ಪಿಯುಸಿ ರಿಸಲ್ಟ್ ಕಡಿಮೆ ಅಂಕ ಪಡೆದವರು ಹೀಗೆ ಮಾಡಿ..! ಫೇಲ್ ಆದವರಿಗೂ ಗುಡ್ ನ್ಯೂಸ್ 

Picsart 25 04 11 06 54 04 993

WhatsApp Group Telegram Group
ದ್ವಿತೀಯ ಪಿಯುಸಿ(Second PUC) ಫಲಿತಾಂಶ ಪ್ರಕಟ: ಕಡಿಮೆ ಅಂಕ ಪಡೆದವರು ಏನು ಮಾಡಬೇಕು? ಪರಿಹಾರ ಮಾರ್ಗಗಳ ಸಂಪೂರ್ಣ ವಿವರ ಇಲ್ಲಿದೆ!

ದ್ವಿತೀಯ ಪಿಯುಸಿ (PUC) ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಹಲವಾರು ವಿದ್ಯಾರ್ಥಿಗಳು ತಮಗೆ ನಿರೀಕ್ಷೆಗೂ ಕಡಿಮೆ ಅಂಕ ಬಂದಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತೇರ್ಗಡೆಯೇ ಆಗಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಕ್ಕೆ ಒಳಗಾಗದೆ, ಮುಂದಿನ ಅವಕಾಶಗಳ ಬಗ್ಗೆ ಅರಿವು ಹೊಂದುವುದು ಅಗತ್ಯ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ಕಡಿಮೆ ಅಂಕ ಪಡೆದವರಿಗೆ, ಹಾಗೂ ಅನುತ್ತೀರ್ಣರಾದವರಿಗೆ(failed) ಹಲವಾರು ಪರ್ಯಾಯ ಮಾರ್ಗಗಳನ್ನು ಒದಗಿಸಿದೆ. ಈ ಮೂಲಕ ಅವರು ತಮ್ಮ ಅಂಕ ಸುಧಾರಿಸಿಕೊಳ್ಳುವ ಅಥವಾ ತೇರ್ಗಡೆ ಹೊಂದುವ ಅವಕಾಶ ಪಡೆಯಬಹುದು. ಹಾಗಿದ್ದರೆ ಯಾವೆಲ್ಲಾ ಪರ್ಯಾಯ ಮಾರ್ಗಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ದ್ವಿತೀಯ ಪಿಯುಸಿ ಪರೀಕ್ಷೆ-1 (PUC-II Exam-1) ಫಲಿತಾಂಶ ಪ್ರಕಟವಾಗಿದ್ದು, ಬಹುಮಂದಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದರೆ, ಕೆಲವರು ನಿರೀಕ್ಷೆಗೂ ಕಡಿಮೆ ಅಂಕಗಳನ್ನು ಪಡೆದು ಹತಾಶರಾಗಿದ್ದಾರೆ. ಆದರೆ ಈ ಫಲಿತಾಂಶ ಅಂತಿಮವಲ್ಲ, ಹಾಗಾಗಿ ವಿದ್ಯಾರ್ಥಿಗಳು ಬೇಸರ ಪಡಬಾರದು. ಅವರನ್ನು ಬೆಂಬಲಿಸಲು ಕರ್ನಾಟಕ ಪರೀಕ್ಷಾ ಮಂಡಳಿಯು(Karnataka Examination Board) ಹಲವಾರು ಪರ್ಯಾಯ ಮಾರ್ಗಗಳನ್ನು ಕಲ್ಪಿಸಿದೆ. ಯಾವೆಲ್ಲ ಮಾರ್ಗಗಳಿವೆ ನೋಡೋಣ.

ಅಂಕ ಕಡಿಮೆಯಾದರೂ ಚಿಂತಿಸಬೇಡಿ – ಮರು ಮೌಲ್ಯಮಾಪನ, ಮರು ಎಣಿಕೆ ಮತ್ತು ಪೂರಕ ಪರೀಕ್ಷೆಯ ಅವಕಾಶ:

ಅನುತ್ತೀರ್ಣರಾದ ವಿದ್ಯಾರ್ಥಿಗಳು(Failed students) ಅಥವಾ ಅಂಕಗಳಲ್ಲಿ ತೃಪ್ತಿಯಿಲ್ಲದವರು ಪ್ರಶ್ನೆ ಪತ್ರಿಕೆಯ ಮರು ಮೌಲ್ಯಮಾಪನ(Re-evaluation) ಹಾಗೂ ಮರು ಎಣಿಕೆಗೆ ಅರ್ಜಿ ಹಾಕಬಹುದು. ಇದರೊಂದಿಗೆ, ಪರೀಕ್ಷೆ-2 ಮತ್ತು ಪರೀಕ್ಷೆ-3 ಎಂಬ ಮತ್ತೆರಡು ಅವಕಾಶಗಳು ಲಭ್ಯವಿವೆ. ಈ ಅವಕಾಶಗಳು ವಿದ್ಯಾರ್ಥಿಗಳಿಗೆ ತಮ್ಮ ಅಂಕವನ್ನು ಸುಧಾರಿಸಿಕೊಳ್ಳಲು ಮಾರ್ಗವಾಗುತ್ತವೆ.

ಮುಖ್ಯ ದಿನಾಂಕಗಳು:

ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಅರ್ಜಿ ಸಲ್ಲಿಸಲು: ಏಪ್ರಿಲ್ 13ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ಕ್ಯಾನ್ ಪ್ರತಿಯನ್ನು ಡೌನ್‌ಲೋಡ್ ಮಾಡಲು: ಏಪ್ರಿಲ್ 12ರಿಂದ 16ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಮರುಮೌಲ್ಯಮಾಪನ ಹಾಗೂ ಮರು ಎಣಿಕೆ ಅರ್ಜಿ ಸಲ್ಲಿಸಲು: ಏಪ್ರಿಲ್ 12ರಿಂದ 17ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಶುಲ್ಕದ ವಿವರಗಳು(Fee details):

ಸ್ಕ್ಯಾನ್ ಪ್ರತಿ(Scan copy): ಪ್ರತಿ ವಿಷಯಕ್ಕೆ ₹530
ಮರು ಮೌಲ್ಯಮಾಪನ(Re-evaluation): ಪ್ರತಿ ವಿಷಯಕ್ಕೆ ₹1,670
ಶುಲ್ಕವನ್ನು ಆನ್‌ಲೈನ್ ಅಥವಾ ಅಫ್ಲಿನ್ ಚಲನ್ ಮುಖಾಂತರ ಪಾವತಿಸಬಹುದು.

ಪರೀಕ್ಷೆ-2 ಹಾಗೂ ಪರೀಕ್ಷೆ-3: ಫಲಿತಾಂಶ ಸುಧಾರಣೆಗೆ ಇನ್ನಷ್ಟು ಅವಕಾಶ:

ಪುನರಾವರ್ತಿತ ವಿದ್ಯಾರ್ಥಿಗಳು(Repeat students) ಮತ್ತು ಹೆಚ್ಚಿನ ಅಂಕ ಗಳಿಸಲು ಇಚ್ಛಿಸುವವರು ಪರೀಕ್ಷೆ-2 ಹಾಗೂ ಪರೀಕ್ಷೆ-3 ಬರೆಯಬಹುದು. ಅರ್ಜಿ ಸಲ್ಲಿಕೆ ಪ್ರಾಂಶುಪಾಲರ(Principal) ಮೂಲಕ ಪರೀಕ್ಷಾ ತಂತ್ರಾಂಶದಲ್ಲಿ ಮಾಡಬೇಕಿದ್ದು, ಇದರ ಅವಧಿ ಎಪ್ರಿಲ್ 8ರಿಂದ 15ರವರೆಗೆ ಇದೆ. ದಂಡ ಸಹಿತ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಎಪ್ರಿಲ್ 17.

ಪುನರಾವರ್ತಿತರ ಶುಲ್ಕ:

ಒಂದು ವಿಷಯ: ₹140
ಎರಡು ವಿಷಯಗಳು: ₹370
ಮೂರು ಅಥವಾ ಹೆಚ್ಚಿನ ವಿಷಯಗಳು: ₹400

ಅಂಕ ಸುಧಾರಣೆಗೆ:
ಒಂದು ವಿಷಯ (ಮೊದಲ ಬಾರಿಗೆ): ₹175
ಒಂದು ವಿಷಯ (ಎರಡನೇ ಬಾರಿಗೆ): ₹350

ಅಂಕಪಟ್ಟಿ ವಿಷಯದಲ್ಲಿ ವಿಶೇಷ ಸೂಚನೆ:

ಪರೀಕ್ಷೆ-2 ಮತ್ತು ಪರೀಕ್ಷೆ-3 ಬರೆದ ನಂತರವೇ ಅಂತಿಮ ಅಂಕಪಟ್ಟಿ ನೀಡಲಾಗುತ್ತದೆ. ಆದ್ದರಿಂದ, ತಾತ್ಕಾಲಿಕವಾಗಿ ಫಲಿತಾಂಶವನ್ನೇ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಹಾಜರಾತಿ(Attendance) ಕೊರತೆಯಾದರೂ ಮರು ಅವಕಾಶ:
ಪರೀಕ್ಷೆ-1ನಲ್ಲಿ ಹಾಜರಾತಿಯ ಕೊರತೆಯಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಮತ್ತು ಪರೀಕ್ಷೆ-3ನಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವ ಅವಕಾಶವಿದೆ.

