ಪೋಸ್ಟ್ ಅಫಿಸ್ (Post Office) ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಡಬಲ್ ಬಡ್ಡಿ ಪಡೆಯಿರಿ.
ಜಗತ್ತು ಬದಲಾಗಿದೆ, ಎಲ್ಲರೂ ತಮ್ಮ ಭವಿಷ್ಯದ ಜೀವನ (feature life) ಸುಖಕರವಾಗಿರಲು ಬಯಸುತ್ತಾರೆ. ಅದಕ್ಕಾಗಿ ದುಡಿದ ಹಣದಲ್ಲಿ ಸ್ವಲ್ಪ ಪಾಲು ತಮ್ಮ ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಮಕ್ಕಳ ಭವಿಷ್ಯ, ಮದುವೆ, ಮನೆ ಕಟ್ಟುವ ಆಸೆ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಸರ್ಕಾರದ ಮತ್ತು ಖಾಸಗಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಲು ಇಚ್ಛಿಸುತ್ತಾರೆ. ಹಣವನ್ನು ಹೂಡಿಕೆ ಮಾಡುವ ಸರ್ಕಾರದ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಯೋಜನೆಗಳು ಕೂಡ ಒಂದು. ಪೋಸ್ಟ್ ಆಫೀಸ್ ನಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಯಂತಹ ಯೋಜನೆಗಳು ಇರುತ್ತವೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ (post office time deposit account) ದೇಶದ ಅಂಚೆ ಕಚೇರಿಗಳಲ್ಲಿ ನೀಡಲಾಗುವ ಹಲವಾರು ವಿಧದ ಖಾತರಿ-ಆದಾಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ ಸ್ಥಿರ ಠೇವಣಿಗಳಲ್ಲಿ ಒಂದು :
ಸ್ಥಿರ ಠೇವಣಿ ಯೋಜನೆ (Fixed Deposit Scheme) ಇದಾಗಿದ್ದು, ಬಡ್ಡಿ(interest)ಯನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗುತ್ತದೆ ಆದರೆ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ನಾಲ್ಕು ಮೆಚ್ಯುರಿಟಿ (Maturity) ಆಯ್ಕೆಗಳಲ್ಲಿ ಈ ಯೋಜನೆಲ್ಲಿ ಹೂಡಿಕೆ ಮಾಡಬಹುದು :
ಸದ್ಯಕ್ಕೆ ಪೋಸ್ಟ್ ಆಫೀಸ್ ಎಫ್‌ಡಿ ಖಾತೆಯು (post office FD account) ನಾಲ್ಕು ಮೆಚ್ಯೂರಿಟಿ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಒಂದು ವರ್ಷದಿಂದ ಐದು ವರ್ಷಗಳವರೆಗೆ ಮತ್ತು ವಾರ್ಷಿಕ ಆದಾಯವನ್ನು 6.9 ಪ್ರತಿಶತದಿಂದ 7.5 ಪ್ರತಿಶತದಷ್ಟು ತ್ರೈಮಾಸಿಕವಾಗಿ ನೀಡುತ್ತದೆ. ಈ ಸ್ಥಿರ ಠೇವಣಿ ಹೂಡಿಕೆಯನ್ನು ಕನಿಷ್ಟ ರೂ 1,000 ದೊಂದಿಗೆ ಆರಂಭಿಸಬಹುದು. ರೂ 1,100 ಮತ್ತು ರೂ 9,900 ನಂತಹ ಠೇವಣಿ ಮೊತ್ತವನ್ನು ಪೋಸ್ಟ್ ಆಫೀಸ್ ಟಿಡಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ 1 ವರ್ಷ, 2 ವರ್ಷ, 3 ವರ್ಷ, ಹಾಗೂ 5 ವರ್ಷದ ಟಿಡಿ ಬಡ್ಡಿ ವ್ಯವಸ್ಥೆವಿರುತ್ತದೆ :
ಒಂದು ವರ್ಷದಲ್ಲಿ 6.9% ಬಡ್ಡಿ, ಎರಡು ವರ್ಷದಲ್ಲಿ 7.0%, ಮೂರು ವರ್ಷದಲ್ಲಿ 7.1%, ಹಾಗೂ ಐದು ವರ್ಷದಲ್ಲಿ 7.5% ಬಡ್ಡಿ ದೊರೆಯುತ್ತದೆ. ಹಾಗೆಯೇ ರೂ 1 ಲಕ್ಷ ಹೂಡಿಕೆಯು ಪೋಸ್ಟ್ ಆಫೀಸ್ ಎಫ್‌ಡಿ ಸಣ್ಣ ಉಳಿತಾಯ ಯೋಜನೆಯಲ್ಲಿ ಉತ್ತಮ ಲಾಭ ದೊರೆಯುತ್ತಿದ್ದು, ಒಂದು ವರ್ಷದಲ್ಲಿ ಸಿಗುವ ಬಡ್ಡಿ ದರ ರೂ 7,081 ಪ್ರಿನ್ಸಿಪಲ್ ಮೊತ್ತ ರೂ 1,00,000 ಒಟ್ಟು ಮೌಲ್ಯ ರೂ 1,07,081 ಆಗಿದೆ. ಎರಡನೇ ವರ್ಷದಲ್ಲಿ ಗಳಿಸಿದ ಬಡ್ಡಿ ದರ ರೂ 14,888 ಹಾಗೂ ಪ್ರಿನ್ಸಿಪಲ್ ಮೊತ್ತ ರೂ 1,00,000 ಒಟ್ಟು ಆದಾಯ 1,14,888 ಆಗಿರುತ್ತದೆ.
