ನಿಮ್ಮ ಹೂಡಿಕೆಗೆ(Investment) ಉತ್ತಮ ಲಾಭ ಬಯಸುವಿರಾ? ಆಗ ಈ ಹೂಡಿಕೆಯನ್ನು ನೋಡಿ. ಇದು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯಾಗಿದೆ. ಯಾವ ಯೋಜನೆ ಎಂದು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಅದರ ಮೇಲೆ ಉತ್ತಮ ಬಡ್ಡಿ(interest)ಯನ್ನು ಪಡೆಯಲು ನೀವು ಹುಡುಕುತ್ತಿದ್ದರೆ, ಅಂಚೆ ಕಚೇರಿಯ (Post office) ಯೋಜನೆಯು ನಿಮಗೆ ಉತ್ತಮ ಆಯ್ಕೆಯಾಗಿದೆ. ಅಂಚೆ ಕಚೇರಿಯು ಅನೇಕ ಠೇವಣಿ ಯೋಜನೆಗಳನ್ನು ಪ್ರಸ್ತಾಪಿಸುತ್ತಿದೆ. ಉತ್ತಮ ಬಡ್ಡಿ ಮತ್ತು ಹೆಚ್ಚಿನ ಲಾಭಗಳನ್ನು ನೀಡುವ ಯೋಜನೆಗಳನ್ನು ಇವು ಒಳಗೊಂಡಿವೆ. ಇವತ್ತಿನ ವರದಿಯಲ್ಲಿ ಇಂತಹದೇ ಅಂಚೆ ಕಛೇರಿಯ ಯೋಜನೆ ಕುರಿತು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಯೋಜನೆಯಲ್ಲಿ ನೀವು ಧೀರ್ಘ ಕಾಲಕ್ಕೆ(Long term investment) 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ನಂತರ ನಿಮ್ಮ ಹೂಡಿಕೆಯು ದುಪ್ಪಟ್ಟಾಗುತ್ತದೆ. ಅಂದರೆ, ನಿಮ್ಮ ಹೂಡಿಕೆ ಮೇಲೆ ನೀವು 44,995 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತೀರಿ. ಅದು ಯಾವ ಯೋಜನೆ ಮತ್ತು ಆ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆ :
ಹೌದು, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ಸಮಯ ಠೇವಣಿ ಯೋಜನೆಯಾಗಿದೆ(Post Office Savings Scheme, time deposit scheme) ಇದರಲ್ಲಿ ಹೂಡಿಕೆದಾರರು ನಿರ್ದಿಷ್ಟ ಅವಧಿಯವರೆಗೆ ತಮ್ಮ ಹಣವನ್ನು ಠೇವಣಿ ಇಡುತ್ತಾರೆ ಮತ್ತು ಅವಧಿಯ ಅಂತ್ಯದಲ್ಲಿ ಬಡ್ಡಿ ದರದ ಪ್ರಕಾರ ಬಡ್ಡಿಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ನಿರ್ದಿಷ್ಟ ವಯಸ್ಸಿನ ಮಿತಿ ಇಲ್ಲ ಮತ್ತು ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ಭಾರತ ಸರ್ಕಾರದಿಂದ ಗ್ಯಾರಂಟಿಡ್ ಆಗಿದೆ, ಆದ್ದರಿಂದ ಹೂಡಿಕೆದಾರರ ಹಣವು ಸುರಕ್ಷಿತವಾಗಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಖಾಸಗಿ ಬ್ಯಾಂಕುಗಳಲ್ಲಿರುವ FD ಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದು.
ಭಾರತೀಯ ಅಂಚೆ ಇಲಾಖೆಯು ಟರ್ಮ್ ಡೆಪಾಸಿಟ್(Term Deposits)ಗಳ ಮೇಲೆ ಭರವಸೆಯ ಆದಾಯವನ್ನು ನೀಡುತ್ತದೆ. ಒಂದು ವರ್ಷಕ್ಕೆ ಬಡ್ಡಿದರ ಶೇಕಡ 6.9 ಆಗಿದ್ದರೆ, ಎರಡು ವರ್ಷಕ್ಕೆ ಶೇಕಡ 7, ಮೂರು ವರ್ಷಕ್ಕೆ ಶೇಕಡ 7.1 ಮತ್ತು ಐದು ವರ್ಷಕ್ಕೆ ಶೇಕಡ 7.5 ಆಗಿದೆ. ನಿಮ್ಮ ಹಣವನ್ನು ಹೆಚ್ಚಿಸಲು ನೀವು ಹುಡುಕುತ್ತಿದ್ದರೆ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (ಟಿಡಿ) ಒಂದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಸುರಕ್ಷಿತ ಮತ್ತು ಸ್ಥಿರವಾದ ಆದಾಯವನ್ನು ನೀಡುತ್ತದೆ.
