Business Loan : ಕೇಂದ್ರದ ಈ ಯೋಜನೆಯಲ್ಲಿ ಸಿಗುತ್ತೆ 80 ಸಾವಿರ  ಸಾಲ, ಆಧಾರ್ ಕಾರ್ಡ್ ಇದ್ರೆ ಸಾಕು!

1000348216

ಭಾರತದ ಕೇಂದ್ರ ಸರ್ಕಾರ (Indian Central government) ಬಡವರು ಮತ್ತು ಕಡಿಮೆ ಆದಾಯದ ಜನರ ಜೀವನಮಟ್ಟವನ್ನು ಉನ್ನತ ಮಟ್ಟಕ್ಕೆ ಎತ್ತಲು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಸರದಯಲ್ಲಿ ಸೇರಿದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi) ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ವಿನೂತನ ಪ್ರಯತ್ನವಾಗಿದೆ.

ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳು (Street vendors) ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಿರವಾಗಿಸಲು ಕಡಿಮೆ ಬಡ್ಡಿದರದಲ್ಲಿ (In low intrest rate) ಸುಲಭ ಸಾಲವನ್ನು ಒದಗಿಸುತ್ತದೆ. ಈ ಮೂಲಕ ಆರ್ಥಿಕ ಶ್ರೇಣೀಕರಣಕ್ಕೆ ಅವಕಾಶ ಸೃಷ್ಟಿಸುವ ಪ್ರಯತ್ನವನ್ನು ಮಾಡಲಾಗಿದೆ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಯ ವಿಶೇಷತೆಗಳು: ಮೂರು ಹಂತದ ಸಾಲ ವ್ಯವಸ್ಥೆ:

ಮೊದಲ ಹಂತದಲ್ಲಿ ₹10,000 ರೂ.ಗಳ ಸಾಲ.
ಎರಡನೇ ಹಂತದಲ್ಲಿ ₹20,000 ರೂ.ಗಳ ಸಾಲ.
ತೃತೀಯ ಹಂತದಲ್ಲಿ ₹50,000 ರೂ.ಗಳವರೆಗೆ ಸಾಲ.
ಈ ಮೂರು ಹಂತಗಳ ಮೂಲಕ ಒಟ್ಟು ₹80,000 ರೂ.ಗಳವರೆಗೆ ಸಾಲ(loan) ಪಡೆಯಬಹುದು.

ಸಬ್ಸಿಡಿ ಮತ್ತು ಕ್ಯಾಶ್ ಬ್ಯಾಕ್(Subsidy and cash back):

7% ಬಡ್ಡಿ ಸಬ್ಸಿಡಿಯನ್ನು ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
ಡಿಜಿಟಲ್ ಪಾವತಿಗಳನ್ನು(Digital transaction) ಉತ್ತೇಜಿಸಲು ವಾರ್ಷಿಕ ₹1,200 ರೂ.ಗಳವರೆಗೆ ಕ್ಯಾಶ್ ಬ್ಯಾಕ್ (Cash back) ಸೌಲಭ್ಯ.

ಗ್ಯಾರಂಟಿ ಇಲ್ಲದ ಸಾಲ:

ಈ ಯೋಜನೆಯಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಕೇವಲ ಆಧಾರ್ ಕಾರ್ಡ್ (Only Adhar card) ಹೊಂದಿದರೆ ಸಾಲ ಲಭ್ಯವಿರುತ್ತದೆ.

ಕಡಿಮೆ ಬಡ್ಡಿದರ ಮತ್ತು ಸುಲಭ ಕಂತುಗಳು:
ಸಾಲದ ಮರುಪಾವತಿಯನ್ನು ಕಡಿಮೆ ಬಡ್ಡಿದರದಲ್ಲಿ ಸುಲಭ ಕಂತುಗಳ ಮೂಲಕ ಮಾಡಬಹುದಾಗಿದೆ.

ಅರ್ಹತೆ ಮತ್ತು ಉದ್ದೇಶ :

ಈ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ  ಸೀಮಿತವಿಲ್ಲ. ತರಕಾರಿ, ಹಣ್ಣು, ಉಡುಪು, ಚಾಪಲು ಸೇರಿದಂತೆ ವಿವಿಧ ಸಣ್ಣ ವ್ಯಾಪಾರ ನಡೆಸುವವರು ಈ ಯೋಜನೆಯಿಂದ ಲಾಭ ಪಡೆಯಬಹುದು. ಇದು ನೈಜ ಜೀವನೋಪಾಯವನ್ನು ನಡೆಸಲು ಅಗತ್ಯವಿರುವ ಬಂಡವಾಳವನ್ನು ಒದಗಿಸುವ ಮೂಲಕ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್ (Adhar card)
ವಿಳಾಸ ಪುರಾವೆ (Address proof)
ಬ್ಯಾಂಕ್ ಖಾತೆ ಸಂಖ್ಯೆ(Bank account number)

ಅರ್ಜಿ ಸಲ್ಲಿಸುವ ವಿಧಾನ:

ಸರ್ಕಾರಿ ಬ್ಯಾಂಕ್ ಅಥವಾ ಮಾನ್ಯತಾಪ್ರಾಪ್ತ ನಿಗಮಗಳಿಗೆ ಭೇಟಿ ನೀಡಿ.
ನಂತರ,ಇಲ್ಲಿ ನಿಮಗೆ ಒಂದು ಫಾರ್ಮ್ ಅನ್ನು ನೀಡಲಾಗುತ್ತದೆ, ಅದರಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನೀವು ಯಾವ ವ್ಯವಹಾರಕ್ಕಾಗಿ ಸಾಲ ತೆಗೆದುಕೊಳ್ಳುತ್ತಿದ್ದೀರಿ ಎಂದು
ನಿಮ್ಮ ವ್ಯಾಪಾರದ ವಿವರಗಳನ್ನು ನೀಡಬೇಕು.
ನಂತರ ಅಗತ್ಯವಾದ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.

ಆರ್ಥಿಕ ಪಿತಾಮಹನಂತೆ ಸ್ವನಿಧಿ ಯೋಜನೆ:

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ(PM SVANidhi Yojana) ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಆರ್ಥಿಕ ಪುನರುಜ್ಜೀವನದ ದಾರಿ ಎಂದು ಹೇಳಬಹುದು. ಕಡಿಮೆ ಬಡ್ಡಿದರ, ಗ್ಯಾರಂಟಿ ಇಲ್ಲದ ಸಾಲ, ಮತ್ತು ಸಬ್ಸಿಡಿ ಸಹಾಯಧನದಿಂದ ಇದು ಬಡ ವರ್ಗದ ವ್ಯಾಪಾರಿಗಳಿಗೆ ಹೊಸ ಭರವಸೆ ತಂದಿದೆ.

ಸಮಾಜದ ಕಡಿಮೆ ಆದಾಯದ ವರ್ಗಗಳಿಗೆ ಆರ್ಥಿಕ ಸಮತೋಲನವನ್ನು ಒದಗಿಸಲು ಈ ಯೋಜನೆಯಂತಹ ಕ್ರಮಗಳು ಮುಖ್ಯವಾಗಿದ್ದು, ಇದು ಭಾರತೀಯ ಆರ್ಥಿಕತೆಯ ಸಮಗ್ರ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುತ್ತವೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!