ಆಸ್ತಿ ಮಾರಾಟ, ಖರೀದಿ ವೇಳೆ ಇರಲಿ ಎಚ್ಚರ, ನಿಗದಿತ ಬೆಲೆಗಿಂತ ಜಾಸ್ತಿ ತೆಗೆದುಕೊಂಡರೆ ಬರುತ್ತೆ ಐಟಿ ನೋಟಿಸ್(IT Notice)…!
ಇಂದು ಹಲವಾರು ಜನರು ಸ್ವಂತ ಉದ್ಯಮ (Own business) ಮಾಡಲು, ಸ್ವಂತ ಮನೆ ಕಟ್ಟಲು ಅಥವಾ ಇನ್ನಾವುದೇ ಕೆಲಸ ಕಾರ್ಯಗಳಿಗೆ ಅಸ್ತಿಯನ್ನು ಖರೀದಿಸುತ್ತಾರೆ ಅಥವಾ ಮಾರಾಟ ಮಾಡುತ್ತಾರೆ. ಆದರೆ ಅಸ್ತಿಯನ್ನು ಖರೀದಿಸುವಾಗ ಅಥವಾ ಮಾರುವಾಗ ಅದರ ಬಗ್ಗೆ ಎಚ್ಚರವಿರಲಿ ಯಾಕೆಂದರೆ, ಹೆಚ್ಚು ಆಸ್ತಿಯ ವಿಚಾರದಲ್ಲಿ ನಗದು (cash) ಮೂಲಕ ಹೆಚ್ಚಿನ ವಹಿವಾಟು ನಡೆಸಿದರೆ ಬರಲಿದೆ ನೋಟೀಸ್. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಸ್ತಿ ವಿಚಾರದಲ್ಲಿ ಹೆಚ್ಚು ಕಮ್ಮಿ ಆದರೆ ಬರಲಿದೆ ನೋಟೀಸ್ :
ಹೌದು, ಆಸ್ತಿ ಖರೀದಿಸುವಾಗ, ಮಾರಾಟ ಮಾಡುವಾಗ ಆದಾಯ ಇಲಾಖೆಯ (Revenue Department) ನಿಮಯದ ಬಗ್ಗೆ ತಿಳಿದುಕೊಂಡಿರಬೇಕಾಗಿರುವುದು ಉತ್ತಮ. ಯಾಕೆಂದರೆ, ಆದಾಯ ತೆರಿಗೆ ಇಲಾಖೆ ಸೂಚಿಸುವ ಮೊತ್ತಕ್ಕಿಂತ ಹೆಚ್ಚಿನ ಹಣ ನಗದು ಮೂಲಕ ವಹಿವಾಟು ನಡೆಸಿದರೆ ಐಟಿ ನೋಟಿಸ್ ಆ ವ್ಯಕ್ತಿಗೆ ಬರುತ್ತದೆ. ಹೀಗಾಗಿ ಈ ವಿಚಾರದ ಬಗ್ಗೆ ತಿಳಿದುಕೊಂಡು ಎಚ್ಚರದಿಂದಿರಬೇಕು.
ಆಸ್ತಿಯ ಮಾರಾಟ ಅಥವಾ ಖರೀದಿಯ ವೇಳೆ ಹೆಚ್ಚು ಮೊತ್ತದ ಹಣವನ್ನು ಕಪ್ಪು ಹಣ (Black money) ಅಥವಾ ಭ್ರಷ್ಟ ಹಣ (Corrupt money) ಎಂದೇ ಪರಿಗಣಿಸಲಾಗುತ್ತದೆ :
ಆಸ್ತಿ ವಿಚಾರದ ಹಣಕಾಸಿನ ವ್ಯವಹಾರವನ್ನು ಆಸ್ತಿ ದಾಖಲೆಯಲ್ಲಿ ದಾಖಲಿಸಲಾಗುತ್ತದೆ. ರಿಜಿಸ್ಟ್ರಾರ್ಗಳು ಹಣ ವ್ಯವಹಾರವನ್ನು ನಿಲ್ಲಿಸದಿದ್ದರೂ, ಅವರು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತಾರೆ. ನೋಂದಣಿ ಆಗಿರುವ ಆಸ್ತಿಯನ್ನು ಮಾರಾಟ ಮಾಡುವಾಗ ಈ ದಾಖಲೆ ಪತ್ರಗಳು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಮಾಡಬೇಕು. ಈ ವೇಳೆ ಆಸ್ತಿ ಮಾರಾಟ ಮಾಡಿದ ಹಾಗೂ ಖರೀದಿಸಿದ ಇಬ್ಬರ ವ್ಯವಹಾರ ಸರಿಯಾಗಿರಬೇಕು. ಹೆಚ್ಚಿನ ಮೊತ್ತ ನಗದು ಮೂಲಕ ವ್ಯವಹರಿಸಿದ್ದರೆ, ಕಪ್ಪು ಹಣ ಅಥವಾ ಭ್ರಷ್ಟ ಹಣ ಎಂದೇ ಪರಿಗಣಿಸಲಾಗುತ್ತದೆ. ಇದರಿಂದಾಗಿ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಬಹುದು.
