Job Alert : ರೈಲ್ವೇ ಇಲಾಖೆಯ ಖಾಲಿ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ.!

IMG 20241129 WA0007

ಈ ವರದಿಯಲ್ಲಿ ಆಗ್ನೇಯ ರೈಲ್ವೆ ಇಲಾಖೆಯ ಅಪ್ರೆಂಟಿಸ್ ನೇಮಕಾತಿ ( South Eastern railway Apprentices Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

1785 ಹುದ್ದೆಗಳ ಭರ್ತಿಗೆ ಅವಕಾಶ

ಆಗ್ನೇಯ ರೈಲ್ವೆ ತನ್ನ ಡಿವಿಷನ್‌ಗಳು ಮತ್ತು ವರ್ಕ್‌ಶಾಪ್‌ಗಳಲ್ಲಿ ಅಪ್ರೆಂಟಿಸ್ ತರಬೇತುದಾರರ ನೇಮಕಾತಿಗಾಗಿ 1785 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಮೌಲಿಕ ತರಬೇತಿಯನ್ನು ಒದಗಿಸಲು ಈ ಹುದ್ದೆಗಳನ್ನು 1961/1992ರ ಅಪ್ರೆಂಟಿಸ್ ಕಾಯ್ದೆಯಡಿ 1 ವರ್ಷ ಅವಧಿಗೆ ಭರ್ತಿ ಮಾಡಲಾಗುತ್ತದೆ. ನೇಮಕಾತಿಯ ಅವಧಿಯಲ್ಲಿ ರೂ.8,000-10,000 ಮಾಸಿಕ ಸ್ಟೈಫಂಡ್‌(Monthly Stipend) ಲಭ್ಯವಿರುತ್ತದೆ.

ಅರ್ಹತೆ ಮತ್ತು ಶೈಕ್ಷಣಿಕ ಮಾನದಂಡಗಳು:

ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ 10ನೇ ತರಗತಿ ಪಾಸ್‌ ಆಗಿರಬೇಕು.
ಯಾವುದೇ ಮಾನ್ಯತೆ ಪಡೆದ ಎನ್‌ಸಿವಿಟಿ (NCVT) ಅಥವಾ ಎಸ್‌ಸಿವಿಟಿ(SCVT) ಐಟಿಐ (ITI) ಪ್ರಮಾಣಪತ್ರವನ್ನು ಹೊಂದಿರಬೇಕು.

ವಯೋಮಿತಿ:

ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ (ವರ್ಗಾವಾರು ಸಡಿಲಿಕೆ).

ಆಯ್ಕೆ ಪ್ರಕ್ರಿಯೆ:

10ನೇ ತರಗತಿ ಮತ್ತು ಐಟಿಐ ಪರೀಕ್ಷೆಯ ಅಂಕಗಳನ್ನು ಆಧರಿಸಿ ಮೆರಿಟ್‌ ಲಿಸ್ಟ್‌ ತಯಾರಿಸಲಾಗುತ್ತದೆ.

ಮೆರಿಟ್ ಪಟ್ಟಿಯ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ.

ಅರ್ಜಿ ಶುಲ್ಕ ವಿವರ

ಸಾಮಾನ್ಯ / ಇತರೆ ಹಿಂದುಳಿದ ವರ್ಗಗಳು / ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.100.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅಪ್ಲಿಕೇಶನ್ ಸಲ್ಲಿಸಲು ಪ್ರಮುಖ ದಿನಾಂಕಗಳು :

ಪ್ರಾರಂಭ ದಿನಾಂಕ: 28-11-2024

ಕೊನೆ ದಿನಾಂಕ: 27-12-2024 ಸಂಜೆ 5 ಗಂಟೆ.

ನೇಮಕಾತಿ ಕೇಂದ್ರಗಳು :

ಖರಗ್‌ಪುರ್, ಚಕ್ರದಾಪುರ್, ಟಾಟಾ, ರಾಂಚಿ ಮೊದಲಾದ ಹಲವು ಡಿವಿಷನ್‌ಗಳಲ್ಲಿ ಈ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಮೂಲಕ ಹೀಗೆ ಮುಂದುವರಿಯಿರಿ:

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://www.rrcser.co.in/

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಆಗ್ನೇಯ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳು ಇತ್ತೀಚಿನ ಉದ್ಯೋಗ ಆಕಾಂಕ್ಷಿಗಳಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತವೆ. ಐಟಿಐ ವಿದ್ಯಾರ್ಹತೆಯನ್ನು ಸಾಧಿಸಿರುವ ಮತ್ತು ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳಲ್ಲಿ ಆಸಕ್ತರು ತಮ್ಮ ಭವಿಷ್ಯ ನಿರ್ಮಾಣಕ್ಕೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಈ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಈಗಲೇ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಉದ್ಯೋಗದ ಕನಸುಗಳನ್ನು ಸಾಕಾರಗೊಳಿಸಿ ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!