Poco Mobile: ಬರೋಬರಿ 1024 GB ಸ್ಟೋರೇಜ್ ನೊಂದಿಗೆ ಭರ್ಜರಿ ಎಂಟ್ರಿ ಕೊಡಲಿದೆ ಮತ್ತೊಂದು ಪೋಕೋ ಮೊಬೈಲ್

poco f6 phone

ಪೊಕೊ ಸ್ಮಾರ್ಟ್‌ಫೋನ್‌ಗಳು(Poco smartphones) ಅಗ್ಗದ ಬೆಲೆಗೆ ಉತ್ತಮ ಗುಣಮಟ್ಟದ ಫೀಚರ್‌ಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ ಕಂಪನಿಯು ಶೀಘ್ರದಲ್ಲೇ ಹೊಸ ಫೋನ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ವರದಿಗಳು ಸೂಚಿಸುತ್ತವೆ. ಹೊಸ ಫೀಚರ್‌ಗಳ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಲಭ್ಯವಿಲ್ಲ, ಆದರೆ ಅದು ಕಂಪನಿಯ ಹಿಂದಿನ ಮಾದರಿಯಂತೆಯೇ ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್‌ಗಳ ಫೋನ್ ಅನ್ನು ಬಿಡುಗಡೆ ಮಾಡುವುದನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ. ಹೌದು, ಪೊಕೊ(Poco) ಇನ್ನೇನು ಕೆಲವೇ ದಿನಗಳಲ್ಲಿ ಪೊಕೊ F6 ಸ್ಮಾರ್ಟ್‌ಫೋನ್ (Poco F6 smartphone) ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ಪೊಕೊ ಫೋನ್ : POCO F6
poco f6

ಡೆಡ್‌ಪೂಲ್(Deadpole) ವಿಶೇಷ ಆವೃತ್ತಿಯನ್ನು ROM ಕೋಡ್‌ನಲ್ಲಿ ಗುರುತಿಸಲಾಗಿದ್ದು, ಈ ಮೂಲಕ ಈ ಫೋನ್‌ ವಿಶೇಷ ಫೀಚರ್ಸ್(Special features) ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಈ ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ?, ಯಾವಾಗ ಲಾಂಚ್‌ ಆಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಶಿಯೋಮಿ(Xiaomi) ಇತ್ತೀಚೆಗೆ ಚೀನಾದಲ್ಲಿ ರೆಡ್ಮಿ ಟರ್ಬೋ 3(Redmi turbo 3) ಎಂಬ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸದ್ಯಕ್ಕೆ ಚೀನಾ ಮಾರುಕಟ್ಟೆಗೆ(China market) ಮಾತ್ರ ಸೀಮಿತವಾಗಿದೆ, ಆದರೆ ಶೀಘ್ರದಲ್ಲೇ ಜಾಗತಿಕವಾಗಿ Poco F6 ಎಂಬ ಹೆಸರಿನಲ್ಲಿ ಮರುಬ್ರಾಂಡ್(Rebrand) ಮಾಡಿ ಬಿಡುಗಡೆ ಮಾಡಲಾಗುವುದು. ಅಂದರೆ ಈ ರೆಡ್ಮಿ ಟರ್ಬೋ 3(Redmi turbo 3) ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಪೊಕೊ F6(Poco F6)  ಎಂಬ ಹೆಸರಿನಲ್ಲಿ ಲಾಂಚ್‌(Launch) ಆಗಬಹುದು ಎಂದು ತಿಳಿದುಬಂದಿದೆ. ರೆಡ್ಮಿ ಟರ್ಬೋ 3 (Redmi Turbo 3)  ಮತ್ತು ಪೊಕೊ ಎಫ್6 (Poco F6) ಎರಡೂ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಸೆ ಜನೆನ್ 3 ಪ್ರೊಸೆಸರ್‌ನಿಂದ(Snapdragon 8s Gen 3 processor) ಚಾಲಿತ ಸ್ಥಿತಿಯನ್ನು ಪರಿಶೀಲಿಸಲಾಗಿದೆ.

ಪೊಕೊ F6 ವೈಶಿಷ್ಟ್ಯತೆಗಳು :

ಕೆಲವು ಮೂಲಗಳ ಪ್ರಕಾರ, ಪೊಕೊ F6 (Poco F6) ಎಂಬ ಹೊಸ ಸ್ಮಾರ್ಟ್‌ಫೋನ್ IMEI ಡೇಟಾಬೇಸ್‌ನಲ್ಲಿ (Database) ಕಾಣಿಸಿಕೊಂಡಿದೆ. ಈ ಫೋನ್ ಎರಡು ಮಾದರಿ ಸಂಖ್ಯೆಗಳನ್ನು ಹೊಂದಿದೆ: 24069PC21I ಮತ್ತು 24069PC21G. ಈ ಸಂಖ್ಯೆಗಳು ಕ್ರಮವಾಗಿ ಭಾರತೀಯ ಮತ್ತು ಜಾಗತಿಕ ಮಾದರಿಗಳನ್ನು ಪ್ರತಿನಿಧಿಸುತ್ತವೆ ಎಂದು ಸೂಚಿಸಲಾಗಿದೆ.

