ಆನ್‌ಲೈನ್‌ನಲ್ಲಿ(online) ಮಾವಿನ ಹಣ್ಣು ಆರ್ಡರ್ ಮಾಡಿ, ಅಂಚೆ ಮೂಲಕ ನೇರವಾಗಿ ಮನೆ ಬಾಗಿಲಿಗೆ ಪಡೆಯಿರಿ!
ಭಾರತದಲ್ಲಿ ಮಾವು(Mango fruit) ಕೇವಲ ಹಣ್ಣು ಮಾತ್ರವಲ್ಲ, ಅದು ಬೇಸಿಗೆಯ ಸಿಹಿ ನೆನಪಿನ ಭಾಗವೂ ಹೌದು. ಪ್ರತಿ ವರ್ಷದಂತೆ ಈ ಬಾರಿ ಕೂಡ ಮಾವಿನ ತಿಂಡಿಗೆ ಜನರಲ್ಲಿ ಹೆಚ್ಚಿನ ಆಕರ್ಷಣೆ ಇದ್ದರೂ, ಗುಣಮಟ್ಟದ ಹಣ್ಣುಗಳನ್ನು ಪಡೆಯುವುದು, ಅದರಲ್ಲೂ ನೇರವಾಗಿ ರೈತರಿಂದ(farmers) ಖರೀದಿಸುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ, ರೈತರಿಗೆ ನೇರ ಮಾರುಕಟ್ಟೆ ಒದಗಿಸಿ, ಗ್ರಾಹಕರಿಗೆ ತಾಜಾ ಮತ್ತು ಶುದ್ಧ ಹಣ್ಣುಗಳನ್ನು ತಲುಪಿಸುವ ನಿಟ್ಟಿನಲ್ಲಿ ಒಂದು ಗಮನಾರ್ಹ ಹೆಜ್ಜೆಯನ್ನು ಇಟ್ಟಿದೆ ಭಾರತೀಯ ಅಂಚೆ ಇಲಾಖೆ(Indian Department of Posts) ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMCL). ಹಾಗಿದ್ದರೆ ಗ್ರಾಹಕರಿಗೆ ಯಾವರೀತಿ ತಾಜಾ ಮತ್ತು ಶುದ್ಧ ಹಣ್ಣುಗಳನ್ನು ತಲುಪಿಸಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಈ ಎರಡು ಸಂಸ್ಥೆಗಳ ಸಹಯೋಗದ ಮೂಲಕ ಪ್ರಾರಂಭವಾಗಿರುವ ಈ ವಿಶೇಷ ಸೇವೆಯು, “ಮಾವು ನೇರವಾಗಿ ಮನೆ ಬಾಗಿಲಿಗೆ” ಎಂಬ ಆಶಯವನ್ನು ನನಸುಮಾಡುತ್ತಿದೆ. ರೈತರಿಂದ ನೇರವಾಗಿ ಸಂಗ್ರಹಿಸಲಾಗುವ ಹಣ್ಣುಗಳನ್ನು(fruits) ಪ್ಯಾಕ್ ಮಾಡಿ, ಭಾರತೀಯ ಅಂಚೆಯ ವಿಶ್ವಾಸಾರ್ಹ ಲಾಜಿಸ್ಟಿಕ್ ವ್ಯವಸ್ಥೆಯ(Logistic system) ಮೂಲಕ ರಾಜ್ಯದಾದ್ಯಂತ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಇದು.
ಆರ್ಡರ್ ಮಾಡುವ ವಿಧಾನ ಹೇಗೆ?:
ಆನ್‌ಲೈನ್ ಬುಕ್ಕಿಂಗ್(Online booking):
ಗ್ರಾಹಕರು KSMDMCL ನ ಅಧಿಕೃತ ವೆಬ್‌ಸೈಟ್ (https://ksmdmcl.karnataka.gov.in) ನಲ್ಲಿ ಲಭ್ಯವಿರುವ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯ ಮೂಲಕ ಸುಲಭವಾಗಿ ಮಾವುಗಳನ್ನು ಆರ್ಡರ್ ಮಾಡಬಹುದು. ಬುಕಿಂಗ್ ಪ್ರಕ್ರಿಯೆ ಸುಲಭವಾಗಿದ್ದು, ಮೊಬೈಲ್ ಅಥವಾ ಕಂಪ್ಯೂಟರ್(Mobile or computer) ಬಳಸಿ ಯಾವುದೇ ಸ್ಥಳದಿಂದ ಆರ್ಡರ್ ಮಾಡಬಹುದು.
