OPPO F29 ಸರಣಿ ಮೊಬೈಲ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ, ವೈಶಿಷ್ಟ್ಯಗಳು, ಬೆಲೆ ಮಾಹಿತಿ ಇಲ್ಲಿದೆ

Picsart 25 03 23 17 39 49 424

WhatsApp Group Telegram Group

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones)ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ  ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು  ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು (Smartphone world) ಎಂದೇ ಹೇಳಬಹುದು. ಇದೀಗ  ಮಾರುಕಟ್ಟೆಯಲ್ಲಿ ಮಾದ್ಯಮ ಶ್ರೇಣಿಯ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಮತ್ತು ಸ್ಮಾರ್ಟ್ ಫೋನ್ ಪ್ರಿಯರಿಗೆ ಒಂದು ಹೊಸ ಸುದ್ದಿ ಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಬಲ ಬ್ರಾಂಡ್‌ಗಳಲ್ಲೊಂದಾದ ಒಪ್ಪೊ ಹೊಸ F29 ಸರಣಿಯ (Oppo new F29 series) ಫೋನ್‌ಗಳನ್ನು ಪರಿಚಯಿಸಿದೆ. ಈ ಫೋನ್‌ಗಳ ವಿಶೇಷತೆ ಎಂದರೆ, ಭಾರತೀಯ ಹವಾಮಾನ ವೈವಿಧ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿರುವುದು. ಬಿರುಸಾದ ಮಳೆ, ಉರಿಬಿಸಿಲು, ತೀವ್ರ ಶೀತ—ಇಂತಹ ನಾನಾ ಹವಾಮಾನದಲ್ಲೂ ಸುಲಭವಾಗಿ ಬಳಸಬಹುದಾದಂತೆ ಇದು ರೂಪುಗೊಂಡಿದೆ.

ಭಾರತೀಯ ಹವಾಮಾನಕ್ಕೆ ತಕ್ಕಂತೆ ತಂತ್ರಜ್ಞಾನ, ಹೌದು
ಒಪ್ಪೊ ಎಫ್ 29 ಸರಣಿಯ (Oppo new F29 series) ಫೋನ್‌ಗಳು IP66, IP68, ಹಾಗೂ IP69 ಪ್ರಮಾಣಿತ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದು, ಧೂಳು, ಮಳೆ, ನೀರಿನ ಅಚಾನಕ್ ಸ್ಪರ್ಶದಿಂದ ಸುರಕ್ಷಿತ. ಫೋನ್ ಮುಳುಗಿದರೂ ಅಥವಾ ಖಾರ ನೀರು, ಜ್ಯೂಸ್, ಹಾಲು, ಕಾಫಿ, ಬಿಯರ್ ಬಿದ್ದರೂ ಯಾವುದೇ ಹಾನಿ ಆಗುವುದಿಲ್ಲ ಎಂದು ಒಪ್ಪೊ ಹೇಳಿದೆ. ಜೊತೆಗೆ, ಎರೋಸ್ಪೇಸ್ ಮಟ್ಟದ ಅಲ್ಯೂಮಿನಿಯಂ ಫ್ರೇಮ್, ಸ್ಪಾಂಜ್ ಬಯೋನಿಕ್ ಕುಶನಿಂಗ್, ಹಾಗೂ ಫೈಬರ್ ಗ್ಲಾಸ್ ಕವರ್ ನೀಡಲಾಗಿದ್ದು, ಬಲಿಷ್ಠತೆ ಹೆಚ್ಚಿಸಲಾಗಿದೆ.

