ಕೇಂದ್ರದ ‘NPS ವಾತ್ಸಲ್ಯ’ ಯೋಜನೆಗೆ ಚಾಲನೆ, ಮಕ್ಕಳಿದ್ರೆ ತಪ್ಪದೇ ತಿಳಿದುಕೊಳ್ಳಿ.!

IMG 20240920 WA0000

NPS ವಾತ್ಸಲ್ಯ ಯೋಜನೆ (NPS Vatsalya Scheme) ಆರಂಭಗೊಂಡಿದೆ : ಅಪ್ರಾಪ್ತರ ಹೆಸರಿನಲ್ಲಿ ಹಣ ಉಳಿಸುವ ಹೊಸ ಯೋಜನೆ, ಮಕ್ಕಳಿಗೂ ಸಿಗುತ್ತೆ ಪಿಂಚಣಿ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman) ಅವರು 2024-25ರ ಕೇಂದ್ರ ಬಜೆಟ್‌ನಲ್ಲಿ  ಘೋಷಿಸಿದ್ದು, ನ್ಯಾಷನಲ್ ಪೆನ್ಷನ್ ಸಿಸ್ಟಂನ ಮುಂದುವರಿದ ಭಾಗವಾದ ಎನ್​ಪಿಎಸ್ ವಾತ್ಸಲ್ಯ ಯೋಜನೆಯು ಸೆಪ್ಟೆಂಬರ್ 18ರಿಂದ ಚಾಲನೆಗೆ ಬರುತ್ತಿದೆ. ಈ ಯೋಜನೆಗೆ ‘ಎನ್‌ಪಿಎಸ್ ವಾತ್ಸಲ್ಯ’ ಎಂದು ಹೆಸರಿಡಲಾಗಿದೆ. ಇದಕ್ಕೆ ಸಂಬಂಧಿಸಿದ ಘೋಷಣೆಯನ್ನು ಹಣಕಾಸು ಸಚಿವರು 2024 ರ ಬಜೆಟ್‌ನಲ್ಲಿಯೇ ಮಾಡಿದ್ದಾರೆ. ಈ ಯೋಜನೆಯಡಿಯಲ್ಲಿ, ಪೋಷಕರು  ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹುದು. 18 ವರ್ಷದೊಳಗಿನ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪಾಲಕರು ಈ ಯೋಜನೆಯಡಿ ಅಕೌಂಟ್ ತೆರೆಯಬಹುದು. ವರ್ಷಕ್ಕೆ ಕನಿಷ್ಠ ಒಂದು ಸಾವಿರ ರೂ ಹೂಡಿಕೆ ಅಗತ್ಯ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಾತ್ಸಲ್ಯ ಎನ್​ಪಿಎಸ್ ಸ್ಕೀಮ್ (NPS Vatsalya scheme) ಎಂದರೇನು?

ವಾತ್ಸಲ್ಯ ಎನ್​ಪಿಎಸ್ ಸ್ಕೀಮ್ ಎಂಬುದು ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆ ಮೊದಲಿಗೆ ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಸಾರ್ವತ್ರಿಕವಾಗಿ ಯಾರು ಬೇಕಾದರೂ ಎನ್​ಪಿಎಸ್ ಪಡೆಯಬಹುದು. ಹಾಗೂ ಈ ಮೊದಲು ಎನ್​ಪಿಎಸ್ 18 ವರ್ಷದಿಂದ 70 ವರ್ಷದವರಿಗೆ ಮಾತ್ರ ಸೀಮಿತವಾಗಿತ್ತು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಹಣ ಉಳಿತಾಯ ಮಾಡುವ ಹೊಸ ರೀತಿಯಾದಂತಹ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಮಕ್ಕಳ ಪರವಾಗಿ ಪೋಷಕರು ಹಣ ಉಳಿತಾಯ(saving)ವನ್ನು ಮಾಡಬಹುದು. ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್  ಅವರು 2024ರ ಕೇಂದ್ರ ಬಜೆಟ್‌ನಲ್ಲಿ ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು ಘೋಷಿಸಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಯು (National Pension Scheme) ನಿವೃತ್ತಿ ಯೋಜನೆಯಾಗಿದ್ದು, 18ನೇ ವಯಸ್ಸಿನಿಂದ  ಹಣವನ್ನು ಹೂಡಿಕೆ ಮಾಡಲು ಆರಂಭಿಸಬಹುದು ಹಾಗೂ 70ನೇ ವಯಸ್ಸಿನವರೆಗೂ ಹಣವನ್ನು ಹೂಡಿಕೆ ಮಾಡಬಹುದು.

