ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana – PMAY) ಉಚಿತ ಮನೆ ಪಡೆಯುವ ಕನಸು ನಿಮಗಿದೆಯೇ? ಖಂಡಿತ! ಈ ಯೋಜನೆಯು ನಿಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ.
ಮನುಷ್ಯನ ಜೀವನದಲ್ಲಿ ಸ್ವಂತ ಮನೆ ಒಂದು ಅತ್ಯಮೂಲ್ಯವಾದ ಕನಸು. ದುರ್ಬಲ ಸ್ಥಿತಿಯಲ್ಲಿರುವವರಿಗೆ ಈ ಕನಸು ಕೈಗೆಟಕದ ಭ್ರಮೆಯಂತೆ ಕಾಣಬಹುದು. ಆದರೆ, ಒಂದು ಉತ್ತಮ ಸಮಾಜದಲ್ಲಿ, ಪ್ರತಿಯೊಬ್ಬರಿಗೂ ಒಂದು ಗೌರವಯುತವಾದ ವಾಸಸ್ಥಳ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದೆ ಉದ್ದೇಶದಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಬನ್ನಿ ಹಾಗಿದ್ರೇ ಈ ಯೋಜನೆಯ ಪ್ರಯೋಜನ, ಅರ್ಹತೆ ಹಾಗೂ ಮುಂತಾದವುಗಳ ಕುರಿತೂ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರಧಾನಮಂತ್ರಿ ಆವಾಸ್ ಯೋಜನೆ (Pradhan Mantri Awas Yojana – PMAY):
2015 ರಲ್ಲಿ ಪ್ರಾರಂಭವಾದ PMAY-U, ಭಾರತದ ನಗರ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ಅರ್ಹ ಕುಟುಂಬಗಳಿಗೆ 2022 ರ ವೇಳೆಗೆ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಕೊಳೆಗೇರಿ ನಿವಾಸಿಗಳನ್ನು ಒಳಗೊಂಡಂತೆ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS ಮತ್ತು LIG) ಗಮನ ಹರಿಸುತ್ತದೆ. ಈ ಯೋಜನೆಯು 31 ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ.
ಪ್ರಧಾನಮಂತ್ರಿ ಆವಾಸ ಯೋಜನೆ (ನಗರ) ಅಡಿಯಲ್ಲಿ, ಪ್ರತಿ ಮನೆಗೆ ಅಡಿಗೆ, ಶೌಚಾಲಯ, ನೀರು ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಮಿಷನ್ ಮಹಿಳಾ ಸದಸ್ಯರ ಹೆಸರಿನಲ್ಲಿ, ಸಂಯುಕ್ತ ಅಥವಾ ಏಕೈಕ ಮಾಲೀಕತ್ವವನ್ನು ನೀಡುವುದರ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸುತ್ತದೆ.
ಮತ್ತಷ್ಟು, SC, ST, OBC, ಒಂಟಿ ಮಹಿಳೆಯರು, ಟ್ರಾನ್ಸ್ಜೆಂಡರ್ಗಳು, ವಿಕಲಚೇತನರು, ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಪಿಎಂಎವೈ ಅಡಿಯಲ್ಲಿ ಮನೆಗಳನ್ನು ಪಡೆದ ಫಲಾನುಭವಿಗಳು ತಮ್ಮ ನಿವಾಸಗಳಲ್ಲಿ ಭದ್ರತೆ, ಹೆಮ್ಮೆಯನ್ನು ಅನುಭವಿಸುತ್ತಾರೆ ಮತ್ತು ಗೌರವಯುತ ಜೀವನವನ್ನು ನಡೆಸಲು ಪ್ರೋತ್ಸಾಹ ನೀಡುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ನೀವು ಕಡಿಮೆ ಬಡ್ಡಿ ದರದಲ್ಲಿ 20 ವರ್ಷಗಳವರೆಗೆ ಸಾಲ(loan)ವನ್ನು ಪಡೆಯುತ್ತೀರಿ.
ನೀವು ತೆಗೆದುಕೊಳ್ಳುವ ಸಾಲಕ್ಕೆ ನೀವು ಕೇವಲ 6.50% ಬಡ್ಡಿಯನ್ನು ಪಾವತಿಸಬೇಕು.
ಅಂಗವಿಕಲರು ಅಥವಾ ಹಿರಿಯ ನಾಗರಿಕರಂತಹ ನಿರ್ದಿಷ್ಟ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತದೆ.
ಬಯಲು ಸೀಮೆಯಲ್ಲಿ ನೆಲೆಸಿರುವ ಅರ್ಹ ನಾಗರಿಕರಿಗೆ ₹ 120000 ವರೆಗೆ ನೆರವು ನೀಡಲಾಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ 130,000 ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ಈ ಯೋಜನೆಯಡಿ ನಿಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡರೆ ₹ 12000 ವರೆಗೆ ಹೆಚ್ಚುವರಿ ನೆರವು ನೀಡಲಾಗುತ್ತದೆ.
ಯೋಜನೆಯಡಿ ಸ್ವೀಕರಿಸಿದ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ: ಯಾರು ಅರ್ಜಿ ಸಲ್ಲಿಸಬಹುದು?
