ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಬಹುದು.
ಇಂದು ಜಗತ್ತು ಬದಲಾಗಿದೆ, ಎಲ್ಲರೂ ದುಡಿಯುತ್ತಿದ್ದಾರೆ. ಇನ್ನು ಜನರು ಕೂಡು ತಮ್ಮ ಭವಿಷ್ಯ (Future) ದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮುಂದಿನ ಜೀವನವನ್ನು ಸುಖಕರವಾಗಿರಿಸಲು ಬಯಸುತ್ತಾರೆ. ಆ ಕಾರಣಕ್ಕಾಗಿ ಅವರು ದುಡಿದ ಹಣದಲ್ಲಿ ಸ್ವಲ್ಪ ಪಾಲನ್ನು ತಮ್ಮ ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಮಾಡ ಬಯಸುತ್ತಾರೆ. ಇದಕ್ಕಾಗಿ ಸರ್ಕಾರದ ಮತ್ತು ಖಾಸಗಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಲು ಇಚ್ಛಿಸುತ್ತಾರೆ.ಯಾವ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಉತ್ತಮ? ಅಥವಾ ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾ? ಹೀಗೆ ಎಲ್ಲಾ ರೀತಯಲ್ಲೂ ಯೋಚನೆ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ ಸರ್ಕಾರದ ಯೋಜನೆಗಳಲ್ಲಿ ಅಂಚೆ ಕಚೇರಿಯ (Post Office) ಯೋಜನೆಯೂ ಕೂಡ ಒಂದು. ಅಂಚೆ ಕಚೇರಿಯ ಹೆಚ್ಚು ವಿಶ್ವಾಸಾರ್ಹವಾಗಿದ್ದು, ಬ್ಯಾಂಕ್ ಗಳಿಗೆ ಹೋಲಿಸಿದರೆ ಅಂಚೆ ಕಚೇರಿಯ ನಲ್ಲಿ ಹೆಚ್ಚು ಬಡ್ಡಿ (Interest) ಕೂಡ ಸಿಗುತ್ತದೆ. ಅದರಲ್ಲೂ ಈ ಒಂದು ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು 9250 ರೂ. ಸಿಗುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಅಂಚೆ ಕಚೇರಿಯು ಹೆಚ್ಚು ವಿಶ್ವಾಸಾರ್ಹವಾಗಿದ್ದು, ಜನರಿಗೂ ಕೂಡ ಅಂಚೆ ಕಚೇರಿಯ ಯೋಜನೆಗಳ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ಯುವಕರಿಗೆ, ಮಕ್ಕಳಿಗೆ, ಹಿರಿಯ ನಾಗರೀಕರಿಗೆ ಎಲ್ಲರಿಗೂ ಕೂಡ ವಿವಿಧ ರೀತಿಯ ಯೋಜನೆಗಳು ಲಭ್ಯವಿದ್ದು, ಯಾವುದೇ ಯೋಜನೆಯ ಬಗ್ಗೆ ಮಾಹಿತಿ ಬೇಕೆಂದರೆ ಅಂಚೆ ಕಚೇರಿಗೆ ತೆರಳಿ ಪಡೆದುಕೊಳ್ಳಬಹುದು. ಇನ್ನು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಹಣದ ಮೇಲೆ ಬಡ್ಡಿಪಡೆದುಕೊಳ್ಳುವ ಅವಕಾಶವಿದೆ.
ಏನಿದು ಮಾಸಿಕ ಆದಯ ಯೋಜನೆ (Monthly Plan Scheme) ?
ಅಂಚೆ ಕಚೇರಿಯ ಯೋಜನೆಗಳಲ್ಲಿ ಪ್ರಮುಖವಾದಂತಹ ಯೋಜನೆ ಎಂದರೆ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ. ಗ್ರಾಹಕರ ಹೂಡಿಕೆ ಮೊತ್ತವನ್ನು ಆಧರಿಸಿ ಪ್ರತಿ ತಿಂಗಳು ಬಡ್ಡಿಯ ಲಾಭವನ್ನು ಪಡೆದುಕೊಳ್ಳಬಹುದು.ಇನ್ನು ಈ ಬಗ್ಗೆ 2023ರ ಬಜೆಟ್ (Budget) ನಲ್ಲಿ ಘೋಷಣೆಯಾಗಿದ್ದರೂ ಕೂಡ ಈ ಯೋಜನೆಯ ಮಾಹಿತಿ ಜನರಿಗೆ ತಿಳಿದಿಲ್ಲ.
