ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ.! ಇಲ್ಲಿದೆ ವಿವರ

1000340859

NPS ನೌಕರರ ಕುಟುಂಬ ಪಿಂಚಣಿ(Pension) ಕುರಿತು ರಾಜ್ಯ ಸರ್ಕಾರ(Stategovernment) ಮಹತ್ವದ ಆದೇಶ ಹೊರಡಿಸಿದೆ.!

ಕರ್ನಾಟಕ ಸರ್ಕಾರವು ಇತ್ತೀಚೆಗೆ ನಿವೃತ್ತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಸಂಬಂಧಿಸಿದ ಪಿಂಚಣಿ(Pension) ವ್ಯವಸ್ಥೆಯಲ್ಲಿ ಮಹತ್ವದ ತಿದ್ದುಪಡಿಗಳನ್ನು ಮಾಡಿದೆ. 7ನೇ ವೇತನ ಆಯೋಗದ (7th Pay Commission) ಶಿಫಾರಸಿನಂತೆ, ನಿವೃತ್ತಿ ವೇತನ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಿ, ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಪರಿಷ್ಕರಣೆಗಳಿಂದ ಸಾವಿರಾರು ನಿವೃತ್ತ ನೌಕರರು ಮತ್ತು ಅವರ ಕುಟುಂಬಗಳು ಲಾಭ ಪಡೆದುಕೊಳ್ಳುವ ಸಾಧ್ಯತೆ ಇದೆ. ಪಿಂಚಣಿ ಕುರಿತು ರಾಜ್ಯ ಸರ್ಕಾರ  ಹೊರಡಿಸಿದೆ ಆದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದೇಶದಲ್ಲಿ ಏನಿದೆ?:

ಈ ವಿಷಯಕ್ಕೆ ಸಂಬಂಧಿಸಿದಂತೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಎನ್‌ಪಿಎಸ್(NPS) ನೌಕರರ ಕುಟುಂಬ ಪಿಂಚಣಿ ಪರಿವರ್ತನೆಯ ಪ್ರಸ್ತಾವನೆಗಳನ್ನು ರಾಜ್ಯದ ಖಜಾನಗಳಿಂದ ಎನ್‌ಪಿಎಸ್ ಘಟಕಕ್ಕೆ ಸಲ್ಲಿಸುತ್ತಿರುವುದು ಸರಿಯಷ್ಟೇ. ಸದರಿ ಪ್ರಸ್ತಾವನೆಗಳಲ್ಲಿ ಡಿಡಿಓ(DDO) ಅವರು ಅಪೂರ್ಣ ಮಾಹಿತಿ ಹಾಗೂ ಅಪೂರ್ಣ ದಾಖಲೆಗಳನ್ನು ನೀಡುತ್ತಿದ್ದು, ಅವುಗಳನ್ನು ಗಮನಿಸದ ಖಜಾನಾಧಿಕಾರಿಗಳು ನೇರವಾಗಿ ಎನ್‌ಪಿಎಸ್ ಘಟಕಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಎನ್‌ಪಿಎಸ್ ಘಟಕದಲ್ಲಿ ಪ್ರಸ್ತಾವನೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸಾಧ್ಯವಾಗದೇ, ಪೂರಕ ದಾಖಲೆಗಳ ಕೊರತೆಯಿಂದ ಪ್ರಸ್ತಾವನೆಗಳನ್ನು ಹಿಂದಿರುಗಿಸಲಾಗುತ್ತಿದೆ.

