Post Office Schemes: ಮಹಿಳೆಯರಿಗೆ ಗುಡ್ ನ್ಯೂಸ್, ಪೋಸ್ಟ್ ಮೂಲಕ ಭರ್ಜರಿ ಹಣ ಗಳಿಸಿ !!

IMG 20240628 WA0000

ಅಂಚೆ ಇಲಾಖೆಯಲ್ಲಿದೆ ಮಹಿಳೆಯರಿಗಾಗಿ ವಿಶೇಷ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ!

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು (Mahila Samman Savings Certificate Scheme) ಸರ್ಕಾರವು ಮಹಿಳೆಯರನ್ನು ಬೆಂಬಲಿಸಲು ಮತ್ತು ಹಣವನ್ನು ಉಳಿಸಲು ಮತ್ತು ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ತುಂಬಲು ಸಬಲೀಕರಣಗೊಳಿಸಲು ಪ್ರಾರಂಭಿಸಿದೆ. ನಿಗದಿತ ಬಡ್ಡಿ ದರದಲ್ಲಿ 2 ವರ್ಷಗಳವರೆಗೆ ಮಹಿಳೆಯರ ಹೆಸರಿನಲ್ಲಿ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ (deposit) ಸೌಲಭ್ಯವನ್ನು ನೀಡಲು ಯೋಜನೆ ರೂಪಿಸಲಾಗಿದೆ.ಮಹಿಳೆಯರಿಗಾಗಿ ಹಲವಾರು ಯೋಜನೆಗಳು, ಸಹಾಯ ಧನ(subsidy) ಇನ್ನಿತರ ಹೂಡಿಕೆ(invest)ಯ ಯೋಜನೆಳಗಿವೆ. ಇವುಗಳು ಮಹಿಳೆಯರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿ ಅವರು ತಮ್ಮ ತಮ್ಮ  ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ. ಹಾಗಾಗಿ ಇದೀಗ ಮಹಿಕೆಯರಿಗಾಗಿ ಅಂಚೆ ಇಲಾಖೆ(post office)ಯಲ್ಲಿ ವಿಶೇಷ ಯೋಜನೆಯೊಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ :

ಮಹಿಳೆಯರಲ್ಲಿ ಹೂಡಿಕೆಯ ಆಸಕ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಅಂಚೆ ಇಲಾಖೆಯು ಮಹಿಳೆಯರಿಗಾಗಿ ವಿಶೇಷ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಸಮಯದಲ್ಲಿ ಹಣವನ್ನು ಇಮ್ಮಡಿ ಗೊಳಿಸಬಹುದು. ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಎಂಬ ಈ ಯೋಜನೆಯಡಿಯಲ್ಲಿ ಮಹಿಳೆಯರು ಹೂಡಿಕೆ (investment) ಮಾಡಿ ತಮ್ಮ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ 2025 ರವರೆಗೆ ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವಿವರ :

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಕನಿಷ್ಠ 1000 ರೂ.ಗಳೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಖಾತೆಯಲ್ಲಿ ಗರಿಷ್ಠ ಹೂಡಿಕೆ ಮೊತ್ತ 2 ಲಕ್ಷ ರೂಪಾಯಿಗಳು ಆಗಿರುತ್ತವೆ. ಎರಡು ಖಾತೆಗಳನ್ನು ತೆರೆಯುವ ನಡುವೆ ಗರಿಷ್ಠ 3 ತಿಂಗಳ ಅಂತರವಿರಬೇಕು. ಖಾತೆ ತೆರೆದ 1 ವರ್ಷದ ನಂತರ 40 ಪ್ರತಿಶತವನ್ನು ಹಿಂಪಡೆಯಬಹುದು.

ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ :

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಸಂಪೂರ್ಣ ತೆರಿಗೆ ಮುಕ್ತವಾಗಿವೆ. ಆದರೆ ಗಳಿಸಿದ ಬಡ್ಡಿಗೆ ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ಉಳಿತಾಯದ ಸ್ಥಿರ ಠೇವಣಿಯ ವಿರುದ್ಧ ಗಳಿಸಿದ ಬಡ್ಡಿಯ ಮೇಲೆ ಹೂಡಿಕೆದಾರರು ಯಾವುದೇ ತೆರಿಗೆ ಪ್ರಯೋಜನಗಳನ್ನು ಪಡೆಯುವುದಿಲ್ಲ.

ಈ ಯೋಜನೆಯಲ್ಲಿ ದೊರೆಯುವ ಬಡ್ಡಿ ದರ :

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಗೆ ಸರ್ಕಾರವು ಶೇಕಡಾ 7.5 ರ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ, ಇದನ್ನು ಪ್ರತಿ ತ್ರೈಮಾಸಿಕ ಖಾತೆಗೆ ಜಮಾ ಮಾಡಲಾಗುತ್ತದೆ. ಅವಧಿಯ ಕೊನೆಯಲ್ಲಿ, ಹೂಡಿಕೆ ಮಾಡಿದ ಹಣವನ್ನು ಬಡ್ಡಿಯೊಂದಿಗೆ ಹೂಡಿಕೆದಾರರಿಗೆ ನೀಡಲಾಗುತ್ತದೆ. ಹಾಗೂ TDS ಅನ್ನು ಬಡ್ಡಿ ಆದಾಯದ ಮೇಲೆ ಕಡಿತಗೊಳಿಸಲಾಗುತ್ತದೆ.

ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಮಹಿಳೆಯರು ಈ ಯೋಜನೆಯ ಖಾತೆ ತೆರೆಯಬಹುದು, ಖಾತೆ ತೆರೆಯುವ ವಿಧಾನ ಈ ಕೆಳಗಿನಂತಿದೆ :
ಬ್ಯಾಂಕ್‌ಗಳಲ್ಲಿ (bank) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ತೆರೆಯುವ ವಿಧಾನ (steps) :

ಹಂತ 1 : ಅರ್ಹ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಿಂದ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಅಪ್ಲಿಕೇಶನ್’ ಅನ್ನು ಡೌನ್‌ಲೋಡ್ ಮಾಡಿ ಅಥವಾ ಬ್ಯಾಂಕ್‌ಗೆ ಭೇಟಿ ನೀಡಿ ಮತ್ತು ಫಾರ್ಮ್‌ನ ಹಾರ್ಡ್ ಪ್ರತಿಯನ್ನು ಪಡೆಯಬೇಕು.

ಹಂತ 2 : ಸರಿಯಾದ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.

ಹಂತ 3 : ಘೋಷಣೆ ಮತ್ತು ನಾಮನಿರ್ದೇಶನದ ವಿವರಗಳನ್ನು ಭರ್ತಿ ಮಾಡಿ.

ಹಂತ 4 : ಅರ್ಜಿ ನಮೂನೆ, ಠೇವಣಿ ಮೊತ್ತ ಮತ್ತು ಅಗತ್ಯ ದಾಖಲೆಗಳನ್ನು ಬ್ಯಾಂಕಿನ ಕಾರ್ಯನಿರ್ವಾಹಕರಿಗೆ ಸಲ್ಲಿಸಿ.

ಹಂತ 5 : ಯಶಸ್ವಿಯಾಗಿ ಸಲ್ಲಿಸಿದ ನಂತರ, ಯೋಜನೆಯಲ್ಲಿ ಹೂಡಿಕೆಯನ್ನು ಪರಿಶೀಲಿಸುವ ಪ್ರಮಾಣಪತ್ರ ದೊರೆಯುತ್ತದೆ.

ಅಂಚೆ ಕಛೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ತೆರೆಯುವ ವಿಧಾನ :

ಹಂತ 1 : ಭಾರತೀಯ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ‘ಪ್ರಮಾಣಪತ್ರವನ್ನು ಖರೀದಿಸಲು ಅರ್ಜಿ’ ಡೌನ್‌ಲೋಡ್ ಮಾಡಿ. ಪರ್ಯಾಯವಾಗಿ, ನೀವು ಹತ್ತಿರದ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ ಫಾರ್ಮ್ ಅನ್ನು ಪಡೆಯಬಹುದು.

ಹಂತ 2 : ಪೋಸ್ಟ್ ಆಫೀಸ್ ವಿಳಾಸ, ಖಾತೆಯ ಪ್ರಕಾರ, ಪಾವತಿ, ವೈಯಕ್ತಿಕ ವಿವರಗಳು, ಘೋಷಣೆ ಮತ್ತು ನಾಮನಿರ್ದೇಶನ ವಿವರಗಳು ಇತ್ಯಾದಿಗಳೊಂದಿಗೆ ಅಗತ್ಯವಿರುವ ವಿವರಗಳನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ.

ಹಂತ 3 : ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.

ಹಂತ 4 : ಅಂಚೆ ಕಛೇರಿಯಲ್ಲಿ ಅಗತ್ಯವಿರುವ ಠೇವಣಿಯನ್ನು ನಗದು ಅಥವಾ ಚೆಕ್‌ನಲ್ಲಿ ಮಾಡಿ.

ಹಂತ 5 : ಪ್ರಕ್ರಿಯೆ ಪೂರ್ಣಗೊಂಡ ನಂತರ, ಯೋಜನೆಯಲ್ಲಿ ನಿಮ್ಮ ಹೂಡಿಕೆಯನ್ನು ಅಂಗೀಕರಿಸುವ ಪ್ರಮಾಣಪತ್ರ ಪಡೆಯಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಗೆ ಇರಬೇಕಾದ ಅರ್ಹತೆಗಳು (qualifications) :

ಭಾರತೀಯರಾಗಿರಬೇಕು, ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ, ಹಾಗೆಯೇ ಪೋಷಕರು ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ನಿಯಮಗಳು (rules) :

ಖಾತೆದಾರರ ಮರಣದ ಸಂದರ್ಭದಲ್ಲಿ ಮುಕ್ತಾಯದ ಮೊದಲು ಖಾತೆಯನ್ನು ಮುಚ್ಚಬಹುದು. ಅಷ್ಟೇ ಅಲ್ಲದೆ ತುರ್ತು ಸಂದರ್ಭಗಳಲ್ಲಿಯೂ ಈ ಸೌಲಭ್ಯವಿದ್ದು, ಇದಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!