ಇದೀಗ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇದರ ಸುದಿಗೋಷ್ಠಿಯೂ ಕೂಡ ಶಿಕ್ಷಣ ಇಲಾಖೆಯಿಂದ ಹೊರ ಬಿದ್ದಿದೆ. ಬೆಳಗ್ಗೆ 11 ಗಂಟೆಯಿಂದ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಿರುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದು ದ್ವಿತೀಯ ಪಿಯುಸಿಯ ಪರೀಕ್ಷೆಯ ಫಲಿತಾಂಶವನ್ನು ಸುದ್ದಿಕೋಷ್ಠಿಯ ಮುಖಾಂತರ ತಿಳಿಸಿದ್ದಾರೆ. ರಾಜ್ಯದಲ್ಲಿ ವಿಜ್ಞಾನ ವಿಭಾಗದ ವಿದ್ಯಾ ಲಕ್ಷ್ಮಿ ಪ್ರಥಮ ಸ್ಥಾನವನ್ನು ಪಡೆದಿದ್ದು 598 ಅಂಕಗಳನ್ನು ಗಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಏನೆಲ್ಲ ವಿಷಯಗಳನ್ನು ಪ್ರಕಟಿಸಲಾಯಿತು ಎಂಬುದರ ಸಂಪೂರ್ಣ ವಿವರ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಿಯುಸಿ ಫಲಿತಾಂಶ(2nd PUC Result) :
ಕೆಎಸ್‌ಇಎಬಿ ಅಧ್ಯಕ್ಷೆ ಎನ್ ಮಂಜುಶ್ರೀ 2nd ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದರು. ಕರ್ನಾಟಕ ಬೋರ್ಡ್ 12 ನೇ ಪರೀಕ್ಷೆಗೆ ಸುಮಾರು 7 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪತ್ರಿಕಾಗೋಷ್ಠಿಯ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಯಿತು. ಕಳೆದ ವರ್ಷ ಶೇ.74.67ರಷ್ಟು ಉತ್ತೀರ್ಣರಾಗಿದ್ದರು. ವಿದ್ಯಾರ್ಥಿಗಳು ಈ ವರ್ಷ ಉತ್ತೀರ್ಣರ ಶೇಕಡಾವಾರು ಹೆಚ್ಚಳವನ್ನು ಕಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ಶೇಕಡಾ 81.15 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ಈ ಕೆಳಗಿನ ವೆಬ್‌ಸೈಟ್‌ಗಳ ಮೂಲಕ ತಮ್ಮ ಫಲಿತಾಂಶಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ:
karresults.nic.in
kseab.karnataka.gov.in
ಯಾವ ವಿಭಾಗದಲ್ಲಿ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ?
ವಿಜ್ಞಾನ: 249927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ
ಕಲೆ: 1,28,448
ವಾಣಿಜ್ಯ: 1,74,315
ಯಾವ ಜಿಲ್ಲೆ ಮೊದಲನೇ ಸ್ಥಾನ :
ದಕ್ಷಿಣ ಕನ್ನಡ ಜಿಲ್ಲೆಯು ಮೊದಲನೇ ಸ್ಥಾನವನ್ನು ಗಳಿಸಿದೆ. ದ್ವಿತೀಯ ಸ್ಥಾನ ಉಡುಪಿ ಜಿಲ್ಲೆ ಹಾಗೂ ತೃತೀಯ ಸ್ಥಾನವನ್ನು ವಿಜಯಪುರ ಪಡೆದಿದೆ. ಕೊನೆಯ ಸ್ಥಾನವನ್ನು ಗದಗ ಜಿಲ್ಲೆಯನ್ನು ಪಡೆದುಕೊಂಡಿದೆ.
ವಿಶೇಷ ಸೂಚನೆ : ವಿದ್ಯಾರ್ಥಿಗಳೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ. ರಿಸಲ್ಟ್ ನೋಡುವ ಯಾವುದೇ ಅಧಿಕೃತ ಮೊಬೈಲ್ ಆಪ್ಲಿಕೇಶನ್ ಗಳನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಫೇಕ್ ಅಪ್ಲಿಕೇಶನ್ ಗಳಿಂದ ಎಚ್ಚರ.
