2 ವರ್ಷಗಳಲ್ಲಿ 9 ರೈಲು ಯೋಜನೆ ಪೂರ್ಣಗೊಳಿಸುವಿಕೆಗೆ ಸಜ್ಜು: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ಘೋಷಣೆ.
ಲೋಕಸಭಾ ಚುನಾವಣೆಯ (Loksabha Election) ಫಲಿತಾಂಶಕ್ಕೂ ಮುನ್ನ ಹಾಗೂ ಫಲಿತಾಂಶದ ನಂತರವೂ ಜನರು ಹೆಚ್ಚು ಭರವಸೆಯನ್ನಿಟ್ಟು ಕೊಂಡಿದ್ದಾರೆ. ಸಚಿವರಾಗಿ ಆಯ್ಕೆಯಾದಂತಹ ಪ್ರತಿಯೊಬ್ಬರೂ ಕೂಡ ಅವರವರ ಕ್ಷೇತ್ರದಲ್ಲಿ ಹೆಚ್ಚು ಕೆಲಸಗಳನ್ನು ಮಾಡುತ್ತಾರೆ ಹಾಗೂ ಜನಪರ, ಜನಪಯೋಗಿ ಕೆಲಸಗಳನ್ನು ಮಾಡುವಲ್ಲಿ ಸಚಿವರ ಪಾತ್ರ ಬಹುದೊಡ್ಡದು. ಲೋಕಸಭಾ ಚುನಾವಣೆಯಲ್ಲಿ ಗೆದ್ದಂತಹ ಪ್ರತಿಯೊಬ್ಬರಿಗೂ ಕೂಡ ಈಗಾಗಲೇ ಸಚಿವರ ಸ್ಥಾನ ನೀಡಿದ್ದಾರೆ. ಅದರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ವಿ.ಸೋಮಣ್ಣ ಮೊದಲ ಬಾರಿಗೆ ನೈರುತ್ಯ ರೈಲ್ವೆ(South Western Railway) ಅಧಿಕಾರಿಗಳೊಂದಿಗೆ ರಾಜ್ಯದ ಸ್ಥಿತಿಗತಿಗಳ ಕುರಿತು ಸಭೆ ನಡೆಸಿದ್ದು, ತುಮಕೂರು ಸಂಸದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಯಾವೆಲ್ಲ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನೈಋತ್ಯ ವಲಯ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ರಾಜ್ಯದ ರೈಲ್ವೆಯ ಸಮಸ್ಯೆಗಳ ಕುರಿತು ಚರ್ಚಿಸಿದರು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮೂರು ದಶಕಗಳಿಂದಲೂ 9 ರೈಲ್ವೆ ಯೋಜನೆಗಳು ವಿಳಂಬವಾಗಿವೆ. ಕರ್ನಾಟಕದಲ್ಲಿ ಮಂದಗತಿಯಲ್ಲಿ ಸಾಗಿರುವಂತಹ 1264 ಕಿ. ಮೀ. ಒಳಗೊಂಡ 9 ರೈಲು ಯೋಜನೆಗಳನ್ನು 2 ವರ್ಷದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಣೆ ಮಾಡಿದ್ದಾರೆ.
ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ನೆಡೆದ ಸಭೆಯಲ್ಲಿ ಯಾವೆಲ್ಲ ಯೋಜನೆಗಳ ಚರ್ಚೆ :
ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಮೊಟ್ಟ ಮೊದಲ ಬಾರಿಗೆ ನೈಋತ್ಯ ರೈಲ್ವೆ ವಲಯದ ಯೋಜನೆಗಳ ಕುರಿತು ಸಭೆಯನ್ನು ನಡೆಸಿದರು. ಸಭೆಯಲ್ಲಿ 9 ಹೊಸ ಯೋಜನೆಗಳು, 5 ಹಳಿ ದ್ವಿಪಥ ಕಾಮಗಾರಿ (five track two way work) ಹಾಗೂ 14 ವಿವಿಧ ಯೋಜನೆಗಳ ಜೊತೆಗೆ ಬೆಂಗಳೂರು ಸಬ್ ಅರ್ಬನ್ ರೈಲು (sub Urban train) ಯೋಜನೆ ಬಗ್ಗೆಯೂ ಸಚಿವರು ಗಮನ ಹರಿಸಿದ್ದು ಈ ಕುರಿತು ಚರ್ಚೆ ನಡೆಯಿತು.
