ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿ: ಸ್ಮಾರ್ಟ್‌ಫೋನ್(Smart phone) ಪ್ರೈವೇಸಿ ಸೆಟ್ಟಿಂಗ್‌ಗಳನ್ನು ಹೇಗೆ ಆಫ್ ಮಾಡುವುದು?
ಈಗಿನ ಡಿಜಿಟಲ್ ಯುಗದಲ್ಲಿ(Digital age), ನಾವು ಬಳಸುವ ಸ್ಮಾರ್ಟ್‌ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ನೀವು ಒಮ್ಮೆ ಯೋಚಿಸಿ, ನೀವು ಯಾವುದಾದರೂ ಉತ್ಪನ್ನ ಅಥವಾ ಸೇವೆ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ ಮೇಲೆ, ಅದರ ಜಾಹೀರಾತುಗಳು ನಿಮ್ಮ ಫೋನ್‌ನಲ್ಲಿ ಕಾಣಿಸಿಕೊಂಡಿದೆಯೇ? ಅಥವಾ ನೀವು ಯಾವುದೇ ವಿಷಯ ಚರ್ಚಿಸಿದಾಗ, ಅದರ ಕುರಿತಾಗಿ ಗೂಗಲ್, ಯೂಟ್ಯೂಬ್, ಅಥವಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ (Social media flatforms) ಸಂಬಂಧಿತ ಸಲಹೆಗಳು ತಕ್ಷಣವೇ ಬಂದಿದೆಯೇ? ಎಂಬುದನ್ನು ಒಮ್ಮೆಯಾದರೂ ಯೋಚಿಸಿದ್ದಿರಾ?. ಕೆಲವೊಮ್ಮೆ ಈ ಸಂಗತಿಯ ಬಗ್ಗೆ ನಿಮಗೆ ಗೊತ್ತಿದ್ದರೂ ಕೂಡ ಹೆಚ್ಚು ತಲೆಕೆಡಿಸಿಕೊಂಡಿರುವುದಿಲ್ಲ ಅಥವಾ ನಿರ್ಲಕ್ಷಿಸಿದ್ದಿರಬಹುದು. ಆದರೆ ಈ ರೀತಿಯ ಸಂಗತಿಯನ್ನು ಡಿಜಿಟಲ್ ಡೇಟಾ (Digital data) ಸಂಗ್ರಹಣೆಯ ಒಂದು ಭಾಗವೆಂದು ಕರಿಯಬಹುದು. ಹಾಗಿದ್ದರೆ ಈ ಡೇಟಾ ಸಂಗ್ರಹಣೆಯಾಗುವುದನ್ನು ನಿಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನಿಮ್ಮ ಸ್ಮಾರ್ಟ್‌ಫೋನ್ (smart phone) ಹಾಗೂ ಅದರಲ್ಲಿ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳು (Applications) ನಿಮ್ಮ ಬಳಕೆದಾರ ಡೇಟಾವನ್ನು ನಿರಂತರವಾಗಿ ಸಂಗ್ರಹಿಸುತ್ತವೆ. ನೀವು ಹುಡುಕಿದ ವಿಷಯಗಳು, ನೀವು ಮಾತನಾಡಿದ ವಿಷಯಗಳು, ನಿಮ್ಮ ಆಸಕ್ತಿಗಳು, ನಿಮ್ಮ ಸ್ಥಳದ ಮಾಹಿತಿ – ಎಲ್ಲವೂ ಆಪ್‌ಗಳ ಮೂಲಕ ಸೇವಾ ಪೂರೈಕೆದಾರ ಸಂಸ್ಥೆಗಳ ಬಳಿ ಸೇರುತ್ತಿದೆ. ನಾವು ಹೊಸ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿದಾಗ ಅಥವಾ ಸೇವೆಗಳನ್ನು ಬಳಸಿದಾಗ, ಅವುಗಳು ನಮಗೆ ಅನೇಕ ಅನುಮತಿಗಳನ್ನು (permissions) ಕೇಳುತ್ತವೆ. ಸಾಮಾನ್ಯವಾಗಿ, ನಾವು ಅವುಗಳನ್ನು ಓದದೇ Allow ನೀಡುತ್ತೇವೆ. ಇದರಿಂದ, ಆ್ಯಪ್‌ಗಳು ನಮ್ಮ ಸ್ಥಳದ (location), ಮೈಕ್ (microphone), ಕ್ಯಾಮೆರಾ (camera), ಮತ್ತು ಇತರ ವೈಯಕ್ತಿಕ ಡೇಟಾಗಳನ್ನು ಬಳಸಲು ಪ್ರಾರಂಭಿಸುತ್ತವೆ.
