ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ!
ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್ ಆಫೀಸ್ ನಲ್ಲಿ ಮಾಡುವ ಹೂಡಿಕೆ ಬ್ಯಾಂಕ್ನಲ್ಲಿ ಮಾಡುವ ಹೂಡಿಕೆಯಂತೆಯೇ ಸುರಕ್ಷಿತವಾಗಿರುತ್ತದೆ. ಇಲ್ಲಿ ಹೂಡುವ ಹಣಕ್ಕೆ ಸರ್ಕಾರ ಭದ್ರತಾ ಖಾತರಿಯನ್ನು ನೀಡುತ್ತದೆ. ಅಂಚೆ ಕಚೇರಿ ನೀಡುವ ಸ್ಕೀಮ್ ಗಳ ಪೈಕಿ RD (Recurring Deposit) ಬಗ್ಗೆ ನಾವು ತಿಳಿದುಕೊಳ್ಳೋಣ.ಜನಪ್ರಿಯ RD ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ₹17 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದುಕೊಳ್ಳಬಹುದು. ಹೇಗಾದ್ರೂ ಮಾಡಿ ನನ್ನದ್ದಲ್ಲ ಅಂತ 336 ರೂಪಾಯಿ ಉಳಿಸಿ ಇಲ್ಲಿ ಹೂಡಿಕೆ ಮಾಡಿಬಿಡಿ. ಆಮೇಲೆ ನೀವು ಲಕ್ಷಾಧಿಪತಿಯಾಗೋದು ಪಕ್ಕಾ. ನಿಮ್ಮ ಈ ದುಡ್ಡಿಗೆ ಸರ್ಕಾರನೇ ಗ್ಯಾರಂಟಿ. ಪ್ರತಿದಿನ ಎಷ್ಟು ಹೂಡಿಕೆ ಮಾಡಬೇಕು? ಎಷ್ಟು ವರ್ಷಗಳವರೆಗೆ ಹೂಡಿಕೆ ಮಾಡಬೇಕು? ಬಡ್ಡಿ (interest) ಸೇರಿ ಗ್ರಾಹಕರಿಗೆ ಸಿಗುವ ಮೊತ್ತ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜನರು ಕೂಡ ತಾವು ದುಡಿಯುವ ದುಡ್ಡಿನಲ್ಲಿ ಒಂದಿಷ್ಟು ಆದಾಯವನ್ನು ಉಳಿಸಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡುವ ಸಲುವಾಗಿ ಹಾಗೂ ಹೂಡಿಕೆ ಮಾಡುವ ಹಣಕ್ಕೆ ಉತ್ತಮ ಬಡ್ಡಿ ದೊರೆಯಬೇಕೆಂದು ಸುರಕ್ಷಿತವಾಗಿರುವಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಅಂಚೆ ಕಚೇರಿಯ (post office) ಹಲವು ಚಿಕ್ಕ ಉಳಿತಾಯ ಯೋಜನೆಗಳನ್ನು ಮಧ್ಯಮ ಮತ್ತು ಕೆಳ ವರ್ಗದ ಜನತೆಗೆ ಉಪಯೋಗವಾಗುತ್ತವೆ.ಅವುಗಳಲ್ಲಿ ಒಂದು RD ಯೋಜನೆ.
ಹೌದು, RD ಯೋಜನೆಯಲ್ಲಿ ಪ್ರತಿ ತಿಂಗಳು ₹100 ರಿಂದ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ನಲ್ಲಿ ನೀಡುವ ಎಲ್ಲಾ ಉಳಿತಾಯ ಯೋಜನೆಗಳಿಗಿಂತ RD ಯೋಜನೆಯಲ್ಲಿ ಮಾಡುವ ಹೂಡಿಕೆ ತುಂಬಾ ಸುರಕ್ಷಿತವಾದದ್ದು. ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಪ್ರತಿ ದಿನ ₹333 ರಂತೆ ಹೂಡಿಕೆ ಮಾಡಿದರೆ ₹17 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಬಹುದು. ಆದರೆ ಈ ಉಳಿತಾಯ ಯೋಜನೆಯಲ್ಲಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹೂಡಿಕೆ ಮಾಡಬೇಕು.
