ಇಂಧನ ದರದಲ್ಲಿ ಏರಿಳಿತ: ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಮಾಹಿತಿ ಹೀಗಿದೆ
ಇಂದಿನ ಕಾಲಘಟ್ಟದಲ್ಲಿ ಇಂಧನವು ಆಧುನಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿ ದಿನದ ಚಟುವಟಿಕೆಗಳು, ವ್ಯಾಪಾರ, ರೈತ ಕೃಷಿ ಕೆಲಸ, ಸಂಚಾರ ಎಲ್ಲವೂ ಪೆಟ್ರೋಲ್ ಮತ್ತು ಡೀಸೆಲ್ (Petrol and Diesel) ಮೇಲೆ ಬಹುಮಟ್ಟಿಗೆ ಅವಲಂಬಿತವಾಗಿವೆ. ಇಂಧನ ದರದಲ್ಲಿ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ (International market) ಪರಿಸ್ಥಿತಿಗಳು, ಕಚ್ಚಾ ತೈಲದ ದರದ ಏರಿಳಿತ, ಸರಬರಾಜು ಮತ್ತು ಬೇಡಿಕೆ ಇತ್ಯಾದಿ ಅಂಶಗಳು ಇದರ ಮೇಲೆ ಪ್ರಭಾವ ಬೀರುತ್ತವೆ. ಹಾಗಿದ್ದರೆ ಇಂದಿನ ಇಂಧನ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಬಳಕೆ ತೀವ್ರವಾಗಿ ಹೆಚ್ಚಾದರೂ, ಪೆಟ್ರೋಲ್ ಮತ್ತು ಡೀಸೆಲ್‌ನ ಅವಶ್ಯಕತೆ ಇಂದಿಗೂ ಅತಿ ಹೆಚ್ಚು. ಹಾಗಾಗಿ ಇಂಧನದ ದರದಲ್ಲಿ ನಡೆಯುವ ಸಣ್ಣ ಸಣ್ಣ ಬದಲಾವಣೆಗಳು ಸಹ ಸಾರ್ವಜನಿಕ ಜೀವನಕ್ಕೆ ಪ್ರಭಾವ ಬೀರುತ್ತವೆ. ಫೆಬ್ರವರಿ 24ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ (Petrol and diesel rate) ಸ್ವಲ್ಪ ಮಟ್ಟಿನ ಇಳಿಕೆಯಾಗಿದ್ದು, ಕೆಲವು ಜಿಲ್ಲೆಗಳಲ್ಲಿ ತುಸು ಏರಿಕೆಯಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ, ಫೆಬ್ರವರಿ 24ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿವೆ:
ಪ್ರಮುಖ ನಗರಗಳ ಪೆಟ್ರೋಲ್ ದರ:
ಬೆಂಗಳೂರು: ₹102.92
ಚೆನ್ನೈ: ₹100.80
ಮುಂಬೈ: ₹103.50
ಪ್ರಮುಖ ನಗರಗಳ ಡೀಸೆಲ್ ದರ:
ಬೆಂಗಳೂರು: ₹88.99
ಚೆನ್ನೈ: ₹92.39
ಮುಂಬೈ: ₹90.03
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ (Other district) ಪೆಟ್ರೋಲ್ ಮತ್ತು ಡೀಸೆಲ್ ದರ:
ಕರ್ನಾಟಕದ ವಿವಿಧ ಜಿಲ್ಲೆಗಳ ಪೆಟ್ರೋಲ್ ದರ (ಲೀಟರ್‌ಗೆ₹):
ಬಾಗಲಕೋಟೆ – ₹103.69 (30 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ – ₹103.03 (21 ಪೈಸೆ ಇಳಿಕೆ)
ಬೆಳಗಾವಿ – ₹103.54 (5 ಪೈಸೆ ಇಳಿಕೆ)
ಬಳ್ಳಾರಿ – ₹104.00 (9 ಪೈಸೆ ಇಳಿಕೆ)
ಬೀದರ್ – ₹103.76 (32 ಪೈಸೆ ಇಳಿಕೆ)
ವಿಜಯಪುರ – ₹103.01 (9 ಪೈಸೆ ಇಳಿಕೆ)
ಚಾಮರಾಜನಗರ – ₹103.09 (17 ಪೈಸೆ ಇಳಿಕೆ)
ಚಿಕ್ಕಮಗಳೂರು – ₹104.08
ಚಿತ್ರದುರ್ಗ – ₹104.14
ದಾವಣಗೆರೆ – ₹104.14
ಧಾರವಾಡ – ₹102.84 (17 ಪೈಸೆ ಏರಿಕೆ)
ಕಲಬುರಗಿ – ₹103.45 (4 ಪೈಸೆ ಏರಿಕೆ)
ಹಾಸನ – ₹102.90 (46 ಪೈಸೆ ಇಳಿಕೆ)
ಮಂಡ್ಯ – ₹102.86 (10 ಪೈಸೆ ಏರಿಕೆ)
ಮೈಸೂರು – ₹102.71 (5 ಪೈಸೆ ಇಳಿಕೆ)
ತುಮಕೂರು – ₹104.14 (83 ಪೈಸೆ ಏರಿಕೆ)
ಉಡುಪಿ – ₹103.40 (41 ಪೈಸೆ ಇಳಿಕೆ)
