇತಕ್ ಪ್ರೀಮಿಯಂ (chethak premium) ಮತ್ತು ಅರ್ಬನ್ (chethak arban) ಎಂಬ ಎರಡು ರೂಪಾಂತರಗಳಲ್ಲಿ ಸ್ಕೂಟರ್ ಗಳು ಲಭ್ಯವಿದೆ. ಇದರ ಬೆಲೆ ಕ್ರಮವಾಗಿ ರೂ.1.47 ಲಕ್ಷ ಮತ್ತು ರೂ.1.23 ಲಕ್ಷ (ಎಕ್ಸ್ ಶೋರೂಂ) ಆಗಿದೆ.

ಬಜಾಜ್ ಚೇತಕ್ ಫಿಚರ್ಸ್ ಗಳು (features) :

ಈ ಎರಡೂ ವೇರಿಯೆಂಟ್‌ಗಳ ಸ್ಕೂಟರ್ ಗಳ ಬ್ಯಾಟರಿ ಆಯ್ಕೆಗಳು ಮತ್ತು ಉತ್ತಮ ರೇಂಜ್‌ನಲ್ಲಿ ದೊರೆಯಲಿವೆ. ಈ ಚೇತಕ್ ಸ್ಕೂಟರ್ ಗಳು ದೊಡ್ಡ ಬ್ಯಾಟರಿ ಪ್ಯಾಕ್, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ರೈಡಿಂಗ್ ರೇಂಜ್ ಅನ್ನು ಹೊಂದುವ ಎಲ್ಲಾ ನಿರೀಕ್ಷೆ ಇದೆ ಎಂದು ಕಂಪೆನಿಯು ತಿಳಿಸಿದೆ.

ನೀವೇನಾದರೂ ಸ್ಕೂಟರ್ ಗಳನ್ನು ಕೊಂಡು ಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ ಸ್ವಲ್ಪ ಕಾಯಿರಿ ಯಾಕೆಂದರೆ, ಅತ್ಯಂತ ಜನಪ್ರಿಯ ವಾಹನ ತಯಾರಿಕಾ ಕಂಪೆನಿಗಳು ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಸ್ಕೂಟರ್ ಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿವೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!