ಎನ್‌ಪಿಎಸ್ ವಾತ್ಸಲ್ಯ ಅರ್ಹರು ಮೆಚ್ಯೂರಿಟಿಯನ್ನು ಪಡೆದ ಅನಂತರ ಖಾತೆಗೆ ಏನಾಗುತ್ತದೆ?

ಮಗು 18 ವರ್ಷ ವಯಸ್ಸಿನ ಮೇಲ್ಪಟ್ಟ ಬಳಿಕ ವಾತ್ಸಲ್ಯ ಎನ್​ಪಿಎಸ್ ಖಾತೆಯು ರೆಗ್ಯುಲರ್ ಎನ್​ಪಿಎಸ್ ಖಾತೆಯಾಗಿ ಪರಿವರ್ತನೆ ಆಗುತ್ತದೆ. ತದನಂತರದ ದಿನಗಳಲ್ಲಿ  ಪೋಷಕರು ನಿರ್ವಹಿಸಿಕೊಂಡು ಬರುತ್ತಿರುವ ಖಾತೆಯನ್ನು 18 ವರ್ಷ ಮೇಲ್ಪಟ್ಟ ನಂತರ ಆ ಮಗು ತಾನೇ ಎನ್​ಪಿಎಸ್ ಖಾತೆಯನ್ನು ನಿರ್ವಹಿಸಿಕೊಂಡು ಹೋಗಲು ಅವಕಾಶ ಇರುತ್ತದೆ. ಆದರೆ, ಹೊಸದಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇನ್ನು ಇದರಿಂದ ದೊಡ್ಡವರಾದ ಬಳಿಕ ಹಣ ಉಳಿತಾಯ ಹಾಗೂ ಹಣದ ಮೌಲ್ಯಮತ್ತು ಶಿಸ್ತುನನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

ಎನ್‌ಪಿಎಸ್ ವಾತ್ಸಲ್ಯ ಯೋಜನೆಯಿಂದ ನಾವು ಹಣವನ್ನು ಹಿಂಪಡೆಯಬಡುದೇ?:

ಎನ್​ಪಿಎಸ್ ವಾತ್ಸಲ್ಯ ಯೋಜನೆ ಅಡಿಯಲ್ಲಿ ಅಕೌಂಟ್ ತೆರೆದು ಮೂರು ವರ್ಷಗಳ ಬಳಿಕ ಭಾಗಶಃ ಹಣವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಮಗುವಿನ ವಯಸ್ಸು 18 ವರ್ಷ ಆಗುವವರೆಗೂ ಈ ರೀತಿ ಮೂರು ಬಾರಿ ಸ್ವಲ್ಪ ಹಣವನ್ನು ಹಿಂಪಡೆಯಬಹುದು. 18 ವರ್ಷ ವಯಸ್ಸಿನ ಬಳಿಕ ಸ್ಕೀಮ್​ನಿಂದ ಬೇಕಾದರೆ ಹೊರಬರಬಹುದು. ನಿಮ್ಮ ಹೂಡಿಕೆ ಆ ಸಂದರ್ಭದಲ್ಲಿ ಎರಡೂವರೆ ಲಕ್ಷ ರೂಗಿಂತ ಕಡಿಮೆ ಇದ್ದರೆ ಇಡೀ ಹಣವನ್ನು ಹಿಂಪಡೆಯಬಹುದು. ಎರಡೂವರೆ ಲಕ್ಷ ರೂಗಿಂತ ಹೆಚ್ಚಿಗೆ ಇದ್ದರೆ ಶೇ. 20ರಷ್ಟು ಹಣವನ್ನು ಲಂಪ್ಸಮ್ ಆಗಿ ಪಡೆಯಬಹುದು. ಇನ್ನುಳಿದ ಶೇ. 80ರಷ್ಟು ಹಣವನ್ನು ಆ್ಯನುಟಿ ಖರೀದಿಗೆ ಬಳಸಬೇಕು. ಈ ಆ್ಯನುಟಿಯಿಂದ ನಿಯಮಿತವಾಗಿ ಆದಾಯ ಬರುತ್ತಿರುತ್ತದೆ.

