ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಹಾಗೆಯೇ ಹಲವಾರು ಅಂಚೆ ವಿತರಣಾ ಸೇವೆಗಳನ್ನು ಇಂಡಿಯಾ ಪೋಸ್ಟ್ ಒದಗಿಸುತ್ತಿದೆ. ಆದರೆ ಬ್ಯಾಂಕಿಂಗ್ ಸೇವೆಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರಿಗೆ ಅಂಚೆ ಕಚೇರಿ ಆಧಾರವಾಗಿದೆ. ಭಾರತ ಅಂಚೆ ದೇಶದಾದ್ಯಂತ ಬೃಹತ್ ಜಾಲವನ್ನು ಹೊಂದಿದೆ.
ಇದೀಗ, ತನ್ನ ಗ್ರಾಹಕರನ್ನು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದಂತಹ ಘಟನೆಗಳಿಂದ ರಕ್ಷಿಸುವ ಸಲುವಾಗಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್(India post payments) ಬ್ಯಾಂಕ್ ಕೇವಲ 399 ರೂಪಾಯಿ ಮತ್ತು 299 ರೂಪಾಯಿಗೆ ಆಕಸ್ಮಿಕ ವಿಮಾ (insurance ) ಪಾಲಿಸಿಯನ್ನು ಹೊರತಂದಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
299 ರೂಪಾಯಿಗಳ ಬೇಸಿಕ್ ವಿಮಾ ಯೋಜನೆ(Insurance plan) :
ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಕಾಯ ಅಂಗ ವೆಹಿಕಲ್ಯ ಹಾಗೂ ಪಾಶ್ವ ವಾಯುವಿಗೆ ತುತ್ತಾದರೆ ಇನ್ನೂ 99 ರೂಪಾಯಿ ಬೇಸಿಕ್ ವಿಮಾ ಯೋಜನೆಯಲ್ಲಿ ಇದರ ಫಲಾನುಭವಿಗಳು 10 ಲಕ್ಷ ರೂಪಾಯಿಗಳನ್ನು ವಿಮಾ ಕವರೇಜ್ ಆಗಿ ಪಡೆಯಬಹುದಾಗಿದೆ. ಐಪಿಡಿಯಲ್ಲಿ ಈ ಪ್ಲಾನ್ ನಲ್ಲಿ 60,000ಗಳವರೆಗೆ ವೈದ್ಯಕೀಯ ವೆಚ್ಚಗಳನ್ನು ಫಲಾನುಭವಿಗಳು ಪಡೆಯಬಹುದಾಗಿದೆ ಹಾಗೆಯೇ 30000ಗಳನ್ನು ಓ ಪಿ ಡಿ ಯಲ್ಲಿ ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಲು ಅಂಚೆ ಕಚೇರಿಗೆ ಅವಕಾಶ ಕಲ್ಪಿಸಿದೆ.
399 ರೂಪಾಯಿಗಳ ಪ್ರೀಮಿಯಂ ವಿಮಾ ಯೋಜನೆ :
ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲ್ಯಾ ಹೊಂದಿದರೆ 399 ರೂಪಾಯಿಗಳಲ್ಲಿ ಪ್ರೀಮಿಯಂ ವಿಮಾ ಯೋಜನೆಯ ಅಡಿಯಲ್ಲಿ 10 ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತದೆ. ಸಾವಿರ ರೂಪಾಯಿಗಳ ವರಿಗೆ ವೈದ್ಯಕೀಯ ವೆಚ್ಚಗಳನ್ನು ಐಪಿಡಿಯಲ್ಲಿ ಹಾಗೂ 30000 ಗಳ ಅಪಘಾತ ವೈದ್ಯಕೀಯ ವೆಚ್ಚಗಳನ್ನು ಓ ಪಿ ಡಿ ಯಲ್ಲಿ ಫಲಾನುಭವಿಗಳು ಪಡೆಯಬಹುದಾಗಿದೆ. ಹತ್ತು ದಿನಗಳ ಕಾಲ ಒಂದು ವೇಳೆ ಆಸ್ಪತ್ರೆಗೆ ಫಲಾನುಭವಿಗಳು ದಾಖಲಾಗಿದ್ದರೆ ಅವರಿಗೆ ಒಂದು ಸಾವಿರ ರೂಪಾಯಿಗಳನ್ನು ದಿನಕ್ಕೆ ಪಾವತಿಸಲಾಗುತ್ತದೆ. ಅಲ್ಲದೆ ಮೃತರ ಮಕ್ಕಳ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳವರೆಗೆ ಪ್ರತಿ ಮಗುವಿಗೆ ಸಹಾಯಧನವಾಗಿ ನೀಡುತ್ತದೆ. 10 ಲಕ್ಷ ರೂಪಾಯಿಗಳ ವಿಮಾ ಪರಿಹಾರವನ್ನು ವಾಹನಾ ಅಪಘಾತ, ಹಾವು ಕಡಿತ, ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದರೆ ಹಾಗೂ ವಿದ್ಯುತ್ ಅಪಘಾತದಲ್ಲಿ ನೀಡಲಾಗುತ್ತದೆ.
