PM Kisan – ಪಿಎಂ ಕಿಸಾನ್ 19ನೇ ಕಂತಿನ 2000/- ರೂಪಾಯಿ ನಾಳೆ ಜಮಾ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

IMG 20250223 WA0006

WhatsApp Group Telegram Group

ಮಧ್ಯವರ್ತಿಗಳಿಲ್ಲದೆ ನೇರ ಲಾಭ: ಡಿಬಿಟಿ ಮೂಲಕ 9.8 ಕೋಟಿ ರೈತರ ಬ್ಯಾಂಕ್ ಖಾತೆಗೆ ಪಿಎಂ-ಕಿಸಾನ್ ನಿಧಿ ವರ್ಗಾವಣೆ

ದೇಶದ ಕೋಟಿ ಕೋಟಿ ರೈತರಿಗೆ ತಲುಪುವ ಮಹತ್ವದ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ (Central government) ತೆಗೆದುಕೊಂಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 19ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 24ರಂದು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT) ಮೂಲಕ 22,000 ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ರೈತರಿಗೆ ನಿರಂತರ ಆರ್ಥಿಕ ಬೆಂಬಲ ನೀಡುತ್ತಿರುವ ಪಿಎಂ-ಕಿಸಾನ್ ಯೋಜನೆ:

ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2019ರಲ್ಲಿ ಪಿಎಂ-ಕಿಸಾನ್ ಯೋಜನೆಯನ್ನು (PM Kisan scheme) ಆರಂಭಿಸಿತು. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ಒದಗಿಸಲಾಗುತ್ತದೆ, ಇದನ್ನು ಪ್ರತಿ ನಾಲ್ಕು ತಿಂಗಳಿಗೆ ₹2,000ರೂಪಾಯಿಗಳಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈ ರೀತಿಯಾಗಿ, ರೈತರ(Farmers) ದಿನನಿತ್ಯದ ಖರ್ಚು ನಿರ್ವಹಣೆಗೆ, ಕೃಷಿ ಉಪಕರಣಗಳ ಖರೀದಿಗೆ, ಬೀಜ ಮತ್ತು ರಸಗೊಬ್ಬರಗಳ ಖರೀದಿಗೆ ಈ ಹಣ ಉಪಯೋಗಕ್ಕೆ ಬರುತ್ತದೆ.

ಬಿಹಾರದ ಭಾಗಲ್ಪುರದ ವಿಶೇಷ ಕಾರ್ಯಕ್ರಮದಲ್ಲಿ 19ನೇ ಕಂತು ಬಿಡುಗಡೆ :

ಫೆಬ್ರವರಿ 24 ರಂದು ಬಿಹಾರದ ಭಾಗಲ್ಪುರದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ನೇರವಾಗಿ ರೈತರ ಖಾತೆಗೆ (Farmers bank account) ಹಣ ವರ್ಗಾಯಿಸಲಿದ್ದಾರೆ. ಈ ಬಾರಿ, 9.8 ಕೋಟಿ ರೈತರ ಖಾತೆಗೆ ಒಟ್ಟು ₹22,000 ಕೋಟಿ ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಈ ಯೋಜನೆಯಡಿ ಇದುವರೆಗೆ ಒಟ್ಟು ₹3.46 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, 19ನೇ ಕಂತು ಬಿಡುಗಡೆಯಾದ ನಂತರ ಈ ಮೊತ್ತ ₹3.68 ಲಕ್ಷ ಕೋಟಿ ರೂ.ಗಳಿಗೆ ಏರಲಿದೆ.

ಅರ್ಹ ರೈತ ಫಲಾನುಭವಿಗಳು ಸಂಖ್ಯೆ ಹೆಚ್ಚಳ:

ಪಿಎಂ-ಕಿಸಾನ್ ಯೋಜನೆಯು ನಿರಂತರವಾಗಿ ರೈತರಿಗೆ ಆರ್ಥಿಕ ನೆರವು (Economic help) ನೀಡುತ್ತಿದೆ, 18ನೇ ಕಂತಿನ ಬಿಡುಗಡೆ ವೇಳೆ 9.6 ಕೋಟಿ ರೈತರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದರು. 19ನೇ ಕಂತಿನ ಬಿಡುಗಡೆವೇಳೆಗೆ ಈ ಸಂಖ್ಯೆ 9.8 ಕೋಟಿಯಷ್ಟು ಹೆಚ್ಚಳವಾಗಿದೆ.

ಡಿಬಿಟಿ ಮೂಲಕ ನೇರ ಲಾಭ ವರ್ಗಾವಣೆ :

ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ನೇರ ಲಾಭ ವರ್ಗಾವಣೆ (Direct Benefit Transfer – DBT) ವ್ಯವಸ್ಥೆ. ಇದರಿಂದ ರೈತರ ಖಾತೆಗೆ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ನೇರವಾಗಿ ಹಣ ವರ್ಗಾಯಿಸಲಾಗುತ್ತದೆ, ಇದು ಭ್ರಷ್ಟಾಚಾರ ನಿವಾರಣೆಗೆ ಸಹಾಯಕವಾಗಿದೆ. ರೈತರ ಕೈಗೆ ಹಣ ತಲುಪುವ ಮೂಲಕ ಅವರು ಇದನ್ನು ತಕ್ಷಣವೇ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.

ಈ ಯೋಜನೆಯಿಂದ ಸಾವಿರಾರು ರೈತರ ಕುಟುಂಬಗಳಿಗೆ ಆರ್ಥಿಕ ನೆಮ್ಮದಿ ದೊರಕಿದೆ. ಹಲವರು ಈ ಹಣವನ್ನು ತಮ್ಮ ಕೃಷಿ ಉಪಕರಣಗಳ (Agricultural machinaries) ಸುಧಾರಣೆಗೆ, ಕೃಷಿ ಉತ್ಪಾದಕತೆ ಹೆಚ್ಚಿಸಲು, ಮತ್ತು ಆಪತ್‌ಕಾಲದಲ್ಲಿ ಸಹಾಯವಾಗಿ ಬಳಸುತ್ತಿದ್ದಾರೆ. ಇದಲ್ಲದೆ, ಯೋಜನೆಯ ಅನುಷ್ಠಾನವು ಗ್ರಾಮೀಣ ಆರ್ಥಿಕತಿಯನ್ನು ಬಲಪಡಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.

19 ನೇ ಕಂತು ಬಿಡುಗಡೆಗೊಂಡ ನಂತರ, ರೈತರು ತಕ್ಷಣವೇ ತಮ್ಮ ಬ್ಯಾಂಕ್ ಖಾತೆ (Bank account) ಪರಿಶೀಲಿಸಿ ಹಣ ಜಮಾ ಆಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬಹುದು. ಯಾವುದೇ ಸಮಸ್ಯೆಗಳಿದ್ದರೆ, ಸ್ಥಳೀಯ ಕೃಷಿ ಇಲಾಖೆ ಅಥವಾ ಬ್ಯಾಂಕ್‌ನೊಂದಿಗೆ ಸಂಪರ್ಕಿಸಲು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಈ ನಿರ್ಧಾರದಿಂದ ದೇಶದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಸಹಾಯ (Economic Help) ಸಿಗಲಿದ್ದು, ಅವರ ಕೃಷಿ ಚಟುವಟಿಕೆಗಳು ಮತ್ತಷ್ಟು ಸುಲಭಗೊಳ್ಳಲಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!