ಜೂನ್ 24ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ OnePlus Nord CE 4 Lite, ಬೆಲೆ ಹಾಗೂ ಫಿಚರ್ಸ್ ಹೀಗಿವೆ.
ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿದೆ. ಇಂದು ಪ್ರತಿಯೊಬ್ಬರು ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಾರೆ. ಸ್ಮಾರ್ಟ್ ಫೋನ್ ಇಲ್ಲದೆ ನಮ್ಮ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ತಮ್ಮ ಬ್ರ್ಯಾಂಡ್ ಹೆಸರಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿವೆ. ಹಾಗೆಯೇ ಇಂದಿನ ಯುವಜನತೆ ಬ್ರ್ಯಾಂಡೆಡ್ ಸ್ಮಾರ್ಟ್ ಫೋನ್ (branded smartphone) ಗಳನ್ನು ಇಟ್ಟುಕೊಳ್ಳುವುದು ಒಂದು ಕ್ರೇಜ್ ಆಗಿ ಬಿಟ್ಟಿದೆ. ಹಲವಾರು ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳಿದ್ದು, ಅವುಗಳಲ್ಲಿ ಒನ್ ಪ್ಲಸ್(one plus) ಕೂಡ ಒಂದು. ಒನ್ ಪ್ಲಸ್ ಕಂಪನಿಯ ಸ್ಮಾರ್ಟ್ ಫೋನ್ ಒಳ್ಳೆಯ ಕ್ಯಾಮರಾ ಮತ್ತು ಉತ್ತಮ ಫಿಚರ್ಸ್ ಗಳಿಗೆ ಹೆಸರು ವಾಸಿಯಾಗಿವೆ. ಒನ್ ಪ್ಲಸ್ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಒಂದನ್ನು ನಾಳೆ ಬಿಡುಗಡೆ ಮಾಡಲಿದೆ. ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
OnePlus Nord CE 4 Lite :
ಒನ್‌ಪ್ಲಸ್ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ಹೌದು, ಇದೀಗ OnePlus ತನ್ನ ಬಹುನಿರೀಕ್ಷಿತ ಸ್ಮಾರ್ಟ್ ಫೋನ್ ಆದ Nord CE 4 Lite ಅನ್ನು ಜೂನ್ 24ರಂದು ಬಿಡುಗಡೆ ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
OnePlus Nord CE 4 Lite ಫೀಚರ್ಸ್ ಗಳ (features) ವಿವರ ಈ ಕೆಳಗಿನಂತಿದೆ :
ಡಿಸ್‌ಪ್ಲೇ (display) :
OnePlus Nord CE 4 Lite ಸ್ಮಾರ್ಟ್‌ಫೋನ್ ಅನ್ನು 6.67-ಇಂಚಿನ FHD+ ಡಿಸ್ಪ್ಲೇ ಜೊತೆಗೆ 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದ್ದು, ಈ ಫೋನ್‌ನ ಡಿಸ್ಲ್ಪೇ AMOLED ಪ್ಯಾನೆಲ್‌ನಿಂದ ಮಾಡಿದ ಪಂಚ್-ಹೋಲ್ ಶೈಲಿಯಾಗಿದೆ ಮತ್ತು 120Hz ರಿಫ್ರೆಶ್ ದರ ಮತ್ತು 1200nits ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. Nord CE 4 Lite ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಪ್ರೊಸೆಸರ್ (processor) :
OnePlus Nord CE 4 Lite ಫೋನ್ 4nm ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾದ Qualcomm Snapdragon 6 Gen 1 ಪ್ರೊಸೆಸರ್ ಅನ್ನು ಹೊಂದಿದೆ. ಈ ಆಕ್ಟಾ-ಕೋರ್ ಪ್ರೊಸೆಸರ್ 2.2GHz ನಲ್ಲಿ ನಾಲ್ಕು ಕಾರ್ಟೆಕ್ಸ್-A78 ಕೋರ್‌ಗಳನ್ನು ಹೊಂದಿದೆ ಮತ್ತು 1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್-A55 ಕೋರ್‌ಗಳನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ನ OS ಬಗ್ಗೆ ನೋಡುವುದಾದರೆ, ಇದರಲ್ಲಿ Android 14 ಮತ್ತು OxygenOS 14 ಅಳವಡಿಸಲಾಗಿದೆ.
ಸ್ಟೋರೇಜ್ (storage) :
ಈ ಮೊಬೈಲ್ ಅನ್ನು 8GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ಗಳ ಎರಡು ವೇರಿಯೆಂಟ್ ಗಳಲ್ಲಿ ಬಿಡಲಾಗುತ್ತದೆ. ಹಾಗೆಯೇ ಈ ಫೋನ್ ನಲ್ಲಿ 1TB ಮೆಮೊರಿ ಕಾರ್ಡ್‌ಗೆ ಅವಕಾಶ ಇರುತ್ತದೆ.
ಕ್ಯಾಮೆರಾ (camera) :
ಫೋಟೋಗ್ರಫಿಗಾಗಿ ಹೆಚ್ಚು ಮಾನ್ಯತೆ ಪಡೆದಿರುವ ಈ ಸ್ಮಾರ್ಟ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದ್ದು, ಈ ಫೋನ್‌ನ ಹಿಂಭಾಗದ ಫಲಕವು 50MP ಮುಖ್ಯ ಸಂವೇದಕವನ್ನು f/1.8 ಅಪರ್ಚರ್, FOV 77° ಮತ್ತು OIS ವೈಶಿಷ್ಟ್ಯದ ಬೆಂಬಲವನ್ನು ಹೊಂದಿದೆ. ಹಿಂದಿನ ಸೆಟಪ್ f/2.4 ದ್ಯುತಿರಂಧ್ರದೊಂದಿಗೆ 2MP ಆಳ ಸಂವೇದಕವನ್ನು ಹೊಂದಿದೆ. ಹಾಗೂ ಫ್ರಂಟ್ ಕ್ಯಾಮರಾವು, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16MP ಹೊಂದಿರಲಿದೆ.
ಬ್ಯಾಟರಿ (battery) :
ಇನ್ನೂ ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಬಗ್ಗೆ ನೋಡುವುದಾದರೆ, OnePlus Nord CE 4 Lite 5G ಫೋನ್ 5,500mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ 80W SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ನೀಡಲಾಗಿದೆ.
Nord CE 4 Lite 5G smart phone ನ ಬೆಲೆ (price ):
ಈ OnePlus Nord CE 4 Lite ಮಧ್ಯಮ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಈ OnePlus Nord CE 4 Lite ಫೋನ್ 30 ಸಾವಿರದೊಳಗೆ ಇರಲಿದೆ. ಈ ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ನ ಬೆಲೆಯನ್ನು 18,999 ರೂ.ಗಳಲ್ಲಿ ಹಾಗೂ 8GB RAM + 256GB ವೇರಿಯೆಂಟ್ ಅನ್ನು 22,999 ರೂ. ಗಳ ಬೆಲೆಯನ್ನು ಹೊಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.