ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಲ್ಲಿ 2 ಲಕ್ಷ ರೂ. ಪರಿಹಾರ ಸಿಗಲಿದೆ!
ಕೇಂದ್ರ ಸರ್ಕಾರ(central government)ದಿಂದ ಹಲವಾರು ಯೋಜನೆಗಳು, ಸಾಲ(loan) ಸೌಲಭ್ಯಗಳು, ಪರಿಹಾರ ಧನ ಸೇರಿದಂತೆ ವಿವಿಧ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಇಂತಹ ಹಲವಾರು ಯೋಜನೆಗಳಿಂದ ಬಡವರಿಗೆ, ಆರ್ಥಿಕ ಪರಿಸ್ಥಿತಿ ಇಲ್ಲದವರಿಗೆ ಬಹಳ ಸಹಾಯವಾಗುತ್ತದೆ. ಪ್ರಧಾನ ಮಂತ್ರಿ ಯೋಜನೆಯ ಹೆಸರಿನಲ್ಲಿ ಹಲವಾರು ಯೋಜನೆಗಳು ಇದ್ದು, ಈ ಯೋಜನೆಗಳು ಹಲವರಿಗೆ ತಿಳಿದಿರುವುದಿಲ್ಲ. ಇದೀಗ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಎಂಬ ಯೋಜನೆಯ (Pradhan Mantri Jeevan Jyoti Bima Yojana) ಅಡಿಯಲ್ಲಿ ಪ್ರತಿ ಕುಟುಂಬಸ್ಥರಿಗೆ 2 ಲಕ್ಷ ರೂ. ಗಳನ್ನು ಪಡೆಯಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ :
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಯಾವುದೇ ಕಾರಣದಿಂದ ಮರಣ ಹೊಂದಿದ ಜೀವ ವಿಮಾ ರಕ್ಷಣೆಯನ್ನು ನೀಡುವ ವಿಮಾ ಯೋಜನೆಯಾಗಿದೆ. ಇದು ಒಂದು ವರ್ಷದ ಕವರ್ ಆಗಿದೆ, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ. ಈ ಯೋಜನೆಯನ್ನು ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುತ್ತವೆ ಮತ್ತು ಜೀವ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲಾಗುತ್ತದೆ. 18 ರಿಂದ 50 ವರ್ಷ ವಯಸ್ಸಿನ ಭಾಗವಹಿಸುವ ಬ್ಯಾಂಕ್‌ಗಳು(bank)/ಪೋಸ್ಟ್ ಆಫೀಸ್‌ಗಳ (post office) ಖಾತೆದಾರರಾಗಿರುವ ಎಲ್ಲಾ ವ್ಯಕ್ತಿಗಳು ಸೇರಲು ಅರ್ಹರಾಗಿರುತ್ತಾರೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿ ಪ್ರತಿ ವರ್ಷ 436 ರೂ ಕಟ್ಟಿದರೆ ಯಾವುದೇ ಕಾರಣದಿಂದ ಸಾವಾದರೂ 2 ಲಕ್ಷ ರೂ. ಪರಿಹಾರ ಸಿಗುತ್ತದೆ. ಪ್ರಧಾನ ಮಂತ್ರಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಜನರಿಗೆ ಈ ಯೋಜನೆಯು ಬಹಳ ಸಹಾಯವಾಗಲಿದೆ.
ಅಪಘಾತ (accident) ಅಥವಾ ಯಾವುದೇ ಕಾರಣಕ್ಕೆ ಅಕಾಲಿಕವಾಗಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಪರಿಹಾರ ಹಣ :
ಈ ಯೋಜನೆಯಲ್ಲಿ, ಒಂದು ವರ್ಷಕ್ಕೆ 436ರೂ. ರೂ. ಕಟ್ಟಿದರೆ ಸಾಕು ಅಪಘಾತ ಅಥವಾ ಯಾವುದೇ ಕಾರಣಕ್ಕೆ ಅಕಾಲಿಕವಾಗಿ ಸಾವನ್ನಪ್ಪಿದ್ದಾಗ ನಿಮ್ಮ ಕುಟುಂಬಸ್ಥರಿಗೆ ಪರಿಹಾರ ಹಣ ಸಿಗುತ್ತದೆ. ಎಂದು ಕಳೆದ ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಮಾಹಿತಿ ನೀಡಿದ್ದಾರೆ. ಇದನ್ನು ಜನರಿಗೆ ತಲುಪಿಸಲು ಸೂಚನೆ ನೀಡಿದ್ದಾರೆ.
ಈ ಯೋಜನೆಗೆ ಇರಬೇಕಾದ ಅರ್ಹತೆ (qualifications) ಮತ್ತು ವಯೋಮಿತಿ :
ಈ ಯೋಜನೆಗೆ 18 ರಿಂದ 50 ವರ್ಷದೊಳಗಿನನವರು ಅರ್ಹರಾಗಿರುತ್ತಾರೆ. ಇದೇ ರೀತಿ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಎಂದಿದ್ದು ಈ ಯೋಜನೆಯಲ್ಲಿ ವಾರ್ಷಿಕ 20 ರೂ. ಪ್ರೀಮಿಯಂ ಪಾವತಿರಿಸಿದರೆ ಅಪಘಾತದಲ್ಲಿ ಅಥವಾ ಆಕಸ್ಮಿಕವಾಗಿ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 1 ಲಕ್ಷ ರೂ ಪಾಲಿಸಿ ಮೊತ್ತ ಸಿಗಲಿದೆ ಎಂದಿದ್ದಾರೆ. 18 ರಿಂದ 70 ವರ್ಷದೊಳಗಿನವರು ಈ ಯೋಜನೆಗೆ ಅರ್ಹರಿರುತ್ತಾರೆ.
ಈಗಾಗಲೇ ಈ ಯೋಜನೆಯನ್ನು ಜೀವನ ಜ್ಯೋತಿ ಭೀಮಾ ಯೋಜನೆಯಲ್ಲಿ 72.85 ಲಕ್ಷ ಮತ್ತು ಸುರಕ್ಷಾ ಯೋಜನೆಯನ್ನು 1.74 ಕೋಟಿ ಜನ ತೊಡಗಿಸಿಕೊಂಡಿದ್ದಾರೆ. ಇಂತಹ ಮಾಹಿತಿಗಳು ಜನರಿಗೆ ಮತ್ತಷ್ಟು ತಿಳಿದು ಹೆಚ್ಚು ಜನ ಈ ಯೋಜನೆಗಳ ಫಲಾನುಭವಿಗಳಾಗಬೇಕು ಎಂದು ಸಿಎಂ ಹೇಳಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.