ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಹೆಲ್ಮೆಟ್ ಅನ್ನು ಧರಿಸದೆ ದ್ವಿಚಕ್ರ ವಾಹನವನ್ನು ಚಲಿಸುವಂಥವರಿಗೆ ಒಂದು ಹೊಸ ನಿಯಮವನ್ನು ತಂದಿದ್ದಾರೆ, ಅದರ ಬಗ್ಗೆ ತಿಳಿದುಕೊಳ್ಳೋಣ. ಹೌದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ, ಬೆಂಗಳೂರು ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದೇನೆಂದರೆ ಐಟಿಎಂಎಸ್ (ITMS) ವ್ಯವಸ್ಥೆ. ಈ ಐಟಿಎಂಎಸ್ ವ್ಯವಸ್ಥೆ ಎಂದರೇನು?, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?, ಈ ವ್ಯವಸ್ಥೆಯಿಂದ ಸಾರ್ವಜನಿಕರು ಹೇಗೆ ನಿಯಮವನ್ನು ಪಾಲಿಸುತ್ತಾರೆ?, ಈ ವ್ಯವಸ್ಥೆಯು ಹೆಲ್ಮೆಟ್ ಧರಿಸಿದವರನ್ನು ಪತ್ತೆ ಮಾಡಿ ಎಷ್ಟು ಫೈನ್ ಹಾಕುತ್ತದೆ?, ಹೀಗೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಮ್ಮೆ ಚಾರ್ಜ್ ಮಾಡಿದರೆ 95 KM ಓಡುವ ಎಲೆಕ್ಟ್ರಿಕ್ ಸೈಕಲ್ : Firefox Urban Eco Electric cycle
ಹೆಲ್ಮೆಟ್ಸ್ ಧರಿಸುವುದು ಕಡ್ಡಾಯ :
ಹೆಚ್ಚಿನ ನಿಯಮ ಉಲ್ಲಂಘನೆಯನ್ನು ತಡೆಯಲು ಬೆಂಗಳೂರು ಸಂಚಾರಕ್ಕೆ ಹೊಸ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಗರದ ಟ್ರಾಫಿಕ್ ಪೊಲೀಸ್ ಸಂಚಾರ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಮತ್ತು ಚಲನ್‌ಗಳನ್ನು ನೀಡಲು ಬೆಂಗಳೂರಿನಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್)Intelligent Traffic Management System (ITMS) ಅನ್ನು ಪರಿಚಯಿಸಲಾಗಿದೆ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂಗಳು ಟ್ರಾಫಿಕ್ ಹರಿವನ್ನು ಸುಧಾರಿಸುವ ಮೂಲಕ, ಸಾರಿಗೆ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ಮೂಲಕ ಸಾರಿಗೆಯನ್ನು ಸುಗಮ ಮತ್ತು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ. ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ರಸ್ತೆ ಸುರಕ್ಷತೆಯನ್ನು ಗುರಿಯಾಗಿಟ್ಟುಕೊಂಡು ಉದಯೋನ್ಮುಖ ಪರಿಹಾರವಾಗಿದೆ. ಸುಗಮ ಸಾರಿಗೆ ಅನುಭವವನ್ನು ರಚಿಸಲು ವ್ಯಾಪಕ ಶ್ರೇಣಿಯ ಸ್ಮಾರ್ಟ್ ಉತ್ಪನ್ನಗಳು ಸಂಯೋಜಿಸುತ್ತವೆ.
