ಸ್ವಂತ ಮನೆ ಇಲ್ಲದವರಿಗೆ ಮೋದಿ ಬಂಪರ್‌ ಕೊಡುಗೆ ಘೋಷಣೆ..! ರೈತರಿಗೂ ಹಣ!

WhatsApp Image 2024 06 12 at 9.00.43 PM

ರೈತಾಪಿ ವರ್ಗ ಸೇರಿದಂತೆ ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆಗಳ (special offers ) ಘೋಷಣೆ!. 9 ಕೋಟಿ ರೈತರಿಗೆ 20000 ಕೋಟಿ ರೂ ಬಿಡುಗಡೆ.

ಹೊಸ ಸರ್ಕಾರ ರಚನೆಯಾಗಿದ್ದು, ಪ್ರಧಾನಿ ಮೋದಿಯವರ (PM Modi ) ಮೇಲೆ ಬಹಳಷ್ಟು ಜವಾಬ್ದಾರಿಗಳು ಇದ್ದಾವೆ. ಇದರ ಜೊತೆಯಲ್ಲಿ  ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ತದನಂತರದಲ್ಲಿ ಏನೆಲ್ಲಾ ಕಾರ್ಯಗಳನ್ನು ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದೇ ರೀತಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತಾಪಿ ವರ್ಗ ಸೇರಿದಂತೆ ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. ಯಾವೆಲ್ಲ ಕೊಡುಗೆಗಳನ್ನು ನೀಡಲಿದ್ದಾರೆ? ಇದಕ್ಕೆ ತಗಲುವ ವೆಚ್ಚ ಎಷ್ಟು?ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಲವು ಕೊಡುಗೆಗಳಿಗೆ ಚಾಲನೆ :

ಪ್ರಧಾನಿ ಮೋದಿಯವರು  ಭಾನುವಾರದಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಅದರ ಮರುದಿನವೇ ಅಂದರೆ ಸೋಮವಾರದಂದು ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ. ಮೂರನೇ ಬಾರಿಯೂ ಕೂಡ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿಯವರು ದೇಶದ ರೈತಾಪಿ ವರ್ಗ ಸೇರಿದಂತೆ ಬಡವರು (poor people) ಮತ್ತು ಮಧ್ಯಮ ವರ್ಗದ ಜನತೆಗೆ (middle class people) ಕೆಲವು ಕೊಡುಗೆಗಳನ್ನು  ನೀಡಿದ್ದಾರೆ. ಇದರಿಂದ ಹಲವರಿಗೆ ಉಪಯೋಗವಾಗಲಿದ್ದು,ಕೊಡುಗೆಯಾಗಿ 9 ಕೋಟಿ ರೈತರಿಗೆ 20000 ಕೋಟಿ ರೂ ಖರ್ಚಾಗಲಿದೆ.

ಯಾವೆಲ್ಲಾ ಕೊಡುಗೆಗಳು ?

ದೇಶದ ರೈತಾಪಿ ವರ್ಗ, ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು, ಪ್ರಧಾನಿ ಮೋದಿ ತಮ್ಮ ಮೊದಲ ಕೊಡುಗೆಯಾಗಿ ಪಿಎಂ ಕಿಸಾನ್ ನಿಧಿ (PM kisan Nidhi) ಬಿಡುಗಡೆಗೆ ಮಾಡಲಿದ್ದು 9 ಕೋಟಿ ರೈತರಿಗೆ 20000 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ. ಮತ್ತೊಂದೆಡೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Avas scheme) ಯೋಜನೆಯಡಿ 3 ಕೋಟಿ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ಪ್ರಕಟಿಸಿದ್ದಾರೆ.

