ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಒಂದು ದಿನದಲ್ಲಿ ಯುಪಿಐ(UPI) ಮೂಲಕ ಎಷ್ಟು ಹಣವನ್ನು ವರ್ಗಾಯಿಸಬಹುದು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ದೈನಂದಿನ ಜೀವನದಲ್ಲಿ ಎಲ್ಲರೂ ಯುಪಿಐ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಿರುತ್ತಾರೆ, ಆದರೆ ನಾವು 24 ಗಂಟೆಗಳಲ್ಲಿ ಎಷ್ಟು ಗರಿಷ್ಟ ಹಣವನ್ನು ವರ್ಗಾವಣೆ ಮಾಡಬಹುದು? ಇದರ ಮಿತಿ ಎಷ್ಟಿದೆ?, ಒಂದು ಖಾತೆಯಿಂದ ಎಷ್ಟು ಬಾರಿ ಹಣವನ್ನು ವರ್ಗಾವಣೆ ಮಾಡಬಹುದು?, ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಗಳಲ್ಲಿ ಎಷ್ಟು ಹಣವನ್ನು ದಿನಕ್ಕೆ ವರ್ಗಾವಣೆ ಮಾಡಬಹುದು? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಒಂದು ದಿನದಲ್ಲಿ UPI ಬಳಸಿ ನೀವು ವರ್ಗಾಯಿಸಬಹುದಾದ ಗರಿಷ್ಠ ಮೊತ್ತ: Know The Maximum Amount You Can Transfer Using UPI In A Day:
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸಿಕೊಂಡು ವಹಿವಾಟುಗಳನ್ನು ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ ಅಲ್ಲದೆ ಇದು ಸುಲಭವು ಆಗಿದೆ. ನಿಮ್ಮ UPI ಐಡಿಯನ್ನು ಬಳಸುವ ಮೂಲಕ ನೀವು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು, ಇದು ನಿಮ್ಮ ಕೈಯಲ್ಲಿ ಹಣವಿಲ್ಲದಿರುವಾಗ ಅಥವಾ ಅದನ್ನು ನಿಭಾಯಿಸಲು ಬಯಸದಿದ್ದಾಗ, ಈ ಯುಪಿಐ ಸಹಾಯ ಮಾಡುತ್ತದೆ. ದಿನಸಿ ವಸ್ತುಗಳನ್ನು ಖರೀದಿಸುವುದರಿಂದ ಹಿಡಿದು ವಿದ್ಯುತ್ ಬಿಲ್ಗಳನ್ನು ಪಾವತಿಸುವವರೆಗೆ ನಮಗೆ ಈ ಯುಪಿಐ ಬಳಕೆಯಲ್ಲಿ ಬರುತ್ತದೆ. ಮತ್ತು ಈಗ ಬಹುತೇಕ ಎಲ್ಲಿಯಾದರೂ ಸ್ವೀಕರಿಸಲಾಗಿದೆ. ಆದರೂ , ನೀವು ವರ್ಗಾವಣೆ ಮಾಡಬಹುದಾದ ಮೊತ್ತ ಮತ್ತು UPI ಮೂಲಕ ನೀವು ಮಾಡಬಹುದಾದ ವಹಿವಾಟುಗಳ ಸಂಖ್ಯೆಯ ಮೇಲೆ ಕೆಲವು ಮಿತಿಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಅವಶ್ಯವಾಗಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಪ್ರಕಾರ, ಒಬ್ಬ ವ್ಯಕ್ತಿಯು ಒಂದೇ ದಿನದಲ್ಲಿ ಯುಪಿಐ ಮೂಲಕ 1 ಲಕ್ಷದವರೆಗೆ ವರ್ಗಾಯಿಸಬಹುದು.
Google Pay, Paytm ಮತ್ತು PhonePe ಯುಪಿಐ ವಹಿವಾಟುಗಳನ್ನು ಮಾಡಲು ಸಾಮಾನ್ಯವಾಗಿ ಬಳಸುವ ಕೆಲವು ಅಪ್ಲಿಕೇಶನ್ಗಳಾಗಿವೆ. ಈ ಪ್ಲಾಟ್ಫಾರ್ಮ್ಗಳು ವಿವಿಧ ಗರಿಷ್ಠ ಮಿತಿಗಳನ್ನು ಹೊಂದಿದ್ದು, ಪಾವತಿ ವ್ಯವಸ್ಥೆಯನ್ನು ಬಳಸಿಕೊಂಡು ನೀವು ಹಣವನ್ನು ವರ್ಗಾಯಿಸಬಹುದಾಗಿದೆ. ಹೀಗೆ ಹಣದ ವಹಿವಾಟು ಮಾಡುವಾಗ, NPCI( ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ) ಮೂರು ವಿಭಿನ್ನ ಮಿತಿಗಳನ್ನು ನಿಗದಿಪಡಿಸಿದೆ.