ಎನ್ ಪಿ ಎಸ್ ಪ್ರಯೋಜನವೇನು?:

ಇದೊಂದು ದೀರ್ಘಾವಧಿ ಹೂಡಿಕೆಯಾಗಿದೆ. ಮಗುವಿನ ಭವಿಷ್ಯಕ್ಕೆ ಒಂದು ಹಣಕಾಸು ಭದ್ರತೆಯನ್ನು ನೀಡುತ್ತದೆ.
ಇನ್ನು ಈ ಒಂದು ಯೋಜನೆಯಿಂದ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ಅಪ್ರಾಪ್ತ ವಯಸ್ಸಿನವರಿದ್ದಾಗ ಮಾಡಿದ್ದ ಖಾತೆ ಪೂರ್ಣ ಎನ್ ಪಿ ಎಸ್ ಖಾತೆಯಾಗಿ ಪರಿವರ್ತನೆಯಾದ ಬಳಿಕ, ಖಾತೆದಾರು ಯಾರಿದ್ದಾರೆ ಅವರು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ (Substantial) ಮೊತ್ತವನ್ನು ಪಡೆಯಬಹುದು.

ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ಪಡೆಯಲು ಯಾರು ಅರ್ಹರು?:

ಪಾಲಕರು, ಪೋಷಕರು, ಎನ್ ಆರ್ ಐಗಳು ತಮ್ಮ ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಎನ್ ಪಿ ಎಸ್ ವಾತ್ಸಲ್ಯ ಖಾತೆಗಳನ್ನು ತೆರೆಯಲು ಅವಕಾಶವಿದೆ. ಇದು ಸಣ್ಣ ವಯಸ್ಸಿನಲ್ಲೇ ಹೂಡಿಕೆಗೆ ಮಕ್ಕಳಿಗೆ ಪ್ರೇರೇಪಿಸುತ್ತದೆ ಮತ್ತು ಕಾಲಾನಂತರದಲ್ಲಿ ಆದಾಯವನ್ನು ಹೆಚ್ಚಿಸುತ್ತದೆ. ಈ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ 500 ರೂ. ಅಥವಾ ವಾರ್ಷಿಕವಾಗಿ 6,000 ರೂ. ಹೂಡಿಕೆ ಮಾಡಬಹುದು.

ಎನ್​ಪಿಎಸ್ ಸ್ಕೀಮ್ ಪಡೆಯುವುದು ಹೇಗೆ?:

ನ್ಯಾಷನಲ್ ಪೆನ್ಷನ್ ಸ್ಕೀಮ್ ಅಂದರೆ ಎನ್​ಪಿಎಸ್ ಸ್ಕೀಮ್ ಗೋಸ್ಕರ ರೂಪಿಸಲಾಗಿರುವ ಪೋರ್ಟಲ್​ನಲ್ಲಿ ಈ ಸ್ಕೀಮ್ ಪ್ರಾರಂಭಿಸಬಹುದು.ಹಾಗೂ ಪ್ರಮುಖ ಬ್ಯಾಂಕುಗಳಿಂದಲೂ ಎನ್​ಪಿಎಸ್ ಖಾತೆಯನ್ನು ಪ್ರಾರಂಭಿಸಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!