ಮಾಸಿಕ ವಿದ್ಯುತ್ ಬಿಲ್‌ನಲ್ಲಿ(electricity bill) ಉಳಿತಾಯ ಮಾಡಬೇಕೆ!. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ(PM Suryaghar Scheme) ಮನೆ ಮೇಲೆ ಸೋಲಾರ್ ಅಳವಡಿಕೆ ಮಾಡಿ ವಿದ್ಯುತ್ ಉಳಿಸಿ.
ದೇಶಾದ್ಯಂತ ಮನೆಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯಘರ್ ಯೋಜನೆಯನ್ನು(PM Suryaghar Scheme) 2024ರಲ್ಲಿ ಪ್ರಾರಂಭಿಸಲಾಯಿತು. ಜನವರಿ ಕೊನೆಯ ವಾರಕ್ಕೆ ಒಂದು ವರ್ಷ ಪೂರೈಸಲಿದೆ ಈ ಯೋಜನೆ. ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ(300 units) ಉಚಿತ ವಿದ್ಯುತ್ ಪಡೆಯುವ ಕೇಂದ್ರ ಸರ್ಕಾರದ ವಿಶೇಷ ಯೋಜನೆ ಇದಾಗಿದ್ದು, ಯಾರೆಲ್ಲ ಈ ಯೋಜನೆಯಡಿ ನಿಮ್ಮ ಮನೆ ಮೇಲೆ ಸೌರ ವಿದ್ಯುತ್ ಅಳವಡಿಕೆ ಮಾಡಿಲ್ಲ, ಅವರು ಈ ಕೂಡಲೇ ಅಳವಡಿಕೆ ಮಾಡಿಕೊಳ್ಳಿ.
ಈ ಯೋಜನೆಯ ಮುಖ್ಯ ಉದ್ದೇಶ ಮನೆಗಳ ಟೆರೆಸ್(Terrace) ಮೇಲೆ ಸೌರ ಫಲಕಗಳನ್ನು(Solar panels) ಅಳವಡಿಸಿ ಉಚಿತ ವಿದ್ಯುತ್ ಒದಗಿಸುವುದು ಹಾಗೂ ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ(natural resources) ಸದ್ಬಳಕೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇನ್ನು ಈ ಯೋಜನೆಯಡಿ ಸಿಗುವ ಸಬ್ಸಿಡಿ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯಡಿ ಸಿಗಲಿದೆ ಆದಾಯ :
ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ, ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕವನ್ನು ಅಳವಡಿಸುವ ಮೂಲಕ, ನೀವು ಮಾಸಿಕ ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡಬಹುದು ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಸಹಕರಿಸಬಹುದು. ಈ ಯೋಜನೆಯಡಿ, ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಸಬ್ಸಿಡಿ ನೀಡುತ್ತದೆ. ಇನ್ನು ಪಿಎಂ ಸೂರ್ಯಘರ್ ಯೋಜನೆಯಡಿ ಮನೆಯ ಟೆರೆಸ್ ಮೇಲೆ ಸೌರ ಫಲಕಗಳನ್ನು ಅಳವಡಿಸಲು 30,000 ದಿಂದ 78,000 ರೂ. ವರೆಗಿನ ಸಬ್ಸಿಡಿಯನ್ನು(subsidy) ಸರ್ಕಾರದಿಂದ ನೀಡಲಾಗುತ್ತದೆ. 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ತಯಾರಿಸಲು ಈ ಸೌರ ಶಕ್ತಿ ವ್ಯವಸ್ಥೆ ನೆರವಾಗುವುದರ ಜೊತೆಗೆ ಉಳಿದ ಶಕ್ತಿಯನ್ನು ಸರ್ಕಾರಕ್ಕೆ ಮಾರುವ ಮೂಲಕ ಹೆಚ್ಚಿನ ಆದಾಯವನ್ನೂ (More income) ಪಡೆದುಕೊಳ್ಳಬಹುದು.
ಸರ್ಕಾರದಿಂದ ಸಿಗುವ ಸಬ್ಸಿಡಿ ವಿವರ :
ತಿಂಗಳಲ್ಲಿ ಬಳಸುವ ವಿದ್ಯುತ್ ಆಧಾರದ ಮೇಲೆ ಸೋಲಾರ್(Solar) ಸ್ಥಾಪಿಸಿಕೊಳ್ಳಬಹುದು. ಒಂದು ವೇಳೆ ನೀವು ಮನೆಗೆ 150 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವುದಾದರೆ 1-2 ಕಿವ್ಯಾ ಸೋಲಾರ್ ಸ್ಥಾಪಿಸಿಕೊಳ್ಳಬಹುದು. 150ರಿಂದ 300 ಯೂನಿಟ್ ಗಳಷ್ಟು ವಿದ್ಯುತ್ ಬಳಸಿಕೊಳ್ಳುವುದಾದರೆ 2-3 ಕಿವ್ಯಾ ಸೋಲಾರ್ ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಇನ್ನೂ ಹೆಚ್ಚಿನ ವಿದ್ಯುತ್ ಅವಶ್ಯಕತೆ ಇದ್ದಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಬಳಸಿಕೊಳ್ಳಬಹುದು. 1-2 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೆ 60,000 ರೂವರೆಗೂ ಸಬ್ಸಿಡಿ(subsidy) ಸಿಗುತ್ತದೆ. 2-3 ಕಿವ್ಯಾ ವಿದ್ಯುತ್ ಉತ್ಪಾದನೆ ಮಾಡಿದರೆ 78,000 ರೂವರೆಗೆ ಸಬ್ಸಿಡಿ ಸಿಗುತ್ತದೆ. ಅದಕ್ಕೂ ಮೇಲ್ಪಟ್ಟ ಸಾಮರ್ಥ್ಯದ ಸೋಲಾರ್ ಸ್ಥಾಪನೆ ಮಾಡಿದರೆ ಸಬ್ಸಿಡಿ ಮಿತಿ 78,000 ರೂ ಇರುತ್ತದೆ.
