ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಿಫಾ ವೈರಸ್(Nipah Virus) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಟೋಕಿಯೊದ ಈಶಾನ್ಯದ ಇಬರಾಕಿ ಪ್ರಿಫೆಕ್ಚರ್‌ನಲ್ಲಿ 70 ರ ಹರೆಯದ ಮಹಿಳೆಯೊಬ್ಬರು ಓಝ್ ವೈರಸ್‌ಗೆ (ozv)ತುತ್ತಾದ ನಂತರ ಸಾವನ್ನಪ್ಪಿದರು, ಇದು ಟಿಕ್-ಹರಡುವ ಸೋಂಕಿನಿಂದ (infection ) ವಿಶ್ವದ ಮೊದಲ ಸಾವು ಎಂದು ಜಪಾನಿನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಏನಿದು ವಿಷಯ? ಯಾವುದು ಹೊಸ ವೈರಸ್ ಅಂತ ತಿಳಿದುಕೊಳ್ಳಬೇಕೆ ಹಾಗಿದಲ್ಲಿ ಲೇಖನವನ್ನು ಸಂಪೂರ್ಣ ವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಬರುತ್ತಿದೆ ಹೊಸ ವೈರಸ್ :
2018 ರಲ್ಲಿ ದೇಶದಲ್ಲಿ ಈ ವೈರಸ್ ಪತ್ತೆಯಾಗಿದ್ದು, ಮನುಷ್ಯರು ಮತ್ತು ಕಾಡು ಪ್ರಾಣಿಗಳು ಸೋಂಕಿಗೆ ಒಳಗಾದ ಪ್ರಕರಣಗಳು ಕಂಡುಬರುತ್ತಿವೆ.
ಪ್ರಿಫೆಕ್ಚುರಲ್ ಸರ್ಕಾರ( prifectural goverment ) ಮತ್ತು ಆರೋಗ್ಯ ಸಚಿವಾಲಯದ( health sector ) ಪ್ರಕಾರ ಜ್ವರ (fever) ಮತ್ತು ಆಯಾಸ ಸೇರಿದಂತೆ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದ ನಂತರ ಮಹಿಳೆ 2022 ರ ಬೇಸಿಗೆಯಲ್ಲಿ ವೈದ್ಯಕೀಯ ಸಂಸ್ಥೆಗೆ ಹೋದರು. ಆಕೆಗೆ ನ್ಯುಮೋನಿಯಾ(nyumoniya) ಇರುವುದು ಪತ್ತೆಯಾಯಿತು, ಆದರೆ ಆಕೆಯ ಸ್ಥಿತಿಯು ಹದಗೆಟ್ಟ ನಂತರ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಆಕೆಯ ಮೇಲಿನ ಬಲ ತೊಡೆಯ ಮೇಲೆ ಎಗ್ಗೊರ್ಡ್ ಟಿಕ್ ಕಂಡುಬಂದಿದೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರದಲ್ಲಿ ಅಲರ್ಟ್ ನೀಡಲಾಗಿದೆ :
ಕೇರಳದಲ್ಲಿ ನಿಫಾ ವೈರಸ್‌ಗೆ (Nipah Virus In Kerala) ಇಬ್ಬರು ಮೃತಪಟ್ಟ ನಂತರ ರಾಜ್ಯ ಸರ್ಕಾರ (state governament )ಫುಲ್ ಅಲರ್ಟ್ ಘೋಷಿಸಿದೆ. ರಾಜ್ಯದ ಕೇರಳ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸೂಚಿಸಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್(tharmal scaning ) ನಡೆಸಲಾಗುತ್ತಿದೆ. ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್(sanitise ) ಮಾಡಲಾಗುತ್ತಿದೆ. ತಪಾಸಣೆ ಬಳಿಕವೇ ವಾಹನಗಳನ್ನ ರಾಜ್ಯ ಪ್ರವೇಶಕ್ಕೆ ಬಿಡಲಾಗುತ್ತಿದೆ. ಜೊತೆಗೆ ರೋಗ ಲಕ್ಷಣ ಉಳ್ಳವರ ಟ್ರಾವೆಲ್ ಹಿಸ್ಟರಿಯನ್ನೂ ( travel histroy ) ಕಲೆಹಾಕಲಾಗುತ್ತಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 5 ಹಾಸಿಗೆಗಳ ವಿಶೇಷ ಐಸೊಲೇಷನ್ ವಾರ್ಡ್(isolation ward) ಅನ್ನು ಸಿದ್ಧಪಡಿಸಲಾಗಿದೆ.
