ಇದೀಗ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಹೌದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ( Computer Literacy Test ) ಉತ್ತೀರ್ಣರಾದ ಸರ್ಕಾರಿ ನೌಕರರಿಗೆ ( Government Employees ) ರಾಜ್ಯ ಸರ್ಕಾರವು ( State Government ) ಸಿಹಿಸುದ್ದಿ ನೀಡಿದೆ. ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಎಂದರೇನು ( what is Computer Literacy Test ? )
ಕಂಪ್ಯೂಟರ್ ಸಾಕ್ಷರತೆ ಮತ್ತು ಇಂಟರ್ನೆಟ್ ಜ್ಞಾನ ( Internet Knowledge ) ಪರೀಕ್ಷೆಯನ್ನು ಸರಳವಾಗಿ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಎಂದು ಕರೆಯಲಾಗುತ್ತದೆ, ಇದು ಮೂಲಭೂತ ಕಂಪ್ಯೂಟರ್ ಕೌಶಲ್ಯಗಳ ಮೌಲ್ಯಮಾಪನವಾಗಿದೆ ( Computer Skills Exam ). ಇದು ಇಂಟರ್ನೆಟ್ ಬ್ರೌಸರ್‌ಗಳು ಮತ್ತು ಚಾಟ್, ವರ್ಡ್ ಪ್ರೊಸೆಸಿಂಗ್ ಪ್ರೋಗ್ರಾಂಗಳು ಮತ್ತು ಇಮೇಲ್‌ಗಳಂತಹ ಸಾಮಾನ್ಯ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ವ್ಯಕ್ತಿಯ ಪ್ರಾವೀಣ್ಯತೆಯನ್ನು ಅಳೆಯುತ್ತದೆ. ಇದು 13 ನಿಮಿಷಗಳ ಕಾಲಾವಧಿಯ ಸೀಮಿತ ಪರೀಕ್ಷೆಯಾಗಿದೆ. ಇದು ಮೂರು ಎರಡರಿಂದ ಮೂರು ನಿಮಿಷಗಳ ಕಾರ್ಯ-ಆಧಾರಿತ ಸಿಮ್ಯುಲೇಶನ್‌ಗಳನ್ನು ಒಳಗೊಂಡಿದೆ, ಇವುಗಳನ್ನು ಹತ್ತು ಬಹು ಆಯ್ಕೆಯ ಪ್ರಶ್ನೆಗಳು ಅನುಸರಿಸುತ್ತವೆ. ಇದನ್ನು ಮೂಲಭೂತ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಾಗಿ ವಿನ್ಯಾಸಗೊಳಿಸಿರುವುದರಿಂದ, ಸ್ವಾಗತಕಾರರು, ವೈದ್ಯಕೀಯ ಬಿಲ್ಲರ್‌ಗಳು, ಡೇಟಾ ಎಂಟ್ರಿ ಕ್ಲರ್ಕ್‌ಗಳು, ಗ್ರಾಹಕ ಸೇವಾ ಪ್ರತಿನಿಧಿಗಳು, ಆಡಳಿತ ಸಹಾಯಕರು ಮತ್ತು ಮುಂತಾದವುಗಳಂತಹ ಮೂಲಭೂತ ಕಂಪ್ಯೂಟರ್ ಕೌಶಲ್ಯಗಳ ಅಗತ್ಯವಿರುವ ಯಾವುದೇ ಹುದ್ದೆಗೆ ಇದನ್ನು ಬಳಸಬಹುದು.
ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹ ಧನ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರ ( Certificate ) ಮತ್ತು ದಿನಾಂಕವನ್ನು ( Exam date ) ಪರಿಶೀಲಿಸಿ ಪ್ರೋತ್ಸಾಹ ಧನ ( Incentive money )
ಮಂಜೂರು : ಪ್ರೋತ್ಸಾಹ ಧನದ ಸೌಲಭ್ಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ಸರ್ಕಾರದ ಆದೇಶದಲ್ಲಿ ಕರ್ನಾಟಕ ಸಿವಿಲ್ ಸೇವಾ ( Civil Service ) ( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ನಿಯಮಗಳು 2012 ಜಾರಿಗೆ ಬಂದ ದಿನಾಂಕ :22.03.2012 ರ ಪೂರ್ವದಲ್ಲಿ ನೇಮಕಾತಿ ಹೊಂದಿರುವ ಹಾಗೂ ದಿನಾಂಕ:17.04.2021ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ( Digital sign ) ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳು ಪ್ರೋತ್ಸಾಹ ಧನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ಸದರಿ ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ವೇತನ ಪಡೆಯುವ ಲೆಕ್ಕಶೀರ್ಷಿಕೆಯಡಿಯಲ್ಲಿ ಭರಿಸಲು ಆದೇಶಿಸಲಾಗಿರುತ್ತದೆ
ಮೊದಲನೇ ಕಂತಿನಲ್ಲಿ ಹಣ ( First Instalment money ) ಬಿಡುಗಡೆ ಮಾಡಲು ಸರ್ಕಾರದ ಆದೇಶ ( Government order ) :
ಅದರಂತೆ ಕ್ರಮಾಂಕ (02) ಸರ್ಕಾರದ ಅನುದಾನ ಬಿಡುಗಡೆ ಆದೇಶದಲ್ಲಿ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಪ್ರೋತ್ಸಾಹಧನವನ್ನು ಪಾವತಿಸಲು 2023-24 ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ 2202-03-103-2-01 238 ಸರ್ಕಾರಿ ಕಾಲೇಜುಗಳು 051 ಸಾಮಾನ್ಯ ವೆಚ್ಚದಡಿ ರೂ.223.65/ ಲಕ್ಷಗಳು ಬಿಡುಗಡೆಯಾಗಿದ್ದು ಸದರಿ ಅನುದಾನದಲ್ಲಿ ರೂ.192.40/ ( ಒಂದು ನೂರ ತೊಂಬತ್ತೆರಡು ಲಕ್ಷದ ನಲವತ್ತು ಸಾವಿರ ರೂಪಾಯಿಗಳು ಮಾತ್ರ )ಗಳನ್ನು ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರುಗಳಿಗೆ ಮಾತ್ರ ಪ್ರೋತ್ಸಾಹ ಧನ :
ಸರ್ಕಾರವು ನೀಡಿದ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ದಿನಾಂಕ : 22.03.2012 ರಂದು ಸೇವೆಯಲ್ಲಿದ್ದು ದಿನಾಂಕ : 17.04.2021 ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರುಗಳಿಗೆ ಪ್ರೋತ್ಸಾಹ ಧನವನ್ನು ಪಾವತಿಸಲು ಆದೇಶ ಹೊರಡಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ( Government first grade college ) ಪ್ರಾಂಶುಪಾಲರುಗಳಿಗೆ ಷರತ್ತುಗಳ ಅನ್ವಯದಂತೆ ಅನುದಾನ ಬಿಡುಗಡೆ ಮಾಡಲು ಅನುಮತಿ :
2023-24ನೇ ಸಾಲಿನ ಇತರೆ ಸರ್ಕಾರಿ ಕಾಲೇಜುಗಳ ಆಯವ್ಯಯ ಲೆಕ್ಕ ಶೀರ್ಷಿಕೆ 2202-03-103-2-01-051-
ಸಾಮಾನ್ಯ ವೆಚ್ಚಗಳು ಅಡಿಯಲ್ಲಿ ರೂ.192.40/- ( ಒಂದು ನೂರ ತೊಂಬತ್ತೆರಡು ಲಕ್ಷದ ನಲವತ್ತು ಸಾವಿರ ರೂಪಾಯಿಗಳು ಮಾತ್ರ ) ಗಳನ್ನು ಈ ಪತ್ರಕ್ಕೆ ಅಡಕಗೊಳಿಸಿರುವ ಅನುಬಂಧದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಸರ್ಕಾರದ ಷರತ್ತುಗಳ ಅನ್ವಯದಂತೆ ಅನುದಾನ ಬಿಡುಗಡೆ ಮಾಡಿ ನಿಯಮಾನುಸಾರ ಬಳಕೆ ಮಾಡಲು ಅನುಮತಿ ನೀಡಿ ಆದೇಶಿಸಲಾಗಿದೆ ( Government order ).
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರದಿಂದ ಉಚಿತ ಮನೆ ಪಡೆಯಲು ಹೀಗೆ ಅರ್ಜಿ ಹಾಕಿ!
- ಜಿಯೋ, ಏರ್ಟೆಲ್, ವಿಐ ಗ್ರಾಹಕರೇ ಪ್ರತಿದಿನ 2GB ಡಾಟಾ ಸಿಗುವ ಬೆಸ್ಟ್ ಆಫರ್ ಇದೇ ನೋಡಿ..!
- ಕರ್ನಾಟಕದಲ್ಲಿ ಮೊದಲ ಬಾರಿಗೆ ಅಮೃತ ಭಾರತ್ ಸಂಚಾರ! ಜೊತೆಗೆ 2 ವಂದೇ ಭಾರತ್ ರೈಲಿಗೆ ಚಾಲನೆ
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್..? ಕೇಂದ್ರದ ಸ್ಪಷ್ಟನೆ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.