ಆಂಗ್ಲ ಮಾಧ್ಯಮ ಮೇಲುಗೈ: ತೇರ್ಗಡೆ ಶೇ. 81.75
ಈ ಬಾರಿಯ ಫಲಿತಾಂಶದಲ್ಲಿ ಆಂಗ್ಲ ಮಾಧ್ಯಮದ(English medium) ವಿದ್ಯಾರ್ಥಿಗಳು ಹೆಚ್ಚಿನ ಶೇಕಡಾವಾರು ತೇರ್ಗಡೆ ಹೊಂದಿದ್ದಾರೆ. ಕನ್ನಡ ಮಾಧ್ಯಮದ 2,08,794 ವಿದ್ಯಾರ್ಥಿಗಳ ಪೈಕಿ 56.37% ಉತ್ತೀರ್ಣರಾದರೆ, ಆಂಗ್ಲ ಮಾಧ್ಯಮದ 4,29,011 ವಿದ್ಯಾರ್ಥಿಗಳ ಪೈಕಿ ಶೇ. 81.75 ಮಂದಿ ತೇರ್ಗಡೆ ಹೊಂದಿದ್ದಾರೆ.

ಖಾಸಗಿ ಕಾಲೇಜುಗಳ(private colleges) ಸಾಧನೆ ಉತ್ಕೃಷ್ಟ:

ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೇ. 57.11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ(unaided private colleges) ಈ ಪ್ರಮಾಣ ಶೇ. 82.66 ಆಗಿದೆ. ವಸತಿ ಶಾಲಾ ಪದವಿಪೂರ್ವ ಕಾಲೇಜುಗಳಲ್ಲಿ ಶೇ. 86.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಅಂಕಿ ಅಂಶಗಳು ಖಾಸಗಿ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ ಎಂಬುದನ್ನು ಸೂಚಿಸುತ್ತವೆ.

ಕನ್ನಡ ಭಾಷೆಯಲ್ಲಿ ದಾಖಲೆ: 5,414 ಮಂದಿ ನೂರಕ್ಕೆ ನೂರು ಅಂಕ:

ಈ ಬಾರಿಗೆ ವಿಶೇಷವೆಂದರೆ, ಕನ್ನಡ ಭಾಷೆಯಲ್ಲಿ 5,414 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ! ಇತರೆ ಪ್ರಮುಖ ವಿಷಯಗಳಲ್ಲೂ ಸಾವಿರಾರು ಮಂದಿ 100% ಅಂಕ ಪಡೆದಿದ್ದಾರೆ. ಅಂಕ ಪಡೆದವರ ವಿವರ ಈ ರೀತಿ ಇದೆ:
ಗಣಿತ: 4,038
ಭೌತಶಾಸ್ತ್ರ: 496
ರಸಾಯನಶಾಸ್ತ್ರ: 613
ಜೀವಶಾಸ್ತ್ರ: 2,346
ಇತಿಹಾಸ: 958
ಅರ್ಥಶಾಸ್ತ್ರ: 613
ಇಂಗ್ಲಿಷ್: 11
ಹಿಂದಿ: 43
ಭೂಗೋಳಶಾಸ್ತ್ರ: 45

ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ನಿರೀಕ್ಷಿತ ಅಂಕ ಸಿಗದಿದ್ದರೂ ವಿದ್ಯಾರ್ಥಿಗಳು ಭವಿಷ್ಯದ ಕುರಿತು ಭಯಭೀತರಾಗಬೇಕಾಗಿಲ್ಲ. ಮರುಮೌಲ್ಯಮಾಪನ, ಮರುಪರೀಕ್ಷೆಗಳು, ಹಾಗೂ ಸುಧಾರಣಾ ಪರೀಕ್ಷೆಗಳಂತಹ ವಿವಿಧ ಆಯ್ಕೆಗಳನ್ನು ಬಳಸಿಕೊಂಡು ಅವರು ಉತ್ತಮ ಸಾಧನೆ ಮಾಡಬಹುದು.ಆದ್ದರಿಂದ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುಂದುವರೆಯುವುದು ಮುಖ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!