ನಿಫಾ ವೈರಸ್ ಅಪಾಯಕಾರಿಯೇ? ಗಡಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳೇನು?:
ರಾಜ್ಯದಲ್ಲಿ ಈಗ ನಿಫಾ ವೈರಸ್ ಭೀತಿ ಶುರುವಾಗಿದ್ದು. ಕೇರಳದಲ್ಲಿ ನಿಫಾ ವೈರಸ್ ಸೋಂಕು ಹರಡುತ್ತಿರುವ ಕಾರಣ, ಕರ್ನಾಟಕದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು. ನಿಫಾ ವೈರಸ್ ಮೂಲ ಏನು? ನಿಫಾ ವೈರಸ್ ಸೋಂಕಿಗೆ ಚಿಕಿತ್ಸೆ ಇದ್ಯಾ? ಈ ಸೋಂಕಿನ ರೋಗ ಲಕ್ಷಣಗಳು ಏನು?, ಕರ್ನಾಟಕಕ್ಕೂ ನಿಫಾ ವೈರಸ್ ಹರಡುವ ಭೀತಿ ಇದ್ಯಾ?, ಈ ಹಿಂದೆ ವಿಶ್ವದ ಯಾವೆಲ್ಲಾ ಭಾಗಗಳಲ್ಲಿ ಹರಡಿತ್ತು? ಈ ವೈರಾಣು ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ನಿಫಾ ವೈರಸ್ ಅನ್ನೋ ಹೆಸರು ಮೊದಲು ಕೇಳಿ ಬಂದಿದ್ದು 1998ರಲ್ಲಿ.. ಮಲೇಷ್ಯಾ ಹಾಗೂ ಸಿಂಗಪುರ ದೇಶಗಳಲ್ಲಿ ಈ ವೈರಸ್ ಮೊದಲು ಕಂಡು ಬಂತು. ಅದರಲ್ಲೂ ಹಂದಿ ಸಾಕಣೆ ಕೇಂದ್ರಗಳಲ್ಲಿ ಈ ವೈರಸ್ ಹರಡಿತ್ತು. ಹಂದಿ ಸಾಕುವ ಕಾರ್ಮಿಕರು ಹಾಗೂ ಈ ಸಾಕಣೆ ಕೇಂದ್ರದ ಮಾಲೀಕರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಜ್ವರ ನಂತರದ ದಿನಗಳಲ್ಲಿ ಮಾರಣಾಂತಿಕವಾಗಿ ಪರಿಣಮಿಸಿತ್ತು. ಅಂದಿನಿಂದಲೇ ಈ ನಿಫಾ ವೈರಸ್ ಜಗತ್ತಿಗೆ ಪರಿಚಯವಾಯ್ತು. ಕೇವಲ ಹಂದಿ ಮಾತ್ರವಲ್ಲ, ಬಾವಲಿಗಳಿಂದಲೂ ಈ ನಿಫಾ ವೈರಸ್ ಹರಡುತ್ತೆ. ಬಾವಲಿ ಹಾಗೂ ಹಂದಿಗಳ ದೇಹದ ದ್ರವದಿಂದ ಈ ವೈರಸ್ ಮನುಷ್ಯರಿಗೆ ಹರಡುತ್ತೆ. ಕೆಲವೊಮ್ಮೆ ಮನುಷ್ಯರಿಂದ ಮನುಷ್ಯರಿಗೆ ಹರಡಿದ ಉದಾಹರಣೆಗಳೂ ಇವೆ. ಹಾಗೆ ನೋಡಿದ್ರೆ ನಿಫಾ ವೈರಾಣು ಬಾವಲಿಗಳ ದೇಹದಲ್ಲಿ ಶತಮಾನಗಳಿಂದಲೂ ಉಳಿದುಕೊಂಡಿತ್ತು ಅಂತಾರೆ ವಿಜ್ಞಾನಿಗಳು. ಆದರೆ, ಈ ವೈರಸ್‌ಗಳು ಇತ್ತೀಚಿನ ದಿನಗಳಲ್ಲಿ ರೂಪಾಂತರ ಹೊಂದಿದ ಕಾರಣ, ಮನುಷ್ಯರಿಗೂ ಹರಡುತ್ತಿದೆ.
ನಿಮಗೆಲ್ಲಾ ಗೊತ್ತಿರುವ ಹಾಗೆ ಕೋವಿಡ್ ಬಂದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಇರಲಿಲ್ಲ. ಜೊತೆಗೆ ವ್ಯಾಕ್ಸಿನ್ ಕೂಡಾ ಇರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು, ಔಷಧ ನೀಡಬೇಕು ಅಂತಾ ಮಾರ್ಗಸೂಚಿ ರಚನೆ ಮಾಡಲಾಯ್ತು. ಇದರ ಜೊತೆಯಲ್ಲೇ ಲಸಿಕೆ ಕೂಡಾ ತಯಾರಾಯ್ತು. ಇದೀಗ ನಿಫಾ ವೈರಸ್ ಕಾಡೋಕೆ ಶುರುವಾಗಿದೆ. ಆದ್ರೆ, ಈ ವೈರಸ್ ವಿರುದ್ಧ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ತುಂಬೋದಕ್ಕೆ ಯಾವುದೇ ವ್ಯಾಕ್ಸಿನ್ ಲಭ್ಯ ಇಲ್ಲ. ಜೊತೆಗೆ ಈ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡೋದಕ್ಕೆ ಯಾವುದೇ ಒಂದು ನಿರ್ದಿಷ್ಟ ಔಷಧ ಕೂಡಾ ಇಲ್ಲ. ಆದರೆ, ನಿಫಾ ವೈರಾಣು ಸೋಂಕಿತರಿಗೆ ವೈದ್ಯರು ಪೂರಕ ಚಿಕಿತ್ಸೆಗಳನ್ನು ಕೊಡ್ತಾರೆ. ಈ ಮೂಲಕ ಸೋಂಕಿತರು ಚೇತರಿಸಿಕೊಳ್ಳೋದಕ್ಕೆ ನೆರವಾಗ್ತಾರೆ. ಈ ವೈರಸ್‌ಗೆ ನಿರ್ದಿಷ್ಟ ಔಷಧ ಹಾಗೂ ಲಸಿಕೆ ಇಲ್ಲವಾದ ಕಾರಣ ಸೋಂಕಿತರ ಮರಣ ಪ್ರಮಾಣ ಶೇಕಡಾ 70ರಷ್ಟಿದೆ. ಹೀಗಾಗಿ, ಸೋಂಕು ತಗುಲದಂತೆ ಹಾಗೂ ವ್ಯಾಪಕವಾಗಿ ಹರಡದಂತೆ ತಡೆಯಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