ರೈತರ ಖಾತೆಗೆ ಜಮಾ ಆಗಲಿದೆ ಹಣ, ದೊರೆಯಲಿದೆ ಬೆಳೆ ಹಾನಿ ಪರಿಹಾರ..!
ಇಂದು ರೈತರು ಬಹಳ ಕಷ್ಟ ಪಟ್ಟು ಬೆಳೆಯನ್ನು ಬೆಳೆಯುತ್ತಾರೆ. ಆದರೆ ರೈತರು ಬೆಳೆದ ಬೆಳೆಗೆ ಸರಿಯಾಗಿ ಫಲ ಸಿಗುವುದಿಲ್ಲ, ಅದರ ಬದಲು ಬಹಳಷ್ಟು ನಷ್ಟವನ್ನು ಅನುಭವಿಸುತ್ತಾರೆ. ಇಂದು ರೈತರಿಗೆ ( farmares) ಅನೇಕ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಇದರಿಂದ ರೈತರು ಉತ್ತಮ ರೀತಿಯಲ್ಲಿ ಬೆಳೆಯನ್ನು ಬೆಳೆದು ನಮ್ಮ ಜೀವನವನ್ನು ಸಾಗಿಸಬಹುದಾಗಿದೆ.
ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ರೈತರು ಇಂದು ಪ್ರಾಕೃತಿಕ ತೊಂದರೆಗಳನ್ನು (Natural problems) ಅನುಭವಿಸುತ್ತಿದ್ದಾರೆ. ಇಂದು ಸರಿಯಾದ ಸಮಯಕ್ಕೆ ಮಳೆ ಬಾರದೆ, ವಾತಾವರಣದಲ್ಲಿ ಏರುಪೇರಾಗಿದೆ. ಇದು ಇಂದು ರೈತರ ಬೆಳೆಗೆ ಬಹಳ ತೊಂದರೆ ಉಂಟು ಮಾಡಿದೆ. ರೈತರ ಬೆಳೆದ ಬೆಳೆಯು ಹಾನಿಗೆ ಒಳಪಟ್ಟಿದೆ. ಅದಕ್ಕಾಗಿ ಇಂದು ಸರ್ಕಾರವು (government) ರೈತರಿಗಾಗಿ ಬೆಳೆ ಹಾನಿ ಪರಿಹಾರವನ್ನು ಒದಗಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಿಂಗಾರು ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾನಿ :
ಹೌದು, ರಾಜ್ಯದಲ್ಲಿ ಹಿಂಗಾರು ಮಳೆ ಅತಿಯಾದ್ದರಿಂದ, ಹಿಂಗಾರು ಮಳೆಯ ಅವಧಿಯಲ್ಲಿ 1.58 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ರೈತರಿಗಾಗಿ ಸರ್ಕಾರವು ಬೆಳೆ ಹಾನಿ ಪರಿಹಾರವನ್ನು (Crop damage compensation) ಒದಗಿಸಿದೆ. ಬೆಳೆ ಹಾನಿ ಪರಿಹಾರದ ಹಣವು ಒಂದು ವಾರದಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರೈತರಿಗಾದ ಬೆಳೆ ಹಾನಿ ಪರಿಹಾರಕ್ಕಾಗಿ ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸಲಾಗಿದೆ :
ಹಿಂಗಾರು ಮಳೆಯಿಂದ ಅಂದಾಜು 120 ಕೋಟಿ ರೂ.ನಷ್ಟು ನಷ್ಟ ಉಂಟಾಗಿದ್ದು, ರೈತರಿಗೆ ಪರಿಹಾರ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದಾಯ ಸಂಗ್ರಹದಲ್ಲಿ ಕಂದಾಯ ಇಲಾಖೆ ಶೇಕಡ 26ರಷ್ಟು ಬೆಳವಣಿಗೆ ದರ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 24,500 ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಸ್ಟ್ಯಾಂಪ್ಸ್ (stamps), ರಿಜಿಸ್ಟ್ರೇಷನ್ (Registration) ಸೇರಿದಂತೆ ವಿವಿಧ ಮೂಲಗಳಿಂದ 15000 ಕೋಟಿ ರೂ. ಸಂಗ್ರಹಿಸಲಾಗಿದೆ. ಮುಂದಿನ ಐದು ತಿಂಗಳಲ್ಲಿ ಗುರಿ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಳೆ ಹಾನಿ ಪರಿಹಾರದ ಜೊತೆಗೆ ಪ್ರಭಾವ ಮತ್ತು ಭವಿಷ್ಯದ ಯೋಜನೆಗಳು :
ಈ ಯೋಜನೆಯಡಿಯಲ್ಲಿ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆ (bank account) ಗಳಿಗೆ ಜಮಾ ಮಾಡಲಾಗುವುದು, ಇದು ಪಾರದರ್ಶಕತೆ ಮತ್ತು ಸರಿಯಾದ ಲಾಭಗ್ರಹಣವನ್ನು ಖಚಿತಪಡಿಸುತ್ತದೆ. ಹಿಂಗಾರು ಮಳೆಯ ನಂತರ ಬೆಳೆ ಹಾನಿ ಎದುರಿಸಿದ ರೈತರಿಗೆ ಈ ಪರಿಹಾರವು ಶಾಶ್ವತ ಪರಿಹಾರವಲ್ಲದಿದ್ದರೂ, ತಾತ್ಕಾಲಿಕವಾಗಿ ಅವರಿಗೆ ಆರ್ಥಿಕ ನೆರವಾಗಲಿದೆ.
ಪೀಡಿತ ರೈತರನ್ನು ಪ್ರೋತ್ಸಾಹಿಸುವ ಮತ್ತು ಬೆಳೆ ವಿಮೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ :
ಅಷ್ಟೇ ಅಲ್ಲದೆ ಸರ್ಕಾರವು ಈ ಯೋಜನೆಯೊಂದಿಗೆ, ಪೀಡಿತ ರೈತರನ್ನು ಪ್ರೋತ್ಸಾಹಿಸುವ ಮತ್ತು ಬೆಳೆ ವಿಮೆ (Crop insurance) ಯೋಜನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಮುಂದಾಗಿದೆ. ಇದು ರೈತರು ಇತರ ಬೆಳೆಗಳಿಗೆ ಪರ್ಯಾಯ ಹೂಡಿಕೆಯನ್ನು ಪರಿಶೀಲಿಸಲು ಸಹಾಯ ಮಾಡಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.