ಪತ್ರದೊಂದಿಗೆ ಲಗತ್ತಿಸಲಾಗಿರುವ ಹೊಸ ಪರಿಶೀಲನಾ ಪಟ್ಟಿ ಯಂತೆ ದಾಖಲೆಗಳನ್ನು ಸಿದ್ಧಪಡಿಸಿ, ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿ, ಪರಿಶೀಲನಾ ಪಟ್ಟಿಯನ್ನು ಡಿಡಿಓಗಳಿಗೆ ನೀಡಬೇಕು. ಸದರಿ ಪರಿಶೀಲನಾ ಪಟ್ಟಿಯನ್ವಯ ಡಿಡಿಓ ರವರಿಂದ ಪ್ರಸ್ತಾವನೆ ಸ್ವೀಕರಿಸಿದ ನಂತರ ಖಜಾನಾಧಿಕಾರಿಗಳು ಪರಿಶೀಲಿಸಿ ತಮ್ಮ ಹಂತದಲ್ಲಿಯೇ ತಪ್ಪುಗಳನ್ನು ಸರಿಪಡಿಸಿ ಪ್ರಸ್ತಾವನೆಗಳನ್ನು ಎನ್‌ಪಿಎಸ್ ಘಟಕಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಪಿಂಚಣಿ ಕುರಿತು ಮಾಡಿರುವ ಪ್ರಮುಖ ತಿದ್ದುಪಡಿಗಳು:

ಕನಿಷ್ಠ ಪಿಂಚಣಿ ಹೆಚ್ಚಳ: ನಿವೃತ್ತ ಸರ್ಕಾರಿ ನೌಕರರ(Retired Government Employees) ಕನಿಷ್ಠ ಪಿಂಚಣಿಯನ್ನು ₹8,500ರಿಂದ ₹13,500ಕ್ಕೆ ಏರಿಸಲಾಗಿದೆ. ಇದು ನಿವೃತ್ತಿ ವೇತನ ಪಡೆಯುವ ನೌಕರರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಸಹಾಯಕವಾಗಲಿದೆ.
ಗರಿಷ್ಠ ಪಿಂಚಣಿ ಮಿತಿ: ಗರಿಷ್ಠ ನಿವೃತ್ತಿ ವೇತನವನ್ನು ₹75,300 ರಿಂದ ₹1,20,600 ಗೆ ಹೆಚ್ಚಿಸಲಾಗಿದೆ. ಈ ಪರಿಷ್ಕರಣೆ ರಾಜ್ಯದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ನೌಕರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.
ತುಟ್ಟಿ ಭತ್ಯೆ (DA) ವಿಲೀನ: 2022ರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ, 1%ರಿಂದ 5.5% ರಷ್ಟು ದರದ ತುಟ್ಟಿ ಭತ್ಯೆಯನ್ನು 2023ರಿಂದ ಲೆಕ್ಕಹಾಕಲಾಗಿದೆ. 2024ರಲ್ಲಿ 8.5% ಹೆಚ್ಚಳದ ಭತ್ಯೆ ನಿಗದಿಗೊಳಿಸಲಾಗಿದೆ.
ಕುಟುಂಬ ಪಿಂಚಣಿ: ಕುಟುಂಬದ ಪಿಂಚಣಿಯ ಕನಿಷ್ಠ ಮೊತ್ತವನ್ನು ₹13,500ಕ್ಕೆ ನಿಗದಿಪಡಿಸಲಾಗಿದೆ, ಇದು ಹಿಂದಿನ ಪಿಂಚಣಿಗಿಂತ ₹5,000 ಹೆಚ್ಚಾಗಿದೆ.
ಈ ಆದೇಶಗಳು ತಕ್ಷಣದ ಜಾರಿಯಾಗಲಿದ್ದು, ಮುಂದಿನ ತಿಂಗಳಿನಿಂದಲೇ ನಿವೃತ್ತ ನೌಕರರ ಬ್ಯಾಂಕ್ ಖಾತೆಗಳಿಗೆ ನೂತನ ಪಿಂಚಣಿಯನ್ನು ಕ್ರೆಡಿಟ್ ಮಾಡಲಾಗುತ್ತದೆ.

ಈ ಬದಲಾವಣೆಗಳು ನಿವೃತ್ತ ನೌಕರರ(Retired employees) ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ, ಹಾಗೂ ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!