ಕಿಸಾನ್‌ ನಿಧಿ (kisan Nidhi) :

ಹಣ ಬಿಡುಗಡೆ ಮಾಡಲು ಸಹಿ ಹಾಕಿದ ನಂತರ ಮೋದಿಯವರು ‘ನಮ್ಮದು ‘ಕಿಸಾನ್ ಕಲ್ಯಾಣ’ಕ್ಕೆ (ರೈತರ ಕಲ್ಯಾಣ) ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಮುಂದಿನ ದಿನಗಳಲ್ಲಿ ರೈತರು, ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂಬ ಹಂಬಲ ಆಶಯದೊಂದಿಗೆ ಮೊದಲ ಕಂತನ್ನು ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ 20,000 ಕೋಟಿ ರು. ಮೊತ್ತದ ‘ಪಿಎಂ ಕಿಸಾನ್ ನಿಧಿ’ಯ 17 ನೇ ಕಂತನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ.

ಈ ನಿರ್ಧಾರಕ್ಕೆ ಕಾರಣ ಏನು?

ಈ ನಿರ್ಧಾರಕ್ಕೆ ಕಾರಣ ಇತ್ತೀಚಿನ ಲೋಕಸಭಾ ಚುನಾವಣೆ(lokhsabha election)ಯಲ್ಲಿ ಗ್ರಾಮೀಣ ಭಾಗದಲ್ಲಿ ನಮ್ಮ ಗೆಲುವಿಗೆ ಕೊಂಚ ಹಿನ್ನಡೆ ಕಾಯ್ದುಕೊಂಡಿರೂ ರೈತರು ನಮ್ಮನ್ನು ಕೈ ಬಿಡಲಿಲ್ಲ. ಆದ್ದರಿಂದ ರೈತರ ಕಲ್ಯಾಣಕ್ಕೆ ಎನ್‌ಡಿಎ ಸರ್ಕಾರ  ಈ ನಿರ್ಧಾರವನ್ನು ಕೈಗೊಂಡಿದೆ.

3 ಕೋಟಿ (3 crore) ಮನೆ ನಿರ್ಮಾಣ:

ಇತ್ತೀಚಿನ ದಿನಮಾನದಲ್ಲಿ ಮನೆ ನಿರ್ಮಿಸುವವರ ಸಂಖ್ಯೆ ಹೆಚ್ಚಳವಾಗಿದ್ದು, ಮನೆ ಎಲ್ಲರಿಗೂ ಬೇಕಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಒಂದು. ಹೀಗಾಗಿ ಕುಟುಂಬಗಳು ಮನೆ ನಿರ್ಮಾಣದ ಖರ್ಚು ವೆಚ್ಚವನ್ನು ಸರಿದೂಗಿಸಲು ಇನ್ನೂ ಹೆಚ್ಚುವರಿಯಾಗಿ 3 ಕೋಟಿ ಗ್ರಾಮೀಣ ಹಾಗೂ ನಗರ ಕುಟುಂಬಗಳ ಮನೆಗೆ ನೆರವು ನೀಡಲು ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸೋಮವಾರದಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಸರ್ಕಾರದ ಪಾಲಿನ ನೆರವು ನೀಡಲು ಅನುಮೋದನೆ ನೀಡಿದೆ. ಈ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಎಲ್ಲಾ ಮನೆಗಳಿಗೂ ಮೂಲಭೂತ ಅವಶ್ಯಕತೆಗಳಾದ ಶೌಚಾಲಯಗಳು, ಎಲ್‌ಪಿಜಿ ಸಂಪರ್ಕ(LPG connection), ವಿದ್ಯುತ್ ಸಂಪರ್ಕಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಒದಗಿಸಲಾಗುತ್ತದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

2 thoughts on “ಸ್ವಂತ ಮನೆ ಇಲ್ಲದವರಿಗೆ ಮೋದಿ ಬಂಪರ್‌ ಕೊಡುಗೆ ಘೋಷಣೆ..! ರೈತರಿಗೂ ಹಣ!

  1. Basavaraj kuppanna TALAWAR At kachapur post mavinabhavi Taluk lingasagur Disatik Raichur pin 584122

Leave a Reply

Your email address will not be published. Required fields are marked *

error: Content is protected !!