ಹೃದಯಾಘಾತ (Heart Attack) ಪ್ರಕರಣಗಳು ದಿನೇ ದಿನೇ ಕಾಣಿಸಿಕೊಳ್ಳುತ್ತೀವೆ. ಹೌದು ಪ್ರಮುಖವಾಗಿ ಯುವಕರಲ್ಲಿ ಹೆಚ್ಚುತ್ತಿದೆ. ಅದಕ್ಕಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ರಾಜ್ಯ ಸರ್ಕಾರವು ( State Government ) ಈ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯನ್ನು ಡಾ. ಪುನೀತ್ ರಾಜ್ ಕುಮಾರ್ ( Dr. Puneeth Rajkumaar ) ಅವರ ಹೆಸರಿನಲ್ಲಿ ಮಾಡಲಾಗಿದೆ. ಅದೇ ಈ ಯೋಜನೆ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ(Hrudaya jyothi scheme). ಏನಿದು ಯೋಜನೆ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಪುನೀತ್ ಹೃದಯ ಜ್ಯೋತಿ ಯೋಜನೆ:
ಈ ಯೋಜನೆಯ ಸೌಲಭ್ಯವು ರಾಜ್ಯದ ಎಲ್ಲ ಪಡಿತರ ಚೀಟಿ(Ration card) ಹೊಂದಿರುವವರಿಗೆ ಸಿಗಲಿದೆ. ಹೀಗಾಗಿ ರಾಜ್ಯ ಸರ್ಕಾರವು ಬಿಪಿಎಲ್ ( BPL ) ಸೇರಿ ಎಲ್ಲಾ ಪಡಿತರ ಚೀಟಿದಾರರಿಗೆ ಒಂದು ಸಿಹಿಸುದ್ದಿ ನೀಡಿದೆ.
ಈ ಯೋಜನೆಯ ಮುಖ್ಯ ಉದ್ದೇಶ :
ನಟ ಪುನೀತ್ ರಾಜ್ ಕುಮಾರ್ 2021 ರ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಮೃತಪಟ್ಟರು. ಈ ಯೋಜನೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಹೃದಯಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ಸುವರ್ಣ ಸಮಯದ ಅವಧಿಯಲ್ಲಿ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ – ಬೆಂಗಳೂರು – ಧಾರವಾಡ ವಂದೇ ಭಾರತ್ ರೈಲನ್ನು ಈ ಜಿಲ್ಲೆಗೆ ವಿಸ್ತರಿಸಿ’ – ಕೇಂದ್ರಕ್ಕೆ ಸಿದ್ದು ಮನವಿ
ಕೊರೋನ( Corona ) ಮಹಾಮಾರಿ ಎಂಬ ರೋಗ ಬಂದು ಹೋದ ನಂತರದ ದಿನಗಳಲ್ಲಿ ಹೃದ್ರೋಗ ಹೆಚ್ಚಳವಾಗುತ್ತಿದ್ದು, ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಏಕಾಏಕಿ ಹೃದಯಾಘಾತ, ಹೃದಯ ಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹೃದ್ರೋಗಗಳಿಗೆ ಉಂಟಾಗುತ್ತಿರುವ ಜೀವ ಹಾನಿ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸುತ್ತಿದೆ.
ಇದೇ ಹೃದ್ರೋಗ ಸಮಸ್ಯೆಯಿಂದ ಕೋಟ್ಯಾಂತರ ಅಭಿಯಾನಿಗಳನ್ನು ತೊರೆದ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿಯೇ ಈ ಯೋಜನೆಯು ಜಾರಿಗೆ ಬರುತ್ತಿರೋದು ಬಹಳ ವಿಶೇಷ. ಈ ಮೂಲಕ ಜನರಿಗೆ ಹೃದ್ರೋಗ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಚಿಕಿತ್ಸೆ ವ್ಯವಸ್ಥೆಯನ್ನು ನೀಡುವ ಉದ್ದೇಶವನ್ನು ರಾಜ್ಯ ಆರೋಗ್ಯ ಇಲಾಖೆ ಹೊಂದಿದೆ. ಇನ್ನು ಇದೆ ನವೆಂಬರ್‌ನಿಂದ ಈ ಯೋಜನೆಗೆ ಚಾಲನೆ ದೊರೆಯುತ್ತಿದೆ ಎಂದು ತಿಳಿದು ಬಂದಿದೆ.
ಯಾವೆಲ್ಲ ಆಸ್ಪತ್ರೆಯಲ್ಲಿ ಈ ಯೋಜನೆ ದೊರೆಯುತ್ತದೆ ಹಾಗೆಯೇ ಏನು ವ್ಯವಸ್ಥೆ ಇದೆ :
ರಾಜ್ಯದ 16 ಸೂಪರ್ ಸ್ಪೆಷಾಲಿಟಿ, 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಜಯದೇವಾ ಹೃದ್ರೋಗ ಸಂಸ್ಥೆ ( Jayadeva Herat Institute ) ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ( Medical colleges ) ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್ ಗಳನ್ನ ರಚಿಸಲಾಗಿದೆ. ಯಾರಿಗೇ ಎದೆನೋವು ಕಾಣಿಸಿಕೊಂಡ್ರೂ ಈ ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ಇಸಿಜಿ(ECG) ಮಾಡಲಾಗುತ್ತೆ. ಜೊತೆಗೆ ಎಐ(AI) ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ ಅನ್ನೋದನ್ನ ಸ್ಥಳದಲ್ಲಿಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತೆ. ಇದಕ್ಕಾಗಿ ಖಾಸಗಿ ಸಂಸ್ಥೆಯವರ ಎಐ ತಂತ್ರಜ್ಞಾನದ ( AI Technology ) ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನ ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ – Bigg News – ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ 82 ಕೋಟಿ ‘ಆಧಾರ್ ಕಾರ್ಡ್’ ಡೇಟಾ ‘ಡಾರ್ಕ್ ವೆಬ್’ನಲ್ಲಿ ಮಾರಾಟ