ಮಕ್ಕಳ ಆಸ್ತಿಯ ಮೇಲೆ ತಂದೆ ತಾಯಿಗೆ ಹಕ್ಕು ಇದೆಯೇ? ಕಾನೂನು ಹೇಳೋದೇನು, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

Can parents take back property gifted to their children FB 1200x628 compressed 1 1024x536 1

ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ಹಕ್ಕಿದ್ಯಾ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಪೋಷಕರ ಆಸ್ತಿಯಲ್ಲಿ  (Parents Property) ಮಕ್ಕಳಿಗೆ ಹಕ್ಕಿದೆ ಎಂದು ಎಲ್ಲರಿಗೂ ಗೊತ್ತು. ಆದರೆ ಮಕ್ಕಳ ಆಸ್ತಿಯಲ್ಲಿ(Childrens Property) ಪೋಷಕರಿಗೆ ಹಕ್ಕಿರುವ ವಿಚಾರ ಯಾರಿಗೂ ತಿಳಿದಿಲ್ಲ. ಭಾರತೀಯ ಕಾನೂನು ಪ್ರಕಾರ, ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ನೇರ ಹಕ್ಕಿಲ್ಲ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಪೋಷಕರು ತಮ್ಮ ಮಕ್ಕಳ ಆಸ್ತಿಯಲ್ಲಿ ಹಕ್ಕು ಪಡೆಯಬಹುದು. ಹಿಂದೂ ಉತ್ತರಾಧಿಕಾರ ಕಾಯ್ದೆಯ (Hindu Succession Act) ಸೆಕ್ಷನ್ 8 ಪ್ರಕಾರ, ಮಗುವಿನ ಆಸ್ತಿಯ ಮೇಲಿನ ಪೋಷಕರ ಹಕ್ಕುಗಳನ್ನು ವ್ಯಾಖ್ಯಾನಿಸಲಾಗಿದೆ. ಇದರ ಅಡಿಯಲ್ಲಿ ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕಿರುವ ವಿಚಾರವನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಾನೂನು ಪೋಷಕರ ಆಸ್ತಿಗೆ ಮಕ್ಕಳ ಪಿತ್ರಾರ್ಜಿತ ಹಕ್ಕುಗಳನ್ನು ವಿವರಿಸುತ್ತದೆ, ಆದರೆ ಪೋಷಕರು ತಮ್ಮ ಮಕ್ಕಳ ಆಸ್ತಿಯ ಕಾನೂನುಬದ್ಧ ಮಾಲೀಕರಾಗುವ ಹಕ್ಕನ್ನು ಹೊಂದಿದ್ದಾರೆಯೇ? ಎಂಬ ಒಂದು ಅನುಮಾನ ಇರುತ್ತದೆ. ಭಾರತೀಯ ಕಾನೂನಿನ ಪ್ರಕಾರ, ಸಾಮಾನ್ಯ ಸಂದರ್ಭಗಳಲ್ಲಿ ಪೋಷಕರು ತಮ್ಮ ಮಕ್ಕಳ ಆಸ್ತಿಯನ್ನು ಕ್ಲೈಮ್ (Property Claim) ಮಾಡುವ ಹಕ್ಕನ್ನು ಹೊಂದಿರುವುದಿಲ್ಲ. ಮಕ್ಕಳ ಆಸ್ತಿಯನ್ನು ಪೋಷಕರು ಹಕ್ಕು ಸಾಧಿಸಲು ಕೆಲವು ವಿಶೇಷ ಸಂದರ್ಭಗಳಿವೆ.

argument between old man and his adult son
ಮಕ್ಕಳ ಆಸ್ತಿಯ ಮೇಲಿನ ಪೋಷಕರ ಹಕ್ಕುಗಳನ್ನು 2005ರ ಕಾಯಿದೆಯ ಸೆಕ್ಷನ್ 8 ರಲ್ಲಿ ವ್ಯಾಖ್ಯಾನಿಸಲಾಗಿದೆ :

ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕು ಇದ್ಯಾ ಎಂಬ ಗೊಂದಲವಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಹಿಂದೂ ಉತ್ತರಾಧಿಕಾರ ಕಾಯ್ದೆ 2005ಕ್ಕೆ ತಿದ್ದುಪಡಿ ತಂದಿತ್ತು. ಮಕ್ಕಳ ಆಸ್ತಿಯ ಮೇಲಿನ ಪೋಷಕರ ಹಕ್ಕುಗಳನ್ನು ಅದೇ ಕಾಯಿದೆಯ ಸೆಕ್ಷನ್ 8 ರಲ್ಲಿ ವ್ಯಾಖ್ಯಾನಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳ ಆಸ್ತಿಯನ್ನು ಯಾವಾಗ ಪಡೆಯಬಹುದು ಎಂದು ಈ ಸೆಕ್ಷನ್‌ ಹೇಳುತ್ತದೆ.

ಪೋಷಕರಿಗೆ ಇದ್ಯಾ ಬೇರೆ ಬೇರೆ ಹಕ್ಕುಗಳು?

