ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್(smart phone) ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ ಬೆಲೆಯಲ್ಲಿ ಬೆಸ್ಟ್ ಕ್ಯಾಮೆರಾ ಮತ್ತು ಫೀಚರಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಾಗಿ ನೋಡುತ್ತಿದ್ದರೆ, ಒಪ್ಪೋ ರೆನೋ 11 ಸರಣಿ (OPPO Reno 11 Series) ಸ್ಮಾರ್ಟ್ ಫೋನಗಳನ್ನು ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಏಕೆಂದರೆ, ಈ ಸ್ಮಾರ್ಟ್ ಫೋನ್ ಕೇವಲ ಉತ್ತಮ ಫೀಚರ್ಸ್ ನೀಡುವುದಲ್ಲದೆ ಬೆಸ್ಟ್ ಕ್ಯಾಮೆರಾ ಕ್ವಾಲಿಟಿ ಯನ್ನು ನೀಡುತ್ತಿದೆ. ಉತ್ತಮ ಬೆಲೆಯಲ್ಲಿ ಕೂಡಾ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಬನ್ನಿ ಹಾಗಿದ್ದರೆ ಈ OPPO Reno 11 Series ಸ್ಮಾರ್ಟ್ ಫೋನಗಳ ಬೆಲೆ ಹಾಗೂ ಅವುಗಳ ಫೀಚರ್ ಗಳನ್ನು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಒಪ್ಪೋ ರೆನೋ 11 ಸರಣಿ (OPPO Reno 11 Series):
ಇದೀಗ ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಿಕ ಕಂಪನಿಯಾದ ಒಪ್ಪೋ (Oppo) ತನ್ನ ಜನಪ್ರಿಯ ಗ್ರಾಹಕರಿಗೆ ತನ್ನ ಹೊಸ ಒಪ್ಪೋ ರೆನೋ11 ಸರಣಿ (OPPO Reno 11 Series) ನ ಎರಡು ಹೊಸ ಸ್ಮಾರ್ಟ್ ಫೋನಗಳನ್ನು ಬಿಡುಗಡೆ ಮಾಡಿದೆ.
ಈ Oppo series ಅಲ್ಲಿ ಒಪ್ಪೋ ರೆನೋ 11 (Oppo Reno 11) ಮತ್ತು ಒಪ್ಪೋ ರೆನೋ 11 ಪ್ರೊ(Oppo Reno 11 pro) ಎಂಬ ಎರಡು ಸ್ಮಾರ್ಟ್ಫೋನಗಳಿವೆ. ಈ ರೆನೋ 11 ಸರಣಿಯಲ್ಲಿ ವಿಶೇಷವಾಗಿ ಕ್ಯಾಮೆರಾ ವಿಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಕಂಡು ಬರುತ್ತದೆ. ಅಷ್ಟೇ ಅಲ್ಲದೆ ರೆನೋ 11 ಸರಣಿ ಸ್ಮಾರ್ಟ್ ಫೋನಗಳು ಆಂಡ್ರಾಯ್ಡ್ 14 OS ನೊಂದಿಗೆ ಬರುತ್ತವೆ. ಹಾಗಾದ್ರೆ ಬನ್ನಿ ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ.
ಒಪ್ಪೋ ರೆನೋ 11 5G
ಮೊದಲನೆಯದಾಗಿ ಒಪ್ಪೋ ರೆನೋ 11 5G ಸ್ಮಾರ್ಟ್ ಫೋನ್ ಫೀಚರ್ಸ್ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ,
ಒಪ್ಪೋ ರೆನೋ 11 2,412 X 1,080 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 800 nits ಗರಿಷ್ಠ ಬ್ರೈಟ್ನೆಸ್ನೊಂದಿಗೆ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಇನ್ನೂ ಪ್ರೊಸೆಸರ ಬಗ್ಗೆ ನೋಡುವುದಾದರೆ ಒಪ್ಪೋ ರೇನೋ 11 ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ನಿಂದ ಚಾಲಿತವಾಗುತ್ತದೆ. ಒಪ್ಪೋ ರೆನೋ 11 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನೂ ಕ್ಯಾಮೆರಾ ಮಾಹಿತಿಯನ್ನು ತಿಲಿಯುವುದಾದರೆ, ಒಪ್ಪೋ ರೆನೋ 11 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಫ ಅನ್ನು ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ, 32MP ಸೆಕೆಂಡರಿ ಲೆನ್ಸ್ ಮತ್ತು 8MP ಮೂರನೇ ಸಂವೇದಕದೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಸೆಲ್ಫಿ ಗಾಗಿ ಮತ್ತು ವಿಡಿಯೋಗಾಗೀ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಒಪ್ಪೋ ರೆನೋ 115G ಬ್ಯಾಟರಿ 67W ವೇಗದ ಚಾರ್ಜಿಂಗ್‌ನೊಂದಿಗೆ 4,800mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.ಮತ್ತು ಒಪ್ಪೋ ರೆನೋ 11 RAM/ಸಂಗ್ರಹಣೆಯು ಮೂರು ರೂಪಾಂತರಗಳಲ್ಲಿ ಬರಲಿದೆ.
