ವಿಮೆ ಯೋಜನೆಗಳನ್ನು (Insurence Scheme) ಪೋಸ್ಟ್ ಆಫೀಸ್ ಗಳಲ್ಲೂ (post office) ನೋಡಬಹುದು. ಅಪಘಾತ, ಅನಾರೋಗ್ಯದ ಸಮಯದಲ್ಲಿ ಉಪಯೋಗವಾಗಲಿದೆ ಈ ವಿಮೆ.
ಇಂದು ಮಾನವನು ತನ್ನ ಅನಿವಾರ್ಯತೆಗಳಿಗೆ ಹೊಸ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಿದ್ದಾನೆ. ಎಲ್ಲವುದಕ್ಕಿಂತ ಹೆಚ್ಚಾಗಿ ವಿಭಿನ್ನ ರೀತಿಯ ವಾಹನಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಕೇವಲ ಇಂಧನ ಚಾಲಿತ ವಾಹನಗಳಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು (electric vehicles) ಕೂಡ ನಾವು ಇಂದು ನೋಡಬಹುದು. ಹೀಗಿರುವಾಗ ನಮಗೆ ಯಾವಾಗ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ನಮಗೆ ಅಪಘಾತಗಳಾಗುವ (accident) ಸನ್ನಿವೇಶಗಳು ಎದುರಾಗಬಹುದು. ಆ ಕಷ್ಟ ಸಮಯದಲ್ಲಿ ನೆರವಾಗಲು ಜನರು ವಿವಿಧ ರೀತಿಯ ವಿಮಾ ಪಾಲಿಸಿಗಳ ಮೂಲಕ ತಮ್ಮ ಮತ್ತು ತಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳುತ್ತಾರೆ. ಖಾಸಗಿ ವಿಮೆಗೆ ಹೋದರೆ ಹೆಚ್ಚು ಹಣ ಕಟ್ಟಬೇಕು. ಆದರೆ ಅಂಚೆ ಇಲಾಖೆ (post office department) ಇದಕ್ಕೆ ಬ್ರೇಕ್ ಹಾಕಿದೆ. ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India post payment’s Bank) ಉತ್ತಮ ಯೋಜನೆಯೊಂದನ್ನು ಆರಂಭಿಸಿದೆ. ಈ ಯೋಜನೆ ಯಾವುದು? ಇದರ ಪ್ರಯೋಜನಗಳು ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಅಂಚೆ ಇಲಾಖೆ ಕೇವಲ ಪೋಸ್ಟ್ ಸೇವೆಗಷ್ಟೇ ಸೀಮಿತವಾಗಿಲ್ಲ. ತನ್ನ ಗ್ರಾಹಕರ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ಸೇವೆಗಳನ್ನು ನೀಡುತ್ತಿದೆ. ಸೇವಿಂಗ್ಸ್ (Savings), ವಿಮೆ (Insurance), ಆಧಾರ್ ತಿದ್ದುಪಡಿ ಹೀಗೆ ಹತ್ತು ಹಲವು ಸೇವೆಗಳನ್ನು ನೀಡುತ್ತಾ ಜನರಿಗೆ ಹತ್ತಿರವಾಗಿದೆ. ಹೌದು, ಅಂಚೆ ಇಲಾಖೆ ಹೊಸ ಟರ್ಮ್ ಇನ್ಸೂರೆನ್ಸ್ ಯೋಜನೆ(Term Insurance scheme) ಜಾರಿಗೆ ತಂದಿದ್ದು, ವರ್ಷಕ್ಕೆ ಕೇವಲ 520 ರೂಪಾಯಿಗೆ 10 ಲಕ್ಷ ವಿಮೆ ಸಿಗಲಿದೆ. ಪಾಲಿಸಿದಾರ ಅಪಘಾತದಿಂದ ಮೃತಪಟ್ಟರೆ ನಾಮಿನಿಗೆ ಈ ಒಂದು ವಿಮೆ ಸಿಗಲಿದೆ. ಮತ್ತು 12 ರೂ ಪ್ರೀಮಿಯಂ (premium) ಪಾವತಿಸಿದರೆ 2 ಲಕ್ಷ ರೂ ವಿಮಾ ಕವರೇಜ್ ಅನ್ನು ಪಿಎಂ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ (PM suraksha bhima scheme) ಸಿಗುತ್ತದೆ. ಈ ಇನ್ಶೂರೆನ್ಸ್ ಕವರೇಜ್ ಗಾಗಿ ಖಾಸಗಿ ವಿಮಾ ಕಂಪನಿಗಳ ಜೊತೆ ಅಂಚೆ ಕಚೇರಿ ಟೈಅಪ್ ಮಾಡಿಕೊಂಡಿರುತ್ತದೆ. ಇದು ಕುಟುಂಬದ ಸುರಕ್ಷತೆಗೆ ಮಹತ್ವದ ಯೋಜನೆಯಾಗಿದ್ದು ಕುಟುಂಬಕ್ಕೆ ಜೀವನಾಧಾರವಾಗಿದೆ. ಈ ಮೂಲಕ ನೀವು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
ಕಡಿಮೆ ದರದ ಪ್ರೀಮಿಯಂ :
ಇದರಲ್ಲಿ ಎರಡು ನಮೂನೆಯ ಅಪಘಾತ ವಿಮೆಯನ್ನ ಅಂಚೆ ಇಲಾಖೆ ಪರಿಚಯಿಸುತ್ತಿದೆ. ಮೊದಲನೆಯದಾಗಿ 10 ಲಕ್ಷ ರೂಪಾಯಿ ವಿಮೆಯಾಗಿದ್ದು, ಇದಕ್ಕಾಗಿ ವಾರ್ಷಿಕ ಕೇವಲ 520ರೂಪಾಯಿ ಪಾವತಿಸಿದರಷ್ಟೇ ಸಾಕು. ಇನ್ನೊಂದು ವಿಮೆಯಲ್ಲಿ 2 ಲಕ್ಷ ರೂಪಾಯಿ ಆಗಿದ್ದು, 12ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಅಪಘಾತ ವಿಮೆಯು (accident insurance) 18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು ಸ್ಥಳೀಯ ಅಂಚೆ ಕಚೇರಿಗಳಿಗೆ ತೆರಳಿ ಮಾಡಬಹುದಾಗಿದೆ. ಅಪಘಾತ ಅಥವಾ ಅಪಮೃತ್ಯು ಸಂಭವಿಸಿದಾಗ ಈ ಜೀವ ವಿಮೆ ಉಪಯೋಗವಾಗಲಿದೆ.