ಸರಿಯಾದ ಸಮಯಕ್ಕೆ ಹೂಡಿಕೆ ಮಾಡದಿದ್ದರೆ ಏನಾಗುತ್ತದೆ :
ಈ ಉಳಿತಾಯ ಯೋಜನೆಯಲ್ಲಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹೂಡಿಕೆ ಮಾಡದಿದ್ದರೆ ಅಥವಾ ಕಂತು ಪಾವತಿಸಲು (pay installments) ಮರೆತರೆ, 1% ದಂಡ ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ ಗ್ರಾಹಕರು ಸತತವಾಗಿ 4 ಕಂತುಗಳನ್ನು ಪಾವತಿ ಮಾಡದಿದ್ದರೆ ಅಂಥಹ ಖಾತೆಯನ್ನು ಮುಚ್ಚಲಾಗುತ್ತದೆ. ಆದ್ದರಿಂದ ಗ್ರಾಹಕರು ಪ್ರತಿ ತಿಂಗಳು ಕೂಡ ಸರಿಯಾದ ಸಮಯಕ್ಕೆ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
RD ಖಾತೆಯ ಮುಕ್ತಾಯ ಅವಧಿ ಎಷ್ಟು?:
ಅಂಚೆ ಕಚೇರಿಯ (post office) RD ಖಾತೆಯ ಮುಕ್ತಾಯ ಅವಧಿ 5 ವರ್ಷಗಳು. ಪ್ರತಿ ತಿಂಗಳು ಕನಿಷ್ಠ ₹100 ಹೂಡಿಕೆ ಮಾಡಿ RD ಖಾತೆ ತೆರೆಯಬಹುದು. ಗ್ರಾಹಕರು ಪ್ರತ್ಯೇಕ ಖಾತೆ ಅಥವಾ ಜಂಟಿ ಖಾತೆಯನ್ನಾದರೂ ತೆರೆಯಬಹುದು. ಈ ಯೋಜನೆಯಲ್ಲಿ ಪ್ರಸ್ತುತ ಶೇ.6.8 ರಷ್ಟು ಬಡ್ಡಿ (interest)ನೀಡಲಾಗುತ್ತದೆ. ಈ ಯೋಜನೆಯಡಿ ಗ್ರಾಹಕರಿಗೆ ಬಡ್ಡಿಯ ಲಾಭ ಸಿಗುತ್ತದೆ.
ಈ ಯೋಜನೆಯಡಿ ಹಣ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ:
ಈ ಯೋಜನೆಯಡಿ ಹೂಡಿಕೆ ಮಾಡುವ ಮೂಲಕ ₹17 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆಯಬಹುದು. ಪ್ರತಿ ದಿನ ₹333 ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ₹10,000 ಆಗುತ್ತದೆ. ವರ್ಷಕ್ಕೆ ₹1.20 ಲಕ್ಷ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆ ಮುಕ್ತಾಯದ ಸಂದರ್ಭದಲ್ಲಿ ಅಂದರೆ ಐದು ವರ್ಷಗಳ ನಂತರ ₹ 5,99,400 ಹೂಡಿಕೆ ಮಾಡಲಾಗುತ್ತದೆ. ಇದರ ಜೊತೆಯಲ್ಲಿ ಶೇ .6.8 ರಂತೆ ಬಡ್ಡಿ ಸೇರಿದರೆ ₹1,15,427 ಸಿಗುತ್ತದೆ. ಒಟ್ಟಾರೆಯಾಗಿ ಈ ಯೋಚನೆಯ ಮುಕ್ತಾಯದಲ್ಲಿ ಗ್ರಾಹಕರ ಕೈಗೆ ಒಟ್ಟು ಮೊತ್ತ ₹7,14,827 ಸಿಗುತ್ತದೆ.
ಈ ಯೋಜನೆಯ ಅವಧಿಯನ್ನು ಕೂಡ ವಿಸ್ತರಿಸಬಹುದು :
RD ಯೋಜನೆಯ ಮುಕ್ತಾಯದ ಅವಧಿ 5 ವರ್ಷಗಳು. ಇದರ ನಂತರವೂ ಕೂಡ ಗ್ರಾಹಕರು ಇನ್ನೂ ಐದು ವರ್ಷಗಳಿಗೆ ಯೋಜನೆಯನ್ನು ವಿಸ್ತರಿಸಬಹುದು. ಆದರೆ ನಿರಂತರವಾಗಿ 10 ವರ್ಷಗಳವರೆಗೆ(10 years) ಹೂಡಿಕೆ ಮಾಡಬೇಕು. ಆಗ, 10 ವರ್ಷಗಳ ಅಂತ್ಯದಲ್ಲಿ ಹೂಡಿಕೆ ಮಾಡಿದ ಮೊತ್ತ ₹12,00,000 ಆಗುತ್ತದೆ. ಇದಕ್ಕೆ ಬಡ್ಡಿ ಸೇರಿ ₹5,08,546 ಸಿಗುತ್ತದೆ. ಒಟ್ಟಾರೆಯಾಗಿ ₹17 ಲಕ್ಷಕ್ಕೂ ಹೆಚ್ಚು ಹಣ ಗ್ರಾಹಕರಿಗೆ ಸಿಗುತ್ತದೆ. ಅಂದರೆ 10 ವರ್ಷಗಳ RD ಮುಗಿಯುವ ವೇಳೆಗೆ ಗ್ರಾಹಕರಿಗೆ ₹17,08,546 ಹಣ ಸಿಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.