ಅಂಚೆ ಸೇವೆಯ(Postal Service) ಬಳಕೆ:
ಬುಕ್ ಮಾಡಿದ ನಂತರ, ರೈತರಿಂದ ಸಂಗ್ರಹಿಸಿದ ಹಣ್ಣುಗಳನ್ನು ಶ್ರೇಣೀಕರಿಸಿ ಪ್ಯಾಕ್ ಮಾಡಲಾಗುತ್ತದೆ. ನಂತರ ಭಾರತೀಯ ಅಂಚೆಯ ಮೂಲಕ ಸುರಕ್ಷಿತವಾಗಿ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಮೂಲಕ ಗ್ರಾಮೀಣ ಭಾಗದ ರೈತರಿಗೆ( for rural farmers) ನೇರ ಮಾರುಕಟ್ಟೆ ದೊರೆಯುತ್ತದೆ ಮತ್ತು ಗ್ರಾಹಕರಿಗೆ ಹೊಸ, ಸ್ವಚ್ಚವಾದ ಮಾವಿನ ಹಣ್ಣುಗಳು ಲಭ್ಯವಾಗುತ್ತವೆ.
ಯೋಜನೆಯ ಪ್ರಮುಖ ಪ್ರಯೋಜನಗಳು:
ಮಧ್ಯವರ್ತಿಗಳಿಲ್ಲದ ಮಾರಾಟ(Selling without intermediaries):
ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತಲುಪುವ ವ್ಯವಸ್ಥೆಯಿಂದ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದಂತೆ ಮಾಡಲಾಗಿದೆ.
ಗುಣಮಟ್ಟ(Quality):
ಆಯ್ದ ಗುಣಮಟ್ಟದ ಹಣ್ಣುಗಳ ಪೂರೈಕೆಯು ಖಚಿತಪಡಿಸಲಾಗಿದೆ.
ಸುರಕ್ಷಿತ ಪೂರೈಕೆ(Safe supply):
ಭಾರತೀಯ ಅಂಚೆಯ ವಿಶ್ವಾಸಾರ್ಹ ಪ್ಯಾಕೇಜಿಂಗ್ ಮತ್ತು ವಿತರಣಾ ವ್ಯವಸ್ಥೆಯಿಂದ(delivery system) ಹಣ್ಣುಗಳು ನಷ್ಟವಿಲ್ಲದೇ ತಲುಪುತ್ತವೆ.
ಗ್ರಾಮೀಣ ಆರ್ಥಿಕ ಅಭಿವೃದ್ಧಿ:
ರೈತರಿಗೆ ಉತ್ತಮ ದರ ದೊರೆಯುವುದರಿಂದ ಗ್ರಾಮೀಣ ಆರ್ಥಿಕತೆಗೆ ಬೆಂಬಲ ಸಿಗುತ್ತದೆ.
ಸುಲಭತೆ:
ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್(Smartphone or computer) ಬಳಸಿ ಮನೆಯಲ್ಲಿದ್ದಾಗಲೇ ಮಾವು ಖರೀದಿಸಲು ಅವಕಾಶ.
ಬೇಸಿಗೆಗೆ ತಾಜಾ, ಸ್ವಾದಿಷ್ಟವಾದ ಮಾವಿನ ಹಣ್ಣುಗಳನ್ನು ನಿಮ್ಮ ಮನೆ ಬಾಗಿಲಿಗೆ ಪಡೆಯಲು KSMDMCL ನ ವೆಬ್‌ಸೈಟ್‌ಗೆ ಭೇಟಿ ನೀಡಿ.
https://ksmdmcl.karnataka.gov.in
ಈ ಬಾರಿಯ ಬೇಸಿಗೆಯಲ್ಲಿ, ನೇರವಾಗಿ ರೈತರಿಂದ ಬಂದ ತಾಜಾ, ಸಿಹಿಯಾದ ಮಾವುಗಳನ್ನು(mangoes) ಆರ್ಡರ್ ಮಾಡಿ, ಮನೆ ಬಾಗಿಲಿಗೆ ಪಡೆದುಕೊಳ್ಳಿ. ನೀವು ಬೆಂಬಲಿಸುವ ಈ ಒಂದು ಆರ್ಡರ್, ಕೃಷಿಕನ ಬದುಕಿಗೆ ಬೆಳಕು ಮೂಡಿಸಬಹುದು!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.