ಮಕ್ಕಳ ಅಕಾಲಿಕ ಮರಣವಾಗಿದ್ದು ಯಾವುದೇ ರೀತಿಯ ಉಯಿಲು ಇಲ್ಲದಿದ್ದರೆ, ಪೋಷಕರು ತಮ್ಮ ಮಕ್ಕಳ ಆಸ್ತಿಗೆ ಹಕ್ಕು ಪಡೆಯಬಹುದು. ಹಿಂದೂ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯು ಮರಣ ಹೊಂದಿದರೆ, ಅವನ ಆಸ್ತಿಯನ್ನು ವರ್ಗ 1ರ ವಾರಸುದಾರರಿಗೆ ಸಮಾನವಾಗಿ ಹಂಚಲಾಗುತ್ತದೆ. ವರ್ಗ 1ರ ವಾರಸುದಾರರಲ್ಲಿ ತಾಯಿ, ಪತ್ನಿ, ಮತ್ತು ಮಕ್ಕಳು ಸೇರಿದ್ದಾರೆ. ಹೀಗಾಗಿ, ಮಗುವಿನ ಮರಣದ ನಂತರ, ತಾಯಿ ಮತ್ತು ತಂದೆ ಅವರ ಆಸ್ತಿಯಲ್ಲಿ ಹಕ್ಕು ಪಡೆಯುತ್ತಾರೆ. ಆದರೆ ಮಗುವಿನ ಆಸ್ತಿಯ ಮೇಲೆ ಪೋಷಕರಿಗೆ ಸಂಪೂರ್ಣ ಹಕ್ಕು ಇರುವುದಿಲ್ಲ, ಬದಲಿಗೆ ತಾಯಿ ಮತ್ತು ತಂದೆ ಇಬ್ಬರಿಗೂ ಪ್ರತ್ಯೇಕ ಹಕ್ಕು ಇರುತ್ತದೆ.

ಮಕ್ಕಳ ಆಸ್ತಿಯಲ್ಲಿ ತಾಯಿಗೆ ಮೊದಲ ಅಧ್ಯತೆ :

ಮಗುವಿನ ಆಸ್ತಿಗೆ ತಾಯಿ ಮೊದಲ ವಾರಸುದಾರರಾಗಿದ್ದರೆ, ತಂದೆ ಎರಡನೇ ವಾರಸುದಾರರಾಗಿದ್ದಾರೆ. ಈ ವಿಷಯದಲ್ಲಿ ತಾಯಂದಿರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ, ವರ್ಗ 1ರ ಪಟ್ಟಿಯಲ್ಲಿನ ವಾರಸುದಾರರು ಯಾರೂ ಇಲ್ಲದಿದ್ದರೆ, ವರ್ಗ 2ರ ಪಟ್ಟಿಯಲ್ಲಿನ ವಾರಸುದಾರನಾದ ತಂದೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆದರೆ, ಪೋಷಕರು ತಮ್ಮ ಮಕ್ಕಳ ಆಸ್ತಿಯನ್ನು ತಮ್ಮ ಇಚ್ಛೆಯಂತೆ ಹಂಚಲು ಅಥವಾ ಬಳಸಲು ಸಾಧ್ಯವಿಲ್ಲ. ಮಕ್ಕಳ ಆಸ್ತಿ ಸ್ವತಂತ್ರವಾಗಿದ್ದು, ಪೋಷಕರು ಅದನ್ನು ತಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಪೋಷಕರು ತಮ್ಮ ಮಕ್ಕಳ ಆಸ್ತಿಯ ಮೇಲೆ ನೇರ ಹಕ್ಕು ಹೊಂದಿಲ್ಲ, ಆದರೆ ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ಹಕ್ಕು ಪಡೆಯಬಹುದು.

ಮಗ ಮತ್ತು ಮಗಳ ಆಧಾರದ ಮೇಲೆ ಪೋಷಕರಿಗೆ ಪ್ರತ್ಯೇಕ ನಿಬಂಧನೆಗಳು:

ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕಿದ್ದರೂ ಕೂಡ ಮಗ ಮತ್ತು ಮಗಳ ಆಧಾರದ ಮೇಲೆ ಪ್ರತ್ಯೇಕ ನಿಬಂಧನೆಗಳು(Separate Provisions) ಇರಲಿವೆ. ಮಗನಿಗೆ ಸಂಬಂಧಿಸಿದ ಆಸ್ತಿಯಲ್ಲಿ ಕಾನೂನು ವಿಭಿನ್ನವಾಗಿರುತ್ತದೆ. ಮಗನ ಆಸ್ತಿಯಲ್ಲಿ ತಾಯಿಗೆ ಮೊದಲ ವಾರಸುದಾರಳಾಗಿರುತ್ತಾಳೆ. ಹಾಗೆ ತಂದೆಗೆ ಎರಡನೇ ವಾರಸುದಾರನಾಗಿರುತ್ತಾನೆ. ಒಂದುವೇಳೆ ತಾಯಿ ಇಲ್ಲದಿದ್ದರೆ   ತಂದೆ ಮತ್ತು ಮಗನ ಇತರ ಉತ್ತರಾಧಿಕಾರಿಗಳ ನಡುವೆ ಹಂಚಿಕೆಯಾಗುತ್ತದೆ. ಮಗ ಏನಾದ್ರು ಮದುವೆಯಾಗಿದ್ರೆ ಅವನ ನಂತರ ಅವನ ಹೆಂಡತಿ ವಾರಸುದಾರಳಾಗಿರುತ್ತಾಳೆ.
ಇನ್ನು ಮಗಳ ಆಸ್ತಿಯಲ್ಲಿ ಮೊದಲು ಅವಳ ಮಕ್ಕಳು ವಾರಸುದಾರರಾಗಿರುತ್ತಾರೆ. ಅವರ ನಂತರ ಅವನ ಗಂಡ ಎರಡನೇ ವಾರಸುದಾರನಾಗಿರುತ್ತಾನೆ. ಇನ್ನು ಅಂತಿಮವಾಗಿ ಆಸ್ತಿಯ ಹಕ್ಕನ್ನು ಅವರ ಪೋಷಕರು ತೆಗೆದುಕೊಳ್ಳುತ್ತಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!