ಫ್ಲಿಪ್ಕಾರ್ಟ್ ನಲ್ಲಿ ನಥಿಂಗ್ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್! ಇಲ್ಲಿದೆ ಮಾಹಿತಿ

nothing phone offer

ನಥಿಂಗ್ ಕಂಪನಿ ನಥಿಂಗ್ ಫೋನ್‌ಗಳ (Nothing phone) ಮೂಲಕ ಸ್ಮಾರ್ಟ್‌ಫೋನ್‌ (smartphone) ಲೋಕದಲ್ಲಿ ತನ್ನದೇ ಆದ ಸಂಚಲನವನ್ನೇ ಉಂಟು ಮಾಡಿದೆ. ಈ ಫೋನ್‌ಗಳ ಫೀಚರ್ಸ್‌ಗಿಂತ (features) ಜನರು ಇವುಗಳ ಶೈಲಿಗೆ ಮಾರುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಈ ಫೋನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ ಎಂದೇ ಹೇಳಬಹುದಾಗಿದೆ. ಈ ಬೆಳವಣಿಗೆ ನಡುವೆ ನಥಿಂಗ್ ಫೋನ್ 2 ( Nothing phone 2) ಬೆಲೆ ಇಳಿಕೆ ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಥಿಂಗ್ ಫೋನ್ 2 ಬೆಲೆಯಲ್ಲಿ ಭಾರಿ ಇಳಿಕೆ:

nothing phone 2

ಹೌದು, ಒನ್‌ಪ್ಲಸ್, ಐಫೋನ್‌ ಹಾಗೂ ಸ್ಯಾಮ್‌ಸಂಗ್‌ ಸೇರಿದಂತೆ ಅನೇಕ ಟಾಪ್‌ ಬ್ರ್ಯಾಂಡ್‌ಗಳ ಫೋನ್‌ಗಳ(top branded phones) ವಿರುದ್ಧ ಸೆಣಸಲು ನಥಿಂಗ್ ಫೋನ್ ಅನ್ನು ಲಾಂಚ್‌ ಮಾಡಲಾಗಿತ್ತು. ಅದರಂತೆ ಈ ಫೋನ್‌ ಮೇಲೆ ತಿಳಿಸಿದ ಬ್ರ್ಯಾಂಡ್‌ಗಳೊಂದಿಗೆ ತೀವ್ರ ಪೈಪೋಟಿ ನಡೆಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಆದರೆ, ಈಗ ಮತ್ತಷ್ಟು ಜನರಿಗೆ ಹತ್ತಿರವಾಗುವ ಉದ್ದೇಶದಿಂದ ನಥಿಂಗ್ ತನ್ನ ನಥಿಂಗ್ ಫೋನ್ 2 ಬೆಲೆಯಲ್ಲಿ ಇಳಿಕೆ ಮಾಡಿದೆ. ಬನ್ನಿ ಹಾಗಿದ್ರೆ, ಏನಿದು ಗುಡ್‌ ನ್ಯೂಸ್?, ಎಷ್ಟು ಬೆಲೆ ಇಳಿಕೆಯಾಗಿದೆ?, ಹೊಸ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನೂ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ (e commerce flatform) ಫ್ಲಿಪ್‌ಕಾರ್ಟ್‌ (flipkart) ತನ್ನ ಮೆಚ್ಚಿನ ಬಳಕೆಗಾರರಿಗೆ ಒಂದಿಲ್ಲೊಂದು ಒಂದು ಹೊಸ ಹೊಸ ಆಫರ್‌ಗಳ (offer) ಮೂಲಕ ಗ್ರಾಹಕರನ್ನು ಸೆಳೆದಿದೆ. ಇದೀಗ ಫ್ಲಿಪ್‌ಕಾರ್ಟ್‌ ಸಂಸ್ಥೆಯು ಕೆಲವು ಹೈ ಎಂಡ್ (high end) ಹಾಗೂ ಪ್ರಿಮಿಯಂ(premium) ಮಾದರಿಯ ಫೋನ್‌ಗಳಿಗೆ ಅತ್ಯುತ್ತಮ ಆಫರ್ ನೀಡುವ ಮೂಲಕ ಗಮನ ಸೆಳೆದಿದೆ. ಸದ್ಯ ನಥಿಂಗ್ ಫೋನ್ 2 (Nothing phone 2) ಮೊಬೈಲ್‌ ಕೂಡಾ ಭಾರೀ ಬೆಲೆ ಕಡಿತ ಹೊಂದಿದ್ದು, ಈ ವಿಷಯ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ಜೊತೆಗೆ ಖುಷಿ ತಂದಿದೆ ಎಂದು ಹೇಳಬಹುದಾಗಿದೆ.

