ಇನ್ಮುಂದೆ ರೈಲಿನಲ್ಲಿ ಮೊಬೈಲ್ ಕಳೆದೋದ್ರೆ ಚಿಂತೆ ಬೇಡ: ಇಲ್ಲಿದೆ ಸರ್ಕಾರದ ಹೊಸ ಆಪ್ ; ಹೀಗೆ ಮಾಡಿ

Picsart 25 04 08 05 31 57 950

WhatsApp Group Telegram Group

ರೈಲಿನಲ್ಲಿ ಮೊಬೈಲ್ ಕಳವಾದರೂ ಚಿಂತೆಗೆ ಕಾರಣವಿಲ್ಲ: ‘ಆಪರೇಷನ್ ಅಮಾನತ್’ ಮೂಲಕ ಸುರಕ್ಷತೆಗೆ ಹೊಸ ದಾರಿ

ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಬ್ಯಾಂಕಿಂಗ್, ವ್ಯವಹಾರ, ಸಂಪರ್ಕ, ಮನರಂಜನೆ  ಎಲ್ಲವೂ ಮೊಬೈಲ್‌ ಅಡಿಯಲ್ಲಿ (In mobile) ಕೇಂದ್ರಿತವಾಗಿದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ಆಗುವ ಆರ್ಥಿಕ ನಷ್ಟ ಮಾತ್ರವಲ್ಲ, ಮಾನಸಿಕ ಒತ್ತಡವೂ ಅತೀವವಾಗಿದೆ. ವಿಶೇಷವಾಗಿ ರೈಲು ಪ್ರಯಾಣದ (Train journey) ವೇಳೆ ನಡೆಯುವ ಮೊಬೈಲ್ ಕಳ್ಳತನಗಳು ಜನಸಾಮಾನ್ಯರಲ್ಲಿ ಭೀತಿಯನ್ನು ಉಂಟುಮಾಡಿವೆ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ, ಭಾರತೀಯ ರೈಲ್ವೆ ಮತ್ತು ಭಾರತ ದೂರಸಂಪರ್ಕ ಇಲಾಖೆ ಕೈಜೋಡಿಸಿ ರೂಪಿಸಿರುವ ನವೀನ ಯೋಜನೆ ‘ಆಪರೇಷನ್ ಅಮಾನತ್’ (Operation Anamath) ಜನತೆಯಲ್ಲಿ ಭದ್ರತೆ ಭಾವನೆ ಮೂಡಿಸುತ್ತಿದೆ. ಏನಿದು  ‘ಆಪರೇಷನ್ ಅಮಾನತ್’ ಯೋಜನೆ? ಇದರಲ್ಲಿ ಯಾವ ರೀತಿಯ ಉಪಯೋಗವಾಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಇದೀಗ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಹೋದರೂ (If stealed Mobile) ಆತಂಕಪಡುವ ಅವಶ್ಯಕತೆ ಇಲ್ಲ. ಭಾರತ ಸರ್ಕಾರವು ರೈಲ್ವೆ ಇಲಾಖೆ ಹಾಗೂ ದೂರಸಂಪರ್ಕ ಇಲಾಖೆಯ ಸಹಯೋಗದಲ್ಲಿ ಆರಂಭಿಸಿರುವ “ಆಪರೇಷನ್ ಅಮಾನತ್” ಎಂಬ ವಿನೂತನ ತಂತ್ರಜ್ಞಾನ (New technology) ಆಧಾರಿತ ಯೋಜನೆಯು ಪ್ರಯಾಣಿಕರ ಮೊಬೈಲ್ ಸುರಕ್ಷತೆಗೆ ನೂತನ ದಿಕ್ಕು ತೋರಿಸಿದೆ. ಮೊಬೈಲ್ ಕಳವಾದ ಸಂದರ್ಭದಲ್ಲಿ, ಕೇವಲ ಕೆಲವೇ ನಿಮಿಷಗಳಲ್ಲಿ ಅದನ್ನು ಬ್ಲಾಕ್ (Block) ಮಾಡಬಹುದಾಗಿದ್ದು, ಇದು ನಿರ್ಬಂಧಿತ ಮಾಹಿತಿ ಕಳ್ಳತನ, ಆರ್ಥಿಕ ನಷ್ಟ, ಮತ್ತು ಮಾನಸಿಕ ಒತ್ತಡ ತಡೆಯುವಲ್ಲಿ ಸಹಕಾರಿ ಆಗುತ್ತದೆ. ಈ ಸೇವೆಯು ಭಾರತದಲ್ಲಿ ಮೊಬೈಲ್ ಕಳ್ಳತನ ನಿರ್ವಹಣೆಗೆ ರೂಪುಗೊಂಡಿರುವ ಪ್ರಮುಖ ಹೆಜ್ಜೆಯಾಗಿದೆ.

