ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಓಲಾ ಎಲೆಕ್ಟ್ರಿಕ್ ಸ್ಕೂಟಿ – Ola S1 X
ಇದೀಗ ಭಾರತದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ Ola ಎಲೆಕ್ಟ್ರಿಕ್ತನ್ನ ಅತ್ಯಂತ ಕೈಗೆಟುಕುವ ಮಾದರಿಯ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ – S1 X – ಇದು ದೊಡ್ಡ 4kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಓಲಾ(Ola), ಬೆಂಗಳೂರು ಮೂಲದ ಕಂಪನಿಯಾಗಿದ್ದು ಬೇರೆ ಎಲೆಕ್ಟ್ರಿಕ್ ವಾಹನ ಕಂಪನಿಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ ಎಂದೇ ತಿಳಿಸಬಹುದು. ಎಲೆಕ್ಟ್ರಿಕ್ ಸ್ಕೂಟರ್ ಬರೋಬರಿ 190 ಕಿಲೋಮೀಟರ್ ಶ್ರೇಣಿ ಒದಗಿಸುತ್ತದೆ. ಇದು S1 Pro Gen 2 ನ 195km ಕ್ಲೈಮ್ ಮಾಡಿದ ಶ್ರೇಣಿಗಿಂತ ಕೇವಲ 5km ಕಡಿಮೆಯಾಗಿದೆ.
S1 X 4kWh ಒಂದೇ ಸ್ಟೈಲಿಂಗ್, ವೈಶಿಷ್ಟ್ಯ-ಸೆಟ್ ಮತ್ತು ಬಹುತೇಕ ಎಲ್ಲಾ ಆಯಾಮಗಳೊಂದಿಗೆ ಇತರ ರೂಪಾಂತರಗಳಿಗೆ ಹೋಲುತ್ತದೆ – ತೂಕವನ್ನು ಹೊರತುಪಡಿಸಿ. 4kWh ಮಾದರಿಯು 112kg ತೂಗುತ್ತದೆ, ಇದು 3kWh ಬ್ಯಾಟರಿಯೊಂದಿಗೆ S1 X ಗಿಂತ 4kg ಭಾರವಾಗಿರುತ್ತದೆ. 4kWh ಮಾದರಿಗೆ ಪೂರ್ಣ ಚಾರ್ಜ್ 6ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕ್ಲೈಮ್ ಮಾಡಲಾದ ಉನ್ನತ ವೇಗವು S1 ಏರ್ ಮತ್ತು ಇತರ S1 X ರೂಪಾಂತರಗಳಂತೆಯೇ 90kph ಆಗಿದೆ .
ಓಲಾ ಎಲೆಕ್ಟ್ರಿಕ್ ಏಪ್ರಿಲ್ ವೇಳೆಗೆ 600 ಸೇವಾ ಕೇಂದ್ರಗಳನ್ನು ಸ್ಥಾಪಿಸಲಿದೆ ಮತ್ತು ಮುಂದಿನ ತ್ರೈಮಾಸಿಕದ ವೇಳೆಗೆ ಚಾರ್ಜಿಂಗ್ ನೆಟ್‌ವರ್ಕ್ ಅನ್ನು 10,000 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳಿಗೆ ವಿಸ್ತರಿಸಲಾಗುವುದು ಎಂದು ಸಂಸ್ಥಾಪಕ ಮತ್ತು ಎಂಡಿ ಭವಿಶ್ ಅಗರ್ವಾಲ್ ಘೋಷಿಸಿದರು
ಮೈಲಿಗಲ್ಲು ಸಾಧಿಸಿದ ಓಲಾ :
ದೃಢವಾದ ಮಾರಾಟವು ನಮ್ಮ ಬ್ರ್ಯಾಂಡ್ ಮತ್ತು ನಮ್ಮ ಬಲವಾದ ಉತ್ಪನ್ನ ಶ್ರೇಣಿಯಲ್ಲಿ ಗ್ರಾಹಕರು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ. ನಮ್ಮ ಅತ್ಯಧಿಕ ನೋಂದಣಿಗಳನ್ನು ದಾಖಲಿಸುವ ಮೂಲಕ ನಾವು ನಮ್ಮ ಗ್ರಾಹಕರ ಉನ್ನತ ಆಯ್ಕೆಯಾಗಿ ಸ್ಪಷ್ಟವಾಗಿ ಹೊರಹೊಮ್ಮಿದ್ದೇವೆ ಎಂದು OLA ಮೈಲಿಗಲ್ಲಿನ ಕುರಿತು ಓಲಾ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಂಶುಲ್ ಖಂಡೇಲ್ವಾಲ್ ಹೇಳಿದ್ದಾರೆ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ವಿವಿಧ OLA ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಅವುಗಳ ಬೆಲೆಯ ವಿವರ:
ಮೊದಲಿಗೆ Ola ಎಲೆಕ್ಟ್ರಿಕ್‌ನ ಪ್ರಮುಖ ಸ್ಕೂಟರ್ ಆಗಿರುವ S1 Pro ಎಲೆಕ್ಟ್ರಿಕ್ ಸ್ಕೂಟರ್ 1,47,499 ರೂ. ಲಭ್ಯವಾಗುತ್ತದೆ.
S1 Air ಎಲೆಕ್ಟ್ರಿಕ್ ಸ್ಕೂಟರ್ ರೂ. 1,19,999 ಬೆಲೆಯಲ್ಲಿ ಲಭ್ಯವಿದೆ.
S1 X ಮೂರು ರೂಪಾಂತರಗಳಲ್ಲಿ ಪರಿಚಯಿಸಿ ಕೊಂಡಿದೆ.
– S1 X+ ಎಲೆಕ್ಟ್ರಿಕ್ ಸ್ಕೂಟರ್
– S1 X (3kWh) ಎಲೆಕ್ಟ್ರಿಕ್ ಸ್ಕೂಟರ್
– S1 X (2kWh) ಎಲೆಕ್ಟ್ರಿಕ್ ಸ್ಕೂಟರ್
S1 X+ ಎಲೆಕ್ಟ್ರಿಕ್ ಸ್ಕೂಟರ್ 1,09,999 ರೂ ಗೆ ಖರೀದಿಗೆ ಲಭ್ಯವಿದೆ.
S1 X (3kWh) ಮತ್ತು S1 X (2kWh) ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 99,999 ಮತ್ತು ರೂ. 89,999 ರ ಬೆಲೆಯಲ್ಲಿ ಖರೀದಿಗಳಿಗೆ ಲಭ್ಯವಿದೆ.
S1 X (3kWh) ಮತ್ತು S1 X (2kWh) ಎಲೆಕ್ಟ್ರಿಕ್ ಸ್ಕೂಟರ್ ಗಳ ಬುಕಿಂಗ್ ಈಗ ರೂ. 999 ಕ್ಕೆ ಸ್ಟಾರ್ಟ್ ಆಗಿದೆ. ಆಸಕ್ತ ಗ್ರಾಹಕರು ಮುಂಗಡವಾಗಿ ಬುಕಿಂಗ್ ಮಾಡಬಹುದಾಗಿದೆ. ಇಂತಹ ಉಪಯುಕ್ತ ಹಾಗೂ ಮುಖ್ಯ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