ಎನ್ಪಿಸಿಐ (NPCI)ಯ ಮೂರು ವಿಭಿನ್ನ ಮಿತಿಗಳು :
- ನೀವು ಎಷ್ಟು ಗರಿಷ್ಠ ಹಣವನ್ನು ವಹಿವಾಟು ಮಾಡಬಹುದು?
- ಒಂದೇ ಬಾರಿಗೆ ಎಷ್ಟು ಹಣದ ವಹಿವಾಟು ಮಾಡಬಹುದು?
- ಒಂದು ದಿನದಲ್ಲಿ ಒಟ್ಟು ಎಷ್ಟು ವಹಿವಾಟುಗಳನ್ನು ಮಾಡಬಹುದು?
UPI ಮೂಲಕ, ನೀವು 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ಹಣವನ್ನು ವಹಿವಾಟು ಮಾಡಬಹುದು. ನೀವು UPI ಅಪ್ಲಿಕೇಶನ್ ಅನ್ನು ಬಳಸಿದರೆ, ನೀವು ಒಂದು ದಿನದಲ್ಲಿ ಗರಿಷ್ಠ 2 ಲಕ್ಷ ರೂಪಾಯಿ ವಹಿವಾಟು ಮಾಡಬಹುದು. ಮತ್ತೊಂದೆಡೆ, ನೀವು BHIM UPI ಅಪ್ಲಿಕೇಶನ್ ಅನ್ನು ಬಳಸಿದರೆ, ನೀವು ಗರಿಷ್ಠ 1 ಲಕ್ಷದವರೆಗೆ ವಹಿವಾಟು ಮಾಡಬಹುದು.
ಬ್ಯಾಂಕ್ ಪ್ರಕಾರ ಯುಪಿಐ ಮಿತಿಗಳು:
ಬ್ಯಾಂಕ್ಗಳ ಪ್ರಕಾರ UPI ಮಿತಿಯನ್ನು ತಿಳಿಯುವುದು ಅತ್ಯಂತ ಅವಶ್ಯಕವಾಗಿದೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಒಂದು ದಿನದಲ್ಲಿ UPI ಮೂಲಕ 1 ಲಕ್ಷ ರೂ.ಗಳನ್ನು ವರ್ಗಾಯಿಸಲು ಅನುಮತಿಯನ್ನು ನೀಡಿದೆ. ಇದರೊಂದಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ಗಳ ಗ್ರಾಹಕರು ಸಹ ದಿನಕ್ಕೆ 1 ಲಕ್ಷ ರೂ.ಗಳ ವಹಿವಾಟು ನಡೆಸಬಹುದು. ಮತ್ತೊಂದೆಡೆ, HDFC ಬ್ಯಾಂಕ್, ICICI ಬ್ಯಾಂಕ್ ಗ್ರಾಹಕರು UPI ಮೂಲಕ ಒಂದು ದಿನದಲ್ಲಿ ಗರಿಷ್ಠ 10 ವಹಿವಾಟುಗಳನ್ನು ಮಾಡಬಹುದು.
ಅಮೆಜಾನ್ ಪೇನ ಗರಿಷ್ಠ ಮಿತಿ :
ಅಮೆಜಾನ್ ಪೇ ಯುಪಿಐ ಮೂಲಕ ಒಂದು ದಿನದಲ್ಲಿ 1 ಲಕ್ಷ ರೂಪಾಯಿವರೆಗೂ ವಹಿವಾಟನ್ನು ನಡೆಸಬಹುದಾಗಿದೆ. ಆದರೆ, ನೋಂದಾಯಿಸಿದ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5000 ರೂಗಳನ್ನು ಮಾತ್ರ ವರ್ಗಾವಣೆ ಮಾಡಬಹುದು.