ವಿಮಾ ಯೋಜನೆಯ ಅರ್ಹತೆಗಳು :
ಅಪಘಾತ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಇಂಡಿಯ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ಹೊಂದಿರುವಂತಹ ಎಲ್ಲ ಗ್ರಾಹಕರು ಈ ಯೋಜನೆ ಪ್ರಯೋಜನವನ್ನು ಪಡೆಯಬಹುದು. ಗ್ರಾಹಕರ ವಯಸ್ಸು 18 ರಿಂದ 65 ವರ್ಷಗಳ ನಡುವೆ ಇರಬೇಕು. ಅಪಘಾತ ವಿಮೆ ಮಾಡಿಸುವ ವಿಧಾನ ಈಗಾಗಲೇ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ನೀವು ಖಾತೆಯನ್ನು ಹೊಂದಿದ್ದರೆ ಅಪಘಾತ ವಿಮೆಯನ್ನು 299 ರೂಪಾಯಿ ಅಥವಾ 399 ರೂಪಾಯಿಗಳಲ್ಲಿ ಮಾಡಿಸಬಹುದಾಗಿದೆ. ಒಂದು ವೇಳೆ ಖಾತೆಯನ್ನು ಅಂಚೆ ಇಲಾಖೆಯಲ್ಲಿ ಹೊಂದಿರದೆ ಇದ್ದರೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ನೂರು ರೂಪಾಯಿಗಳನ್ನು ಪಾವತಿಸಿ ಖಾತೆ ತೆರೆಯಿರಿ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್(Aadhar card and PAN card) ಸಂಖ್ಯೆಯನ್ನು ಜೊತೆಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಭಾರತೀಯ ಅಂಚೆ(Indian post) ಪಾವತಿಗಳ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುವುದಕ್ಕಾಗಿ ಸಲ್ಲಿಸಬೇಕಾಗುತ್ತದೆ. ಇದಾದ ನಂತರ ಕನಿಷ್ಟ 200 ರೂಪಾಯಿಗಳನ್ನು ಬ್ಯಾಂಕ್ ಖಾತೆಯಲ್ಲಿ ಇಡಬೇಕು ತದ ನಂತರ ನೀವು ಅಪಘಾತ ವಿಮಾ ಪಾಲಿಸಿ ಎಂದು 299 ರೂಪಾಯಿಗಳು ಹಾಗೂ 399 ರೂಪಾಯಿಗಳಲ್ಲಿ ಮಾಡಿಸಬಹುದಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಅಂಚೆ ಕಛೇರಿಯ ಈ ವಿಮಾ ಸೌಲಭ್ಯದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ವಿಮಾ ಯೋಜನೆಯಿಂದ ಅಂಚೆ ಕಚೇರಿಯಲ್ಲಿ 299 ರೂಪಾಯಿಗಳು ಹಾಗೂ 399 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 10 ಲಕ್ಷ ರೂಪಾಯಿಗಳವರೆಗೆ ವಿಮಾ ಸೌಲಭ್ಯವನ್ನು ಪಡೆಯಬಹುದು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Car lon apply