ಶಿವಮೊಗ್ಗ – ₹104.23
ಕರ್ನಾಟಕದ ವಿವಿಧ ಜಿಲ್ಲೆಗಳ ಡೀಸೆಲ್ ದರ (ಲೀಟರ್‌ಗೆ ₹):
ಬಾಗಲಕೋಟೆ – ₹89.71
ಬೆಂಗಳೂರು ನಗರ – ₹88.99
ಬೆಂಗಳೂರು ಗ್ರಾಮಾಂತರ – ₹89.10
ಬೆಳಗಾವಿ – ₹89.59
ಬಳ್ಳಾರಿ – ₹90.20
ಬೀದರ್ – ₹89.78
ವಿಜಯಪುರ – ₹89.10
ಚಾಮರಾಜನಗರ – ₹89.15
ಚಿಕ್ಕಮಗಳೂರು – ₹90.01
ಚಿತ್ರದುರ್ಗ – ₹90.24
ಧಾರವಾಡ – ₹80.94
ಕಲಬುರಗಿ – ₹89.50
ಹಾಸನ – ₹88.79
ಹಾವೇರಿ – ₹89.98
ಮೈಸೂರು – ₹88.80
ತುಮಕೂರು – ₹89.96
ಉಡುಪಿ – ₹88.48
ಶಿವಮೊಗ್ಗ – ₹90.29
ಪೆಟ್ರೋಲ್, ಡೀಸೆಲ್ ದರ ಏರಿಳಿತಕ್ಕೆ ಕಾರಣವೇನು?:
ಅಂತರಾಷ್ಟ್ರೀಯ ತೈಲ ಬೆಲೆಗಳು (International oil prices) :
ಕಚ್ಚಾ ತೈಲದ ಮಾರುಕಟ್ಟೆಯಲ್ಲಿ ನಡೆಯುವ ಬದಲಾವಣೆಗಳು ಇಂಧನ ದರದ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ.
ರೂಪಾಯಿ-ಡಾಲರ್ ವಿನಿಮಯ ದರ:
ರೂಪಾಯಿ ಬೆಲೆ ಕಡಿಮೆಯಾಗಿದರೆ, ತೈಲದ ದರವೂ ಹೆಚ್ಚಾಗಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ (Central and state government) ತೆರಿಗೆ:
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರದ ಅವಲಂಬನೆಯು ಪ್ರತಿ ರಾಜ್ಯದಲ್ಲಿ ದರವನ್ನು ವಿಭಿನ್ನವಾಗಿಸುತ್ತದೆ.
ಪ್ರಾದೇಶಿಕ ಸಾರಿಗೆ ಮತ್ತು ಡೀಲರ್ ಮಾರ್ಜಿನ್ (Dealer margin) :
ಪ್ರತಿ ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್‌ಗಳಿಗೆ ತಲುಪಿಸುವ ಖರ್ಚು ಬೇರೆ ಬೇರೆ ಇರುವುದರಿಂದ ದರ ವ್ಯತ್ಯಾಸ ಕಂಡುಬರುತ್ತದೆ.
ಈ ಇಂಧನ ದರ ಏರಿಳಿತವು ಸಾಮಾನ್ಯ ಜನರಿಗೆ, ವಾಹನ ಚಾಲಕರಿಗೆ ಹಾಗೂ ಉದ್ಯಮಗಳಿಗೆ ನೇರ ಪರಿಣಾಮ ಉಂಟುಮಾಡುತ್ತದೆ. ದರ ಹೆಚ್ಚಾದಾಗ ಸಾರಿಗೆ ದರಗಳು, ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಬಹುದು. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿದಂತೆ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯ ಮೇಲೆ ಪರಿಣಾಮ ಬೀಳಬಹುದು. ಆದರೆ ಈ ಮಾರುಕಟ್ಟೆ (market) ತಕ್ಷಣದ ಬದಲಾವಣೆಗೆ ಸಿದ್ಧವಿಲ್ಲ. ಹೀಗಾಗಿ ಇಂಧನದ ದರದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಿರುವುದು ಅವಶ್ಯಕ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಸ್ವಲ್ಪ ಮಟ್ಟಿನ ಇಳಿಕೆ (Increased) ಕಂಡುಬಂದಿದೆ. ಈ ಬದಲಾವಣೆ ಜನಸಾಮಾನ್ಯರ ಖರ್ಚು ನಿರ್ವಹಣೆಗೆ ಸಹಾಯವಾಗಬಹುದು. ಆದರೆ ಇಂಧನ ದರಗಳ ಮೇಲಿನ ಏರಿಳಿತವು ಅಂತರಾಷ್ಟ್ರೀಯ ಮಾರುಕಟ್ಟೆ, ಸರ್ಕಾರದ ನೀತಿ, ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ದರಗಳಲ್ಲಿ ಇನ್ನಷ್ಟು ಬದಲಾವಣೆಗಳು ಆಗಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.