ಆಧುನಿಕ ಸಂಪರ್ಕತಂತ್ರ:

ಭಾರತದ ಭೌಗೋಳಿಕ ವಿಭಜನೆಗಳಿಂದಾಗಿ ಕೆಲವೊಂದು ಪ್ರದೇಶಗಳಲ್ಲಿ ಸಿಗ್ನಲ್ ಸಮಸ್ಯೆ ಸಾಮಾನ್ಯ. ಇದನ್ನು ಮನಗಂಡು, “ಹಂಟರ್ ಆಯಂಟೆನಾ ಆರ್ಕಿಟೆಕ್ಚರ್ (Hunter Antenna Architecture) ತಂತ್ರಜ್ಞಾನವನ್ನು ಒಪ್ಪೊ ಈ ಸರಣಿಯಲ್ಲಿ ಬಳಸಿದೆ. ಇದು ಎಸ್ಕಲೇಟರ್, ಲಿಫ್ಟ್, ಭೂಗತ ಮಾರ್ಗ, ಗಣಿ ಪ್ರದೇಶಗಳು, ಹಳ್ಳಿಗಳು, ಪರ್ವತ ಪ್ರದೇಶಗಳು ಮೊದಲಾದ ಕಡಿಮೆ ಸಂಪರ್ಕವಿರುವ ಸ್ಥಳಗಳಲ್ಲೂ ಉತ್ತಮ ಸಿಗ್ನಲ್ ಸಾಮರ್ಥ್ಯ (Signal capacity) ನೀಡುತ್ತದೆ.

ಗೇಮಿಂಗ್ ಮತ್ತು ಬ್ಯಾಟರಿ ಸಾಮರ್ಥ್ಯ:

F29 ಪ್ರೊ (F29 Pro):
6000mAh ಬ್ಯಾಟರಿ ಸಾಮರ್ಥ್ಯ (Battery capacity)
80W ಸೂಪರ್‌ವೂಕ್ ವೇಗದ ಚಾರ್ಜಿಂಗ್ (Superwook fast charging)
6.7 ಇಂಚಿನ AMOLED ಡಿಸ್‌ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ (Refresh rate) ಹೊಂದಿದೆ.
ಅಲ್ಟ್ರಾ ವಾಲ್ಯೂಮ್ ಮೋಡ್ (Ultra volume mode) ಹೊಂದಿದೆ.
ಕಲರ್‌ಒಎಸ್ 15 (ColorOS 15) (ಆಂಡ್ರಾಯ್ಡ್ 15 ಆಧಾರಿತ) ಕಾರ್ಯಾಚರಣಾ ವ್ಯವಸ್ಥೆಯಿದ್ದು, ಎರಡು ವರ್ಷಗಳ ತಂತ್ರಾಂಶ ಅಪ್‌ಡೇಟ್ (Software update) ಮತ್ತು ಮೂರು ವರ್ಷ ಭದ್ರತಾ ಅಪ್‌ಡೇಟ್‌ಗಳು (Security updates) ಲಭ್ಯವಾಗಲಿವೆ.
ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ (MediaTek Dimensity 7300 Energy)
ಚಿಪ್‌ಸೆಟ್(Chipset), ಗೇಮಿಂಗ್‌ಗೆ ಅನುಕೂಲ(Gaming advantage) ಹೊಂದಿದೆ.

F29:
6500mAh ಬ್ಯಾಟರಿ ಸಾಮರ್ಥ್ಯ(Battery capacity)
45W ಸೂಪರ್‌ವೂಕ್ ಚಾರ್ಜಿಂಗ್(Superwook charging)
6.7 ಇಂಚಿನ AMOLED ಡಿಸ್‌ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ (Refresh rate) ಹೊಂದಿದೆ.
ಅಲ್ಟ್ರಾ ವಾಲ್ಯೂಮ್ ಮೋಡ್ (Ultra volume mode) ಹೊಂದಿದೆ.
ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 1 ಪ್ರೊಸೆಸರ್ (Snapdragon 6 Gen 1 processor), ದಿನನಿತ್ಯದ ಬಳಕೆಗೆ ಸೂಕ್ತ ಆಗಿದೆ.
ಕಲರ್‌ಒಎಸ್ 15 (ColorOS 15) (ಆಂಡ್ರಾಯ್ಡ್ 15 ಆಧಾರಿತ) ಕಾರ್ಯಾಚರಣಾ ವ್ಯವಸ್ಥೆಯಿದ್ದು, ಎರಡು ವರ್ಷಗಳ ತಂತ್ರಾಂಶ ಅಪ್‌ಡೇಟ್ (Software update) ಮತ್ತು ಮೂರು ವರ್ಷ ಭದ್ರತಾ ಅಪ್‌ಡೇಟ್‌ಗಳು (Security updates) ಲಭ್ಯವಾಗಲಿವೆ.
ಇದೆಲ್ಲದರ ಜೊತೆಗೆ, ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನವನ್ನೂ (Reverse charging technology) ನೀಡಲಾಗಿದ್ದು, ಬೇರೆ ಡಿವೈಸುಗಳನ್ನು ಈ ಫೋನ್ ಬಳಸಿ ಚಾರ್ಜ್ ಮಾಡಬಹುದಾಗಿದೆ.

