ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Scheme) ಹೆಚ್ಚಿಸಿದ ಹಣದ ಮೊತ್ತ, ಸ್ಕೀಮ್ ನ ಮಾಹಿತಿ ಹೀಗಿದೆ!
ರೈತರಿಗೆ ಪಿಎಂ ಕಿಸಾನ್ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು, ಇದು ರೈತರ ಆರ್ಥಿಕತೆಗೆ (economic) ಬಹಳ ಸಹಾಯ ಮಾಡಿದೆ. ರೈತರು ಈ ಒಂದು ಯೋಜನೆಯಿಂದ ಹಲವಾರು ಉಪಯೋಗಗಳನ್ನು ಪಡೆದುಕೊಂಡು ತಮ್ಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಈ ಪಿಎಂ ಕಿಸಾನ್ ಯೋಜನೆಯು ಪ್ರತಿ ವರ್ಷ ಇಂತಿಷ್ಟು ಸಹಾಯ ಧನವನ್ನು ರೈತರಿಗೆ ನೀಡುತ್ತಿದ್ದು, ಇದೀಗ ಈ ಯೋಜನೆಯಲ್ಲಿ ಹಣದ ಮೊತ್ತವನ್ನು ಹೆಚ್ಚಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಜಮೀನು ಹೊಂದಿರುವ ಕೃಷಿಕರಿಗೆ ಧನ ಸಹಾಯ ಒದಗಿಸಲಾಗುತ್ತದೆ. ವರ್ಷಕ್ಕೆ ಮೂರು (three instalments in a year) ಕಂತುಗಳಲ್ಲಿ ತಲಾ ಎರಡು ಸಾವಿರ (2,000) ರೂನಂತೆ ಒಟ್ಟು ಆರು ಸಾವಿರ ರೂಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ(accounts) ನೇರವಾಗಿ ಒದಗಿಸುತ್ತದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಹೆಚ್ಚಿಸಿದ ಹಣದ ಮೊತ್ತ :
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಅನುದಾನ ಹೆಚ್ಚಿಸುವ ಸಾಧ್ಯತೆ ಇದ್ದು, ಸ್ಕೀಮ್ ನಲ್ಲಿ ಈಗ ವರ್ಷಕ್ಕೆ 6,000 ರೂ ನೀಡಲಾಗುತ್ತಿದ್ದು, ಅದನ್ನು 8,000 ರೂ.ಗೆ ಹೆಚ್ಚಿಸಲು ಸರ್ಕಾರ ಯೋಜಿಸಿರುವುದು ತಿಳಿದು ಬಂದಿದೆ. ಈಗ ಪ್ರತೀ ನಾಲ್ಕು ತಿಂಗಳಿಗೊಮ್ಮೆ, ಅಂದರೆ ವರ್ಷದಲ್ಲಿ ಮೂರು ಬಾರಿ ತಲಾ 2,000 ರೂನ ಕಂತುಗಳಲ್ಲಿ ರೈತರಿಗೆ ಹಣ ಕೊಡಲಾಗುತ್ತಿದೆ. 2019ರಲ್ಲಿ ಆರಂಭವಾದ ಈ ಸ್ಕೀಮ್ ನಲ್ಲಿ ಈವರೆಗೆ ತಲಾ ಎರಡು ಸಾವಿರ ರೂಗಳಂತೆ 17 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಕಂತುಗಳ ಸಂಖ್ಯೆಯನ್ನು ಎಂಟು ಸಾವಿರ ರೂಗೆ ಹೆಚ್ಚಿಸಬಹುದು ಎನ್ನುವಂತಹ ಸುದ್ದಿ ತಿಳಿದು ಬಂದಿದೆ.
