ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ, ಏಜೆನ್ಸಿ ಬದಲಿಗೆ ವಿವಿಧೋದ್ದೇಶ ಸಹಕಾರ ಸಂಘಗಳ ಸ್ಥಾಪನೆ.
ಇದೀಗ ರಾಜ್ಯ ಸರ್ಕಾರದಿಂದ (state government) ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರವು ಹೊರಗುತ್ತಿಗೆಯ ನೌಕರರ ಬಗ್ಗೆ ಗಮನ ಹರಿಸಿ ಅವರ ಉಳಿತಿಗಾಗಿ ಹಲವು ರೂಪು ರೆಷೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ರಾಜ್ಯ ಸರ್ಕಾರದ ಈ ಒಂದು ಉದ್ದೇಶ ಹೊರಗುತ್ತಿಗೆಯ ನೌಕರರಿಗೆ (Outsourced employees) ಬಹಳ ಸಹಾಯವಾಗಲಿದೆ. ಈ ಒಂದು ಬದಲಾವಣೆ ಹೊರಗುತ್ತಿಗೆ ನೇಮಕಾತಿಯಲ್ಲಿ ನೌಕರರಿಗೆ ಆಗುತ್ತಿರುವ ಶೋಷಣೆ ತಪ್ಪಿಸುವ ಉದ್ದೇಶವಾಗಿದೆ. ರಾಜ್ಯ ಸರ್ಕಾರ ಜಿಲ್ಲಾ ಮಟ್ಟದಲ್ಲಿ ವಿವಿಧೋದ್ದೇಶ ಸಹಕಾರ ಸಂಘಗಳನ್ನು (Multipurpose Cooperative Societies) ಸ್ಥಾಪಿಸಲು ಮುಂದಾಗಿದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ಏಜೆನ್ಸಿಗಳ ಬದಲಿಗೆ ಸಹಕಾರ ಸಂಘಗಳ ಮೂಲಕ ನೇಮಕಾತಿ ನಡೆಸಲಾಗುತ್ತದೆ :
ರಾಜ್ಯ ಸರ್ಕಾರವು ಈ ಒಂದು ಬದಲಾವಣೆ ಮಾಡುತ್ತಿದ್ದು, ಹೊರಗುತ್ತಿಗೆ ನೌಕರರಿಗೆ ನೇಮಕಾತಿ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಏಜೆನ್ಸಿಗಳಿಂದ ಹೊರಗುತ್ತಿಗೆ ನೌಕರರಿಗೆ ಅನ್ಯಾಯ, ಶೋಷಣೆಗಲಾಗುತ್ತಿದ್ದು, ಇದರ ಬಗ್ಗೆ ಗಮನ ಹರಿಸಿದ ಸರ್ಕಾರವು ಇದನ್ನು ತಪ್ಪಿಸುವ ಸಲುವಾಗಿ ಕಾರ್ಮಿಕ ಇಲಾಖೆಯು (Labour department) ಕ್ರಮ ತೆಗೆದುಕೊಂಡಿದೆ. ಖಾಸಗಿ ಏಜೆನ್ಸಿಗಳ ಮೂಲಕ ಆಗುತ್ತಿದ್ದ ನೇಮಕಾತಿಯನ್ನು ಕಿತ್ತು, ಇದೀಗ ಸಹಕಾರಿ ವಲಯಕ್ಕೆ ಜವಾಬ್ದಾರಿ ನೀಡಲಾಗಿದೆ.
ಸರ್ಕಾರದ ಈ ಕ್ರಮದಿಂದ ಹೊರಗುತ್ತಿಗೆ ನೌಕರರಿಗೆ ಏನೆಲ್ಲಾ ಲಾಭಗಳಿವೆ?
ಮುಖ್ಯವಾಗಿ ಬೀದರ್ ಮಾದರಿಯಲ್ಲಿ ವಿವಿಧೋದ್ದೇಶ ಸಹಕಾರ ಸಂಘ ಪ್ರಾರಂಭ ಮಾಡಲಾಗುತ್ತದೆ. ಸಂಘಕ್ಕೆ ಸೇವಾ ಶುಲ್ಕ ಮಾತ್ರ ಲಭ್ಯವಾಗಲಿದ್ದು, ನೇಮಕಾತಿ(Recruitment)ಯಲ್ಲಿ ಶೇಕಡ 1ರಷ್ಟು ಸೇವಾ ಶುಲ್ಕ ಸಂಗ್ರಹಿಸಲಿದೆ. ಮಧ್ಯವರ್ತಿ ಇಲ್ಲದೆ ಅಗತ್ಯ ಇರುವ ಕಡೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಬಹುದು. ವೇತನ ನೇರವಾಗಿ ನೌಕರರ ಖಾತೆಗೆ ವರ್ಗಾವಣೆಯಾಗುತ್ತದೆ. ಸಂಘಕ್ಕೆ ಸ್ವಲ್ಪ ದುಡಿಯುವ ಬಂಡವಾಳ ಸಿಗುತ್ತದೆ. ತುರ್ತು ಸಂದರ್ಭದಲ್ಲಿ ಸಂಘದಿಂದಲೇ ಪಿಎಫ್ (PF), ಎಸ್‌ಐ (SI) ಪಾವತಿಸಿ ನಂತರ ಇಲಾಖೆಗಳಿಂದ ಹಣ ವಾಪಸ್ ಸ್ವೀಕರಿಸಲಾಗುವುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.