9 ಹೊಸ ಯೋಜನೆ (9 new scheme) :
ಹೊಸ ರೈಲು ಮಾರ್ಗ ಯೋಜನೆಗಳು 707 ಕಿ. ಮೀ. ಒಳಗೊಂಡಿದ್ದು, 9 ಹೊಸ ರೈಲು ಮಾರ್ಗಗಳಲ್ಲಿ ತುಮಕೂರು-ರಾಯದುರ್ಗ – ಕಲ್ಯಾಣದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡಚಿ, ಗದಗ-ವಾಡಿ, ಕಡೂರು-ಚಿಕ್ಕಮಗಳೂರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಬೆಳಗಾವಿ-ಧಾರವಾಡ ವಯಾ ಕಿತ್ತೂರು ಮತ್ತು ಹಾಸನ-ಬೇಲೂರು ಮಾರ್ಗ ಸೇರಿವೆ.
5 ಹಳಿ ದ್ವಿಪಥ ಕಾಮಗಾರಿ :
ಹೊಸದಾಗಿ 502 ಕಿ. ಮೀ. ಮಾರ್ಗವನ್ನು ಯಶಸ್ವಿಯಾಗಿ ದ್ವಿಪಥಗೊಳಿಸಲು ಸರ್ಕಾರ ಮುಂದಾಗಿದ್ದು,ದ್ವಿಪಥಗೊಳ್ಳಲಿರುವ ಕಾಮಗಾರಿ ಮಾರ್ಗದ ಒಟ್ಟು ಉದ್ದ 289 ಕಿ. ಮೀ. ಈ ಎಲ್ಲವಕ್ಕೂ ಇಲಾಖೆ ಈಗಾಗಲೇ ಸಂಚಾರವನ್ನು ಪ್ರಾರಂಭಿಸಿದೆ. ಹೊಟಗಿ-ಕೂಡಗಿ-ಗದಗ, ಯಶವಂತಪುರ-ಚನ್ನಸಂದ್ರ, ಬೈಯಪ್ಪನಹಳ್ಳಿ-ಹೊಸೂರು, ಬೆಂಗಳೂರು-ವೈಟ್‌ಫೀಲ್ಡ್, ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ವಾಸ್ಕೋ ಡಾ-ಗಾಮ ಈ ಕಾಮಗರಿಗಳನ್ನು ದ್ವಿಪಥಗೊಳಿಸುವದಾಗಿಯೂ ಸಹ ಸಭೆಯಲ್ಲಿ ಚರ್ಚಿಸಲಾಯಿತು.ಇನ್ನು ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೆ-ರೈಡ್,ಜಿಲ್ಲಾಡಳಿತ ಹಾಗೂ ವಿವಿಧ ಸ್ಥಳೀಯ ಆಡಳಿತದ ಜೊತೆ ಸಮನ್ವಯತೆ ಸಾಧಿಸಬೇಕು ಎಂದು ವಿ. ಸೋಮಣ್ಣ ಅಧಿಕಾರಿಗಳಿಗೆ ತಿಳಿಸಿದರು.
ಬೆಂಗಳೂರು ಸಬ್ ಅರ್ಬನ್ ರೈಲು :
ಸಭೆಯಲ್ಲಿ ಬೆಂಗಳೂರು ಉಪ ನಗರ ರೈಲು ಯೋಜನೆ (ಸಬ್ ಅರ್ಬನ್) ಕುರಿತು ಸಹ ಚರ್ಚೆ ನಡೆಸಿದರು. ಬೆಂಗಳೂರು ನಗರದಲ್ಲಿರುವ ರೈಲ್ವೆ ಕ್ರಾಸಿಂಗ್‌ಗಳಲ್ಲಿನ ಸುರಕ್ಷತೆಯ ಬಗ್ಗೆ ಗಮನಹರಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು.
15-20 ದಿನಗಳಲ್ಲಿ ರೈಲ್ವೆ ತಾಂತ್ರಿಕ ತಜ್ಞರ ನೇಮಕಾತಿ:
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ವೇಗವಾಗಿ ಸಾಗಲು ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ( ಕೆ-ರೈಡ್) ಮುಂದಿನ 15-20 ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರೈಲ್ವೆ ತಾಂತ್ರಿಕ ತಜ್ಞರ ನೇಮಕಾತಿಗೆ ಕ್ರಮವಹಿಸಲಿದ್ದೇವೆ. ಇದಕ್ಕಾಗಿ ಕೆ- ರೈಡ್ (K ride) ಸೇರಿದಂತೆ ವಿವಿಧ ಭಾಗಿದಾರರ ನಡುವಿನ ಸಹಯೋಗದೊಂದಿಗೆ ಈ ಯೋಜನೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಕೆ-ರೈಡ್‌ಗೆ ವ್ಯಸ್ಥಾಪಕ ನಿರ್ದೇಶಕರಾಗಿ ತಾಂತ್ರಿಕ ತಜ್ಞರನ್ನು ನೇಮಕ ಮಾಡಬೇಕು ಎಂಬುದು ಬೇಡಿಕೆಗೆ ಇದೀಗ ವಿ. ಸೋಮಣ್ಣ ಒಪ್ಪಿಗೆ ನೀಡಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.