ಪಿಎಂ ಕಿಸಾನ್ ಯೋಜನೆ ಕಂತು ಹೆಚ್ಚಿಸಲು ಶಿಫಾರಸು ಮಾಡಲಾಗಿದೆ :
ಇತ್ತೀಚೆಗೆ ಕೃಷಿ ಕ್ಷೇತ್ರದ ತಜ್ಞರು, ಪ್ರತಿನಿಧಿಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಜೊತೆ ಈ ವಿಚಾರವನ್ನು ಚರ್ಚಿಸಿ ಮನವಿ ಕೂಡ ಮಾಡಿದ್ದಾರೆ. ಕೃಷಿ ಸಚಿವಾಲಯ ಕೂಡ ಪಿಎಂ ಕಿಸಾನ್ ಯೋಜನೆ ಕಂತು ಹೆಚ್ಚಿಸಲು ಶಿಫಾರಸು ಮಾಡಿರುವುದು ತಿಳಿದುಬಂದಿದೆ. ಈ ಬಾರಿ ಕೃಷಿ ಸಚಿವರಾಗಿರುವುದು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj sing chuahan). ಇದೇ ವೇಳೆ ಪಿಎಂ ಕಿಸಾನ್ ಯೋಜನೆಗೆ ಅನುದಾನ ಹೆಚ್ಚಿಸುವುದಷ್ಟೇ ಅಲ್ಲ, ಬಜೆಟ್ ನಲ್ಲಿ ಕೃಷಿ ಸಂಶೋಧನೆಗೆ ಇರುವ ಅನುದಾನವನ್ನೂ ಹೆಚ್ಚಿಸಬೇಕು ಎಂದು ಕೃಷಿ ಕ್ಷೇತ್ರದವರು ಒತ್ತಾಯಿಸುತ್ತಿದ್ದಾರೆ.
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವ ವಿಧಾನ (Application steps) :
ಕೃಷಿ ಜಮೀನು ಹೊಂದಿದ್ದು, ಈ ಸ್ಕೀಮ್ ಗೆ ನೋಂದಾಯಿಸಿಕೊಳ್ಳದವರಿಗೆ ಈಗಲೂ ಅವಕಾಶ ಇದೆ. ಪಿಎಂ ಕಿಸಾನ್ ಯೋಜನೆಯ ವೆಬ್ ಸೈಟ್ ಮುಖಾಂತರ ನೊಂದಾಯಿಸಬಹುದು. ಅಥವಾ ನಿಮ್ಮ ಗ್ರಾಮ ಸಮೀಪದ ರೈತ ಕೇಂದ್ರಗಳಿಗೆ ಭೇಟಿ ನೀಡಿ, ನೋಂದಾಯಿಸಿಕೊಳ್ಳಬಹುದು.
ಪಿಎಂ ಕಿಸಾನ್ ಯೋಜನೆ ವೆಬ್ ಸೈಟ್ ಮೂಲಕ ರಿಜಿಸ್ಟರ್ ವಿಧಾನ (registration steps) :
ಪಿಎಂ ಕಿಸಾನ್ ಯೋಜನೆಯ ವೆಬ್ ಸೈಟ್ ವಿಳಾಸ: pmkisan.gov.in/ ಮುಖ್ಯಪುಟದಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಫಾರ್ಮರ್ಸ್ ಕಾರ್ನರ್ ಗೆ ಭೇಟಿ ನೀಡಿ.
ನಂತರ ಅಲ್ಲಿ ‘ನ್ಯೂ ಫಾರ್ಮರ್ ರಿಜಿಸ್ಟ್ರೇಶನ್’ ಅನ್ನು ಕ್ಲಿಕ್ ಮಾಡಿ.
ಇಲ್ಲಿ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು. ಹಾಗೆಯೇ ರಾಜ್ಯವನ್ನು ಆಯ್ಕೆ ಮಾಡಿ, ನಂತರ ಒಟಿಪಿ ಪಡೆದು
ಈ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಅಭ್ಯರ್ಥಿಯ ಹೆಸರು, ಭೂಮಿಯ ವಿವರ, ಪಹಣಿಯ ಪ್ರತಿ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು. ನಂತರ ಸೇವ್ ಕ್ಲಿಕ್ ಮಾಡಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.