10 ಲಕ್ಷ ರೂಪಾಯಿ ವಿಮೆ :
ಈ ಒಂದು ವಿಮೆ ಅಡಿಯಲ್ಲಿ ವರ್ಷಕ್ಕೆ 520 ರೂಪಾಯಿ ಪಾವತಿಸಬೇಕು. ಪಾಲಿಸಿದಾರ ಅಪಘಾತದಿಂದ ಮೃತಪಟ್ಟರೆ ನಾಮಿನಿಯಾಗಿ ಕೊಟ್ಟ ಹೆಸರಿನವರಿಗೆ ಪರಿಹಾರ ಹಣ ದೊರೆಯುತ್ತದೆ. ಮೃತ ಪಡದೆ ಗಾಯಾಳುವಾಗಿ ಆಸ್ಪತ್ರೆಯಲ್ಲಿ ದಾಖಲಾದರೆ ಚಿಕಿತ್ಸೆಗಾಗಿ 60 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. 10 ಲಕ್ಷ ರೂಪಾಯಿಯ ವಿಮೆಗಾಗಿ ಅಂಚೆ ಕಚೇರಿ, ಟಾಟಾ (TATA) ಮತ್ತು ಬಜಾಜ್ (bajaj) ಇನ್ಶೂರೆನ್ಸ್ ಕಂಪನಿಗಳೊಂದಿಗೆ ಟೈಅಪ್ ಮಾಡಿಕೊಂಡಿದೆ.
2 ಲಕ್ಷ ರೂಪಾಯಿ ವಿಮೆ :
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ 2 ಲಕ್ಷ ಆಕ್ಸಿಡೆಂಟ್ ಕವರೇಜ್ ಪಡೆಯಲು ವರ್ಷಕ್ಕೆ 12 ರೂ ಕಟ್ಟಿದರೂ ಈ ಒಂದು ವಿಮೆಯ ಲಾಭವನ್ನು ಪಡೆಯಬಹುದು. ಈ ಒಂದು ವಿಮೆ ಕೂಡ ಪಾಲಿಸಿದಾರ ನೀಡಿರುವ ಹೆಸರಿನ ನಾಮಿನಿಗೆ ದೊರೆಯುತ್ತದೆ. ಈ ಒಂದು ವಿಮೆಗಾಗಿ ಅಂಚೆ ಕಚೇರಿ ಖಾಸಗಿ ಇನ್ಸೂರೆನ್ಸ್ ಕಂಪನಿಗಳೊಂದಿಗೆ ಟೈಅಪ್ ಮಾಡಿಕೊಂಡಿದೆ.
ಅಷ್ಟೇ ಅಲ್ಲ, ಆದಿತ್ಯ ಬಿರ್ಲಾ ಕ್ಯಾಪಿಟಲ್ (Adithya Birla Capital) ಸಹಯೋಗದೊಂದಿಗೆ ಕಡಿಮೆ ದರದ ಪ್ರೀಮಿಯಂ ಮೇಲೆ ಅಪಘಾತ ವಿಮೆಯನ್ನ ಪರಿಚಯಿಸಿದೆ. ಕೇವಲ ರಸ್ತೆ ಅಪಘಾತವಲ್ಲದೇ ಜಾರಿ ಬಿದ್ದು ಗಾಯಗೊಂಡರೆ, ಹಾವು ಕಡಿತ, ಅಗ್ನಿ ಅವಘಡ, ವಿದ್ಯುತ್ ಆಘಾತ ಮುಂತಾದ ಅಪಘಾತಗಳಿಗೂ ಈ ಸಮಗ್ರ ರಕ್ಷಣಾ ಯೋಜನೆಯ ಅಪಘಾತ ವಿಮೆಯನ್ನ ಬಳಸಬಹುದಾಗಿದೆ.ಇದಲ್ಲದೆ, ಆತ ಚಿಕಿತ್ಸೆ ಹೊಂದುತ್ತಿದ್ದರೆ ಮೆಡಿಕಲ್ ಎಮರ್ಜೆನ್ಸಿಗಾಗಿ (medical emergency) ಮತ್ತು ಸೀರಿಯಸ್ ಕಂಡಿಷನ್ ಗಳಲ್ಲಿ (serious condition) 60,000 ರೂಪಾಯಿ ಮತ್ತು ಸಾಮಾನ್ಯ ಕಂಡಿಷನ್ ಗಳಲ್ಲಿ 30,000 ರೂಪಾಯಿ ಸಹಾಯ ದೊರಕುತ್ತದೆ. ಆದ್ದರಿಂದ ದಯವಿಟ್ಟು ಎಲ್ಲರೂ ಈ ವಿಮೆ ಪಾಲಿಸಿಯ ಸದುಪಯೋಗವನ್ನು ಪಡೆದುಕೊಳ್ಳ ಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.