ಬೆಂಗಳೂರು ITMS ವ್ಯವಸ್ಥೆಯು ಈ ಕೆಳಗಿನ ಸಂಚಾರ ಉಲ್ಲಂಘನೆಗಳನ್ನು ನಿಯಂತ್ರಿಸುತ್ತದೆ :
1. ವೇಗದ ಮಿತಿಯನ್ನು ಮೀರುವುದು
2. ಕೆಂಪು ದೀಪಗಳ ಜಂಪಿಂಗ್
3. ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ಇರುವುದು
4. ಸೀಟ್ ಬೆಲ್ಟ್ ಧರಿಸದಿರುವುದು
5. ವಾಹನವನ್ನು ಚಲಿಸುವಾಗ ಫೋನ್ನಲ್ಲಿ ಮಾತಾಡುವುದು
ITMS ಹೇಗೆ ಕಾರ್ಯನಿರ್ವಹಿಸುತ್ತದೆ?:
ITMS ವ್ಯವಸ್ಥೆಯು ಟ್ರಾಫಿಕ್ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಕ್ಯಾಮರಾಗಳನ್ನು ಹೊಂದಿರುವ AI ( ಆರ್ಟಿಫಿಶಿಯಲ್ ಇಂಟಲಿಜೆನ್ಸ್ ) ಆಧಾರಿತ ವ್ಯವಸ್ಥೆಯಾಗಿದೆ. ಟ್ರಾಫಿಕ್ ಉಲ್ಲಂಘನೆಗಳನ್ನು ಸಂಪರ್ಕವಿಲ್ಲದ ರೀತಿಯಲ್ಲಿ ಹಿಡಿಯಲು ಮತ್ತು ಕನಿಷ್ಠ ಪ್ರಮಾಣದ ಮಾನವ ಒಳಗೊಳ್ಳುವಿಕೆಯೊಂದಿಗೆ ಉಲ್ಲಂಘಿಸುವವರಿಗೆ ಸ್ವಯಂಚಾಲಿತವಾಗಿ ರಚಿತವಾದ ಚಲನ್‌ಗಳನ್ನು ಕಳುಹಿಸಲು ITMS ಅನ್ನು ಬೆಂಗಳೂರಿನ ನಗರದಲ್ಲಿ ಅಳವಡಿಸಲಾಗಿದೆ.
ಇದನ್ನೂ ಓದಿ: ವಾಟ್ಸಪ್ ನ ಈ ಟ್ರಿಕ್ಸ್ ತುಂಬಾ ಜನರಿಗೆ ಗೊತ್ತಿಲ್ಲ – ಈಗಲೇ ತಿಳಿದುಕೊಳ್ಳಿ : WhatsaApp New Features 2023
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜಧಾನಿಯಲ್ಲಿ ಐಟಿಎಂಎಸ್ ವ್ಯವಸ್ಥೆಗೆ ಚಾಲನೆ ನೀಡಿದರು. ರಾಷ್ಟ್ರದ ಐಟಿ ರಾಜಧಾನಿಯಲ್ಲಿ ಪ್ರಸ್ತುತ 50 ಮಹತ್ವದ ಟ್ರಾಫಿಕ್ ಛೇದಕಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಇದೆ. ITMS ವ್ಯವಸ್ಥೆಯು 250 ANPR ಕ್ಯಾಮೆರಾಗಳನ್ನು (ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ) ಮತ್ತು 80 RLVD ಕ್ಯಾಮೆರಾಗಳನ್ನು (ಕೆಂಪು ಬೆಳಕಿನ ಉಲ್ಲಂಘನೆ ಪತ್ತೆ) ಒಳಗೊಂಡಿದೆ.
ಟ್ರಾಫಿಕ್ ಉಲ್ಲಂಘನೆಯನ್ನು ಕ್ಯಾಮರಾ ಪತ್ತೆಹಚ್ಚಿದ ತಕ್ಷಣ ಚಲನ್ ಸ್ವಯಂಚಾಲಿತವಾಗಿ ರಚಿಸಲ್ಪಡುತ್ತದೆ ಮತ್ತು SMS ಮೂಲಕ ಉಲ್ಲಂಘಿಸುವವರಿಗೆ ಕಳುಹಿಸಲಾಗುತ್ತದೆ. ವೀಡಿಯೋನೆಟಿಕ್ಸ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ ಈ ಸಾಫ್ಟ್‌ವೇರ್ ಅನ್ನು ಮ್ಯಾಟ್ರಿಕ್ಸ್ ಸೆಕ್ಯುರಿಟಿ ಅಂಡ್ ಸರ್ವೈಲೆನ್ಸ್ ಎಂಬ ಖಾಸಗಿ ಕಂಪನಿ ತಯಾರಿಸಿದೆ.
