PM Avas Yojana : ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ

home subsidy

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024(PradhanMantriAwasa Yojana 2024): ನಿಮ್ಮ ಕನಸಿನ ಮನೆಗಾಗಿ ಸರ್ಕಾರದಿಂದ ಸಹಾಯಧನ ಮತ್ತು ಸಾಲದ ನೆರವು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಮನೆ(Home)- ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಮಹತ್ವದ ಕನಸುಗಳಲ್ಲಿ ಒಂದು. ಸ್ವಂತ ಮನೆಯ ನೆರಳಿನಲ್ಲಿ ಜೀವನ ನಡೆಸುವ ಭಾವನೆ ಅನನ್ಯವಾದದ್ದು. ಆದರೆ, ಈ ಕನಸನ್ನು ನನಸಾಗಿಸುವುದು ಎಷ್ಟು ಕಷ್ಟ ಎಂಬುದು ಯಾರಿಗೂ ತಿಳಿದಿಲ್ಲ. ಜೀವಮಾನವಿಡೀ ದುಡಿದು ಸಂಪಾದಿಸಿದ ಹಣವೂ ಮನೆ ಕಟ್ಟಲು ಸಾಕಾಗದಂತಾಗಿದೆ.

ಇಂಥ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಒಂದು ವರದಾನವಾಗಿದೆ. ಈ ಯೋಜನೆಯಡಿ, ಕೇಂದ್ರ ಸರ್ಕಾರವು ಮನೆ ನಿರ್ಮಾಣಕ್ಕಾಗಿ ಸಾಲ ಮತ್ತು ಸಬ್ಸಿಡಿ(loan and Subsidy)ನೀಡುತ್ತದೆ. ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೆ ಲಭ್ಯವಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನಾ (PradhanMantriAwasa Yojana-PMAY):

2014 ರಿಂದ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಒಂದು ಕನಸು ನನಸಾದ ಕಥೆಯಾಗಿದೆ. ಲಕ್ಷಾಂತರ ಭಾರತೀಯರಿಗೆ ಸ್ವಂತ ಮನೆ(Own House) ನಿರ್ಮಿಸುವ ಕನಸನ್ನು ಈ ಯೋಜನೆ ನನಸು ಮಾಡಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯಡಿ, ಸುಮಾರು 40 ಲಕ್ಷ ಕಾಂಕ್ರೀಟ್ ಮನೆಗಳು ನಿರ್ಮಾಣಗೊಂಡಿವೆ.

ಈ ಯೋಜನೆಯು ಒಂದು ಐತಿಹಾಸಿಕ ಘಟನೆಯಾಗಿದೆ. ಏಕೆಂದರೆ, ಇದು ಭಾರತದ ವಸತಿ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡಿದೆ. ಈ ಯೋಜನೆಯ ಫಲಾನುಭವಿಗಳು ಈಗ ಭದ್ರತೆ ಮತ್ತು ಸ್ವಾತಂತ್ರ್ಯದ ಭಾವನೆಯನ್ನು ಅನುಭವಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸ್ವಂತ ಮನೆ ನಿರ್ಮಿಸಲು ಅಗತ್ಯವಿರುವ ಹಣಕಾಸಿನ ನೆರವು ಮತ್ತು ಸಬ್ಸಿಡಿ(subsidy)ಗಳನ್ನು ಒದಗಿಸುತ್ತದೆ. ಈ ಯೋಜನೆಯು ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಒಂದು ಮಹತ್ವದ ಕೊಡುಗೆಯಾಗಿದೆ.

2025ರ ವೇಳೆಗೆ ಒಂದು ಕೋಟಿ ಮನೆಗಳನ್ನು ನಿರ್ಮಿಸಿ, ಬಡವರಿಗೆ ಒದಗಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ. ಈ ಯೋಜನೆಯು ಭಾರತದ ಲಕ್ಷಾಂತರ ಕುಟುಂಬಗಳ ಜೀವನಮಟ್ಟವನ್ನು ಉನ್ನತೀಕರಿಸುವ ಭರವಸೆಯನ್ನು ಹೊಂದಿದೆ.

