15 ವರ್ಷ ಹಳೆಯ ವಾಹನಗಳಿಗೆ ಬಿಗ್ ರಿಲೀಫ್ ಕೊಟ್ಟ ಸರ್ಕಾರ. ಶೀಘ್ರದಲ್ಲಿ ಬದಲಾವಣೆಯಾಗಲಿದೆ ವಾಹನ ಗುಜರಿ ನೀತಿ.
ನಾವು ವಾಹನಗಳನ್ನು ಖರೀದಿಸುವುದರ ಜೊತೆಗೆ ಅವುಗಳ ಯೋಗಕ್ಷೇಮವನ್ನು ಕೂಡ ಒಂದು ರೀತಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಅಂದರೆ ವಾಹನದ ಗುಣಮಟ್ಟ ಸರಿ ಇದೆಯೇ? ವಾಹನಗಳು (vehicles) ಹಳೆಯದಾದರೆ ಅವು ಮಾಲಿನ್ಯವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತವೆ. ಆದ್ದರಿಂದ ಆಗಾಗೇ ವಾಹನಗಳ ಯೋಗಕ್ಷೇಮವನ್ನು ಕೂಡ ಮಾಲೀಕರು ನೋಡಿಕೊಳ್ಳಬೇಕಾಗುತ್ತದೆ.
ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ವಾಹನ ಗುಜರಿ ನೀತಿಯನ್ನು ತಂದಿತ್ತು. ಈ ನೀತಿಯಲ್ಲಿ 10 ರಿಂದ 15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಾಹನಗಳನ್ನು ಗುಜರಿಗೆ ಹಾಕಬೇಕೆಂದು ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಗುಜರಿ ನೀತಿಯಲ್ಲಿ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಮಾಡಲಿದೆ. ಈ ತಿದ್ದುಪಡಿಯಿಂದ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳಿಗೆ ಜೀವದಾನ ದೊರೆತು ಬಿಗ್ ರಿಲೀಫ್ (Big relief) ದೊರೆಯಲಿದೆ. ಯಾವ ರೀತಿಯ ತಿದ್ದುಪಡಿ ಮಾಡಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವ ವಿಷಯಗಳ ಮೇಲೆ ತಿದ್ದುಪಡಿಯನ್ನು ಮಾಡಲಿದೆ :
ಗುಜುರಿ ನೀತಿಯಲ್ಲಿ ತಿದ್ದುಪಡಿಯನ್ನು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರ ಅಡಿಯಲ್ಲಿ ಹೊಸ ಬದಲಾವಣೆಗಳನ್ನು ಜನರು ನಿರೀಕ್ಷಿಸಬಹುದು. ಫಿಟ್‌ನೆಸ್ ಪರೀಕ್ಷಾ ಕೇಂದ್ರಗಳಲ್ಲಿ ಅನರ್ಹವೆಂದು ಕಂಡುಬಂದ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವೆಂಬ ನಿಯಮದಲ್ಲಿ ಬದಲಾವಣೆ (update) ನಿರೀಕ್ಷಿಸಲಾಗಿದೆ. ವಾಹನವನ್ನು ಗುಜರಿಗೆ ಹಾಕುವಂತೆ ಹೇಳುವ ಬದಲು ವಾಹನ ಹೊರಸೂಸುವ ಮಾಲಿನ್ಯದ ಮಟ್ಟದ ಮೇಲೆ ಗಮನ ಹರಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ದೆಹಲಿಯ ಎನ್‌ಸಿಆರ್‌ನಲ್ಲಿ (NCR) ಮಾತ್ರ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪಿಂಗ್ ಮಾಡುವ ನಿಯಮ ಚಾಲ್ತಿಯಲ್ಲಿದೆ.
2018ರಲ್ಲಿ ಸುಪ್ರೀಂ ಕೋರ್ಟ್ (supreme court) ನೀಡಿದ ತೀರ್ಪಿನ ಪ್ರಕಾರ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ದೆಹಲಿ-ಎನ್‌ಸಿಆರ್‌ನ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಹಾಗೂ ಮಾಲಿನ್ಯಕಾರಕ ವಾಹನಗಳನ್ನು ತೆಗೆದುಹಾಕಲು ನ್ಯಾಯಾಲಯವು ಆದೇಶ ನೀಡಿತ್ತು. ಅಂತಹ ವಾಹನಗಳು ಸ್ವಯಂಚಾಲಿತವಾಗಿ ‘ವಾಹನ’ ಡೇಟಾಬೇಸ್‌ನಿಂದ (vehicle deta base) ನೋಂದಣಿಯನ್ನು ರದ್ದುಗೊಳಿಸುತ್ತವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವಾಹನಗಳ ಸ್ಕ್ರ್ಯಾಪಿಂಗ್ ನಿಯಮದಲ್ಲಿ ಬದಲಾವಣೆ ತರಲು ಉದ್ದೇಶಿಸಿದೆ. ಭಾರತದ ವಾಹನ ತಯಾರಕರ ಸೊಸೈಟಿಯು (SIAM) ಸೆಪ್ಟೆಂಬರ್ 10ರಂದು ಆಯೋಜಿಸಿದ್ದ ವಾರ್ಷಿಕ ಸಮಾವೇಶದಲ್ಲಿ ಎಂಆರ್‌ಟಿಎಚ್ ಕಾರ್ಯದರ್ಶಿ ಅನುರಾಗ್ ಜೈನ್ ಈ ನಿಟ್ಟಿನಲ್ಲಿ ವಾಹನೋದ್ಯಮದ ಸಹಕಾರ ಕೋರಿದ್ದಾರೆ.