ಒಂದು ಅಥವಾ ಎರಡು ಕೋಣೆಗಳು, ಕಚ್ಚಾ ಗೋಡೆಗಳು ಮತ್ತು ಕಚ್ಚಾ ವಸ್ತುಗಳನ್ನು ಹೊಂದಿರುವ ಕುಟುಂಬಗಳು
25 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಅನಕ್ಷರಸ್ಥರಾದ ಕುಟುಂಬದ ಮುಖ್ಯಸ್ಥ
16 ಮತ್ತು 59 ವಯಸ್ಸಿನ ವಯಸ್ಕ ಪುರುಷ ಸದಸ್ಯರನ್ನು ಹೊಂದಿರದ ಕುಟುಂಬಗಳು
16 ರಿಂದ 59 ವಯಸ್ಸಿನ ವಯಸ್ಸಿನ ಮಹಿಳಾ ಸದಸ್ಯರನ್ನು ಹೊಂದಿರದ ಕುಟುಂಬಗಳು
ಯಾವುದೇ ಕೆಲಸ ಮಾಡುವ ಸಾಮರ್ಥ್ಯವಿಲ್ಲದ ಮತ್ತು ಅಂಗವಿಕಲ ಸದಸ್ಯರನ್ನು ಹೊಂದಿರುವ ಕುಟುಂಬಗಳು
ಭೂಮಿಯನ್ನು ಹೊಂದಿರದ ಮತ್ತು ಸಾಂದರ್ಭಿಕ ಕೆಲಸದ ಮೂಲಕ ಜೀವನೋಪಾಯ ಗಳಿಸುವ ಕುಟುಂಬಗಳು
ಪರಿಶಿಷ್ಟ ಜಾತಿ, ಪಂಗಡ, ಇತರ ಅಲ್ಪಸಂಖ್ಯಾತರಿಗೆ ಸೇರಿದ ಕುಟುಂಬಗಳು
ಅರ್ಜಿದಾರರು ಈ ಕೆಳಗಿನ ಬೋಧ್ಯತೆಗಳನ್ನು ಸಹ ಹೊಂದಿರಬೇಕು:
ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.
ಶಾಶ್ವತ ಮನೆ ಹೊಂದಿರಬಾರದು.
ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
ವಾರ್ಷಿಕ ಆದಾಯ ರೂ. 03 ಲಕ್ಷದಿಂದ ರೂ. 06 ಲಕ್ಷದ ನಡುವೆ ಇರಬೇಕು.
ಪಡಿತರ ಚೀಟಿ ಅಥವಾ BPL ಪಟ್ಟಿಯಲ್ಲಿರಬೇಕು.
ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು.
ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು.
ಅಗತ್ಯ ದಾಖಲೆಗಳು:
ಅರ್ಜಿಯ ಪ್ರಕ್ರಿಯೆಯಲ್ಲಿ ನೀವು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:
ಆಧಾರ್ ಕಾರ್ಡ್(Aadhar Card).
ಅರ್ಜಿದಾರರ ಫೋಟೋ.
ಆದಾಯ ಪುರಾವೆ (Job Card or Job card number).
ಬ್ಯಾಂಕ್ ಪಾಸ್ಬುಕ್(Bank passbook).
ಸ್ವಚ್ಛ ಭಾರತ್ ಮಿಷನ್ ನೋಂದಣಿ ಸಂಖ್ಯೆ.
ಮೊಬೈಲ್ ನಂಬರ್.
ಆನ್ಲೈನ್ ಅರ್ಜಿ ಪ್ರಕ್ರಿಯೆ:
PMAY ಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು: pmaymis.gov.in
ಮೆನು ಬಾರ್ನಲ್ಲಿ “Awaassoft” ಕ್ಲಿಕ್ ಮಾಡಿ.
“ಡೇಟಾ ಎಂಟ್ರಿ ಫಾರ್ ಆವಾಸ್” ಆಯ್ಕೆ ಮಾಡಿ.
ರಾಜ್ಯ, ಜಿಲ್ಲೆ ಆಯ್ಕೆ ಮಾಡಿ.
ಬಳಕೆದಾರ ಹೆಸರು, ಪಾಸ್ವರ್ಡ್, ಕ್ಯಾಪ್ಚಾ ನಮೂದಿಸಿ ಲಾಗಿನ್ ಮಾಡಿ.
ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು, ಜಾಬ್ ಕಾರ್ಡ್ ಸಂಖ್ಯೆ, SBM ಸಂಖ್ಯೆ ಮುಂತಾದ ಮಾಹಿತಿಯನ್ನು ಭರ್ತಿ ಮಾಡಿ.
ಅರ್ಜಿದಾರರು ಎಲ್ಲಾ ಮಾಹಿತಿ ಶುದ್ಧವಾಗಿ ಭರ್ತಿ ಮಾಡಿದ ನಂತರ, ಫಲಾನುಭವಿಗಳ ಪಟ್ಟಿಯನ್ನು rhreporting.nic.in ನಲ್ಲಿ ಪರಿಶೀಲಿಸಬಹುದು.
ಈ ವಿಧಾನವನ್ನು ಅನುಸರಿಸಿ, ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆ ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Shivakumar Chinchiraki