ಆಸ್ತಿ ಖರೀದಿ ಅಥವಾ ಮಾರಾಟ ಮಾಡುವಾಗ ಹಣದ ವ್ಯವಹಾರದ ನಿಯಮಗಳ (Rules) ಬಗ್ಗೆ ತಿಳಿದುಕೊಂಡಿರಿ :
ಇಂದು ಆಸ್ತಿಯ ವಿಚಾರದಲ್ಲಿ ನಡೆಯುವ ಹಣಕಾಸಿನ ವಹಿವಾಟಿನಲ್ಲಿ ಅನೇಕ ಆರೋಪಗಳು ಅಥವಾ ಹಗರಣಗಳು ಕೇಳಿ ಬರುತ್ತವೆ. ಇಂದು ಆಸ್ತಿ ವ್ಯವಹಾರಗಳಲ್ಲಿ ಹಣ ಬಳಕೆಗೆ ಕಠಿಣ ನಿಯಮಗಳಿದ್ದು, ಇವುಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ನಿಮ್ಮಲ್ಲಿ ನಗದು ಹಣವಿದೆ ಎಂದ ಮಾತ್ರಕ್ಕೆ ನಗದು ಮೂಲಕ ಆಸ್ತಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಸಂಕಷ್ಟಕ್ಕೆ ಸಿಲುಕುವುದು ಖಚಿತ.
ಆಸ್ತಿ ಮಾರಾಟ ಅಥವಾ ಕೊಂಡುಕೊಳ್ಳುವುದಿದ್ದರೆ ಹಲವು ನಿಯಮಗಳಿವೆ :
ಆಸ್ತಿ ವಿಚಾರದಲ್ಲಿ ಹಣಕಾಸಿನ ವಹಿವಾಟಿನಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬಹುದು. 19,999 ರೂಪಾಯಿಗಿಂತ ಹೆಚ್ಚು ನಗದು ಹಣ ವ್ಯವಹರಿಸುವಂತಿಲ್ಲ. 2015ರ ಆದಾಯ ತೆರಿಗೆ ಕಾಯ್ದೆಯ 269SS, 269T, 271D ಮತ್ತು 271E ವಿಭಾಗಗಳ ತಿದ್ದುಪಡಿಗಳನ್ನು ಆಧರಿಸಿದೆ. ಹೀಗಾಗಿ ಎಷ್ಟೇ ದೊಡ್ಡ ಆಸ್ತಿ ಖರೀದಿಸಿ ಅಥವಾ ಮಾರಾಟ ಮಾಡಿ, ನೀವು 19,999 ರೂಪಾಯಿ ನಗದು ಹಣದ ವ್ಯವಹಾರ ಮಾಡುವಂತಿಲ್ಲ.
ರೂ.19,999 ಕ್ಕಿಂತ ಹೆಚ್ಚು ಹಣದ ವಹಿವಾಟು ಮಾಡಿದರೆ ಐಟಿ ನೋಟಿಸ್ ಪಕ್ಕಾ :
ಹೌದು, ಆಸ್ತಿ ಮಾರಾಟ ಅಥವಾ ಖರೀದಿ ವೇಳೆ ರೂ. 19,999 ಕ್ಕಿಂತ ಹೆಚ್ಚು ಹಣದ ವಹಿವಾಟು ಮಾಡಿದರೆ ಐಟಿ ನೋಟಿಸ್ ಪಕ್ಕಾ ಬರಲಿದೆ. ಹೀಗೆ ಪಡೆದ ಅಥವಾ ನೀಡಿದ ನಗದು ಹಣದ 100% ದಂಡ ವಿಧಿಸಲಾಗುತ್ತದೆ. ₹50,000 ಅಥವಾ ₹1 ಲಕ್ಷ ಹಣ ಪಡೆದರೆ, ಆದಾಯ ತೆರಿಗೆ ಇಲಾಖೆಗೆ ಇದರ ದುಪ್ಪಟ್ಟು ಹಣ ದಂಡದ ರೂಪದಲ್ಲಿ ಪಾವತಿಸಬೇಕು. ಒಂದು ವೇಳೆ ಮಾರಾಟ ಮಾರಾಟ ರದ್ದಾದರೆ ರೂ. 20,000 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಮರಳಿ ಪಡೆದರೆ, ಆ ಹಣಕ್ಕೂ 100% ದಂಡ ವಿಧಿಸಲಾಗುತ್ತದೆ.
ಆದಾಯ ತೆರಿಗೆ ಇಲಾಖೆಯ(IT Department) ಈ ನಿಯಮ ಯಾರಿಗೆ ಅನ್ವಯವಾಗುವುದಿಲ್ಲ ?
ಸರ್ಕಾರಿ ಸಂಸ್ಥೆಗಳು, ಬ್ಯಾಂಕ್ಗಳು ಅಥವಾ ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಹೀಗಾಗಿ ನಗದು ವಹಿವಾಟು ಮಾಡುವಾಗ ಎಚ್ಚರವಿರುವುದು ಬಹಳ ಅತ್ಯವಾಗಿದೆ. ಹೀಗಾಗಿ ಹೆಚ್ಚಿನ ಮೊತ್ತದ ವ್ಯವಹಾರವನ್ನು ಬ್ಯಾಂಕ್ ಮೂಲಕವೇ ನಡೆಸುವುದು ಉತ್ತಮ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.