ಈ ಗುರಿಯನ್ನು ಸಾಧಿಸಲು, 2023-24ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 790 ಬಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. 2024-25ರಲ್ಲಿ ಈ ಯೋಜನೆಗೆ ಶೇಕಡಾ 15ರಷ್ಟು ಹೆಚ್ಚಿನ ಅನುದಾನವನ್ನು ಮೀಸಲಿಡಲಾಗಿದೆ. ಈ ಯೋಜನೆಯ ಒಟ್ಟು ಮೊತ್ತ 1013 ಬಿಲಿಯನ್ ರೂಪಾಯಿಗಳಿಗೆ ಏರಿಕೆಯಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ: ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಖಾಸಗಿ ಮನೆ ನಿರ್ಮಾಣಕ್ಕೆ ಸಾಲ(Loan) ಪಡೆಯುವ ಜೊತೆಗೆ ಸರ್ಕಾರದಿಂದ ಸಬ್ಸಿಡಿ ಲಾಭ ಪಡೆಯುವ ಅವಕಾಶ ಲಭ್ಯವಿದೆ. ಈ ಸಬ್ಸಿಡಿ ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೂಲಕ ಒದಗಿಸಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದ ವರ್ಗ (EWS) :

ಆದಾಯ ಮತ್ತು ಮನೆ ವಿಸ್ತೀರ್ಣ:

ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಮನೆಯ ವಿಸ್ತೀರ್ಣ 30 ಚದರ ಮೀಟರ್ ಗಿಂತ ಹೆಚ್ಚಿರಬಾರದು.

ಸಾಲ ಮತ್ತು ಸಬ್ಸಿಡಿ(Loan and Subsidy):

ಸಾಲವನ್ನು ಕುಟುಂಬದ ಮಹಿಳೆಯ ಹೆಸರಿನಲ್ಲಿ ಪಡೆಯಬೇಕು.
ಗರಿಷ್ಠ ಸಾಲದ ಮೊತ್ತ 6 ಲಕ್ಷ ರೂಪಾಯಿ.
ಗರಿಷ್ಠ ಸಹಾಯಧನ (ಸಬ್ಸಿಡಿ) 2.67 ಲಕ್ಷ ರೂಪಾಯಿ. Pಸಹಾಯಧನವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಕಡಿಮೆ ಆದಾಯದ ಗುಂಪು (Low Income Group) :

ಆದಾಯ ಮತ್ತು ಮನೆ ವಿಸ್ತೀರ್ಣ:

ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿ ದಿಂದ 12 ಲಕ್ಷ ಮೀರಿರಬಾರದು.
ಮನೆಯ ವಿಸ್ತೀರ್ಣ 60 ಚದರ ಮೀಟರ್ ಗಿಂತ ಹೆಚ್ಚಿರಬಾರದು.

ಸಾಲ ಮತ್ತು ಸಬ್ಸಿಡಿ(Loan and Subsidy):

ಈ ವರ್ಗದ ಜನರಿಗೆ ಮಹಿಳೆ ಮನೆಯ ಯಜಮಾನಳಾಗಿರಬೇಕು ಎಂಬ ಷರತ್ತು ಇರುವುದಿಲ್ಲ
ಗರಿಷ್ಠ ಸಾಲದ ಮೊತ್ತ 9 ಲಕ್ಷ ರೂಪಾಯಿ.
ಗರಿಷ್ಠ ಸಹಾಯಧನ (ಸಬ್ಸಿಡಿ) 2.35ಲಕ್ಷ ರೂಪಾಯಿ.

