ಸರ್ಕಾರದ ಹೊಸ ಯೋಜನೆಯಲ್ಲಿ ಸಿಗಲಿದೆ ಬರೋಬ್ಬರಿ 25 ಲಕ್ಷ ಸಬ್ಸಿಡಿ! ಇಲ್ಲಿದೆ ಮಾಹಿತಿ

IMG 20240723 WA0004

ನಿರುದ್ಯೋಗಿಗಳಿಗೆ NLM ಯೋಜನೆಯಲ್ಲಿ 25 ಲಕ್ಷವನ್ನು ಶೇ 50% ಸಬ್ಸಿ(subsidy)ಡಿಯೊಂದಿಗೆ  ಉದ್ಯೋಗ ಕಲ್ಪಿಸುವ ಅವಕಾಶ.

ದೇಶದಲ್ಲಿ ಸದ್ಯಕ್ಕೆ ನಿರುದ್ಯೋಗ ಸಮಸ್ಯೆ(Unemployment problem ) ತಾಂಡವವಾಡುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ NLM ಯೋಜನೆಯನ್ನು ಕೈಗೊಂಡಿದೆ. ಯುವಜನತೆಗೆ ಈ ಯೋಜನೆಯಡಿಯಲ್ಲಿ ಜಾನುವಾರು ಸಾಕಾಣಿಕೆ, ಜಾನುವಾರು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ, ಮೊಟ್ಟೆ, ಮಾಂಸ, ಉಣ್ಣೆ ಉತ್ಪಾದನೆ ದೇಶದಲ್ಲಿ  ಹೆಚ್ಚಿಸುವುದಕ್ಕಾಗಿ ಹಾಗೂ ಕೋಳಿ, ಕುರಿ, ಹಂದಿ, ಮೇಕೆ, ಸಾಕಾಣಿಕೆಯನ್ನು ಆರಂಭಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರವು ದೇಶದಲ್ಲಿನ ನಿರುದ್ಯೋಗವನ್ನು ನಿವಾರಿಸಲು NLM ಯೋಜನೆಯಡಿಯಲ್ಲಿ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ 25 ಲಕ್ಷವನ್ನು ಶೇಕಡ 50% ಸಬ್ಸಿಡಿಯೊಂದಿಗೆ ದೇಶದ ಯುವಜತೆಗೆ ಸಾಲ(loan) ಮತ್ತು ಸಹಾಯಧನದ ಹೆಸರಿನಲ್ಲಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳು :

ಸ್ವಂತ ಜಮೀನಿನ ಪಹಣಿ ಅಥವಾ ಲೀಜ್ ಪಡೆದ ಜಮೀನಿನ ಪಹಣಿ, (RTC or Lease Land Agreement).
ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ/ ಪಾನ್ ಕಾರ್ಡ್.
ಜೆ .ಪಿ . ಎಸ್ ಫೋಟೋ (Site Jio tag Photo.).
ತರಬೇತಿ ಪ್ರಮಾಣ ಪತ್ರ(Trainig Certificate).
ಯೋಜನಾ ವರದಿ (DPR).
ಆರು ತಿಂಗಳ ಬ್ಯಾಂಕ್ ವಹಿವಾಟು ವರದಿ(6 months Bank Statement.).
ಅನುಭವದ ಪ್ರಮಾಣ ಪತ್ರ (Experience Certificate.)
ರದ್ದುಗೊಳಿಸಿದ ಬ್ಯಾಂಕ್ ಚೆಕ್ (Cancelled Chek leaf.).
ಬ್ಯಾಂಕಿನಲ್ಲಿ ನಿಮ್ಮ ಖಾತೆ ಇರುವ ಬಗ್ಗೆ ಬ್ಯಾಂಕ್‌ ಅಧಿಕಾರಿಗಳಿಂದ ಪತ್ರ (available in Bank).

ಕೇಂದ್ರ ಸರ್ಕಾರ ನೀಡುವ ಸಹಾಯಧನ ಈ ಕೆಳಗಿನಂತಿದೆ.

ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25) Entrepreneur in small ruminant sector (Sheep and goat farming) & ಘಟಕ ವೆಚ್ಚ ರೂ . 87,30,000/- ಇದಕ್ಕೆ ಸಹಾಯಧನ ಶೇ.50 ರಷ್ಟು ಗರಿಷ್ಟ ರೂ.50 ಲಕ್ಷ

ಹಂದಿ ತಳಿ ಸಂವರ್ಧನಾ ಘಟಕ (100+10) Piggery entrepreneurship ಘಟಕ ವೆಚ್ಚ ರೂ. 50,29,400/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಗರಿಷ್ಟ ರೂ.30 ಲಕ್ಷ.

ಗ್ರಾಮೀಣ ಕೋಳಿ ಉದ್ದಿಮ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ+ಮರಿಗಳ ಸಾಕಾಣಿಕೆ ಘಟಕ) Rural Poultry
Entrepreneurship Programme- ರೂ.3472,540/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ರೂ.25, ಲಕ್ಷ.

ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2000- 2500 ಮೆ.ಟನ್ ಉತ್ಪಾದನೆ) Sllage making unit for entrepreneurs (Production capacity 2000- 2500 MT Per Annum). 500,000/- ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ಗರಿಷ್ಠ- ರೂ.50 ಲಕ್ಷ.

ಕಡಿಮೆ ಪ್ರಮಾಣದಲ್ಲಿ ಈ ಮೇಲಿನ ಉದ್ದಿಮೆಯನ್ನು ಪ್ರಾರಂಭಿಸಲು ಸಹ ಅವಕಾಶವಿರುತ್ತದೆ ಒಮ್ಮೆ ನಿಮ್ಮ ತಾಲ್ಲೂಕಿನ ಪಶುವೈದ್ಯಾಧಿಕಾರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆಯಬವುದು.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಜಾಲತಾಣ ಭೇಟಿ ಮಾಡಿ:
https://nlm.udyamimitra.in/ ಮತ್ತು
https://ahf.karnataka.gov.in/
ಸಹಾಯವಾಣಿ ಸಂಖ್ಯೆ : 8277100200

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!