ಕ್ಯಾಮೆರಾ ಮತ್ತು ಎಐ ವೈಶಿಷ್ಟ್ಯಗಳು:

ಒಪ್ಪೊ F29 ಸರಣಿಯ (Oppo  F29 series) ಫೋನ್‌ಗಳಲ್ಲಿ 50MP ಪ್ರಧಾನ ಕ್ಯಾಮೆರಾ(Primary camera), 2MP ಡೆಪ್ತ್ ಕ್ಯಾಮೆರಾ(depth camera), ಹಾಗೂ 16MP ಸೆಲ್ಫಿ ಕ್ಯಾಮೆರಾ (Selfie camera) ಲಭ್ಯ. ಜೊತೆಗೆ, ಎಐ ಅನ್‌ಬ್ಲರ್ (AI Unblur), ಎಐ ರಿಫ್ಲೆಕ್ಷನ್ ರಿಮೂವರ್(AI reflection remover), ಎಐ ಇರೇಸರ್ (AI Eraser), ಮತ್ತು ನೀರಿನಲ್ಲಿ ಛಾಯಾಗ್ರಹಣ ಮಾಡಲು ವಿಶೇಷ ಮೋಡ್ ನೀಡಲಾಗಿದೆ.

ವೈಶಿಷ್ಟ್ಯಗಳು ಮತ್ತು ಬೆಲೆ:

OPPO F29 ಪ್ರೊ: ಏಪ್ರಿಲ್ 1ರಿಂದ ಲಭ್ಯವಾಗಲಿದ್ದು, ಬೆಲೆ ₹27,999 (8GB+128GB), ₹29,999 (8GB+256GB), ಹಾಗೂ ₹31,999 (12GB+256GB).

OPPO F29: ಮಾರ್ಚ್ 27ರಿಂದ ಲಭ್ಯವಾಗಲಿದ್ದು, ₹23,999 (8GB+128GB) ಹಾಗೂ ₹25,999 (8GB+256GB) ಬೆಲೆ ಇದೆ.

ಈ ಫೋನ್‌ಗಳು ಒಪ್ಪೊ ಇ-ಸ್ಟೋರ್ (Oppo E-Store), ಫ್ಲಿಪ್‌ಕಾರ್ಟ್(Flipkart), ಅಮೆಜಾನ್ (Amazon), ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ (Offline stores) ಲಭ್ಯವಿವೆ. ಮುಂಗಡ ಬುಕ್ಕಿಂಗ್ (Pre booking) ಮಾಡುವವರಿಗೆ 10% ಕ್ಯಾಶ್‌ಬ್ಯಾಕ್ (Cashback), 6 ತಿಂಗಳ ಶೂನ್ಯ ಶೇಕಡಾ ಇಎಂಐ(0% EMI), ಮತ್ತು ವಿನಿಮಯ ಬೋನಸ್‌ಗಳ ಆಫರ್ ಇದೆ.

oppo f29
ಭಾರತದಲ್ಲಿ ಒಪ್ಪೊ ಉತ್ಪಾದನೆ:

ಒಪ್ಪೊ ಫೋನ್‌ಗಳನ್ನು ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದ 110 ಎಕರೆ ವಿಸ್ತೀರ್ಣದ ತಯಾರಿಕಾ ಘಟಕದಲ್ಲಿ ನಿರ್ಮಿಸಲಾಗುತ್ತಿದೆ. ಈ ಘಟಕವನ್ನು ನ್ಯಾಷನಲ್ ಜಿಯೋಗ್ರಫಿಕ್ ‘ಸೂಪರ್ ಫ್ಯಾಕ್ಟರಿ’ (Super factory) ಎಂದು ಶ್ಲಾಘಿಸಿದೆ. ಇದರಲ್ಲಿ 52 ಪ್ರೊಡಕ್ಷನ್ ಸಾಲುಗಳು, 37 ಬಿಡಿಭಾಗ ಜೋಡಣಾ ಘಟಕಗಳು, ಹಾಗೂ 20 ಪರೀಕ್ಷಾ ಘಟಕಗಳು ಇವೆ. ಪ್ರತಿ 10 ನಿಮಿಷಕ್ಕೆ 200 ಸ್ಮಾರ್ಟ್‌ಫೋನ್‌ಗಳ ಬಿಡಿಭಾಗಗಳ ಉತ್ಪಾದನೆ ಸಾಧ್ಯ.

ಒಪ್ಪೊ ಎಫ್ 29 ಸರಣಿಯ ಯಶಸ್ಸು:

ಹಿಂದಿನ OPPO F27 Pro+ ಸರಣಿಯ ಮಾರಾಟದ ದಕ್ಷಿಣ ಭಾರತದಲ್ಲಿ ಶೇ.28% ಹೆಚ್ಚಳ ಕಂಡಿದ್ದು, ಈ ಬಾರಿ ಅದಕ್ಕಿಂತಲೂ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಮತ್ತು ಆಂಧ್ರ ಪ್ರದೇಶದಲ್ಲಿ ಒಪ್ಪೊ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಕೊನೆಯದಾಗಿ ಹೇಳುವುದಾದರೆ, ಒಪ್ಪೊ F29 ಸರಣಿ ಫೋನ್‌ಗಳು ಭಾರತೀಯ ಹವಾಮಾನಕ್ಕೆ ತಕ್ಕಂತೆ, ಬಲಿಷ್ಠ ತಂತ್ರಜ್ಞಾನ, ಉನ್ನತ ಕ್ಯಾಮೆರಾ ವೈಶಿಷ್ಟ್ಯ, ದೀರ್ಘಬಾಳಿಕೆ ಹೊಂದಿದ ಬ್ಯಾಟರಿ, ಹಾಗೂ ಉತ್ತಮ ಸಂಪರ್ಕ ಸಾಮರ್ಥ್ಯವನ್ನು ಒದಗಿಸಿವೆ. ಫೋನ್‌ನಲ್ಲಿ ವಿಶೇಷವಾಗಿ ನೀರಿನಲ್ಲಿ ಛಾಯಾಗ್ರಹಣ, ಎಐ ತಂತ್ರಜ್ಞಾನ, ಗೇಮಿಂಗ್ ಪ್ರಭಾವ, ಹಾಗೂ ಸ್ಮಾರ್ಟ್ ಸಂಪರ್ಕ ವ್ಯವಸ್ಥೆ ನೀಡಲಾಗಿದೆ. ಆಧುನಿಕ ಬಳಕೆದಾರರ ಬೇಡಿಕೆಗೆ ತಕ್ಕಂತೆ ಈ ಹೊಸ ಸರಣಿ ಮಾರುಕಟ್ಟೆಯಲ್ಲಿ ಉತ್ತಮ ಸ್ಪರ್ಧೆ ನೀಡುವ ಸಾಧ್ಯತೆಯಿದೆ.

ನಿಮಗೆ ಈ ಫೋನ್‌ ಬಗ್ಗೆ ಆಸಕ್ತಿ ಇದೆಯಾ? ಹಾಗಾದರೆ ಮುಂಗಡ ಬುಕ್ಕಿಂಗ್ (Pre booking) ಮಾಡುವ ಮೂಲಕ ವಿಶೇಷ ಆಫರ್‌ಗಳನ್ನು ಪಡೆಯಿರಿ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!