ಆಪರೇಷನ್ ಅಮಾನತ್ ಎಂದರೇನು?:

‘ಆಪರೇಷನ್ ಅಮಾನತ್’ ಎಂಬ ಹೆಸರಿನಡಿ, ರೈಲ್ವೆ ರಕ್ಷಣಾ ಪಡೆ (RPF) ಕಳೆದುಹೋದ ಮೊಬೈಲ್ ಫೋನ್‌ಗಳು, ಇತರ ಬೆಲೆಬಾಳುವ ವಸ್ತುಗಳನ್ನು ಪತ್ತೆಹಚ್ಚಿ ಮೂಲ ಮಾಲೀಕರಿಗೆ ಮರಳಿಸಲು ನಿರಂತರ ಪ್ರಯತ್ನದಲ್ಲಿದೆ. ಈ ಯೋಜನೆಯ ಪ್ರಮುಖ ಭಾಗವೆಂದರೆ ಟೆಲಿಕಾಂ ಇಲಾಖೆ ಅಭಿವೃದ್ಧಿಪಡಿಸಿದ CEIR (Central Equipment Identity Register) ಪೋರ್ಟಲ್ ಬಳಸುವಿಕೆ. ಈ ಪೋರ್ಟಲ್‌ ಮುಖಾಂತರ ಕಳೆದುಹೋದ ಮೊಬೈಲ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಬ್ಲಾಕ್ ಮಾಡಬಹುದು.

ಚಲಿಸುವ ರೈಲಿನಲ್ಲಿಯೇ ಮೊಬೈಲ್ ಬ್ಲಾಕ್ ಮಾಡಿಸಬಹುದಾ?:

ಹೌದು, ಮೊಬೈಲ್ ಕಳೆದುಹೋಗಿದ ಕ್ಷಣದಿಂದಲೇ ನೀವು ಕೂಡಲೇ 139 ರೈಲ್ ಮದದ್ ಸಂಖ್ಯೆ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. ಆರ್‌ಪಿಎಫ್ (RPF) ಸಿಬ್ಬಂದಿ ನಿಮ್ಮ ದೂರನ್ನು ಸ್ವೀಕರಿಸಿ, ಅದರ ವಿವರಗಳನ್ನು CEIR ಪೋರ್ಟಲ್‌ಗೆ ಕಳುಹಿಸುತ್ತಾರೆ. ಈ ಮೂಲಕ ಕಳವಾದ ಸಾಧನದ ಐಎಂಇಐ ಸಂಖ್ಯೆ (IMEI Number) ಬ್ಲಾಕ್ ಆಗುತ್ತದೆ. ಈ ಕ್ರಮದಿಂದ ದುರಿತ ಉದ್ದೇಶಗಳಿಗಾಗಿ ಮೊಬೈಲ್ ಬಳಕೆಯಾಗುವುದು ತಡೆಯಲಾಗುತ್ತದೆ.

ಮೊಬೈಲ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?:

ರೈಲ್ ಮದದ್ (Train help) ಮೂಲಕ ದೂರು ಸಲ್ಲಿಸಿ : 139 ನಂಬರ್‌ಗೆ ಕರೆ ಮಾಡೋದು ಅಥವಾ ಆನ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು.
ಆರ್‌ಪಿಎಫ್ (RPF) ಸಹಾಯ ಪಡೆಯಿರಿ : ಅವರು ನಿಮ್ಮ ಮೊಬೈಲ್‌ನ ಐಎಂಇಐ ಸಂಖ್ಯೆಯೊಂದಿಗೆ ಸಂಬಂಧಪಟ್ಟ ಮಾಹಿತಿಯನ್ನು CEIR ಪೋರ್ಟಲ್‌ನಲ್ಲಿ ದಾಖಲಿಸುತ್ತಾರೆ.
CEIR ಪೋರ್ಟಲ್‌ನಲ್ಲಿ ನೋಂದಣಿ (CEIR Portal Registration) : ಮಾಹಿತಿ ಸಂಗ್ರಹಿಸಿ, ಕಳೆದು ಹೋದ ಮೊಬೈಲ್‌ನ ಬಳಕೆ ತಕ್ಷಣ ನಿರ್ಬಂಧಿಸಲಾಗುತ್ತದೆ.
ಟ್ರ್ಯಾಕಿಂಗ್ ಮತ್ತು ಮರುಪಡೆಯುವಿಕೆ : ಮೊಬೈಲ್ ಪತ್ತೆಹಚ್ಚಿದ ನಂತರ, ಪ್ರಮಾಣ ಪತ್ರಗಳೊಂದಿಗೆ ಆರ್‌ಪಿಎಫ್ ಪೋಸ್ಟ್‌ಗೆ ತೆರಳಿ ಮರಳಿ ಪಡೆಯಬಹುದು.
ಅನ್‌ಬ್ಲಾಕ್ ಕಾರ್ಯವಿಧಾನ : ಸಿಕ್ಕ ಮೊಬೈಲ್ ಅನ್ನು CEIR ಪೋರ್ಟಲ್ ಮುಖಾಂತರ ಅನ್‌ಬ್ಲಾಕ್ ಮಾಡಬಹುದಾಗಿದೆ.

ಪ್ರಯೋಗಾತ್ಮಕ ಯಶಸ್ಸು:

ಆರ್‌ಪಿಎಫ್ ಜನವರಿ 2024 ರಿಂದ ಫೆಬ್ರವರಿ 2025ರ ನಡುವೆ 1.15 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ರೂ. 284.03 ಕೋಟಿ ಮೌಲ್ಯದ ವಸ್ತುಗಳನ್ನು ಮರಳಿ ನೀಡಿ ಮಹತ್ತರ ಸಾಧನೆ ಮಾಡಿದೆ. ಮೇ 2024ರಲ್ಲಿ ಈಶಾನ್ಯ ಫ್ರಂಟಿಯರ್ ರೈಲ್ವೆ ವ್ಯಾಪ್ತಿಯಲ್ಲಿ (Northeast Frontier railway Direction) ಆರಂಭಿಸಿದ ಪ್ರಾಯೋಗಿಕ ಯೋಜನೆ ಹಲವಾರು ಕಳೆದು ಹೋದ ಮೊಬೈಲ್‌ಗಳ ಮರುಪಡೆಯುವಿಕೆಯಲ್ಲಿ ಯಶಸ್ವಿಯಾಗಿದೆ.

ಇದರಿಂದ ನಿಜವಾದ ಮಾಲೀಕರಿಗೆ ಭದ್ರತೆ:

RPF ‘ಆಪರೇಷನ್ ಅಮಾನತ್’ ಮೂಲಕ ಕಳೆದುಹೋದ ವಸ್ತುಗಳನ್ನು ತಪ್ಪದೆ ನಿಜವಾದ ಮಾಲೀಕರಿಗೆ ತಲುಪಿಸುವಲ್ಲಿ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದೆ. ಈ ಯೋಜನೆಯು ರೈಲು ಪ್ರಯಾಣಿಕರ ಭದ್ರತೆ ಹಾಗೂ ನಂಬಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದೆ.

“ಆಪರೇಷನ್ ಅಮಾನತ್” ಇಂದಿನ ಡಿಜಿಟಲ್ ಯುಗದಲ್ಲಿ (Digital age) ರೈಲ್ವೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಹೊಸ ಸಂಜೀವಿನಿಯಂತೆ ಪರಿಣಮಿಸಿದೆ. ಇದು ಕೇವಲ ಮೊಬೈಲ್ ಸುರಕ್ಷತೆಗಷ್ಟೇ ಅಲ್ಲ, ಸಾರ್ವಜನಿಕರ ಭದ್ರತೆಯ (Public safety) ವಿಶ್ವಾಸವನ್ನೂ ಹೆಚ್ಚಿಸಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡಲ್ಲಿ, ಕಳೆದುಹೋದ ಮೊಬೈಲ್ ಮರುಪಡೆಯುವುದು ನಿಜವಾಗಿಯೂ ಸಾಧ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!