poco f5 poco


ಇತ್ತೀಚೆಗೆ, ಪೊಕೊ F6(Poco F6) ಮಾನಿಕರ್ ಜೊತೆಗೆ ರೆಡ್ಮಿ ಟರ್ಬೊ 3 (Redmi turbo 3) ROM ನಲ್ಲಿ ಭಾರತೀಯ ಮಾದರಿ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ. ಇದು ಈ ಫೋನ್ ಡೆಡ್‌ಪೂಲ್ ಆವೃತ್ತಿಯಾಗಿ ಬರಬಹುದು ಎಂಬ ಊಹೆಗಳು ಕೂಡಾ ಇವೆ. ಈ ಊಹೆಗೆ ಮತ್ತೊಂದು ಬೆಂಬಲ, ಈ ಫೋನ್ ಹೈಪರ್ ಓಎಸ್‌ನಲ್ಲಿಯೂ(Hyper OS)  ಕಾಣಿಸಿಕೊಂಡಿದೆ. ಈ ಎಲ್ಲಾ ಪುರಾವೆಗಳು ಸ್ಪಷ್ಟವಾಗಿಲ್ಲದಿದ್ದರೂ, ಪೊಕೊ F6 ಡೆಡ್‌ಪೂಲ್ ಆವೃತ್ತಿಯಾಗಿ ಬರಬಹುದು ಎಂಬ ಸಾಧ್ಯತೆಯನ್ನು ಸೂಚಿಸುತ್ತವೆ.ಪೊಕೊ F6 ಡೆಡ್‌ಪೂಲ್ ಅಭಿಮಾನಿಗಳಿಗೆ ಒಂದು ರೋಮಾಂಚಕ ಆಯ್ಕೆಯಾಗಬಹುದು.

ಪೊಕೊ F6 ಡೆಡ್‌ಪೂಲ್ ಆವೃತ್ತಿಯ ವಿವರಗಳು ಕಡಿಮೆ ಇದ್ದರೂ ಇದು ಪ್ರಮಾಣಿತ ಪೊಕೊ F6 ಗೆ ಹೋಲಿಸಬಹುದಾದ ಫೀಚರ್ಸ್‌ ಆಯ್ಕೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಿಂದಿನ ವದಂತಿಗಳ ಪ್ರಕಾರ, ಪೊಕೊ F6 ಜುಲೈನಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಬಹುದು ಅಲ್ಲದೆ ಭಾರತವು ಅದನ್ನು ಸ್ವೀಕರಿಸುವ ಮೊದಲ ಮಾರುಕಟ್ಟೆಯಾಗಿರಲಿದೆ ಎಂದೂ ಸಹ ಲೀಕ್‌ ಮಾಹಿತಿಗಳಿಂದ ತಿಳಿದುಬಂದಿದೆ.

ರೆಡ್ಮಿ ಟರ್ಬೋ 3 ಫೀಚರ್ಸ್‌:

ಇನ್ನೂ ರೆಡ್ಮಿ ಟರ್ಬೋ 3 ಫೀಚರ್ಸ್‌ ಏನೆಲ್ಲಾ ಇರಬಹುದು ಎಂದು ತಿಳಿಯಲು ಹೋದರೆ, ರೆಡ್ಮಿ ಟರ್ಬೋ 3 ಸ್ಮಾರ್ಟ್‌ಫೋನ್ (Redmi Turbo 3 smartphone) 6.67 ಇಂಚಿನ OLED ಡಿಸ್‌ಪ್ಲೇ(Display) ಹೊಂದಿದ್ದು, 1.5K ರೆಸಲ್ಯೂಶನ್(Resolution) ಮತ್ತು 120Hz ರಿಫ್ರೆಶ್ ರೇಟ್‌ (Refresh rate) ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ(Dual rear camera) ರಚನೆ ಪಡೆದಿದೆ. ಅಂದರೆ 50 ಮೆಗಾಪಿಕ್ಸೆಲ್ ಮುಖ್ಯ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್‌(ultrawide sensor)  ಆನ್ನು ಈ ಫೋನ್‌ನಲ್ಲಿ ಕಾಣಬಹುದು. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 20 ಮೆಗಾಪಿಕ್ಸೆಲ್ ಮುನ್ನ ಕ್ಯಾಮೆರಾ ಆಯ್ಕೆ ಪಡೆದಿದೆ.

pocoo

ಇದರೊಂದಿಗೆ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌(Internal storage)  ಆಯ್ಕೆಯೊಂದಿಗೆ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಿಂದ(snapdragon 8s Gen 3 proccesor) ಕಾರ್ಯನಿರ್ವಹಿಸಲಿದ್ದು, ಅಧಿಕ ಬಿಸಿಯಾಗುವುದನ್ನು ತಡೆಯಲು ಇದು ಸುಧಾರಿತ ಕೂಲಿಂಗ್ (Cooling) ವ್ಯವಸ್ಥೆಯನ್ನು ಸಹ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ (Battery) ಆಯ್ಕೆ ಪಡೆದಿದ್ದು, ತ್ವರಿತ ಚಾರ್ಜಿಂಗ್‌ಗಾಗಿ (Charging) 90W ವೇಗದ ಚಾರ್ಜಿಂಗ್ (Fast charging) ಅನ್ನು ಬೆಂಬಲಿಸುತ್ತದೆ.ಇದರ ಜೊತೆಗೆ ಈ ಫೋನ್ ಹೈಪರ್‌ಓಎಸ್(Hyper OS)  ಅನ್ನು ರನ್‌ ಮಾಡಲಿದ್ದು, ಟಚ್‌ಲೆಸ್(Touchless)  ನಿಯಂತ್ರಣಕ್ಕಾಗಿ ಏರ್ ಗೆಸ್ಚರ್ಸ್ ಫೀಚರ್ಸ್‌ ಆಯ್ಕೆ ಪಡೆದಿಕೊಂಡಿದೆ. ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದ ಮೇಲೆ  ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಅವರಿಗೂ ಮಾಹಿತಿಯನ್ನು ತಿಳಿಸಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!