1 ವರ್ಷಕ್ಕೆ 7,081 ರೂಪಾಯಿ ರಿಟರ್ನ್:
ಪೋಸ್ಟ್ ಆಫೀಸ್ ಟಿಡಿಯಲ್ಲಿ ಒಂದು ವರ್ಷಕ್ಕೆ ಶೇಕಡ 6.9 ರಷ್ಟು ಬಡ್ಡಿ ದರವಿದೆ. ಇದರರ್ಥ, ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನೀವು ಮೆಚ್ಯೂರಿಟಿಯಲ್ಲಿ ಒಟ್ಟು 1,07,081 ರೂಪಾಯಿಗಳನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ ಬಡ್ಡಿ ಮೊತ್ತವಾಗಿ 7,081 ರೂಪಾಯಿ ಲಭ್ಯವಾಗುತ್ತದೆ.
ಎರಡು ವರ್ಷಗಳ ಠೇವಣಿಯ ಮೇಲಿನ ಲಾಭ
ಒಂದು ಲಕ್ಷ ರೂಪಾಯಿಯನ್ನು ಎರಡು ವರ್ಷಗಳ ಅವಧಿಯ ಶೇಕಡ 7 ಬಡ್ಡಿ ದರದ ಠೇವಣಿ ಯೋಜನೆಯಲ್ಲಿ ಹೂಡಿದರೆ, ಮೆಚ್ಯೂರಿಟಿಯಲ್ಲಿ ಒಟ್ಟು 1,14,888 ರೂಪಾಯಿಗಳನ್ನು ಪಡೆಯಲಾಗುತ್ತದೆ. ಇದರಲ್ಲಿ, 14,888 ರೂಪಾಯಿಗಳು ಬಡ್ಡಿ ಮೊತ್ತವಾಗಿರುತ್ತದೆ.
3 ವರ್ಷಗಳ ಕಾಲ ಠೇವಣಿಯ ಮೇಲೆ ರಿಟರ್ನ್
ಒಂದು ಲಕ್ಷ ರೂಪಾಯಿಯನ್ನು 3 ವರ್ಷಗಳ ಕಾಲ ಪೋಸ್ಟ್ ಆಫೀಸ್ ಟೈಮ್ ಠೇವಣಿಯಲ್ಲಿ ಹೂಡಿದರೆ, ಮೆಚ್ಯೂರಿಟಿಯಲ್ಲಿ ನೀವು 1,23,508 ರೂಪಾಯಿಗಳನ್ನು ಪಡೆಯುತ್ತೀರಿ. ಇದರಲ್ಲಿ, ನೀವು 23,508 ರೂಪಾಯಿಗಳನ್ನು ರಿಟರ್ನ್ ಅಥವಾ ಬಡ್ಡಿಯಾಗಿ ಪಡೆಯುತ್ತೀರಿ.
5 ವರ್ಷಗಳ ಕಾಲ ಠೇವಣಿಯ ಮೇಲೆ ರಿಟರ್ನ್
ನೀವು ಇಂದು 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ ಅದು 1.44 ಲಕ್ಷ ರೂಪಾಯಿಯಾಗುತ್ತದೆ. ಇದು 7.5% ಬಡ್ಡಿ ದರದಿಂದ ಸಾಧ್ಯವಾಗುತ್ತದೆ. ಆಂದರೆ ನೀವು ಬರೋಬ್ಬರಿ 44,995 ರೂಪಾಯಿ ಬಡ್ಡಿಲಾಭವಾಗಿ ಲಭ್ಯವಾಗುತ್ತದೆ.
ಈ ರಿಟರ್ನ್ ಅನ್ನು ನಿಮ್ಮ ಹೊಸ ಗುರಿಗಳನ್ನು ಸಾಧಿಸಲು ಬಳಸಬಹುದು. ನಿಮ್ಮ ಖರ್ಚುಗಳನ್ನು ಭರಿಸಲು ಈ ರಿಟರ್ನ್ ಅನ್ನು ಬಳಸಬಹುದು. ಉದಾಹರಣೆಗೆ, ನೀವು ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಉಳಿಸುತ್ತಿದ್ದರೆ, ಈ ರಿಟರ್ನ್ ಅನ್ನು ಮಕ್ಕಳ ಶಿಕ್ಷಣ ಖರ್ಚುಗಳನ್ನು ಭರಿಸಲು ಬಳಸಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಈ ರಿಟರ್ನ್ ಅನ್ನು ಬಳಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗೃಹಲಕ್ಷ್ಮಿ 5ನೇ ಕಂತಿನ ಹಣ ಈ ಜಿಲ್ಲೆಯ ಮಹಿಳೆಯರಿಗೆ ಈಗ ಜಮಾ ಆಯ್ತು
- ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ಮಹಿಳೆಯರಿಗೆ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ Apply Now
- ಮೀಸ್ ಆಗಿ ಹಣ ಬೇರೆಯವರಿಗೆ ಹೋಯ್ತಾ..? ಹೀಗೆ ಮಾಡಿ ಹಣ ವಾಪಾಸ್ ಬರುತ್ತೆ..!
- ಬ್ಯಾಂಕ್ ಆಫ್ ಇಂಡಿಯಾ ಹೊಸ ನಾರಿಶಕ್ತಿ ಬ್ಯಾಂಕ್ ಉಳಿತಾಯ ಖಾತೆ, ಪ್ರಯೋಜನಗಳ ಬಗ್ಗೆ ಗೊತ್ತಾ?
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.