ಸರ್ಕಾರಿ ನೌಕರರ ಪಿಂಚಣಿ ಸ್ಕೀಮ್ ನಲ್ಲಿ ಮಹತ್ವದ ಬದಲಾವಣೆ, ಏನಿದು EPS ನಿಯಮ ತಿಳಿದುಕೊಳ್ಳಿ

1000349215

ಹೊಸ ವರ್ಷಕ್ಕೆ ಹೊಸ ಬದಲಾವಣೆ, ನೌಕರರ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಹೊಸ EPS ನಿಯಮವೇನು?.. ಇಲ್ಲಿದೆ ಮಾಹಿತಿ..!

ಹೊಸ ವರ್ಷ ಶುರು ಆಗಿದೆ. ಹಲವಾರು ಜನರು ಹೊಸ ವರ್ಷಕ್ಕೆ ಬದಲಾವಣೆ (Updates) ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಹೊಸ ವರ್ಷದಿಂದ ಹಲವು ನಿಯಮಗಳು ಬದಲಾಗಿವೆ. ಗ್ಯಾಸ್, ಯುಪಿಐ ಪಾವತಿ, ವ್ಯಾಟ್ಸಾಪ್ ಪಾವತಿ ಮಿತಿ ಸೇರಿದಂತೆ ಹಲವು ಬದಲಾವಣೆಗಳು ಜನವರಿ 1 ರಿಂದಲೇ ಜಾರಿಯಾಗಿದೆ.

ಇದೇ ರೀತಿ ಮತ್ತೊಂದು ಮಹತ್ತರ ಬದಲಾವಣೆ ಎಂದರೆ ಅದು ನೌಕರರ ಪಿಂಚಣಿ ಯೋಜನೆ (EPS) ನವೆಂಬರ್ 10 ರಂದು ಕಾರ್ಮಿಕ ಸಚಿವಾಲಯ ಈ ಬದಲಾವಣೆಗೆ ಅನುಮೋದನೆ ನೀಡಿತ್ತು. ಇದೀಗ ಜನವರಿ 1 ರಿಂದ ಜಾರಿಯಾಗುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ನಿಯಮದಿಂದ 70 ಮಿಲಿಯನ್ ಫಲಾನುಭವಿಗಳಿಗೆ ಉಪಯೋಗವಾಗಲಿದೆ :

ಹೊಸ ನಿಯಮದ ಪ್ರಕಾರ ನೌಕರರ ತಮ್ಮ ಪಿಂಚಣಿ ಹಣವನ್ನು ದೇಶದ ಯಾವುದೇ ಭಾಗದಲ್ಲಿ, ತಮ್ಮ ಬ್ಯಾಂಕ್‌ಗಳ ಇತರ ಶಾಖೆಯಿಂದ ಪಡೆಯಲು ಸಾಧ್ಯವಿದೆ. ಈ ಮೂಲಕ ಭಾರಿ ಸಮಸ್ಯೆ ಎದುರಿಸುತ್ತಿದ್ದ ಹಲವು ಹಿರಿಯ ನೌಕರರು, ಸ್ಥಳಾಂತರಗೊಂಡಿರುವ ನೌಕರರಿಗೆ ಅತ್ಯಂತ ಅನುಕೂಲ ಮಾಡಿಕೊಟ್ಟಿದೆ. ನಿಯಮ ಬದಲಾವಣೆಯಿಂದ ಬರೋಬ್ಬರಿ 70 ಮಿಲಿಯನ್ (70 Million) ಫಲಾನುಭವಿಗಳಿಗೆ ಉಪಯೋಗವಾಗಲಿದೆ.

ತಾವು ಇದ್ದ ಸ್ಥಳದಲ್ಲಿಯೇ ಹತ್ತಿರದ ಬ್ಯಾಂಕ್‌ಗೆ ತೆರಳಿ ತಮ್ಮ ತಿಂಗಳ ಪಿಂಚಣಿ ಹಣವನ್ನು ಪಡೆಯಬಹುದು :

ಈ ಹಿಂದೆ ನೌಕರರು ಪಿಂಚಣಿ ಯೋಜನೆಯ ಹಣವನ್ನು (Pension scheme money) ಬಹಳ ಕಷ್ಟ ಪಟ್ಟು ಪಡೆಯಬೇಕಿತ್ತು, ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ಪಿಂಚಣಿ ಹಣ ಪಡೆಯಬೇಕಿತ್ತು. ಪ್ರತಿ ತಿಂಗಳು ಈ ಪಿಂಚಣಿ ಹಣಕ್ಕಾಗಿ ಹಲವರು ಪ್ರಯಾಣ ಮಾಡಬೇಕಿತ್ತು. ಸ್ಥಳಾಂತರಗೊಂಡಿರುವ ನೌಕರರು, ಬೇರೆಡೆ ನಿವೃತ್ತಿ ಜೀವನದಲ್ಲಿರುವ ನೌಕರರು, ತಮ್ಮ ಮೂಲ ಶಾಖೆಗೆ ತೆರಳಿ ಪ್ರತಿ ತಿಂಗಳು ಹಣ ಪಡೆಯಬೇಕಿತ್ತು. ಆದರೆ ಇದೀಗ ಹೊಸ ನಿಯಮದ ಅಡಿಯಲ್ಲಿ ಫಲಾನುಭವಿಗಳು ತಾವಿದ್ದಲ್ಲೇ ಹತ್ತಿರದ ಬ್ಯಾಂಕ್‌ಗೆ ತೆರಳಿ ತಮ್ಮ ತಿಂಗಳ ಪಿಂಚಣಿ ಹಣವನ್ನು ಪಡೆಯಬಹುದು.