ಈ ಮಾಹಿತಿಯನ್ನು ಗೂಗಲ್, ಫೇಸ್ಬುಕ್, ಇನ್‌ಸ್ಟಾಗ್ರಾಮ್, ಮತ್ತು ಇತರ ತೃತೀಯ ವ್ಯಕ್ತಿ (third-party) ಸಂಸ್ಥೆಗಳು ಸಂಗ್ರಹಿಸುತ್ತವೆ. ಇದರಿಂದ,
ನೀವು ಯಾವ ವಸ್ತುಗಳಲ್ಲಿ ಆಸಕ್ತಿ ತೋರಿಸಿದ್ದೀರೋ ಅವುಗಳ ಆಧಾರದ ಮೇಲೆ ಟಾರ್ಗೆಟೆಡ್ ಜಾಹೀರಾತುಗಳು (targeted ads) ಬರುವ ಸಾಧ್ಯತೆ ಇರುತ್ತದೆ.
ನಿಮ್ಮ ಸೀಕ್ರೆಟ್ ಡೇಟಾ ಅಪಾಯದಲ್ಲಿರಬಹುದು.
ಸೈಬರ್ ಕ್ರೈಮ್‌ಗೆ ಬಲಿಯಾಗುವ ಸಂಭವವಿರಬಹುದು.
ಹೀಗಾಗಿ, ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹ ತಡೆಯಲು ಈ ಕೆಳಗಿನ ಸೆಟ್ಟಿಂಗ್‌ಗಳನ್ನು ತಕ್ಷಣವೇ ಆಫ್ ಮಾಡಿ.
1.ಪರ್ಸನಲೈಸ್ಡ್ ಡೇಟಾ (Personalised data) ಶೇರಿಂಗ್ ಆಫ್ ಮಾಡುವ ವಿಧಾನ:
ಈಗ ನೀವು ಅನೇಕ ಆ್ಯಪ್‌ಗಳಲ್ಲಿ ಹಾಗೂ ಗೂಗಲ್ ಸೇವೆಗಳಲ್ಲಿ ನಿಮ್ಮ ಡೇಟಾ ಹಂಚಿಕೊಳ್ಳುವಂತೆ ಇರುತ್ತದೆ. ಇದನ್ನು ತಡೆಯಲು:
Settings (ಸೆಟ್ಟಿಂಗ್ಸ್) ತೆರೆಯಿರಿ.
Google (ಗೂಗಲ್) ಆಯ್ಕೆಮಾಡಿ.
All Services (ಆಲ್ ಸರ್ವೀಸಸ್) ಕ್ಲಿಕ್ ಮಾಡಿ.
Privacy & Security (ಪ್ರೈವಸಿ ಆಯಂಡ್ ಸೆಕ್ಯುರಿಟಿ) ತೆರೆಯಿರಿ.
Personalized Usage & Shared Data (ಪರ್ಸನಲೈಸ್ಡ್ ಯೂಸೇಜ್ ಶೇರ್ಡ್ ಡೇಟಾ) ಆಯ್ಕೆ ಮಾಡಿ.
ಆನ್ ಆಗಿರುವ ಎಲ್ಲಾ ಆಯ್ಕೆಗಳನ್ನು ಆಫ್ ಮಾಡಿ.
2. Usage & Diagnostics ಆಫ್ ಮಾಡುವ ವಿಧಾನ:
Google ನಿಮ್ಮ ಫೋನ್ ಬಳಕೆ (usage) ಹಾಗೂ ಡಯಾಗ್ನಾಸ್ಟಿಕ್ (diagnostics) ಮಾಹಿತಿಯನ್ನು ತನ್ನ ಸೇವೆಗಳಿಗಾಗಿ ಸಂಗ್ರಹಿಸುತ್ತದೆ. ಇದನ್ನು ತಡೆಯಲು:
Settings (ಸೆಟ್ಟಿಂಗ್) ತೆರೆಯಿರಿ.
Google (ಗೂಗಲ್) ಕ್ಲಿಕ್ ಮಾಡಿ.
All Services (ಆಲ್ ಸರ್ವೀಸ್) ತೆರೆಯಿರಿ.
Privacy & Security (ಪ್ರೈವಸಿ & ಸೆಕ್ಯುರಿಟಿ) ಕ್ಲಿಕ್ ಮಾಡಿ.
Usage & Diagnostics (ಯೂಸೇಜ್ & ಡಯಾಗ್ನಸ್ಟಿಕ್) ತೆರೆಯಿರಿ. ಈ ಆಯ್ಕೆಯನ್ನು ಆಫ್ ಮಾಡಿ.
