ಧರ್ಮದ ಆಧಾರದಲ್ಲಿ ಮೀಸಲಾತಿ ರದ್ದು, ಸಂವಿಧಾನ ಸಂಬಂಧ 11 ಸಂಕಲ್ಪಗಳನ್ನು ಘೋಷಿಸಿದ ಮೋದಿ..!
ಭಾರತ ದೇಶವು (India) ಇಂದು ಮುಂದುವರೆದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಆಚಾರ, ವಿಚಾರ ಅಷ್ಟೇ ಅಲ್ಲದೆ ವಿವಿಧತೆಯಲ್ಲಿ ಏಕತೆ ಇದೆ. ಜಾತಿ ಮತ ಬೇಧವಿಲ್ಲದೆ ಜನರು ಒಗ್ಗೂಡಿ ದುಡಿದು ತಿನ್ನುತ್ತಾರೆ. ಹಾಗೆಯೇ ಎಲ್ಲರೂ ಯಾವುದೇ ಜಾತಿ ಬೇಧ ವಿಲ್ಲದೆ ಆಯಾ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇಂದು ಹಲವಾರು ಕ್ಷೆತ್ರಗಳಲ್ಲಿ ಮೀಸಲಾತಿಯನ್ನು ಪಡೆಯಬಹುದಾಗಿದೆ.
ಡಾ. ಬಿಆರ್ ಅಂಬೇಡ್ಕರ್ (Dr. B R Ambedkar) ನೇತೃತ್ವದ ಸಮಿತಿಯು ರಚಿಸಿದ ಸಂವಿಧಾನವನ್ನು ಭಾರತ ಸರ್ಕಾರ ಅಂಗೀಕರಿಸಿ 75ನೇ ವರ್ಷಾಚರಣೆಯು ಪೂರ್ಣಗೊಂಡ ಕಾರಣಕ್ಕಾಗಿ ಕಳೆದ ಒಂದು ವಾರದಿಂದ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಡಿಸೆಂಬರ್ 14ರಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂವಿಧಾನ ಮಹತ್ವದ ಬಗ್ಗೆ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಭಾರತ ಏಳಿಗೆಗಾಗಿ, ಅಭಿವೃದ್ಧಿಗಾಗಿ 11 ಸಂಕಲ್ಪಗಳನ್ನು ಮೋದಿ ಕೈಗೊಂಡರು. ಇವನ್ನು ಪ್ರತಿಯೊಬ್ಬ ಭಾರತೀಯನೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದೇಶವು ಪ್ರಜಾಪ್ರಭುತ್ವದಲ್ಲಿ ಆಳವಾದ ಬೇರುಗಳನ್ನು ಹೊಂದಿದೆ: ಪ್ರಧಾನಿ ಮೋದಿ
1948 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದ ಪ್ರಯಾಣವು “ಅಸಾಧಾರಣ” ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದ ಪಿಎಂ ಮೋದಿ, ದೇಶವು ಪ್ರಜಾಪ್ರಭುತ್ವದಲ್ಲಿ ಆಳವಾದ ಬೇರುಗಳನ್ನು ಹೊಂದಿದೆ, ಅದು ಜಗತ್ತಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ. ಸಂವಿಧಾನ ರಚನೆಯಲ್ಲಿ ಬಿಆರ್ ಅಂಬೇಡ್ಕರ್, ಪುರುಷೋತ್ತಮ ದಾಸ್ ಟಂಡನ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ದಿಗ್ಗಜರ ಕೊಡುಗೆಗಳನ್ನು ಪ್ರಧಾನಿ ಮೋದಿಯವರು ಸ್ಮರಿಸಿ, ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡಲು ಹಲವಾರು ದೇಶಗಳು ದಶಕಗಳನ್ನು ತೆಗೆದುಕೊಂಡವು, ಆದರೆ ಭಾರತದ ಸಂವಿಧಾನವು ಅವರಿಗೆ ಮತದಾನದ ಹಕ್ಕನ್ನು ಮೊದಲಿನಿಂದಲೂ ನೀಡಿದೆ ಎಂದು ಹೇಳಿದರು.