- ಪಿಯುಸಿ ಕಾಮರ್ಸ್ ನಂತರ ಯಾವ ಕೋರ್ಸ್ ಓದಬೇಕು? 2024 ರ ಟಾಪ್ ಡಿಮ್ಯಾಂಡಿಂಗ್ ಕರಿಯರ್ ಆಯ್ಕೆಗಳು!
- 2024 ಪಿಯುಸಿ ಸೈನ್ಸ್ ಪಾಸ್ ಆಯ್ತು! ಮುಂದೇನು..? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆ!
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2024 ಡೌನ್‌ಲೋಡ್ ಮಾಡುವುದು ಹೇಗೆ?:
ಹಂತ 1: ದ್ವಿತೀಯ ಪಿಯುಸಿ ಫಲಿತಾಂಶವನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://karresults.nic.in/
ಹಂತ 2: ಮುಖಪುಟದಲ್ಲಿ, ಕರ್ನಾಟಕ II PUC ಫಲಿತಾಂಶ 2024 ಗಾಗಿ ಲಭ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಹೊಸ ವಿಂಡೋ ತೆರೆಯುತ್ತದೆ, ನಿಮ್ಮ ಲಾಗಿನ್ ವಿವರಗಳಾದ ರೆಜಿಸ್ಟರ್ ಸಂಖ್ಯೆ ಮತ್ತು ವಿಷಯವನ್ನು(Subject) ನಮೂದಿಸಿ.
ಹಂತ 4: ನಿಮ್ಮ ಕರ್ನಾಟಕ 2ನೇ ಪಿಯುಸಿ 2024 ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಹಂತ 5: ಅದನ್ನು ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಪಡೆಯಿರಿ.
ಈ ಮೇಲಿನ ಹಂತಗಳನ್ನು ಅನುಸರಿಸುವುದರಿಂದ ನೀವು ಮನೆಯಲ್ಲಿಯೇ ಕುಳಿತುಕೊಂಡು ನಿಮ್ಮ ಫಲಿತಾಂಶವನ್ನು ನೋಡಿಕೊಳ್ಳಬಹುದು. ಪಿಯುಸಿ ಫಲಿತಾಂಶಕ್ಕೆ ಕಾಯುತ್ತಿರುವ ಎಲ್ಲರಿಗೂ ಶುಭವಾಗಲಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- 2024 ಪಿಯುಸಿ ಸೈನ್ಸ್ ಪಾಸ್ ಆಯ್ತು! ಮುಂದೇನು..? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆ!
- ಪಿಯುಸಿ ಕಾಮರ್ಸ್ ನಂತರ ಯಾವ ಕೋರ್ಸ್ ಓದಬೇಕು? 2024 ರ ಟಾಪ್ ಡಿಮ್ಯಾಂಡಿಂಗ್ ಕರಿಯರ್ ಆಯ್ಕೆಗಳು!
- SSLC ನಂತರ ಮುಂದೇನು? ಇಲ್ಲಿವೆ ಒಂದಿಷ್ಟು ಬೆಸ್ಟ್ ಕೋರ್ಸ್, ಕೈ ತುಂಬಾ ಸಂಬಳ..!
- ಹಳೆಯ ವೋಟರ್ ಐಡಿ ಮೊಬೈಲ್ನಲ್ಲೇ ಡೌನ್‌ಲೋಡ್ ಮಾಡಿ, How to Download Voter ID Online
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- 2024ರ ಹೊಸ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಸೇರ್ಪಡೆಗೆ ಎರಡೇ ದಿನ ಬಾಕಿ.
- BSNL ಗ್ರಾಹಕರಿಗೆ ಗಮನಿಸಿ ಈ ದಾಖಲೆ ತೋರಿಸಿ ಉಚಿತ 4ಜಿ ಸಿಮ್ ಕಾರ್ಡ್ ಪಡೆಯಿರಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..