ಗೂಗಲ್ ಪೇನ ಗರಿಷ್ಠ ಮಿತಿ :
ಗೂಗಲ್ ಪೇ ಯುಪಿಐ ಮೂಲಕ ಒಂದು ದಿನದಲ್ಲಿ 1 ಲಕ್ಷ ರೂಪಾಯಿವರೆಗೂ ವಹಿವಾಟನ್ನು ನಡೆಸಬಹುದಾಗಿದೆ. ಆದರೆ ಎಲ್ಲಾ ಯುಪಿಐ ಅಪ್ಲಿಕೇಶನ್ಗಳಲ್ಲಿ ಒಬ್ಬರು ದಿನಕ್ಕೆ 10 ಬಾರಿ ಮಾತ್ರ ಹಣವನ್ನು ವರ್ಗಾವಣೆ ಮಾಡಬಹುದು.
ಪೇಟಿಎಂನ ಗರಿಷ್ಠ ಮಿತಿ :
ಪೇಟಿಎಂ ಯುಪಿಐ ಮೂಲಕ ಒಂದು ದಿನದಲ್ಲಿ 1 ಲಕ್ಷ ರೂಪಾಯಿವರೆಗೂ ವಹಿವಾಟನ್ನು ನಡೆಸಬಹುದಾಗಿದೆ. ಅಷ್ಟೇ ಅಲ್ಲದೆ ಪೇಟಿಎಂ ಮೂಲಕ ಒಂದು ಗಂಟೆಗೆ 20,000ರೂಗಳ ವಹಿವಾಟನ್ನು ನಡೆಸಬಹುದಾಗಿದೆ. ಆದರೆ ಎಲ್ಲಾ ಯುಪಿಐ ಅಪ್ಲಿಕೇಶನ್ಗಳಲ್ಲಿ ಒಬ್ಬರು ದಿನಕ್ಕೆ 20 ಬಾರಿ ಮಾತ್ರ ಹಣವನ್ನು ವರ್ಗಾವಣೆ ಮಾಡಬಹುದು.
ಫೋನ್ ಪೇನ ಗರಿಷ್ಠ ಮಿತಿ :
ವ್ಯಕ್ತಿಯು ಹಣವನ್ನು ವರ್ಗಾಯಿಸುವ ಬ್ಯಾಂಕ್ ಖಾತೆಯ ಆಧಾರದ ಮೇಲೆ, ಫೋನ್ ಪೇ ಯುಪಿಐ ಮೂಲಕ ಒಂದು ದಿನದಲ್ಲಿ ಒಂದು ಲಕ್ಷದವರೆಗೂ ವಹಿವಾಟು ನಡೆಸಬಹುದಾಗಿದೆ. ಈ ಅಪ್ಲಿಕೇಶನ್ ಗೆ ದೈನಂದಿಕ ವರ್ಗಾವಣೆಯು ಕೂಡ ಬಳಸುವ ಬ್ಯಾಂಕ್ ಖಾತೆಯ ಮೇಲೆ ನಿರ್ಧರಿಸಲಾಗುತ್ತದೆ.
ಹೀಗೆ ಯುಪಿಐ ಮೂಲಕ ವಹಿವಾಟುಗಳಲ್ಲಿ ಬೆಳವಣಿಗೆಯನ್ನು ನೋಡುತ್ತಿರುವ ಈ ಸಮಯದಲ್ಲಿ, ಈ ಮೇಲಿನ ಗರಿಷ್ಠ ವರ್ಗಾವಣೆಯ ಮಿತಿಯನ್ನು ನೀವು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಆದರಿಂದ ಈ ಮುಖ್ಯವಾದ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ಈ ಲೇಖನವನ್ನು ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಯುಪಿಐ ಬಳಸುತ್ತಿರುವ ಎಲ್ಲಾ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳು
- SSP ಸ್ಕಾಲರ್ಶಿಪ್ : Click Here
- ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
- ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
- ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
- ಎಚ್ಡಿಎಫ್ಸಿ ಬಡ್ತೆ ಕದಂ: Click Here
- ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
- ವಿದ್ಯಾಸಿರಿ ಸ್ಕಾಲರ್ಶಿಪ್: Click Here
- ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
- ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
- ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
- ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
- ಜಿಂದಾಲ್ ಸ್ಕಾಲರ್ಶಿಪ್ 2022: Click Here
- SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/
ಇದನ್ನೂ ಓದಿ:
IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನೀ ವೀರ್ ವಾಯು ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ
25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022