ಸಂವಿಧಾನ ಸಂಬಂಧ ದೇಶಕ್ಕಾಗಿ 11 ಸಂಕಲ್ಪಗಳನ್ನು (11 Resolutions) ಘೋಷಿಸಿದ ಪ್ರಧಾನಿ ಮೋದಿ :
ಶನಿವಾರ ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ನಡೆದ ಚರ್ಚೆಗೆ ಪ್ರಧಾನಿ ಮೋದಿ ಉತ್ತರಿಸಿದ್ದು, ನಾವೂ ಸಂವಿಧಾನವನ್ನೂ ಬದಲಾಯಿಸಿದ್ದೇವೆ. ಇಲ್ಲಿ ಮುಚ್ಚಿಡಲು ಏನೂ ಇಲ್ಲ, ಆದರೆ ಜನರ ಒಳಿತಿಗಾಗಿ ಅದನ್ನು ಬದಲಾಯಿಸಿದ್ದೇವೆ ಎಂದು ಹೇಳಿದರು. ಈ ಉದ್ದೇಶಕ್ಕಾಗಿ ಸಂವಿಧಾನವನ್ನು ಬದಲಾಯಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೆಯೇ ಪ್ರಧಾನಿ ಮೋದಿಯವರು ಸಂವಿಧಾನ ಸಂಬಂಧ ದೇಶಕ್ಕಾಗಿ 11 ಸಂಕಲ್ಪಗಳನ್ನು ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ 11 ಸಂಕಲ್ಪಗಳು ಹೀಗಿವೆ :
ನಾಗರಿಕರಾಗಲಿ ಅಥವಾ ಸರ್ಕಾರವಾಗಲಿ ಎಲ್ಲರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು.
ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ಸಮಾಜವೂ ಅಭಿವೃದ್ಧಿಯಿಂದ ಪ್ರಯೋಜನ ಪಡೆಯಬೇಕು. ಎಲ್ಲರೂ ಬೆಂಬಲಿಸಬೇಕು ಮತ್ತು ಎಲ್ಲರೂ ಅಭಿವೃದ್ಧಿ ಹೊಂದಬೇಕು.
ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಮತ್ತು ಭ್ರಷ್ಟರನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳಬಾರದು.
ದೇಶದ ಕಾನೂನುಗಳು, ದೇಶದ ನಿಯಮಗಳು ಮತ್ತು ದೇಶದ ಸಂಪ್ರದಾಯಗಳನ್ನು ಅನುಸರಿಸುವಲ್ಲಿ ನಾಗರಿಕರು ಹೆಮ್ಮೆಪಡಬೇಕು.
ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗಿ ಮತ್ತು ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇರಲಿ.
ಸ್ವಜನಪಕ್ಷಪಾತದಿಂದ ದೇಶದ ರಾಜಕಾರಣ ಮುಕ್ತವಾಗಬೇಕು.
ಸಂವಿಧಾನವನ್ನು ಗೌರವಿಸಬೇಕು ಮತ್ತು ರಾಜಕೀಯ ಲಾಭಕ್ಕಾಗಿ ಸಂವಿಧಾನವನ್ನು ಅಸ್ತ್ರವನ್ನಾಗಿ ಮಾಡಬಾರದು.
ಸಂವಿಧಾನದ ಆಶಯವನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿಯನ್ನು ಪಡೆಯುತ್ತಿರುವವರಿಂದ ಕಸಿದುಕೊಳ್ಳಬಾರದು. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು.
ದೇಶ ಅಭಿವೃದ್ಧಿಯಲ್ಲಿ ಮಾದರಿಯಾಗಬೇಕು.
ರಾಜ್ಯದ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿಯ ಮಂತ್ರವಾಗಬೇಕು.
ಏಕ ಭಾರತ, ಶ್ರೇಷ್ಠ ಭಾರತ ಗುರಿ ಮುಖ್ಯವಾಗಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.