8GB/256GB
12GB/256GB
12GB/512GB ಸಂಗ್ರಹಣೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯ ವಾಗುತ್ತವೆ.
ಇನ್ನು ಒಪ್ಪೋ ರೆನೋ 115G ಬೆಲೆಯ ಬಗ್ಗೆ ಮಾಹಿತಿ ತಿಳಿಯುವುದಾದರೆ,ರೆನೋ 11 5G ಫೋನ್ ಮೂರು ಸ್ಟೋರೇಜ್ ಆಯ್ಕೆ ಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತವೆ. 8GB + 256GB ಸ್ಟೋರೇಜ್ ಆಯ್ಕೆಗೆ ಸುಮಾರು 29,700 ರೂ. ಆಗಿರುತ್ತದೆ.
12GB + 256GB ಮಾದರಿಗೆ 32,900 ರೂ. ಇರುತ್ತದೆ.
12GB + 512GB ಮಾದರಿಗೆ 35,300 ರೂ ನಿಗದಿ ಮಾಡಲಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಒಪ್ಪೋ ರೆನೋ 11 ಪ್ರೊ 5G ಸ್ಮಾರ್ಟ್ ಫೋನ್:
ಎರಡನೆಯದಾಗಿ ಒಪ್ಪೋ ರೆನೋ 11 ಪ್ರೊ5G ಸ್ಮಾರ್ಟ್ ಫೋನ್ ಫೀಚರ್ಸ್ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಒಪ್ಪೋ ರೆನೋ 11 ಪ್ರೊ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.74-ಇಂಚಿನ FHD+ ಡಿಸ್ ಪ್ಲೇಯನ್ನು ಹೊಂದಿದೆ. ಮತ್ತು ಒಪ್ಪೋ ರೆನೋ 11 ಪ್ರೊನಲ್ಲಿ ಸ್ನಾಪ್‌ಡ್ರಾಗನ್ 8+ Gen 1 SoC ಅನ್ನು Adreno GPU ನೊಂದಿಗೆ ಜೋಡಿಸಲಾಗಿದೆ. ಒಪ್ಪೋ ರೆನೋ 11 ಪ್ರೊ ಆಂಡ್ರಾಯ್ಡ್ 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನೂ ಕ್ಯಾಮೆರಾ(Camera) ಮಾಹಿತಿಯನ್ನು ತಿಲಿಯುವುದಾದರೆ, ಒಪ್ಪೋ ರೆನೋ 11 ಪ್ರೊನಲ್ಲಿ ಕೂಡಾ ಟ್ರಿಪಲ್ ಕ್ಯಾಮೆರಾ ಸೇಟಪ್ ಮಾಡಲಾಗಿದೆ.50MP ಪ್ರಾಥಮಿಕ ಕ್ಯಾಮೆರಾದೊಂದಿಗೆ f/1.8 ಅಪರ್ಚರ್, OIS, 32MP ಪೋರ್ಟ್ರೇಟ್ ಸೆನ್ಸಾರ್ ಮತ್ತು 2x ಹೈಬ್ರಿಡ್ ಜೂಮ್ ಮತ್ತು 20x ಡಿಜಿಟಲ್ ನೊಂದಿಗೆ 8MP ಮೂರನೇ ಕ್ಯಾಮೆರಾ ಹೊಂದಿದೆ.ಮತ್ತು ಮುಂಭಾಗದಲ್ಲಿ ಸೆಲ್ಫಿ ಗಾಗಿ ಮತ್ತು ವಿಡಿಯೋಗಾಗೀ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಒಪ್ಪೋ ರೆನೋ 11 ಪ್ರೊ 5Gಯು 4,700mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಮತ್ತು ಒಪ್ಪೋ ರೆನೋ 11 ಪ್ರೊ ಕೇವಲ ಎರಡು RAM/ಸಂಗ್ರಹಣೆ ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತವೆ.
12GB/256GB
12GB/512GB ಸಂಗ್ರಹಣೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯ ವಾಗುತ್ತವೆ.
ಇನ್ನು ಕೊನೆಯದಾಗಿ ಒಪ್ಪೋ ರೆನೋ 11 ಪ್ರೊ 5G ಬೆಲೆಯ ಬಗ್ಗೆ ಮಾಹಿತಿ ತಿಳಿಯುವುದಾದರೆ,
ಒಪ್ಪೋ ರೆನೋ 11 ಪ್ರೊ 5G ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿರುತ್ತವೆ.
12GB + 256GB ಸ್ಟೋರೇಜ್ ಆಯ್ಕೆಗೆ ಸುಮಾರು 41,100ರೂ. ಇರುತ್ತದೆ.
12GB + 512GB ರೂಪಾಂತರಕ್ಕೆ ಸುಮಾರು. 45,100 ರೂ ಅಲ್ಲಿ ದೊರೆಯುತ್ತದೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