ಮಾಸಿಕ ಆದಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?:
ಈ ಹಿಂದೆ ಗರಿಷ್ಠ 4.5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದಿತ್ತು. ಆದರೆ ಇದೀಗ ಈ ಯೋಜನೆಯ ಹೂಡಿಕೆ ಮಿತಿಯನ್ನು 9 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು ಈ ಹಿನ್ನಲೆ ಗ್ರಾಹಕರೂ ಕೂಡ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.ಒಬ್ಬರ ಹೆಸರಲ್ಲಿ ಖಾತೆಯಿದ್ದರೆ 9 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇನ್ನು ಜಂಟಿಯಾಗಿ 15 ಲಕ್ಷದವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಜಂಟಿಯಾಗಿ ಹೂಡಿಕೆ ಮಾಡುವವರು ಕನಿಷ್ಟ 1 ಸಾವಿರ ರೂಪಾಯಿಯಿಂದ ಗರಿಷ್ಟ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇನ್ನು ಈ ಯೋಜನೆಯ ಪ್ರಸ್ತುತ ಬಡ್ಡಿದರ ಶೇ. 7.4ರಷ್ಟಿದೆ. ಹೂಡಿಕೆ ಹಣದ ಮೇಲೆ ಬರುವ ಬಡ್ಡಿ ಪ್ರತಿ ತಿಂಗಳ ಕೊನೆಯಲ್ಲಿ ಸಿಗುತ್ತದೆ. ಒಂದು ವೇಳೆ ಬರುವ ಬಡ್ಡಿಯನ್ನು ಹಾಗೆಯೇ ಉಳಿಸಿಕೊಂಡರೆ ಇದಕ್ಕೆ ಪರ್ಯಾಯವಾಗಿ ಹೆಚ್ಚುವರಿ ಬಡ್ಡಿ ಲಾಭ ಸಿಗುವುದಿಲ್ಲ. ಬರುವ ಬಡ್ಡಿಯನ್ನು ಹೂಡಿಕೆದಾರರ ಅಂಚೆ ಕಚೇರಿಯ ಉಳಿತಾಯ ಖಾತೆಗೆ(post office saving account) ಸ್ವಯಂ ಚಾಲಿತವಾಗಿ ವರ್ಗಾಯಿಸಿಕೊಳ್ ಳಬಹುದು.
ಯಾರೆಲ್ಲ ಖಾತೆ ತೆರೆಯಬಹುದು?
ಮಾಸಿಕ ಆದಯ ಯೋಜನೆಯ ಖಾತೆಯನ್ನು ವಯಸ್ಕರು ತೆರೆಯಬಹುದಾಗಿದೆ. ಒಬ್ಬ ಸದಸ್ಯ ಅಥವಾ ಇಬ್ಬರು ಸದಸ್ಯರೂ ಸೇರಿ ಖಾತೆಯನ್ನು ತೆರೆಯಬಹುದು. ಇನ್ನು ನಿವೇನಾದರೂ 18 ವರ್ಷದೊಳಗಿನವರಾಗಿದ್ದರೆ (18 Years) ನಿಮ್ಮ ಹೆಸರಿನಲ್ಲಿ ನಿಮ್ಮ ಪೋಷಕರು ಖಾತೆ ತೆರೆಯಬೇಕು.
5 ವರ್ಷಗಳ ಕಾಲ ಈ ಯೋಜನೆಯಡಿ ಹೂಡಿಕೆ ಮಾಡಬಹುದು:
ಇನ್ನು ಈ ಯೋಜನೆಯಡಿಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ನೀವು ಯೋಜನೆಯನ್ನು ಪ್ರಾರಂಭಿಸಿದ ಮೊದಲ ವರ್ಷ (1st Year) ಹೂಡಿಕೆ ಮೊತ್ತವನ್ನು ತೆಗೆಯಲು ಆಗುವುದಿಲ್ಲ. ಒಂದು ವೇಳೆ ಒಂದು ವರ್ಷವಾದ ನಂತರ ಮೂರು ವರ್ಷಗಳೊಳಗೆ ಠೇವಣಿ ಹಿಂತೆಗೆದರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. ಅದೇ ರೀತಿ ಮೂರು ವರ್ಷದ ನಂತರ ಐದು ವರ್ಷಗಳೊಳಗೆ ಠೇವಣಿ (deposit) ಹಿಂತೆಗೆದರೆ ಒಟ್ಟು ಅಸಲಿನ ಮೊತ್ತದಲ್ಲಿ 1ರಷ್ಟು ದಂಡ ಕಟ್ಟಬೇಕಾಗುತ್ತದೆ.
ಇನ್ನು ಮೆಕ್ಯೂರಿಟಿ ಅವಧಿಗೂ ಮುನ್ನ ಠೇವಣಿದಾರ ಮೃತಪಟ್ಟರೆ ಖಾತೆಯನ್ನು ಮುಚ್ಚಲಾಗುತ್ತದೆ. ಹಾಗೂ ನಾಮಿನಿಗೆ ಅಸಲು ಹೂಡಿಕೆ ಮೊತ್ತ ಮತ್ತು ಬಡ್ಡಿಯನ್ನು ನೀಡಲಾಗುತ್ತದೆ.
ಈ ಯೋಜನೆಯಡಿ ಸಿಗುವ ಬಡ್ಡಿಯೆಷ್ಟು?
ಮಾಸಿಕ ಆದಯ ಯೋಜನೆಯಡಿ ಬಡ್ಡಿ ದರ ಶೇ. 7.4ರಷ್ಟಿದೆ. ಒಂದು ವೇಳೆ ಠೇವಣಿದಾರ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550 ರೂ. ಸಿಗುತ್ತದೆ. ಅದೇ ರೀತಿಯಾಗಿ ಜಂಟಿ ಖಾತೆಯಡಿಯಲ್ಲಿ ₹15 ಲಕ್ಷ ಹೂಡಿದರೆ ₹9,250 ಬಡ್ಡಿ ಸಿಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.