3. ಜಾಹೀರಾತುಗಳನ್ನು (Advertisement) ನಿಯಂತ್ರಿಸುವ ವಿಧಾನ
ನಿಮಗೆ ಅನಗತ್ಯ ಜಾಹೀರಾತುಗಳು ಬರುವುದನ್ನು ತಡೆಯಲು ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಿ
Settings (ಸೆಟ್ಟಿಂಗ್) ತೆರೆಯಿರಿ.
Google (ಗೂಗಲ್) ಕ್ಲಿಕ್ ಮಾಡಿ.
All Services (ಆಲ್ ಸರ್ವೀಸಸ್) ಓಪನ್ ಮಾಡಿ.
Ads (ಆಯಡ್ಸ್) ಎಂಬ ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
Reset Advertising ID (ರಿಸೆಟ್ ಅಡ್ವಟೈಸಿಂಗ್ ಐಡಿ) ಕ್ಲಿಕ್ ಮಾಡಿ.
Confirm (ಕಾನ್ಫರ್ಮ್) ಮಾಡಿ.
Delete Advertising ID (ಡಿಲೀಟ್ ಅಡ್ವಟೈಸಿಂಗ್ ಐಡಿ) ಕ್ಲಿಕ್ ಮಾಡಿ.
ಈ ಸೆಟ್ಟಿಂಗ್‌ಗಳನ್ನು ಆಫ್ ಮಾಡುವುದರಿಂದ ಪ್ರಯೋಜನವೇನು?
ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.
ಟಾರ್ಗೆಟೆಡ್ ಜಾಹೀರಾತುಗಳು (Targeted Ads) ಕಡಿಮೆಯಾಗುತ್ತವೆ.
ಸೈಬರ್ ಅಪಾಯಗಳು ಕಡಿಮೆಯಾಗುತ್ತವೆ.
ನಿಮ್ಮ ಫೋನ್ ಅನಗತ್ಯ ಡೇಟಾ ಸಂಗ್ರಹಿಸದಂತೆ ತಡೆಯಬಹುದು.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ಹೆಚ್ಚುವರಿ ಟಿಪ್ಸ್ (Tips) ಹೀಗಿವೆ :
ಅವಶ್ಯಕವಿಲ್ಲದ ಆ್ಯಪ್‌ಗಳಿಗೆ ಮೈಕ್, ಲೊಕೇಶನ್, ಮತ್ತು ಕ್ಯಾಮೆರಾ ಅನುಮತಿ ನೀಡಬೇಡಿ.
Google Assistant ಅಥವಾ Siri ನಿಮ್ಮ ಮಾತುಗಳನ್ನೂ ಹೌಶ್ ಮಾಡಬಾರದು ಎಂದು ಖಚಿತಪಡಿಸಿಕೊಳ್ಳಿ.
ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಾಯಿಸಿ.
ಅನಾವಶ್ಯಕ Cookies ಮತ್ತು ಜಾಹೀರಾತುಗಳನ್ನು ನಿಷ್ಕ್ರಿಯಗೊಳಿಸಿ.
ನಿಮ್ಮ ಫೋನ್ ನಿಮ್ಮ ಡೇಟಾವನ್ನು ಕೇಳುವುದು ಅಥವಾ ಸಂಗ್ರಹಿಸುವುದು ಅಚ್ಚರಿಯ ವಿಷಯವೇನಲ್ಲ. ಆದರೆ ನೀವು ಗಮನಹರಿಸದೆ ಇದ್ದರೆ, ನಿಮ್ಮ ವೈಯಕ್ತಿಕ ಮಾಹಿತಿ ಅನಗತ್ಯವಾಗಿ ಹಂಚಿಕೊಳ್ಳಬಹುದು. ಈ ಕಾರಣಕ್ಕಾಗಿ, ಈ ಅಗತ್ಯ ಸೆಟ್ಟಿಂಗ್‌ಗಳನ್ನು (Settings) ತಕ್ಷಣವೇ ಬದಲಾಯಿಸಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ರಕ್ಷಿಸಿ!
ಇಂದಿನ ಡಿಜಿಟಲ್ ಯುಗದಲ್ಲಿ ಪ್ರೈವೇಸಿ (Privacy) ಅತಿ ಮುಖ್ಯ. ನಮ್ಮ ತಂತ್ರಜ್ಞಾನ ಬಳಕೆ ಜಾಗೃತವಾಗಿರಬೇಕು. ಆದ್ದರಿಂದ ಮೊಬೈಲ್ ಬಳಕೆ ದಾರರು ಹೆಚ್ಚು ಜಾಗರೂಕರಾಗಿರಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.