ಹಲವು ವಾಹನ ಮಾಲೀಕರ ಪ್ರತಿಕ್ರಿಯೆಯ ಬಳಿಕ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗಿದೆ. ವಾಹನಗಳಿಗೆ ಎಷ್ಟು ವಯಸ್ಸಾಗಿದೆ ಎಂದು ತಿಳಿದುಕೊಂಡು ವಾಹನವನ್ನು ಗುಜರಿಗೆ ಹಾಕುವ ಬದಲು ಮಾಲಿನ್ಯಕಾರಕ ವಾಹನಗಳತ್ತ ಹೆಚ್ಚು ಗಮನ ಹರಿಸಬೇಕು” ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಅವರು ತಮ್ಮ ವಾಹನವನ್ನು ಉತ್ತಮವಾಗಿ ನಿರ್ವಹಿಸಿದ್ದರೆ, ಅವರ ವಾಹನವನ್ನು ಏಕೆ ಸ್ಕ್ರ್ಯಾಪ್ (scrap ) ಮಾಡಬೇಕು ಎಂಬ ಪ್ರಶ್ನೆ ಇದೆ ಎಂದು ಜೈನ್ ಹೇಳಿದರು. ಮಾಲಿನ್ಯಕಾರಕ ಅಂಶಗಳ ಕುರಿತು ಹೆಚ್ಚು ನಿಗಾವಹಿಸಲು ಮಾಲಿನ್ಯ ಪರಿಶೀಲನೆ ಹೆಚ್ಚು ಕಠಿಣವಾಗಬೇಕು. “ಮಾಲಿನ್ಯ ತಪಾಸಣೆಯನ್ನು ಮಾಡುವವರು ಹೆಚ್ಚು ನಂಬಿಕಸ್ಥವಾಗಿಸಬೇಕು. ಇದಕ್ಕಾಗಿ ನಾನು ಉದ್ಯಮದ ಎಲ್ಲರ ಸಹಕಾರ ಕೋರುವೆ” ಎಂದು ಜೈನ್ ಹೇಳಿದ್ದರು.
ಜಾಗತಿಕ ಮಾನದಂಡಗಳೊಂದಿಗೆ ಫಿಟ್ನೆಸ್ ಪರೀಕ್ಷೆ:
ವಾಹನದ ಫಿಟ್ನೆಸ್ ಪರಿಶೀಲನೆ (vehicle fitness checking) ಸಮಯದಲ್ಲಿ ವಾಹನದ ಪ್ರತಿಯೊಂದು ಭಾಗದ ಕಡೆಗೂ ಕೂಡ ಗಮನಹರಿಸಬೇಕಾಗುತ್ತದೆ. ಹಾಗೂ ಇದೊಂದು ಕಠಿಣ ಕ್ರಮವಾಗಿದೆ. ಈ ಫಿಟ್ನೆಸ್ ಪರೀಕ್ಷೆಯನ್ನು ಮಾಡುವ ಸಂದರ್ಭದಲ್ಲಿ ವಾಹನದ ಟೈರ್ ಗಳನ್ನು ಕೂಡ ಪರಿಶೀಲಿಸಬೇಕಾಗುತ್ತದೆ. ಭಾರತದಲ್ಲಿ, ಸರ್ಕಾರಿ ಸಂಸ್ಥೆಗಳಿಂದ (Government organizations) ಸಡಿಲವಾದ ನಿಯಮಗಳ ಜಾರಿಯಿಂದಾಗಿ ನ್ಯಾಯಾಲಯಗಳು ವಿಭಿನ್ನ ವಿಧಾನವನ್ನು ತೆಗೆದುಕೊಂಡಿವೆ ಮತ್ತು ನಿರ್ಬಂಧನೆಗಳನ್ನು ಏರಿದೆ. ಈ ಮಾನದಂಡಗಳ ಮರುಪರಿಶೀಲನೆಗೆ ಕೇಂದ್ರವು ಒತ್ತಾಯಿಸಿತ್ತು, ಆದರೆ ಸುಪ್ರೀಂ ಕೋರ್ಟ್ ಅದನ್ನು ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಮೇಲ್ಮನವಿ ಇದ್ದು, ಅದು ಇನ್ನೂ ವಿಚಾರಣೆಗೆ ಬಾಕಿ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