ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿ ತರುವ ಸರಕಾರದ ಹೊಸ ಯೋಜನೆಗಳು , ಹೌದು ಬಿಪಿಎಲ್ ಕುಟುಂಬಗಳಿಗೆ ಪಿಎಂ ಆವಾಸ್ ಮತ್ತು ಉಜ್ವಲ ಯೋಜನೆಯ ದ್ವಾರಿ ತೆರೆದಿದೆ. ಕೇಂದ್ರ ಸರ್ಕಾರ ಬಡವರಿಗೆ ಆರ್ಥಿಕ ಸ್ವಾವಲಂಬನವನ್ನು ನೀಡಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ ಘೋಷಿಸಿದ ಪಿಎಂ ಆವಾಸ್ ಯೋಜನೆ (PMAY) ಹಾಗೂ ಪಿಎಂ ಉಜ್ವಲ ಯೋಜನೆ (PMUY) ಬಿಪಿಎಲ್ ಕಾರ್ಡ್ (BPL card) ಹೊಂದಿದವರಿಗೆ ಸ್ವಂತ ಮನೆ (Own house) ಹಾಗೂ ಉಚಿತ ಎಲ್‌ಪಿಜಿ ಗ್ಯಾಸ್ (free lpg gas) ನೀಡುವ ಮಹತ್ತರ ಅವಕಾಶ ಒದಗಿಸುತ್ತವೆ. ಈ ಯೋಜನೆಗಳ ವಿಶೇಷತೆ ಏನು? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು? ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಆವಾಸ್ ಯೋಜನೆ – ಸ್ವಂತ ಮನೆಯ ಕನಸು ನನಸು:
ಬಡವರ ಮನೆಯಲ್ಲಿ ಕೂಡ ಆಕರ್ಷಕ ಹಾಗೂ ಸುರಕ್ಷಿತ ವಾಸಸ್ಥಳವಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಮೂರು ಕೋಟಿ ಹೊಸ ಮನೆಗಳ ಗುರಿ ಹೊಂದಿದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ₹2.67 ಲಕ್ಷ ವರೆಗೆ ಹಣಕಾಸು ಸಹಾಯ ನೀಡಲಾಗುವುದು.
ಅರ್ಹತೆ ಮತ್ತು ಸೌಲಭ್ಯಗಳು:
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಮಾತ್ರ ಲಭ್ಯ.
ಹಳ್ಳಿಗಳಲ್ಲಿಯೂ ಹಾಗು ನಗರ ಪ್ರದೇಶದಲ್ಲಿಯೂ ಮನೆಯ ನಿರ್ಮಾಣಕ್ಕೆ ಸಹಾಯ.
ಹೆಚ್ಚುವರಿ ಹಣ ಬೇಕಾದರೆ, ಕಡಿಮೆ ಬಡ್ಡಿದರದಲ್ಲಿ ₹10 ಲಕ್ಷ ವರೆಗೆ ಗೃಹ ಸಾಲ.
ಸ್ವಂತ ಭೂಮಿ ಇರುವವರು ಅಥವಾ ಹೊಸ ಮನೆ ನಿರ್ಮಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಹತ್ತಿರದ ಆನ್‌ಲೈನ್ ಸೇವಾ ಕೇಂದ್ರ ಅಥವಾ PMAY ಅಧಿಕೃತ ವೆಬ್‌ಸೈಟ್ https://www.pmaymis.gov.in/ ಅನ್ನು ಬಳಸಬಹುದು.
ಪಿಎಂ ಉಜ್ವಲ ಯೋಜನೆ – ಉಚಿತ ಗ್ಯಾಸ್ ಸಂಪರ್ಕ:
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಗ್ಯಾಸ್ (LPG gas) ಸಂಪರ್ಕ ಮತ್ತು ₹300 ಸಬ್ಸಿಡಿ(Subsidy) ದೊರೆಯಲಿದೆ. ಇದರಿಂದ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ ₹500-₹600 ಆಗಿ ಕಡಿಮೆಯಾಗಲಿದೆ. ಈ ಯೋಜನೆಯಡಿ ಸ್ಟೌ (Stove) ಕೂಡ ಉಚಿತವಾಗಿ ಒದಗಿಸಲಾಗುತ್ತದೆ.
ಯಾರು ಅರ್ಹರು?
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಬ್ಯಾಂಕ್ ಖಾತೆ ಹೊಂದಿರಬೇಕು.
ಆಧಾರ್ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು.
ಅರ್ಜಿಗೆ ಅಗತ್ಯವಿರುವ ದಾಖಲೆಗಳು:
ಬಿಪಿಎಲ್ ರೇಷನ್ ಕಾರ್ಡ್ (BPL card)
ಆಧಾರ್ ಕಾರ್ಡ್ (Adhar card)
ಬ್ಯಾಂಕ್ ಪಾಸ್‌ಬುಕ್ (Bank passbook)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ(caste and income certificate)
ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ (recent passport size photo)
ನೋಂದಾಯಿತ ಮೊಬೈಲ್ ಸಂಖ್ಯೆ (registered mobile number)
ಕೊನೆಯದಾಗಿ ಹೇಳುವುದಾದರೆ,ಈ ಅವಕಾಶ ಕೈ ತಪ್ಪಿಸಿಕೊಳ್ಳಬೇಡಿ, ಬಡ ಕುಟುಂಬಗಳ ಬದುಕಿಗೆ ಬೆಳಕು ತರಲಿರುವ ಈ ಯೋಜನೆಗಳು ನಿಮ್ಮ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಹೀಗಾಗಿ, ಅರ್ಹರಾಗಿರುವವರು ತಕ್ಷಣವೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಹಾಗೂ ಉಚಿತ ಎಲ್‌ಪಿಜಿ ಗ್ಯಾಸ್ ಪಡೆದುಕೊಳ್ಳಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.