ಮಧ್ಯಮ ಆದಾಯ ಗುಂಪು I (Middle Income Group I) :

ಆದಾಯ ಮತ್ತು ಮನೆ ವಿಸ್ತೀರ್ಣ:

ಕುಟುಂಬದ ವಾರ್ಷಿಕ ಆದಾಯ 12 ಲಕ್ಷ ದಿಂದ18 ಲಕ್ಷ ರೂಪಾಯಿ ಒಳಗಿರಬೇಕು.
ಮನೆಯ ವಿಸ್ತೀರ್ಣ 160 ಚದರ ಮೀಟರ್ ಗಿಂತ ಹೆಚ್ಚಿರಬಾರದು.

ಸಾಲ ಮತ್ತು ಸಬ್ಸಿಡಿ(Loan and Subsidy):

ಈ ವರ್ಗದ ಜನರಿಗೆ ಮಹಿಳೆ ಮನೆಯ ಯಜಮಾನಳಾಗಿರಬೇಕು ಎಂಬ ಷರತ್ತು ಇರುವುದಿಲ್ಲ
ಗರಿಷ್ಠ ಸಾಲದ ಮೊತ್ತ 12 ಲಕ್ಷ ರೂಪಾಯಿ.
ಗರಿಷ್ಠ ಸಹಾಯಧನ (ಸಬ್ಸಿಡಿ) 2.30 ಲಕ್ಷ ರೂಪಾಯಿ.

whatss

ಮಧ್ಯಮ ಆದಾಯ ಗುಂಪು II (Middle Income Group II) :

ಆದಾಯ ಮತ್ತು ಮನೆ ವಿಸ್ತೀರ್ಣ:

ಕುಟುಂಬದ ವಾರ್ಷಿಕ ಆದಾಯ 18 ಲಕ್ಷ ರೂಪಾಯಿ ಒಳಗಿರಬೇಕು.
ಮನೆಯ ವಿಸ್ತೀರ್ಣ 200 ಚದರ ಮೀಟರ್ ಗಿಂತ ಹೆಚ್ಚಿರಬಾರದು.

ಸಾಲ ಮತ್ತು ಸಬ್ಸಿಡಿ(Loan and Subsidy):

ಈ ವರ್ಗದ ಜನರಿಗೆ ಮಹಿಳೆ ಮನೆಯ ಯಜಮಾನಳಾಗಿರಬೇಕು ಎಂಬ ಷರತ್ತು ಇರುವುದಿಲ್ಲ
ಗರಿಷ್ಠ ಸಾಲದ ಮೊತ್ತ 12 ಲಕ್ಷ ರೂಪಾಯಿ.
ಗರಿಷ್ಠ ಸಹಾಯಧನ (ಸಬ್ಸಿಡಿ) 2.30 ಲಕ್ಷ ರೂಪಾಯಿ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು

ಅರ್ಜಿದಾರರ ಆಧಾರ್ ಕಾರ್ಡ್(Aadhar Card)
ವಿಳಾಸ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಮೊಬೈಲ್ ನಂಬರ್
ಬ್ಯಾಂಕ್ ಖಾತೆ ಪುಸ್ತಕ(Bank pass book)
ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಕೆಳಗಿನ ಲಿಂಕ್ ಬಳಸಿಕೊಂಡು ನಿಮ್ಮ ಮೊಬೈಲ್’ನಲ್ಲಿ ಅರ್ಜಿ ಸಲ್ಲಿಸಬಹುದು.

ಅಧಿಕೃತ ಲಿಂಕ್ ಇಲ್ಲಿದೆ:
https://pmaymis.gov.in/

ಇಲ್ಲವಾದಲ್ಲಿ, ನಿಮ್ಮ ಹತ್ತಿರವಿರುವ ಗ್ರಾಮ ಒನ್(Gram one), ಕರ್ನಾಟಕ ಒನ್(Karnataka One)ಅಥವಾ ಗ್ರಾಹಕ ಸೇವಾ ಕೇಂದ್ರಗಳಿಗೆ (seva Kendra)ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!