ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್..! ಇಲ್ಲಿದೆ ಮಾಹಿತಿ

IMG 20240805 WA0001

ಪಿಂಚಣಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಮಾಸಿಕ 7,500 ರೂ. ಕನಿಷ್ಠ ಪೆನ್ಷನ್ ಲಭ್ಯ!

ಇಂದು ಎಲ್ಲರೂ ತಮ್ಮ ನಿವೃತ್ತಿಯ ಜೀವನಕ್ಕೆ ಹಲವಾರು ದಾರಿಗಳನ್ನು ಕಂಡು ಕೊಂಡಿದ್ದಾರೆ. ಬಹುತೇಕ ಜನರು ತಮ್ಮ ನಿವೃತ್ತಿಯ ಜೀವನ ಸುಖಕರವಾಗಿರಲು ತಮ್ಮ ಉದ್ಯೋಗದ ಸಮಯದಲ್ಲಿ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಿರುತ್ತಾರೆ. ಹಾಗೆಯೇ ಅವುಗಳು ತಮ್ಮ ವೃದ್ಧಾಪ್ಯ ಸಮಯದಲ್ಲಿ ಉಪಯೋಗಕ್ಕೆ ಬರುತ್ತವೆ. ಹಾಗೆಯೇ ಇನ್ನು ಕೆಲವರಿಗೆ ತಮ್ಮ ಉದ್ಯೋಗದ ಪೆನ್ಷನ್ (Pension) ದೊರೆಯುತ್ತದೆ. ಅಲ್ಪ ಮಟ್ಟಿಗೆ ತಮಗೆ ದೊರೆಯುವ ಪೆನ್ಷನ್ ಪಡೆದು ತಮ್ಮ ಜೀವನ ನಡೆಸುತ್ತಾರೆ. ಹಾಗೆಯೇ ಇದೀಗ ಕೇಂದ್ರ ಸರ್ಕಾರದ ವತಿಯಿಂದ ಪಿಂಚಣಿ ದಾರರಿಗೆ ಕನಿಷ್ಠ 7,500 ರೂ. ದೊರೆಯುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪಿಂಚಣಿ ಮುಖ್ಯ ಉದ್ದೇಶ (purpose) :

ಪಿಂಚಣಿ ಮೊತ್ತವು ವೃದ್ಧ ದಂಪತಿಗಳು ಬದುಕುವುದು ಕಷ್ಟಕರವಾಗಿದೆ. ಪಿಂಚಣಿದಾರರ ಸಂಗಾತಿಗೆ ತುಟ್ಟಿಭತ್ಯೆ ಮತ್ತು ಉಚಿತ ಆರೋಗ್ಯ ಸೌಲಭ್ಯಗಳೊಂದಿಗೆ ಈ ಪಿಂಚಣಿ ದೊರಕಬೇಕು. ಪ್ರಸ್ತುತ ಪಿಂಚಣಿದಾರರಿಗೆ ಮಾಸಿಕ ಸರಾಸರಿ 1450 ರೂ. ಪಿಂಚಣಿ ನೀಡಲಾಗುತ್ತಿದೆ. 36 ಲಕ್ಷ ಪಿಂಚಣಿದಾರರಿಗೆ ಮಾಸಿಕ ಒಂದು ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಸಿಗುತ್ತಿದ್ದು, ಇದನ್ನು 7500 ರೂ.ಗೆ ಹೆಚ್ಚಳ ಮಾಡಿದಲ್ಲಿ ಜೀವನ ಭದ್ರತೆಗೆ ಅನುಕೂಲವಾಗುತ್ತದೆ. ಎಂಬುದು ಈ ಪಿಂಚಣಿಯ ಮುಖ್ಯ ಉದ್ದೇಶವಾಗಿದೆ.

78 ಲಕ್ಷ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ 7500 ರೂ. ಪಿಂಚಣಿ ದೊರಕಿಸುವ ಬಗ್ಗೆ ಭರವಸೆ :

ಕೈಗಾರಿಕೆ, ಸಾರ್ವಜನಿಕ, ಸಹಕಾರ, ಖಾಸಗಿ ವಲಯದಲ್ಲಿರುವ ಒಟ್ಟು 78 ಲಕ್ಷ ಪಿಂಚಣಿದಾರರಿಗೆ (pensioners) ಕನಿಷ್ಠ ಮಾಸಿಕ 7500 ರೂ. ಪಿಂಚಣಿ ನೀಡುವ ಬಗ್ಗೆ ಪರಿಶೀಲನೆ ನಡೆಸಿ ಅದರ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ (central government) ವಹಿಸಿಕೊಂಡಿದೆ. ಅಷ್ಟೇ ಅಲ್ಲದೆ ಇಪಿಎಸ್ -95 ರಾಷ್ಟ್ರೀಯ ಆಂದೋಲನ ಸಮಿತಿ ಇದರ ಬಗ್ಗೆ ಮಾಹಿತಿ ನೀಡಿದೆ. ಹಾಗೂ ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ನವದೆಹಲಿಯಲ್ಲಿ ಶುಕ್ರವಾರ ಹೋರಾಟ ಕೈಗೊಳ್ಳಲಾಗಿತ್ತು. ಸಮಿತಿಯ ಪ್ರತಿನಿಧಿಗಳು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಮನ್ ಸುಖ್ ಮಾಂಡವೀಯಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಹಾಗೆಯೇ ಪಿಂಚಣಿ ಹೆಚ್ಚಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (PM Narendra Modi) ಚರ್ಚೆ ನಡೆಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯಿಂದ ಪಿಂಚಣಿ ಹೆಚ್ಚಳಕ್ಕಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ :

ಇಪಿಎಸ್-95 ವ್ಯಾಪ್ತಿಗೆ ಒಳಪಡುವ ಪಿಂಚಣಿದಾರರು ಮತ್ತು ಉದ್ಯೋಗಿಗಳು ತಿಂಗಳಿಗೆ ಕನಿಷ್ಠ ಮಾಸಿಕ 7500 ರೂ. ಪಿಂಚಣಿದಾರರ ಸಂಸ್ಥೆ ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.

ಸುಮಾರು 7.8 ಮಿಲಿಯನ್ ಪಿಂಚಣಿದಾರರು ಹಲವು ವರ್ಷಗಳಿಂದ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಲು ಇಪಿಎಫ್‌ಒ ಬಾಗಿಲು ತಟ್ಟುತ್ತಿದ್ದಾರೆ , ಆದರೆ ಸರ್ಕಾರವು ಅವರ ಬೇಡಿಕೆಗಳನ್ನು ಪರಿಹರಿಸಿಲ್ಲ ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!