ಫ್ಲಿಪ್‌ಕಾರ್ಟ್ ನಲ್ಲಿ ಈ ಫೋನಿನ ಮೇಲೆ 27% ರಿಯಾಯಿತಿ :

ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ನಥಿಂಗ್ ಫೋನ್ 2 ಮೊಬೈಲ್‌ ಶೇ. 27% ರಷ್ಟು ರಿಯಾಯಿತಿ ಪಡೆದಿದೆ. ಗ್ರಾಹಕರು ಈ ಮೊಬೈಲ್‌ನ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಇದೀಗ ಕೊಡುಗೆಯಲ್ಲಿ 39,999ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ. ಅಲ್ಲದೇ ಇತರೆ ಕೆಲವು ಡಿಸ್ಕೌಂಟ್‌ ಸಹ ಖರೀದಿದಾರರಿಗೆ ದೊರೆಯುತ್ತದೆ.

ಇನ್ನು ನಥಿಂಗ್ ಫೋನ್ 2 ಫೋನ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಪವರ್‌ ಪಡೆದಿದ್ದು, 50 ಮೆಗಾ ಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಗ್ರಾಹಕರು ಈ ಫೋನ್‌ ಅನ್ನು ಡಾರ್ಕ್ ಗ್ರೇ ಮತ್ತು ವೈಟ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಹಾಗಾದರೇ ನಥಿಂಗ್ ಫೋನ್ 2 ಫೋನ್‌ ಯಾವೆಲ್ಲಾ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

whatss

ನಥಿಂಗ್ ಫೋನ್ 2 ಮೊಬೈಲ್‌ ಫೀಚರ್ಸ್‌(features): 

ನಥಿಂಗ್ ಫೋನ್ 2 ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 1Hz ಮತ್ತು 120Hz ನಡುವಿನ ಹೊಂದಾಣಿಕೆಯ ರಿಫ್ರೆಶ್ ರೇಟ್‌ ಹಾಗೂ 240Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ SGS ಲೋ ಬ್ಲೂ ಲೈಟ್ ಮತ್ತು HDR10+ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

ನಥಿಂಗ್ ಫೋನ್ 2 ಮೊಬೈಲ್‌ ಕ್ವಾಲ್ಕಾಮ್ 4nm ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ನಥಿಂಗ್ ಓಎಸ್ 2.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12GB RAM ಜೊತೆಗೆ 512GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ನಥಿಂಗ್ ಫೋನ್ ನ ಕ್ಯಾಮರಾ ಅಂತೂ ಸೂಪರ್ ಆಗಿದೆ

ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ಮೊಬೈಲ್‌ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ 60fps ನಲ್ಲಿ 4K, 30 ಅಥವಾ 60fps ನಲ್ಲಿ 1080p ಮತ್ತು 4K ಮತ್ತು 30fps ನಲ್ಲಿ ಲೈವ್ HDR ಅನ್ನು ಒಳಗೊಂಡಿದೆ.

ಈ ಮೊಬೈಲ್‌ 4,700mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದು 45W PPS ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ 15W Qi ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 130 ನಿಮಿಷಗಳಲ್ಲಿ ಫೋನ್ ಅನ್ನು ಕೇಬಲ್‌ಗಳಿಲ್ಲದೆ ಚಾರ್ಜ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈಫೈ 6, 5G, 4G LTE, ಬ್ಲೂಟೂತ್ 5.3, NFC, GPS/A-GPS, NavIC, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

ನಥಿಂಗ್ ಫೋನ್ 2 ಮೊಬೈಲ್‌ ಮೂರು ವೇರಿಯಂಟ್‌ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB + 128GB RAM ಸ್ಟೋರೇಜ್‌, 12GB + 256GB ಹಾಗೂ 12GB + 512GB ರೂಪಾಂತರದ ಆಯ್ಕೆ ಪಡೆದಿದೆ. ಹಾಗೆಯೇ ಇದು ಡಾರ್ಕ್ ಗ್ರೇ ಮತ್ತು ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!