ITMS ಹೆಲ್ಮೆಟ್ ಧರಿಸದೇ ಇರುವವರಿಗೆ ಹೇಗೆ ದಂಡ ವಿಧಿಸುತ್ತದೆ ?:
ಇದಕ್ಕೂ ಮುಂಚೆ ಹೆಲ್ಮೆಟ್ ಧರಿಸದಿದ್ದರೆ ಒಮ್ಮೆ ಮಾತ್ರ ದಂಡ ಕಟ್ಟಿ ರಶೀದಿ ಪಡೆಯಬಹುದಿತ್ತು. ಆನಂತರ ಪೊಲೀಸರು ಹಿಡಿದರೆ ದಂಡದ ರಶೀದಿ ತೋರಿಸಿ ಮನೆಗೆ ಹೋಗಬಹುದಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಹೆಲ್ಮೆಟ್ ಅನ್ನು ಧರಿಸದೆ ನೀವು ಎಷ್ಟು ಸಿಗ್ನಲ್ ಗಳಲ್ಲಿ ಚಲಿಸುತ್ತಿರೋ, ಅಷ್ಟು ಸಿಗ್ನಲ್ಗಳಲ್ಲಿಯೂ ಕೂಡ ದಂಡ ವಿಧಿಸಲಾಗುತ್ತದೆ. ಅಷ್ಟು ದಂಡಗಳು ಒಂದೇ ಬಿಲ್ಗೆ ಸೇರುತ್ತದೆ.
ಒಬ್ಬರೂ ಹೆಲ್ಮೆಟ್ ಧರಿಸದೆ ನಾಲ್ಕು ಸಿಗ್ನಲ್ ದಾಟಿದ್ರೆ 2 ಸಾವಿರ ರೂಗಳನ್ನು ವಿಧಿಸಲಾಗುತ್ತದೆ. ಹಾಗೆಯೇ ದಂಡವನ್ನು ವಿಧಿಸಿದ ನಂತರವೂ ಕೂಡ ಮುಂದಿನ ಸಿಗ್ನಲ್ ಅನ್ನು ದಾಟಿದ್ರೆ ಅಲ್ಲಿಯ ಸಿಗ್ನಲ್ಗಳಲ್ಲಿಯೂ ಕೂಡ ದಂಡ ರಶಿದಿಗೆ ಜೋಡಣೆ ಆಗುತ್ತದೆ ಇರುತ್ತದೆ. ಒಂದು ವೇಳೆ ಹೆಲ್ಮೆಟ್ ಹಾಕದೇ ಹತ್ತಾರು ಸಿಗ್ನಲ್ ದಾಟಿದ್ರೆ ಹತ್ತಾರು ಸಾವಿರವೇ ದಂಡ ಬೀಳುತ್ತೆ. ಐಟಿಎಂಎಸ್ನಿಂದ ಕಳೆದ ಒಂದೂವರೆ ತಿಂಗಳಲ್ಲಿ ಕೇಸ್ ಸಂಖ್ಯೆ ದುಪ್ಪಟ್ಟಾಗಿದೆ.
ಆದ್ದರಿಂದ ಎಲ್ಲರೂ ಕೂಡ ಸಂಚಾರ ನಿಗಮದ ನಿಯಮಗಳನ್ನು ಉಲ್ಲಂಘಿಸದೆ ಎಚ್ಚರದಿಂದ ವಾಹನಗಳನ್ನು ಚಲಿಸಬೇಕಾಗಿದೆ. ಈ ಹೊಸ ಸಂಚಾರದ ನಿಯಮಗಳು ದಂಡದ ಮೂಲಕ ಹಣವನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿಲ್ಲ. ಈ ನಿಯಮಗಳು ನಮ್ಮ ಒಳಿತಿಗೆ ಆಗಿವೆ. ಆದ್ದರಿಂದ ಎಲ್ಲರೂ ಕೂಡ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತರಾಗಿರಿ ಹಾಗೂ ಅಪಘಾತಗಳಿಂದ ತಪ್ಪಿಸಿಕೊಳ್ಳಿ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ದ್ವಿಚಕ್ರ ವಾಹನಗಳನ್ನು ಹೊಂದಿರುವ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ
- SSP ಸ್ಕಾಲರ್ಶಿಪ್ : Click Here
- ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
- ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
- ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
- ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
- ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
- ವಿದ್ಯಾಸಿರಿ ಸ್ಕಾಲರ್ಶಿಪ್: Click Here
- ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
- ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
- ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
- ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
- ಜಿಂದಾಲ್ ಸ್ಕಾಲರ್ಶಿಪ್ 2022: Click Here
- SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/
ಇದನ್ನೂ ಓದಿ:
25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022
ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