ಸೋಲಾರ್ ಅಳವಡಿಕೆಗೆ ಬೇಕಾಗುವ ಅಗತ್ಯ ಜಾಗ:
ಕಿ.ವ್ಯಾ. ಘಟಕ: 10×10 ಚದರ ಅಡಿ ಜಾಗ ಅಗತ್ಯವಿದೆ.
ಕ.ವ್ಯಾ. ಘಟಕ: 20×10 ಚದರ ಅಡಿ ಜಾಗ ಬೇಕಾಗುತ್ತದೆ.
ಕಿ.ವ್ಯಾ. ಘಟಕ: 30×10 ಚದರ ಅಡಿ ಜಾಗ ಅಗತ್ಯವಿದೆ.
ಈ ಯೋಜನೆಯಿಂದ ಸಿಗುವ ಸೌಲಭ್ಯಗಳು:
ವಿದ್ಯುತ್ ಬಿಲ್ ಉಳಿತಾಯ: ಸೌರ ಘಟಕದಿಂದ ಉತ್ಪಾದಿತ ವಿದ್ಯುತ್ ಬಳಸಿ, ನಿಮ್ಮ ಮಾಸಿಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
ಹೆಚ್ಚುವರಿ ಆದಾಯ: ಉತ್ಪಾದಿತ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಿ, ಆದಾಯ ಗಳಿಸಬಹುದು.
ಪರಿಸರ ಸ್ನೇಹಿ(Environmentally friendly): ಸೌರ ವಿದ್ಯುತ್ ಬಳಸಿ, ಪರಿಸರ ಸಂರಕ್ಷಣೆಗೆ ಸಹಕರಿಸಬಹುದು.
ಉಚಿತ ನಿರ್ವಹಣೆ: ಐದು ವರ್ಷಗಳ ಕಾಲ ಉಚಿತ ನಿರ್ವಹಣೆ ಸೌಲಭ್ಯ ಲಭ್ಯವಿದೆ.
ದೀರ್ಘಕಾಲಿಕ ಬಾಳಿಕೆ: ಸೌರ ಘಟಕವು 25 ವರ್ಷಗಳ ಬಾಳಿಕೆ ಹೊಂದಿದೆ.
ಪಿಎಂ ಸೂರ್ಯಘರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಪಿಎಂ ಸೂರ್ಯಘರ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ www.pmsuryaghar.gov.in/ ಭೇಟಿ ನೀಡಬೇಕು.
ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡುವು ಮೂಲಕ ಮೊದಲು ನೊಂದಣಿ ಮಾಡಿಕೊಳ್ಳಬೇಕು.
ನಂತರ ರಾಜ್ಯವನ್ನು ಆಯ್ಕೆ ಮಾಡಿ. ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ ಅನುಮೋದನೆ ಸಿಗುವವರೆಗೂ ಕಾಯಬೇಕು.
ಇದಾದ ಬಳಿಕ ಡಿಸ್ಕಾಂನಲ್ಲಿ ನೊಂದಾಯಿತವಾಗಿರುವ ವೆಂಡರ್ ಮೂಲಕ ಸೋಲಾರ್ ಸ್ಥಾಪಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಗುರುತಿನ ಪುರಾವೆ
ವಿಳಾಸದ ಪುರಾವೆ
ವಿದ್ಯುತ್ ಬಿಲ್ ಛಾವಣಿಯ/ಮನೆ ಮಾಲೀಕತ್ವದ ಪ್ರಮಾಣಪತ್ರ
ಗಮನಿಸಿ :
ಹೆಚ್ಚಿನ ಮಾಹಿತಿಗಾಗಿ, ಬೆಸ್ಕಾಂ ಅಧಿಕೃತ ವೆಬ್‌ಸೈಟ್ ಅಥವಾ ಸ್ಥಳೀಯ ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು. ಪಿಎಂ ಸೂರ್ಯಘರ್ ಯೋಜನೆ ಭಾರತದಲ್ಲಿ ಶಕ್ತಿಯ ನವೀಕರಣ ಮತ್ತು ಪರಿಸರದ ರಕ್ಷಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದರ ಪರಿಣಾಮವಾಗಿ, ದೇಶವು ನವೀನ ಶಕ್ತಿ ಸ್ವಾಯತ್ತತೆಯನ್ನು ಸಾಧಿಸಲು ಮತ್ತು ಪರಿಸರ ಸ್ನೇಹಿ(Environmental friendly) ಶಕ್ತಿಯನ್ನು ಉತ್ತೇಜಿಸಲು ಸಿದ್ಧವಾಗಿದೆ. ಈ ಯೋಜನೆಯ ಸದುಪಯೋಗ ಪಡೆದು, ನಿಮ್ಮ ಮನೆ ಮೇಲೆ ಸೌರ ಘಟಕವನ್ನು ಅಳವಡಿಸಿ, ವಿದ್ಯುತ್ ಬಿಲ್ ಉಳಿತಾಯ ಮಾಡಿ, ಪರಿಸರ ಸಂರಕ್ಷಣೆಗೆ ನಿಮ್ಮ ಕೊಡುಗೆಯನ್ನು ನೀಡಿರಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.