ಮೂರನೇ ವರ್ಷದಲ್ಲಿ ಗಳಿಸಿದ ಬಡ್ಡಿ ದರ ರೂ 23,5075, ಹಾಗೂ ಪ್ರಿನ್ಸಿಪಲ್ ಮೊತ್ತ ರು 1,00,000 ಒಟ್ಟು ಆದಾಯ 1,23,5075 ಇನ್ನು ಐದನೇ ವರ್ಷದಲ್ಲಿ ಬಡ್ಡಿದರ ರೂ 44,995 ಪ್ರಿನ್ಸಿಪಲ್ ಮೊತ್ತ (principal rate) ರೂ 1,00,000 ಹಾಗೂ ಒಟ್ಟು ಮೊತ್ತ 1,44,995 ಆಗಿರುತ್ತದೆ. ಪೋಸ್ಟ್ ಆಫೀಸ್ ಎಫ್‌ಡಿ ಸಣ್ಣ ಉಳಿತಾಯ ಯೋಜನೆಯಲ್ಲಿ ರೂ 20,000 ದ ಹೂಡಿಕೆ ಹೇಗೆ ಲಾಭಕರವಾಗಿದೆ ಎಂಬುದನ್ನು ತಿಳಿಯೋಣ..
ಒಂದು ವರ್ಷದಲ್ಲಿ ರೂ 1,416 ಬಡ್ಡಿ ದೊರೆಯುತ್ತದೆ ಹಾಗೂ ಪ್ರಿನ್ಸಿಪಲ್ ಮೊತ್ತ ರೂ 20,000 ಒಟ್ಟು ಮೊತ್ತ 21,416 ಆಗಿದೆ. ಇನ್ನು ಎರಡನೇ ವರ್ಷದಲ್ಲಿ ರೂ 2,978 ಬಡ್ಡಿ ಗಳಿಸಬಹುದು ಇದು ಕೊನೆಯಲ್ಲಿ ಬಡ್ಡಿಸೇರಿ 22,978 ಆಗಿ ಕೈಗೆ ದೊರೆಯುತ್ತದೆ.
ಮೂರನೇ ವರ್ಷದಲ್ಲಿ 4,701.5 ಬಡ್ಡಿ ಗಳಿಸಬಹುದು ದೊರೆಯುವ ಒಟ್ಟು ಮೊತ್ತ ರೂ 24,701.5 ಆಗಿದೆ. ಐದನೇ ವರ್ಷದಲ್ಲಿ ದೊರೆಯುವ ಬಡ್ಡಿದರ ರೂ 8,999 ಆಗಿದ್ದು ಕೊನೆಗೆ ಕೈಗೆ ಸಿಗುವ ಮೊತ್ತ ರೂ 28,999 ಆಗಿದೆ.
ರೂ. 5,000 ಹೂಡಿಕೆ ಮಾಡಿದರೆ, ಐದು ವರ್ಷದಲ್ಲಿ ಪಡೆಯುವ ಲಾಭ :
ರೂ 5,000 ಹೂಡಿಕೆ ಮಾಡುವುದಾದರೆ ಒಂದು ವರ್ಷದಲ್ಲಿ ರೂ 354 ರ ಬಡ್ಡಿದರದಂತೆ ನಿಮಗೆ ರೂ 5,354 ದೊರೆಯುತ್ತದೆ. ಎರಡನೇ ವರ್ಷದಲ್ಲಿ ರೂ 744 ಬಡ್ಡಿದರವಾಗಿದೆ ಅಂತಿಮವಾಗಿ ಕೈಗೆ ಸಿಗುವ ಮೊತ್ತ ರೂ 5,744 ಆಗಿದೆ. ಮೂರನೇ ವರ್ಷದಲ್ಲಿ ರೂ 1,175 ಬಡ್ಡಿ ದೊರೆಯುತ್ತದೆ ಹಾಗೂ ಕೊನೆಗೆ ಕೈಗೆ ಸಿಗುವ ಮೊತ್ತ ರೂ 6,175 ಆಗಿದೆ ಇನ್ನು ಐದನೇ ವರ್ಷದಲ್ಲಿ ರೂ 2,250 ಬಡ್ಡಿ ದೊರೆಯುತ್ತದೆ ಹಾಗೂ ಕೊನೆಗೆ ದೊರೆಯುವ ಮೊತ್ತ ರೂ 7,250 ಆಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.