ನಿವೃತ್ತಿ ಹೊಂದಿದ ವಯಸ್ಕರು ಇನ್ನು ಮುಂದೆ ಪಿಂಚಣಿ ಯೋಜನೆ ಹಣಕ್ಕಾಗಿ ಚಿಂತಿಸಬೇಕಾಗಿಲ್ಲ :

ಪ್ರಮುಖವಾಗಿ ನಿವೃತ್ತಿ ಹೊಂದಿದ ನೌಕರರು (Employees) ಪಿಂಚಣಿ ಹಣಕ್ಕಾಗಿ ಅಲೆದಾಡುವ ಪರಿಸ್ಥಿತಿ ಇತ್ತು. ಅದಕ್ಕಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಇದು ಹಿರಿಯರಿಗೆ ಸೇರಿದಂತೆ ಎಲ್ಲರಿಗೂ ಪ್ರಯಾಸದ ಕೆಲಸವಾಗಿತ್ತು. ಪಿಂಚಣಿ ಹಣ ಪಡೆಯಲು ಒಂದು ದಿನ ಮೀಸಲಿಡಬೇಕಿತ್ತು. ಇಷ್ಟೇ ಅಲ್ಲ ಹಣ ಖರ್ಚು ಮಾಡಿಕೊಂಡು ತೆರಳಿ ಮರಳಿ ಬರುವಷ್ಟರಲ್ಲಿ ಆರೋಗ್ಯ ಸಮಸ್ಯೆಗಳು (Health issues) ಎದುರಾಗುತ್ತಿದ್ದವು. ಆದರೆ ಇದೀಗ ಜಾರಿ ತಂದ ಹೊಸ ನಿಯಮದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿದೆ.

ಇತರ ಬ್ಯಾಂಕ್ ಖಾತೆಗಳಿಂದ ಪಿಂಚಣಿ ಹಣ ಪಡೆಯಲು ಸಾಧ್ಯ :

ಹೌದು, ಇದೀಗ ಜಾರಿಯಾದ ಹೊಸ ನಿಯಮದನುಸಾರ, ಪಿಂಚಣಿ ಫಲಾನುಭವಿಗಳು ಇದರಿಂದ ಹಲವಾರು ಲಾಭಗಳನ್ನು ಪಡೆಯಬಹುದಾಗಿದೆ. ಪಿಂಚಣಿದಾರರು ತಮ್ಮ ಮೂಲ ಬ್ಯಾಂಕ್ ಖಾತೆಯಿಂದ ಹಣ ಪಡೆದಂತೆ ಸುಲಭವಾಗಿ ಇತರ ಶಾಖೆಗಳಿಂದ ಹಣ ಪಡೆಯಲು ಸಾಧ್ಯವಿದೆ. ಕೇವಲ ಆಧಾರ್ ಕಾರ್ಡ್ ಲಿಂಕ್ (Adhar card link) ಇರುವ ಖಾತೆ ಅಥವಾ ಗುರುತಿನ ದಾಖಲೆ ಚೀಟಿ ಇಟ್ಟುಕೊಂಡಿದ್ದರೆ ಸಾಕು ಈ ದಾಖಲೆಗಳನ್ನು ಇತರ ಶಾಖೆಗಳಲ್ಲಿ ತೋರಿಸಿ ದೃಢೀಕರಣ ಮಾಡಿಕೊಂಡು ಪಿಂಚಣಿ ಹಣ ಪಡೆಯಬಹುದಾಗಿದೆ.

ಇನ್ನು ಮುಂದೆ ಡಿಜಿಟಲ್ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ :

ಸದ್ಯ ಇಪಿಎಸ್ ಡಿಜಿಟಲೀಕರಣ ಪ್ರಕ್ರಿಯೆ (Digital Process) ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ತರ ಬದಲಾವಣೆಗೆ ತೆರೆದುಕೊಳ್ಳಲಿದೆ. ಈ ಮೂಲಕ ಬ್ಯಾಂಕ್ ತೆರಳದೆ ನೇರವಾಗಿ ಖಾತೆಗೆ ಜಮಾವಣೆ ಮಾಡುವ, ಪಡೆದುಕೊಳ್ಳುವ ಡಿಜಿಟಲ್ ವ್ಯವಸ್ಥೆ (Digital arrangement) ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿ, ವರ್ಗಾವಣೆ ಲಭ್ಯವಿದೆ. ಭಾರತ ಅತೀ ಹೆಚ್ಚು ಯುಪಿಐ ಪಾವತಿ ವಹಿವಾಟು ನಡೆಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ನಗದು ಹಣದ ವಹಿವಾಟುಗಳು ಕಡಿಮೆಯಾಗಿದೆ. ಪಾವತಿ, ಹಣ ವರ್ಗಾವಣೆ ಸೇರಿದಂತೆ ಹಲವು ಸೌಲಭ್ಯಗಳು ಸುಲಭವಾಗಿ ಇದೀಗ ಲಭ್ಯವಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!